ಚೌಕಿಯಾಟದಲ್ಲಿ ಕಥೆಯೇ ಭಾರ


Team Udayavani, Feb 4, 2017, 11:34 AM IST

chowka.jpg

1986 – ಬೆಂಗಳೂರಿನ ಹಕ್ಕಿ ಗೋಪಾಲ, ದೊಡ್ಡ ರೌಡಿಯಾಗಬೇಕೆಂಬ ಆಸೆಯಲ್ಲಿ ತನ್ನದಲ್ಲದ ತಪ್ಪಿಗೆ ಯಾವುದೋ ಕೇಸಿನಲ್ಲಿ ಅಪ್ರೂವರ್‌ ಆಗಿ ಜೈಲು ಸೇರುತ್ತಾನೆ.

1995 – ಮೈಸೂರಿನ ಕಿಟ್ಟಿ ಎಂಬ ಕಾಲೇಜು ಹುಡುಗ, ವಿವಾಹಿತೆಯ ರೇಪ್‌ ಮತ್ತು ಮರ್ಡರ್‌ ಕೇಸಿನಲ್ಲಿ ಸಿಕ್ಕಿ ಜೈಲಿಗೆ ಹೋಗುತ್ತಾನೆ.

2000 – ಮಂಗಳೂರಿನ ಸೂರ್ಯ ಎಂಬ ಶ್ರೀಮಂತ ಯುವಕ, ಪಾರ್ಟಿಯಲ್ಲಿ ಯುವಕನೊಬ್ಬನ ತಲೆಗೆ ಬಾಟಲಿಯಲ್ಲಿ ಹೊಡೆದು, ಅವನ ಸಾವಿಗೆ ಕಾರಣನಾಗುತ್ತಾನೆ.

2007 – ಬಿಜಾಪುರದ ಅನ್ವರ್‌ ಎಂಬ ದೇಶಭಕ್ತ, ಬಾಂಬ್‌ ಬ್ಲಾಸ್ಟ್‌ ಕೇಸ್‌ವೊಂದರಲ್ಲಿ ಸಿಕ್ಕಿ, ಭಯೋತ್ಪಾದಕನೆಂಬ ಹಣೆಪಟ್ಟಿ ಹೊತ್ತು, ರಾತ್ರೋರಾತ್ರಿ ದೇಶದ್ರೋಹಿಯಾಗುತ್ತಾನೆ.

ಹೀಗೆ ಯಾವ್ಯಾವುದೋ ಕಾರಣಕ್ಕೆ ಜೈಲಿಗೆ ಹೋಗುವ ನಾಲ್ವರು ಅಮಾಯಕರು, ಒಂದೇ ಜೈಲಿನಲ್ಲಿ ಭೇಟಿಯಾಗುತ್ತಾರೆ. ನಾಲ್ವರನ್ನೂ ಸೇರುವುದಕ್ಕೆ ಇನ್ನೊಂದು ಕಾರಣವಿದೆ. ಹೀಗೆ ಒಟ್ಟಾಗುವ ನಾಲ್ವರು, ಒಂದು ಉದ್ದೇಶಕ್ಕೆ ಕೈ ಜೋಡಿಸುತ್ತಾರೆ. ಅದೇ ಕಾರಣಕ್ಕೆ ಜೈಲಿನಿಂದ ತಪ್ಪಿಸಿಕೊಂಡು ಹೋಗುವುದಕ್ಕೆ ಮುಂದಾಗುತ್ತಾರೆ. ಅವರು ಹಿಡಿದ ಕೆಲಸ ಸಾಧ್ಯವಾಗುತ್ತದಾ ಎಂಬ ಕುತೂಹಲವಿದ್ದರೆ “ಚೌಕ’ ನೋಡಬೇಕು. ಹಾಗೆ ನೋಡಿದರೆ, ನಿರ್ದೇಶಕ ತರುಣ್‌ ಸುಧೀರ್‌ ಅವರ ಉದ್ದೇಶವೂ ಸಾರ್ಥಕವಾದಂತಾಗುತ್ತದೆ.

“ಚೌಕ’ ನಾಲ್ಕು ವಿಭಿನ್ನ ಕಾಲಘಟ್ಟದ, ನಾಲ್ಕು ವಿಭಿನ್ನ ಪರಿಸರದ ಮತ್ತು ನಾಲ್ಕು ವಿಭಿನ್ನ ಯುವಕರ ಕಥೆ. ಇದೊಂದು ದ್ವೇಷದ ಕಥೆ ಎನ್ನುವುದಕ್ಕಿಂತ, ಒಂದೊಳ್ಳೆಯ ಸಂದೇಶ ಮತ್ತು ಉದ್ದೇಶವಿರುವಂತಹ ಕಥೆ ಎನ್ನಬಹುದು. ಅದರಲ್ಲೂ ಇತ್ತೀಚೆಗೆ ಮನುಷ್ಯ, ಮನುಷ್ಯತ್ವವನ್ನು ಕಳೆದುಕೊಂಡು ಕಟುಕನಾಗಿ ವಾಸಿಸುವಂತಹ ಕಾಲಘಟ್ಟದಲ್ಲಿ, ಅವನ ಕಣ್ತೆರೆಸುವ ಒಳ್ಳೆಯ ಪ್ರಯತ್ನ “ಚೌಕ’ ಎಂದರೆ ತಪ್ಪಿಲ್ಲ. ಯಾರಿಗೇನಾದರೂ ಆಗಲೀ, ತಾನೊಬ್ಬ ಚೆನ್ನಾಗಿರಬೇಕು ಎಂಬ ಹಪಹಪಿಸುವ ಮನುಷ್ಯ, ಎಲ್ಲರೂ ಒಂದೇ ಎಂದು ಭಾವಿಸಬೇಕು ಮತ್ತು ಮನುಷ್ಯತ್ವ ಗೆಲ್ಲಬೇಕು ಎಂಬ ಸದುದ್ದೇಶದಿಂದ ಮಾಡಿದ ಚಿತ್ರ ಇದು. ಹಾಗಾಗಿ ಇಂಥದ್ದೊಂದು ಪ್ರಯತ್ನ ಮತ್ತು ಉದ್ದೇಶಕ್ಕೆ ಹ್ಯಾಟ್ಸ್‌ ಆಫ್ ಎನ್ನಬಹುದು.

ಉದ್ದೇಶವೇನೋ ಒಳ್ಳೆಯದು. ಆದರೆ, ಅದನ್ನು ತೆರೆಗೆ ತರುವ ಪ್ರಯತ್ನದಲ್ಲೇ ಒಂದಿಷ್ಟು ಎಡವಿದ್ದು ಎದ್ದು ಕಾಣುತ್ತದೆ. ಪ್ರಮುಖವಾಗಿ ಚಿತ್ರದ ಸಮಸ್ಯೆ ಇರುವುದು ಅದರ ಲೆಂಥ್‌ನಲ್ಲಿ. ಬಹುಶಃ ಇತ್ತೀಚಿನ ದಿನಗಳಲ್ಲಿ ಜನ ಊಹಿಸಿಕೊಳ್ಳಲಾಗದ ಮತ್ತು ಅಷ್ಟು ಹೊತ್ತು ಕೂರದ ಸುಮಾರು ಮೂರು ಗಂಟೆ ಚಿತ್ರವನ್ನು ಮಾಡಿದ್ದಾರೆ ತರುಣ್‌ ಸುಧೀರ್‌. ಮೊದಲಾರ್ಧವೆಲ್ಲಾ ಈ ನಾಲ್ವರು ಹುಡುಗರ ಹಿನ್ನೆಲೆಗೆ ಸೀಮಿತವಾದರೆ, ದ್ವಿತೀಯಾರ್ಧವೆಲ್ಲಾ ಈ ನಾಲ್ವರು ಮುಂದೇನು ಮಾಡುತ್ತಾರೆ ಎಂಬುದನ್ನು ಹೇಳುತ್ತದೆ.

ಹಾಗೆ ನೋಡಿದರೆ, ನಾಲ್ವರು ಜೈಲಿಗೆ ಬರುವುದರಿಂದಲೇ ಚಿತ್ರವನ್ನು ಶುರು ಮಾಡಬಹುದಿತ್ತು. ಏಕೆಂದರೆ, ಮೊದಲಾರ್ಧ ನಡೆಯುವ ಯಾವುದೇ ಘಟನೆಗಳಿಗೆ, ದ್ವಿತೀಯಾರ್ಧದಲ್ಲಿ ಯಾವುದೇ ಪ್ರತಿಕ್ರಿಯೆ ಇಲ್ಲ. ಇನ್ನು ನಾಯಕಿಯರಂತೂ ಪೂರಾ ವೇಸ್ಟು. ಆ ನಾಲ್ವರು ಅಮಾಯಕರು ಎಂದು ತೋರಿಸುವ ಒಂದೇ ಕಾರಣಕ್ಕೆ ನಾಲ್ಕು ವಿಭಿನ್ನ ಕಾಲಘಟ್ಟ ಮತ್ತು ನಾಲ್ಕು ವಿಭಿನ್ನ ಪರಿಸರದ ಕಥೆಗಳನ್ನು ಸೇರಿಸಲಾಗಿದೆ. ಅದನ್ನೆಲ್ಲಾ ಬಿಟ್ಟು ನೇರವಾಗಿ ಕಥೆ ಶುರು ಮಾಡಿದ್ದರೆ ಮತ್ತು ಹೇಳುವುದನ್ನು ಚುಟುಕಾಗಿ ಹೇಳಿದ್ದರೆ, ನಿಜಕ್ಕೂ “ಚೌಕ’ ಒಂದು ಅದ್ಭುತ ಚಿತ್ರವಾಗುತಿತ್ತು.

ಹಾಗಂತ ತೀರಾ ಕಳಪೆ ಎಂದು ಭಾವಿಸಬೇಕಿಲ್ಲ. ತರುಣ್‌ ಸುಧೀರ್‌ ಮೊದಲ ಬಾರಿಗೆ ಚಿತ್ರ ನಿರ್ದೇಶಿಸಿದ್ದರೂ ಒಂದು ವಿಭಿನ್ನ ಪ್ರಯತ್ನ ಮತ್ತು ಪ್ರಯೋಗವನ್ನು ಮಾಡಿದ್ದಾರೆ. ನಾಲ್ವರು ಹೀರೋಗಳನ್ನಿಟ್ಟುಕೊಂಡು ಹೊಸ ಸಾಹಸವನ್ನೇ ಮಾಡಿದ್ದಾರೆ. ನಾಲ್ವರಿಗೆ ವಿಭಿನ್ನ ಮ್ಯಾನರಿಸಂ, ಹಿನ್ನೆಲೆ, ಆಸೆಗಳನ್ನು ಕೊಟ್ಟಿದ್ದಾರೆ. ಅವರ ಈ ಸಾಹಸಕ್ಕೆ ಪ್ರೇಮ್‌, ಪ್ರಜ್ವಲ್‌, ದಿಗಂತ್‌ ಮತ್ತು ವಿಜಯ್‌ ರಾಘವೇಂದ್ರ ಚೆನ್ನಾಗಿ ಕೈ ಜೋಡಿಸಿದ್ದಾರೆ. ಆದರೆ, ಚಿತ್ರ ಮುಗಿದ ನಂತರವೂ ಈ ನಾಲ್ವರಿಗಿಂಥ ಹೆಚ್ಚು ನೆನಪಾಗುವುದು ಕಾಶೀನಾಥ್‌ ಮತ್ತು ಚಿಕ್ಕಣ್ಣ. ಇದುವರೆಗೂ ಪೆದ್ದನಾಗಿಯೇ ಕಾಣಿಸಿಕೊಂಡಿದ್ದ ಕಾಶೀನಾಥ್‌ಗೆ ಇಲ್ಲಿ ಒಳ್ಳೆಯ ಪಾತ್ರವಿದೆ.

ಅವರು ಅದನ್ನು ಚೆನ್ನಾಗಿ ನಿರ್ವಹಿಸಿದ್ದಾರೆ ಎನ್ನುವುದಕ್ಕಿಂತ ಪಾತ್ರ ಗಟ್ಟಿಯಾಗಿರುವುದರಿಂದ ಅವರು ಗಟ್ಟಿಯಾಗಿ ನೆನಪಿನಲ್ಲುಳಿಯುತ್ತಾರೆ. ನಾಲ್ಕೂ ಕಾಲಘಟದಲ್ಲಿರುವ ಮತ್ತು ಚಿತ್ರದುದ್ದಕ್ಕೂ ಕಾಣಿಸಿಕೊಳ್ಳುವ ನಟ ಎಂದರೆ ಚಿಕ್ಕಣ್ಣ ಮತ್ತು ಅವರು ತಮ್ಮ ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ಇನ್ನು ನಾಯಕಿಯರ ಪಾತ್ರವೇ ಬೇಕಿಲ್ಲವಾದ್ದರಿಂದ, ಅದನ್ನು ಯಾರು ಮಾಡಿದರೂ ಹೆಚ್ಚು ವ್ಯತ್ಯಾಸವೆನಿಸುವುದಿಲ್ಲ ಮತ್ತು ಐಂದ್ರಿತಾ ರೇ, ಭಾವನಾ ಮೆನನ್‌, ದೀಪಾ ಸನ್ನಿಧಿ ಮತ್ತು ಪ್ರಿಯಾಮಣಿ ಅವರಿಗೆ ಹೆಚ್ಚು ಕೆಲಸವೂ ಇಲ್ಲ. ಇನ್ನು ದರ್ಶನ್‌ ಒಂದು ಫೈಟಿಗೆ ಸೀಮಿತವಾಗಿದ್ದಾರೆ ಮತ್ತು ಆ ಫೈಟಿನಲ್ಲಿ ಸಕತ್ತಾಗಿ ಮಿಂಚುತ್ತಾರೆ.

ಇನ್ನು ಒಂದೊಂದು ಟ್ರಾಕ್‌ನ್ನು ಒಬ್ಬಬ್ಬರು ಛಾಯಾಗ್ರಾಹಕರು, ಸಂಗೀತ ನಿರ್ದೇಶಕರಿಂದ ಮಾಡಿಸಿದ ಔಚಿತ್ಯ ಮತ್ತು ಕಾರಣ ಗೊತ್ತಾಗುವುದಿಲ್ಲ. ಛಾಯಾಗ್ರಹಣದಲ್ಲಿ ಅಂತಹ ವಿಶೇಷವೇನೂ ಕಾಣುವುದಿಲ್ಲ. ಇನ್ನು “ಅಪ್ಪಾ ಐ ಲವ್‌ ಯೂ’ ವಿಪರೀತ ಕಾಡಿದರೆ, “ಅಲ್ಲಾಡುÕ ಅಲ್ಲಾಡು’ ಹಾಡು ಮಜಾ ಕೊಡುತ್ತದೆ. ಸಂಕಲನಕಾರ ಕೆ.ಎಂ. ಪ್ರಕಾಶ್‌ ಅವರ ತಪ್ಪು ಹುಡುಕುವುದು ಕಷ್ಟ. ಏಕೆಂದರೆ, ಕಥೆ ಮತ್ತು ಚಿತ್ರಕಥೆಯೇ ಸುದೀರ್ಘ‌ವಾಗಿರುವುದರಿಂದ, ಪ್ರಕಾಶ್‌ ಬೇಡದ್ದನ್ನು ಕಟ್‌ ಮಾಡದೆಯೇ ಇಟ್ಟಿದ್ದಾರೆ ಎಂದು ಹೇಳುವುದು ಕಷ್ಟ.
ಒಟ್ಟಾರೆ ಚಿತ್ರ ಹೇಗೇ ಇರಲಿ, ಉದ್ದೇಶಕ್ಕಾಗಿ ಜನ ಚಿತ್ರವನ್ನು ನೋಡಿದರೆ, ದ್ವಾರ ಕೀಶ್‌ ಅವರ 50ನೇ ನಿರ್ಮಾಣವೂ ಸಾರ್ಥಕವಾಗುತ್ತದೇನೋ.

ಚಿತ್ರ: ಚೌಕ
ನಿರ್ದೇಶನ: ತರುಣ್‌ ಸುಧೀರ್‌
ನಿರ್ಮಾಣ: ದ್ವಾರಕೀಶ್‌
ತಾರಾಗಣ: ಪ್ರೇಮ್‌, ವಿಜಯ್‌ ರಾಘವೇಂದ್ರ, ದಿಗಂತ್‌, ಪ್ರಜ್ವಲ್‌, ಐಂದ್ರಿತಾ ರೇ, ಭಾವನಾ, ಪ್ರಿಯಾಮಣಿ, ದೀಪಾ ಸನ್ನಿಧಿ, ಚಿಕ್ಕಣ್ಣ ಮುಂತಾದವರು

* ಚೇತನ್‌ ನಾಡಿಗೇರ್‌

ಟಾಪ್ ನ್ಯೂಸ್

 ಸ್ಮೃತಿ ಇರಾನಿ ಎದುರು ಗೆಲುವು ಅಸಾಧ್ಯ ಎಂದು ಗೊತ್ತಾಗಿದೆ: ರಾಹುಲ್‌ ಗೆ ಬಿಜೆಪಿ ತಿರುಗೇಟು

  Smriti ಇರಾನಿ ಎದುರು ಗೆಲುವು ಅಸಾಧ್ಯ ಎಂದು ಗೊತ್ತಾಗಿದೆ: ರಾಹುಲ್‌ ಗೆ ಬಿಜೆಪಿ ತಿರುಗೇಟು

ಈ ಬಾರಿ ಚುನಾವಣೆಯಲ್ಲಿ ಸಂವಿಧಾನದ ಅಳಿವು ಉಳಿವಿನ ಪ್ರೆಶ್ನೆಯಾಗಿದೆ: ಟಿ.ಬಿ.ಜಯಚಂದ್ರ

ಈ ಬಾರಿ ಚುನಾವಣೆಯಲ್ಲಿ ಸಂವಿಧಾನದ ಅಳಿವು ಉಳಿವಿನ ಪ್ರೆಶ್ನೆಯಾಗಿದೆ: ಟಿ.ಬಿ.ಜಯಚಂದ್ರ

amit-shah

Belagavi; ನೇಹಾ ಹತ್ಯೆ ಪ್ರಕರಣ ಸಿಬಿಐಗೆ ಕೊಡಿ, ಆರೋಪಿಗಳ ತಲೆ ಕೆಳಗೆ ಮಾಡ್ತೀವಿ: ಶಾ ಗುಡುಗು

Campaign: ಮತದಾರರನ್ನು ಸೆಳೆಯಲು ಪ್ಯಾರಾ ಗ್ಲೈಡರ್ ಮೂಲಕ ಅಭಿಯಾನ

Campaign: ಮತದಾರರನ್ನು ಸೆಳೆಯಲು ಪ್ಯಾರಾ ಗ್ಲೈಡರ್ ಮೂಲಕ ಅಭಿಯಾನ

Gadag; ಬಿಜೆಪಿಗೆ ಹೆಚ್ಚಿನ ಮತ ಹಾಕಿಸಲು ಪ್ರಕೋಷ್ಠಗಳು ಶ್ರಮಿಸಬೇಕು: ಬಸವರಾಜ ಬೊಮ್ಮಾಯಿ

Gadag; ಬಿಜೆಪಿಗೆ ಹೆಚ್ಚಿನ ಮತ ಹಾಕಿಸಲು ಪ್ರಕೋಷ್ಠಗಳು ಶ್ರಮಿಸಬೇಕು: ಬಸವರಾಜ ಬೊಮ್ಮಾಯಿ

ಗ್ಯಾರೆಂಟಿ ಹೆಸರಲ್ಲಿ ದಲಿತರಿಗೆ ಕಾಂಗ್ರೆಸ್‌ ವಂಚನೆ: ನಾರಾಯಣಸ್ವಾಮಿ

Raichur; ಗ್ಯಾರಂಟಿ ಹೆಸರಲ್ಲಿ ದಲಿತರಿಗೆ ಕಾಂಗ್ರೆಸ್‌ ವಂಚನೆ: ನಾರಾಯಣಸ್ವಾಮಿ

ICC Men’s Test Team Rankings; Team India slipped to second place

ICC Men’s Test Team Rankings; ಎರಡನೇ ಸ್ಥಾನಕ್ಕೆ ಜಾರಿದ ಟೀಂ ಇಂಡಿಯಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

 ಸ್ಮೃತಿ ಇರಾನಿ ಎದುರು ಗೆಲುವು ಅಸಾಧ್ಯ ಎಂದು ಗೊತ್ತಾಗಿದೆ: ರಾಹುಲ್‌ ಗೆ ಬಿಜೆಪಿ ತಿರುಗೇಟು

  Smriti ಇರಾನಿ ಎದುರು ಗೆಲುವು ಅಸಾಧ್ಯ ಎಂದು ಗೊತ್ತಾಗಿದೆ: ರಾಹುಲ್‌ ಗೆ ಬಿಜೆಪಿ ತಿರುಗೇಟು

ಈ ಬಾರಿ ಚುನಾವಣೆಯಲ್ಲಿ ಸಂವಿಧಾನದ ಅಳಿವು ಉಳಿವಿನ ಪ್ರೆಶ್ನೆಯಾಗಿದೆ: ಟಿ.ಬಿ.ಜಯಚಂದ್ರ

ಈ ಬಾರಿ ಚುನಾವಣೆಯಲ್ಲಿ ಸಂವಿಧಾನದ ಅಳಿವು ಉಳಿವಿನ ಪ್ರೆಶ್ನೆಯಾಗಿದೆ: ಟಿ.ಬಿ.ಜಯಚಂದ್ರ

11-hunsur

Hunsur: ಉರುಳು ಹಾಕಿ ಜಿಂಕೆ ಕೊಂದು ಮಾಂಸ ಹೊತ್ತೊಯ್ಯುತ್ತಿದ್ದ ಇಬ್ಬರ ಬಂಧನ

amit-shah

Belagavi; ನೇಹಾ ಹತ್ಯೆ ಪ್ರಕರಣ ಸಿಬಿಐಗೆ ಕೊಡಿ, ಆರೋಪಿಗಳ ತಲೆ ಕೆಳಗೆ ಮಾಡ್ತೀವಿ: ಶಾ ಗುಡುಗು

Campaign: ಮತದಾರರನ್ನು ಸೆಳೆಯಲು ಪ್ಯಾರಾ ಗ್ಲೈಡರ್ ಮೂಲಕ ಅಭಿಯಾನ

Campaign: ಮತದಾರರನ್ನು ಸೆಳೆಯಲು ಪ್ಯಾರಾ ಗ್ಲೈಡರ್ ಮೂಲಕ ಅಭಿಯಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.