ರಾಜ್ಯದಲ್ಲಿಂದು 16068 ಪಾಸಿಟಿವ್ ಪ್ರಕರಣ: 22316 ಸೋಂಕಿತರು ಗುಣಮುಖ
Team Udayavani, Jun 4, 2021, 8:01 PM IST
ಬೆಂಗಳೂರು: ರಾಜ್ಯದಲ್ಲಿ ಇಂದು (ಜೂನ್ 04) ಮತ್ತೆ 16068 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 22316 ಸೋಂಕಿತರು ಗುಣಮುಖರಾಗಿದ್ದು, 364 ಸೋಂಕಿತರು ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ.
ಕೋವಿಡ್ ಪ್ರಕರಣಗಳು ಕಡಿಮೆಯಾಗುತ್ತಿವೆಯಾದರೂ ಸಾವುಗಳ ಸಂಖ್ಯೆಯಲ್ಲಿ ಮಾತ್ರ ಕಡಿಮೆಯಾಗುತ್ತಿಲ್ಲ. ಬೆಂಗಳೂರಲ್ಲಿ 3221 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 206 ಸೋಂಕಿತರು ಸಾವಿಗೀಡಾಗಿದ್ದಾರೆ.
ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :
ಬಾಗಲಕೋಟೆ-208, ಬಳ್ಳಾರಿ-423, ಬೆಳಗಾವಿ-792, ಬೆಂಗಳೂರು ಗ್ರಾಮಾಂತರ-429, ಬೆಂಗಳೂರು ನಗರ-3221, ಬೀದರ್-19, ಚಾಮರಾಜನಗರ-296, ಚಿಕ್ಕಬಳ್ಳಾಪುರ-400, ಚಿಕ್ಕಮಗಳೂರು-595, ಚಿತ್ರದುರ್ಗ-702, ದಕ್ಷಿಣ ಕನ್ನಡ-806, ದಾವಣಗೆರೆ-620, ಧಾರವಾಡ-235, ಗದಗ-194, ಹಾಸನ-974, ಹಾವೇರಿ-100, ಕಲಬುರಗಿ-46, ಕಲಬುರಗಿ-ಕೊಡಗು-388, ಕೋಲಾರ-304, ಕೊಪ್ಪಳ-299, ಮಂಡ್ಯ-526, ಮೈಸೂರು-1265, ರಾಯಚೂರು-184, ರಾಮನಗರ-146, ಶಿವಮೊಗ್ಗ-636, ತುಮಕೂರು-857, ಉಡುಪಿ-561, ಉತ್ತರ ಕನ್ನಡ-559, ವಿಜಯಪುರ-190, ಯಾದಗಿರಿ-93.