ಭೀಮನ ಪಾತ್ರಕ್ಕೆ ನನ್ನನ್ನು ಯಾರು ಕೇಳಲಿಲ್ಲ


Team Udayavani, Aug 9, 2017, 10:50 AM IST

ranadagubbati.jpg

“ಬಾಹುಬಲಿ’ ಚಿತ್ರದ ನಂತರ ತೆಲುಗು ನಟ ರಾಣಾ ದಗ್ಗುಬಾಟಿಯ ಬೇಡಿಕೆ ಕೂಡಾ ಹೆಚ್ಚಿದೆ. ಅವರನ್ನು ಹುಡುಕಿಕೊಂಡು ಬರುತ್ತಿರುವ ಸಿನಿಮಾಗಳ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಸದ್ಯ ಅವರು ನಟಿಸಿರುವ “ನೇನೇ ರಾಜ ನೇನೇ ಮಂತ್ರಿ’ ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. ಚಿತ್ರದ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದ ರಾಣಾ ದಗ್ಗುಬಾಟಿ ಕೆಲವು ಪ್ರಶ್ನೆಗಳಿಗೆ ಉತ್ತರವಾಗಿದ್ದಾರೆ …

* ಕನ್ನಡದ “ಕುರುಕ್ಷೇತ್ರ’ದ ಭೀಮನ ಪಾತ್ರಕ್ಕೆ ನಿಮ್ಮನ್ನು ಸಂಪರ್ಕಿಸಲಾಗಿತ್ತೆಂಬ ಮಾತು ಕೇಳಿ ಬಂದಿತ್ತು?
“ಕುರುಕ್ಷೇತ್ರ’ ಎಂಬ ಸಿನಿಮಾ ಬರುತ್ತಿರುವ ಬಗ್ಗೆ ಕೇಳಿದ್ದೇನೆ. ಆದರೆ, ಭೀಮನ ಪಾತ್ರಕ್ಕೆ ನನ್ನನ್ನು ಯಾರು ಕೇಳಿರಲಿಲ್ಲ. ಆ ಬಗ್ಗೆ ಕೇಳಿಕೊಂಡು ನನ್ನ ಬಳಿ ಯಾರೂ ಬಂದಿಲ್ಲ. ಆ ವಿಚಾರ ನನಗೆ ಗೊತ್ತೇ ಇಲ್ಲ. ಕೇಳಿದ್ದರೆ ಆ ಬಗ್ಗೆ ಯೋಚಿಸಬಹುದಿತ್ತು. 

* ಕನ್ನಡದಲ್ಲಿ ನೀವು “ಆಸ್ಫೋಟ’ ಸಿನಿಮಾದಲ್ಲಿ ನಟಿಸುತ್ತೀರೆಂದು ಸುದ್ದಿಯಾಗಿತ್ತು?
ಆ ಸಿನಿಮಾಕ್ಕೆ ಕೇಳಿದ್ದರು. ಇನ್ನೂ ಮಾತುಕತೆಯ ಹಂತದಲ್ಲಿದೆ. 

* ಕನ್ನಡದಲ್ಲಿ ನಟಿಸುವ ಆಸಕ್ತಿ ಇದೆಯಾ?
ಖಂಡಿತಾ ಇದೆ. ನಾನು ಕೇವಲ ತೆಲುಗು ಒಂದೇ ಭಾಷೆಗೆ ಸೀಮಿತವಾಗಬೇಕೆಂದುಕೊಂಡಿಲ್ಲ. ಈಗಾಗಲೇ ತಮಿಳು, ಹಿಂದಿಯಲ್ಲೂ ನಟಿಸಿದ್ದೇನೆ. ಯಾವ ಭಾಷೆಯಿಂದ ಒಳ್ಳೆಯ ಅವಕಾಶ ಸಿಗುತ್ತದೋ ಅಲ್ಲಿ ನಟಿಸುತ್ತೇನೆ. ಕನ್ನಡದಿಂದಲೂ ನನಗೆ ಆಫ‌ರ್‌ ಬಂದು ಪಾತ್ರ ಇಷ್ಟವಾದರೆ ಖಂಡಿತಾ ನಟಿಸುತ್ತೇನೆ. 

* ಸದ್ಯ ನಿಮ್ಮ “ನೇನೇ ರಾಜ ನೇನೇ ಮಂತ್ರಿ’ ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಪಾತ್ರ ಹೇಗಿದೆ?
ಇಲ್ಲಿ ನಾನು ಜೋಗೇಂದ್ರ ಎಂಬ ಪಾತ್ರ ಮಾಡಿದ್ದೇನೆ. ಸಖತ್‌ ರಗಡ್‌ ಆಗಿರುವಂತಹ ಪಾತ್ರ ತುಂಬಾ ಚೆನ್ನಾಗಿದೆ. ಪೊಲಿಟಿಕಲ್‌ ಬ್ಯಾಕ್‌ಡ್ರಾಪ್‌ನಲ್ಲಿ ನಡೆಯುವ ಕಥೆ ಇದು. 

* ನಿಮ್ಮ ಮೊದಲ ಸಿನಿಮಾ “ಲೀಡರ್‌’ ಕೂಡಾ ಪೊಲಿಟಿಕಲ್‌ ಬ್ಯಾಕ್‌ಡ್ರಾಪ್‌ನಲ್ಲೇ ಇತ್ತು. ನಿಮಗೆ ರಾಜಕೀಯ ಆಸಕ್ತಿ ಹೆಚ್ಚಾ?
ಆ ತರಹ ಏನಿಲ್ಲ. ಆ ಪಾತ್ರವೇ ಬೇರೆ ಈ ಪಾತ್ರವೇ ಬೇರೆ. ನಾನು ರಾಜಕೀಯ ಹಿನ್ನೆಲೆ ಅಲ್ಲದೇ, “ದಿ ಘಜಿಯಾ ಅಟ್ಯಾಕ್‌’, “ಬೆಂಗಳೂರು ನಾಟ್ಕಲ್‌’ ತರಹದ ಸಿನಿಮಾನೂ ಮಾಡಿದ್ದೇನೆ. ಆದರೆ ಅದರ ಬಗ್ಗೆ ಯಾರು ಮಾತನಾಡೋದಿಲ್ಲ. ಅದೇ ರಾಜಕೀಯದ ಹಿನ್ನೆಲೆ ಪಾತ್ರ ಮಾಡಿದರೆ ಬೇಗನೇ ಗುರುತಿಸುತ್ತಾರೆ. ಯಾವುದೇ ಉದ್ದೇಶದಿಂದ ಸಿನಿಮಾ ಒಪ್ಪಿಕೊಳ್ಳೋದಿಲ್ಲ. ಪಾತ್ರ ಇಷ್ಟವಾದರೆ ಮಾಡುತ್ತೇನೆ. 

* ನಿಮ್ಮ ತಂದೆಯವರ ನಿರ್ಮಾಣದಲ್ಲಿ ಮೊದಲ ಬಾರಿಗೆ ನಟಿಸಿದ್ದೀರಿ. ಯಾಕೆ ಇಷ್ಟು ವರ್ಷ ನಟಿಸಿರಲಿಲ್ಲ?
ನಟಿಸಬಾರದೆಂದೇನಿರಲಿಲ್ಲ. ಸಾಕಷ್ಟು ಬಾರಿ ಚರ್ಚೆಯಾಗುತ್ತಿತ್ತು. ಆದರೆ ಅವರಿಗೆ ಇಷ್ಟವಾದರೆ ನನಗೆ ಇಷ್ಟವಾಗುತ್ತಿರಲಿಲ್ಲ. ನನಗೆ ಇಷ್ಟವಾದರೆ ಅವರಿಗೆ ಇಷ್ಟವಾಗುತ್ತಿರಲಿಲ್ಲ. ಹೀಗಾಗಿ ಸಿನಿಮಾ ಮಾಡಲಾಗಲಿಲ್ಲ. ಆದರೆ, ಈ ಸಿನಿಮಾದ ಕಥೆ ಇಬ್ಬರಿಗೂ ಇಷ್ಟವಾಯಿತು.

* ಹಾಫ್ಬೀಟ್‌ ಅಥವಾ ಬ್ರಿಡ್ಜ್ ಸಿನಿಮಾ ಬಂದರೆ ಮಾಡುತ್ತೀರಾ?
ಯಾವುದೇ ಸಿನಿಮಾವಾದರೂ ಜನರಿಗೆ ಮನರಂಜನೆ ನೀಡಬೇಕು. ನಾನು ಇಲ್ಲಿವರೆಗೆ ಮಾಡಿರುವ ಸಿನಿಮಾಗಳಲ್ಲಿ ಸಾಕಷ್ಟು ಕಥೆಗಳು ವಿಭಿನ್ನವಾಗಿವೆ. ಅವೆಲ್ಲವನ್ನು ಎಂಟರ್‌ಟೈನಿಂಗ್‌ ಆಗಿ ಮಾಡಿದ್ದೇವೆ ಅಷ್ಟೇ. ಸಿನಿಮಾದ ಮುಖ್ಯ ಉದ್ದೇಶ ಮನರಂಜನೆ. ಅದು ಸಿಗಬೇಕು.

* ತೆಲುಗಿನ ಯಾವುದಾದರೂ ಕ್ಲಾಸಿಕ್‌ ಫಿಲಂನ ರೀಮೇಕ್‌ ಮಾಡಬೇಕಾದರೆ ಯಾವುದನ್ನು ಆಯ್ಕೆ ಮಾಡುತ್ತೀರಿ?
ಇಲ್ಲ, ಯಾವುದನ್ನು ಮಾಡೋದಿಲ್ಲ. ಕ್ಲಾಸಿಕ್‌ ಸಿನಿಮಾಗಳನ್ನು ನಾವು ಮುಟ್ಟಬಾರದು. ಅದನ್ನು ನೋಡಿ ಖುಷಿಪಡಲು ಬಯಸುತ್ತೇನೆ ಅಷ್ಟೇ.

* ಬೆಂಗಳೂರು ಬಗ್ಗೆ ಏನಂತಿರಿ?
ಬ್ಯೂಟಿಫ‌ುಲ್‌ ಸಿಟಿ. ನನ್ನ ಈ ಹಿಂದಿನ ಪ್ರತಿ ಸಿನಿಮಾಕ್ಕೂ ಇಲ್ಲಿ ಒಳ್ಳೆಯ ಪ್ರತಿಕ್ರಿಯೆ ಬಂದಿದೆ. ಮುಂದೆಯೂ ಅದೇ ಪ್ರೀತಿ ಇಲ್ಲಿನ ಜನರಿಂದ ಸಿಗುತ್ತದೆಂದು ನಂಬಿದ್ದೇನೆ.  

ಟಾಪ್ ನ್ಯೂಸ್

ಅಯೋಧ್ಯೆ ಮಂದಿರಕ್ಕೆ ರಾಜ್ಯದ ಶಿಲೆಗಲ್ಲು

ಅಯೋಧ್ಯೆ ಮಂದಿರಕ್ಕೆ ರಾಜ್ಯದ ಶಿಲೆಗಲ್ಲು

ದೇಶಕ್ಕೂ ಬಂತು ಎವೈ.4.2; ಇಬ್ಬರು ಯೋಧರು ಸೇರಿ 7 ಮಂದಿಯಲ್ಲಿ ಪತ್ತೆ

ದೇಶಕ್ಕೂ ಬಂತು ಎವೈ.4.2; ಇಬ್ಬರು ಯೋಧರು ಸೇರಿ 7 ಮಂದಿಯಲ್ಲಿ ಪತ್ತೆ

ಪರಮ ಪಾವನೆಯಾಗುವತ್ತ ಗಂಗಾಮಾತೆ

ಪರಮ ಪಾವನೆಯಾಗುವತ್ತ ಗಂಗಾಮಾತೆ

2022ರ ಆರಂಭಕ್ಕೆ ಆರೋಗ್ಯವಂತ ಮಕ್ಕಳಿಗೆ ಲಸಿಕೆ?

2022ರ ಆರಂಭಕ್ಕೆ ಆರೋಗ್ಯವಂತ ಮಕ್ಕಳಿಗೆ ಲಸಿಕೆ?

ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಇನ್ನು ವಾಹನ ಎನ್‌ಒಸಿ

ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಇನ್ನು ವಾಹನ ಎನ್‌ಒಸಿ

ಶಂಕಿತ ಐಸಿಸ್‌ ಉಗ್ರ ಸೆರೆ; ಉಗ್ರ ಸಂಘಟನೆಗೆ ಯುವಕರ ನೇಮಕ ಆರೋಪ

ಶಂಕಿತ ಐಸಿಸ್‌ ಉಗ್ರ ಸೆರೆ; ಉಗ್ರ ಸಂಘಟನೆಗೆ ಯುವಕರ ನೇಮಕ ಆರೋಪ

ಕನ್ನಡದಲ್ಲಿ ಪದವಿ ಮಾತ್ರ ಸಾಲದು, ಉದ್ಯೋಗವೂ ಬೇಕು

ಕನ್ನಡದಲ್ಲಿ ಪದವಿ ಮಾತ್ರ ಸಾಲದು, ಉದ್ಯೋಗವೂ ಬೇಕು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಚಿತ್ತ ಹುತ್ತಗಟ್ಟುವುದೇ  ಕವಿಯ ಗೆಲುವಿನ ಗುಟ್ಟು

sanchari vijay

ಕಲಾ ಸಂಚಾರಿ ಕಣ್ತುಂಬ ಕನಸು: ಉದಯವಾಣಿ ಜೊತೆಗೆ ಸಂಚಾರಿ ವಿಜಯ್ ಕೊನೆಯ ಮಾತುಕತೆ

pruthvi

ಪೃಥ್ವಿಯಿಂದ ಅಂಬರಕ್ಕೆ- ‘ದಿಯಾ’ ನಾಯಕನ ಸಿನಿ ಜರ್ನಿ

ರಿಷಬ್-ಪ್ರಮೋದ್ ಸಂದರ್ಶನ: ”ಹೀರೋ” ಸಿನಿಮಾದ ತೆರೆಯ ಹಿಂದಿನ ಕಥೆ

ನಟ ರೂಪೇಶ್ ಶೆಟ್ಟಿ ಸಂದರ್ಶನ | ಗಮ್ಜಾಲ್-ಕಮಾಲ್

MUST WATCH

udayavani youtube

ದಾಂಡೇಲಿ ನಗರದಲ್ಲಿ ಸಕ್ರೀಯಗೊಳ್ಳುತ್ತಿದೆ ಪೆಟ್ರೋಲ್ ಕಳ್ಳರ ಹಾವಳಿ

udayavani youtube

ಕಾಳಿ ನದಿ ದಂಡೆಯಿಂದ ಬಾಲಕನನ್ನು ಎಳೆದೊಯ್ದ ಮೊಸಳೆ : ಆತಂಕದಲ್ಲಿ ಸ್ಥಳೀಯರು

udayavani youtube

ರಸ್ತೆ ಬದಿ ಮಲಗಿದ್ದ ಗೋವು ಕಳ್ಳತನ : ಘಟನೆ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಬಯಲು

udayavani youtube

ಶಾರುಖ್ ಖಾನ್ ಬಿಜೆಪಿ ಸೇರಿದರೆ ಡ್ರಗ್ಸ್ ಪೌಡರ್ ಶುಗರ್ ಪೌಡರ್ ಆಗಿ ಬದಲಾಗಲಿದೆ

udayavani youtube

ಕುಮ್ಕಿ ಹಕ್ಕು ಅಂದ್ರೇನು?

ಹೊಸ ಸೇರ್ಪಡೆ

ಅಯೋಧ್ಯೆ ಮಂದಿರಕ್ಕೆ ರಾಜ್ಯದ ಶಿಲೆಗಲ್ಲು

ಅಯೋಧ್ಯೆ ಮಂದಿರಕ್ಕೆ ರಾಜ್ಯದ ಶಿಲೆಗಲ್ಲು

ದೇಶಕ್ಕೂ ಬಂತು ಎವೈ.4.2; ಇಬ್ಬರು ಯೋಧರು ಸೇರಿ 7 ಮಂದಿಯಲ್ಲಿ ಪತ್ತೆ

ದೇಶಕ್ಕೂ ಬಂತು ಎವೈ.4.2; ಇಬ್ಬರು ಯೋಧರು ಸೇರಿ 7 ಮಂದಿಯಲ್ಲಿ ಪತ್ತೆ

2060ರ ಹೊತ್ತಿಗೆ ಸೌದಿ, ಮಾಲಿನ್ಯ ಮುಕ್ತ

2060ರ ಹೊತ್ತಿಗೆ ಸೌದಿ, ಮಾಲಿನ್ಯ ಮುಕ್ತ

2ನೇ ತರಗತಿ ಮಕ್ಕಳಿಂದ ರಸ್ತೆ ದುರಸ್ತಿ!

2ನೇ ತರಗತಿ ಮಕ್ಕಳಿಂದ ರಸ್ತೆ ದುರಸ್ತಿ!

ಪರಮ ಪಾವನೆಯಾಗುವತ್ತ ಗಂಗಾಮಾತೆ

ಪರಮ ಪಾವನೆಯಾಗುವತ್ತ ಗಂಗಾಮಾತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.