ತಡವಾದ ನಿರ್ಧಾರದಿಂದ ಕಂಗೆಟ್ಟ ಅಮೆರಿಕ ; ಅನಿವಾಸಿ ಭಾರತೀಯೆ ತನುಜಾ ಶೆಣೈ ಕುಂದಾಪುರ

Team Udayavani, May 2, 2020, 6:02 AM IST

ತಡವಾದ ನಿರ್ಧಾರದಿಂದ ಕಂಗೆಟ್ಟ ಅಮೆರಿಕ ; ಅನಿವಾಸಿ ಭಾರತೀಯೆ ತನುಜಾ ಶೆಣೈ ಕುಂದಾಪುರ

ಕುಂದಾಪುರ: ಇಲ್ಲಿ ತಡವಾದ ನಿರ್ಧಾರದಿಂದಾಗಿ ಕರಾಳ ಅನುಭವವಾಯಿತು. ಭಾರತದಷ್ಟು ನಿರ್ಬಂಧಗಳೂ ಇಲ್ಲ. ಆದರೆ ಭಾರತದಲ್ಲಿ ಸಕಾಲಿಕ ನಿರ್ಣಯದಿಂದಾಗಿ ಪರಿಸ್ಥಿತಿ ತಹಬಂದಿಗೆ ಬಂತು. ಇಲ್ಲದಿದ್ದರೆ ಭಾರತದ ಜನಸಂಖ್ಯೆಗೆ ಹೋಲಿಸಿದರೆ ಕಡಿವಾಣ ಹಾಕೋದು ಕಷ್ಟ.

ಸರಕಾರ ನಡೆಸುವವರ ಉತ್ತಮ ನಾಯಕತ್ವದ ಲಕ್ಷಣ ಇದು ಎನ್ನುತ್ತಾರೆ ಮೂಲತಃ ಕುಂದಾಪುರ ನಗರ ನಿವಾಸಿಯಾಗಿದ್ದು ಬೆಂಗಳೂರು ಮಲ್ಲೇಶ್ವರದ ಸಾಫ್ಟ್ವೇರ್‌ ಎಂಜಿನಿಯರ್‌ ಪ್ರಕಾಶ್‌ ಶೆಣೈ ಅವರನ್ನು ವಿವಾಹಿತರಾಗಿ ಈಗ ಪತಿ ಜತೆ ಅಮೆರಿಕದ ನ್ಯೂಜೆರ್ಸಿ ಎಡಿಸನ್‌ನಲ್ಲಿರುವ ತನುಜಾ ಶೆಣೈ.

ಈ ದಂಪತಿ ಹೇಳುವಂತೆ; ಕಳೆದ ಎರಡು ತಿಂಗಳಿನಿಂದ ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಮನೆಯಿಂದ ಹೊರಗೆ ಹೋಗಿದ್ದೇವೆ. ಮನೆಗೂ ಯಾರನ್ನೂ ಕರೆದಿಲ್ಲ, ನಾವೂ ಯಾರ ಮನೆಗೂ ಹೋಗುತ್ತಿಲ್ಲ. ಮಕ್ಕಳನ್ನು ಆಚೆ ಬಿಡುತ್ತಿಲ್ಲ.

1898ರಲ್ಲಿ ಬೆಂಗಳೂರಿನಲ್ಲಿ ಪ್ಲೇಗ್‌ ಬಂದಾಗ ಅರ್ಧದಷ್ಟು ಜನಸಂಖ್ಯೆಯೇ ಸಾವಿಗೀಡಾಗಿತ್ತು. ಎಷ್ಟೇ ಬೌದ್ಧಿಕ, ಆರ್ಥಿಕ, ವಾಕ್‌ ಸ್ವಾತಂತ್ರ್ಯದ ಕುರಿತು ಮಾತುಗಳನ್ನಾಡಿದರೂ ಪ್ರಕೃತಿ ಇಂತಹ ಆಟ ಆಡಿಯೇ ಆಡುತ್ತದೆ.

ಆದ್ದರಿಂದ ಸಮಾಜ ಜೀವಿಗಳಾದ ನಾವು ಜತೆ ಜತೆಗೇ ಇದ್ದು ಹೇಗೆ ವಿಷಮ ಸ್ಥಿತಿ ಎದುರಿಸಬೇಕು ಎಂದು ತೋರಿಸಿಕೊಡಬೇಕು ವಿನಾ ಸರಕಾರ ಏನು ಮಾಡಿತು ಎನ್ನುವ ಪ್ರಶ್ನೆಗೆ ಆಸ್ಪದವಿಲ್ಲ ಎನ್ನುತ್ತಾರೆ.

ಕಾನೂನು ಮೀರಬಾರದು
ಭಾರತದಲ್ಲಿ ನಾವು ಬೆಳೆದು ಬಂದ ರೀತಿಯೇ ಹಾಗಿದೆ. ಕಾನೂನು ಬಿಟ್ಟು ಬೇರೆಲ್ಲಕ್ಕೂ ಬೆಲೆ ಇದೆ ಎಂಬ ಲೇವಡಿಗೆ ವಿರುದ್ಧಾರ್ಥವಾಗಿ ಈಗ ಲಾಕ್ ‌ಡೌನ್‌ ಯಶಸ್ವಿಯಾಗಿದೆ.

ಇಷ್ಟು ವರ್ಷಗಳ ಬಳಿಕ ಸಮರ್ಥ ನಾಯಕತ್ವದಿಂದಾಗಿ ಭಾರತದಲ್ಲಿ ಇದು ಸಾಧ್ಯವಾಗಿದೆ. ಆದರೆ ಅಮೆರಿಕದಲ್ಲಿ ನಿರ್ಲಕ್ಷ್ಯ ಮಾಡಿದ ಕಾರಣ, ಲಾಕ್‌ಡೌನ್‌ ನಿಧಾನ ಮಾಡಿದ ಪರಿಣಾಮ ಎಲ್ಲರೂ ಅನುಭವಿಸುವಂತಾಗಿದೆ.

ಕಾನೂನು ಮಾಡುವುದೇ ಪಾಲನೆಗಾಗಿ. ಪಾಲನೆ ಸಾಧ್ಯವಿಲ್ಲವಾದರೆ ಕಾನೂನನ್ನೇ ಬದಲಿಸಿ ಬಿಡಿ, ಮಾಡಿದ ಕಾನೂನನ್ನು ಅಗೌರವಿಸಬೇಡಿ ಎನ್ನುತ್ತಾರೆ.

ಬದ್ಧತೆ ಬೇಕು
ಬೌದ್ಧಿಕ ಜೀವಿಗಳಾಗಿ ನಮಗೆ ಬದ್ಧತೆ ಬೇಕು. ಕುಡಿಯೋದು, ಕುಣಿಯೋದು ಇಷ್ಟೇ ಜೀವನ ಅಲ್ಲ. ಬದುಕಿದ್ದರೆ ಇನ್ನೂ ಮಾಡಬಹುದು. ಈಗ ಬದುಕಿಗಾಗಿ ಒಂದಷ್ಟು ತ್ಯಾಗಗಳನ್ನು ಮಾಡಬೇಕು. ನಮಗೆ ಸಾಮಾಜಿಕ ಕಳಕಳಿ ಇದೆ ಎಂದು ನಾವು ಬದುಕಿ ಇತರರನ್ನು ಬದುಕಿಸಿ ತೋರಿಸಬೇಕು.

ಕೋವಿಡ್ ಬರದಂತೆ ತಡೆಯಲು ನಮ್ಮ ಕೊಡುಗೆ ನೀಡಬೇಕು. ಸರಕಾರ ಹೇಳದಿದ್ದರೂ ಕೆಲವು ಕಟ್ಟು ಪಾಡುಗಳನ್ನು ನಾವಾಗಿಯೇ ಪಾಲಿಸಬೇಕು. ಸರಕಾರ ಹೇಳಿದ್ದನ್ನಂತೂ ಕೇಳಲೇಬೇಕು.

ಕೆಲಸದ ಪ್ರತಿಫ‌ಲ
ಈಗ ಭಾರತೀಯರು ನಿರ್ವಹಿಸಿದ ರೀತಿ ನಿಜಕ್ಕೂ ಪ್ರಶಂಸನೀಯ. ಅದರಲ್ಲೂ ಮೊದಲ ಸಾಲಿನಲ್ಲಿರುವ ವೈದ್ಯರು, ದಾದಿಯರು, ಆರೋಗ್ಯ ಕಾರ್ಯಕರ್ತರು, ಸರಕಾರಿ ಅಧಿಕಾರಿಗಳು, ಪೊಲೀಸರು ಪ್ರಾಮಾಣಿಕತೆಯಿಂದ ಬದ್ಧತೆಯಿಂದ ಮಾಡಿದ ಕೆಲಸದ ಪ್ರತಿಫ‌ಲ ಎದ್ದು ಕಾಣುತ್ತಿದೆ.
– ತನುಜಾ ಶೆಣೈ
-ಪ್ರಕಾಶ್‌ ಶೆಣೈ, ನ್ಯೂಜೆರ್ಸಿ

ಟಾಪ್ ನ್ಯೂಸ್

BJP Party: ಬಿಜೆಪಿ ಸೇರಿದ ನಟ ಶೇಖರ್ ಸುಮನ್, ರಾಧಿಕಾ ಖೇರಾ

BJP Party: ಬಿಜೆಪಿ ಸೇರಿದ ನಟ ಶೇಖರ್ ಸುಮನ್, ರಾಧಿಕಾ ಖೇರಾ

Encounter: ಜಮ್ಮು – ಕಾಶ್ಮೀರದಲ್ಲಿ ಎನ್‌ಕೌಂಟರ್‌… ಮೂವರು ಭಯೋತ್ಪಾದಕರು ಹತ

Encounter: ಜಮ್ಮು – ಕಾಶ್ಮೀರದಲ್ಲಿ ಎನ್‌ಕೌಂಟರ್‌… ಮೂವರು ಭಯೋತ್ಪಾದಕರು ಹತ

4-manjeshwara-1

Manjeshwara: ಆ್ಯಂಬುಲೆನ್ಸ್- ಕಾರು ಭೀಕರ ಅಪಘಾತ; ಮೂವರು ಮೃತ್ಯು, ನಾಲ್ವರಿಗೆ ಗಾಯ

Gangavathi: ಮತದಾನ ಬಹಿಷ್ಕರಿಸಿದ್ದ ಚಿಕ್ಕ ರಾಂಪೂರ ಗ್ರಾಮಸ್ಥರಿಂದ ಕೊನೆಗೂ ಮತದಾನ

Gangavathi: ಮತದಾನ ಬಹಿಷ್ಕರಿಸಿದ್ದ ಚಿಕ್ಕ ರಾಂಪೂರ ಗ್ರಾಮಸ್ಥರಿಂದ ಕೊನೆಗೂ ಮತದಾನ

Sirsi: ಕಲಿತ ಶಾಲೆಯಲ್ಲಿ ಮತದಾನ ಮಾಡಿದ ಮಾಜಿ ಸ್ಪೀಕರ್ ಕಾಗೇರಿ!

Sirsi: ಕಲಿತ ಶಾಲೆಯಲ್ಲಿ ಮತದಾನ ಮಾಡಿದ ಮಾಜಿ ಸ್ಪೀಕರ್ ಕಾಗೇರಿ!

3-hunsur

Hunsur: ಆನೆ ನಡೆದದ್ದೇ ದಾರಿ! ಆನೆ ದಾಳಿಗೆ ಬೈಕ್ ಜಖಂ, ಕಾಂಪೌಂಡ್ ಗೆ ಹಾನಿ

2-kushtagi

Polls:ಮತದಾನ ಮಾಡಲು ಬೈಕ್ ನಲ್ಲಿ ಬರುತ್ತಿದ್ದ ಯುವಕನಿಗೆ ಅಪರಿಚಿತ ವಾಹನ ಡಿಕ್ಕಿ; ಸವಾರ ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Kota ಕಾರ್ಮಿಕನ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ ದಾಖಲು

Kota ಕಾರ್ಮಿಕನ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ ದಾಖಲು

Kundapura ಹಾಡಹಗಲೇ ದೇವಸ್ಥಾನದಿಂದ ನಗದು, ಸೊತ್ತು ಕಳವು: ಪ್ರಕರಣ ದಾಖಲು

Kundapura ಹಾಡಹಗಲೇ ದೇವಸ್ಥಾನದಿಂದ ನಗದು, ಸೊತ್ತು ಕಳವು: ಪ್ರಕರಣ ದಾಖಲು

Karkala ಪರಶುರಾಮ ಥೀಂ ಪಾರ್ಕ್‌ ಸಮಾಜದ್ದು: ಸುನಿಲ್‌ ಕುಮಾರ್‌

Karkala ಪರಶುರಾಮ ಥೀಂ ಪಾರ್ಕ್‌ ಸಮಾಜದ್ದು: ಸುನಿಲ್‌ ಕುಮಾರ್‌

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

BJP Party: ಬಿಜೆಪಿ ಸೇರಿದ ನಟ ಶೇಖರ್ ಸುಮನ್, ರಾಧಿಕಾ ಖೇರಾ

BJP Party: ಬಿಜೆಪಿ ಸೇರಿದ ನಟ ಶೇಖರ್ ಸುಮನ್, ರಾಧಿಕಾ ಖೇರಾ

Encounter: ಜಮ್ಮು – ಕಾಶ್ಮೀರದಲ್ಲಿ ಎನ್‌ಕೌಂಟರ್‌… ಮೂವರು ಭಯೋತ್ಪಾದಕರು ಹತ

Encounter: ಜಮ್ಮು – ಕಾಶ್ಮೀರದಲ್ಲಿ ಎನ್‌ಕೌಂಟರ್‌… ಮೂವರು ಭಯೋತ್ಪಾದಕರು ಹತ

4-manjeshwara-1

Manjeshwara: ಆ್ಯಂಬುಲೆನ್ಸ್- ಕಾರು ಭೀಕರ ಅಪಘಾತ; ಮೂವರು ಮೃತ್ಯು, ನಾಲ್ವರಿಗೆ ಗಾಯ

Gangavathi: ಮತದಾನ ಬಹಿಷ್ಕರಿಸಿದ್ದ ಚಿಕ್ಕ ರಾಂಪೂರ ಗ್ರಾಮಸ್ಥರಿಂದ ಕೊನೆಗೂ ಮತದಾನ

Gangavathi: ಮತದಾನ ಬಹಿಷ್ಕರಿಸಿದ್ದ ಚಿಕ್ಕ ರಾಂಪೂರ ಗ್ರಾಮಸ್ಥರಿಂದ ಕೊನೆಗೂ ಮತದಾನ

21

Rachana inder: ಮರ್ಡರ್‌ ಮಿಸ್ಟರಿ 4 ಎನ್‌ 6

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.