ಗುಳೇದಗುಡ್ಡದಲ್ಲಿ 78 ಪಿಒಪಿ ಗಣಪತಿ ವಶ
Team Udayavani, Sep 6, 2018, 3:00 PM IST
ಗುಳೇದಗುಡ್ಡ: ಜಿಲ್ಲೆಯಲ್ಲಿ ಪಿಒಪಿ ಗಣೇಶ ಮೂರ್ತಿ ನಿಷೇ ಧಿಸಲು ಜಿಲ್ಲಾ ಧಿಕಾರಿಗಳು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದು, ಬುಧವಾರ ಪುರಸಭೆ ಮುಖ್ಯಾಧಿಕಾರಿ ಯೇಸು ಬೆಂಗಳೂರು ನೇತೃತ್ವದಲ್ಲಿ ಪುರಸಭೆ ಸಿಬ್ಬಂದಿ ಗಣೇಶ ಮೂರ್ತಿ ತಯಾರಿಸುವ ಕಡೆಗಳಲ್ಲಿ ದಾಳಿ ನಡೆಸಿ ಸುಮಾರು 78 ಪಿಒಪಿ ಗಣೇಶ ಮೂರ್ತಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ವಶಕ್ಕೆ ಪಡೆದ ಗಣೇಶ ಮೂರ್ತಿಗಳನ್ನು ಪುರಸಭೆ ಸಮುದಾಯ ಭವನದಲ್ಲಿ ಇರಿಸಲಾಗಿದೆ. ಪಿಒಪಿ ಗಣೇಶ ಮೂರ್ತಿಗಳನ್ನು ನಿಷೇಧಿಸಿ, ಕಳೆದ ವರ್ಷದಿಂದ ಪುರಸಭೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಗಣೇಶ ಹಬ್ಬಕ್ಕೂ ಮೊದಲೇ ಎಚ್ಚೆತ್ತುಕೊಂಡು ಪಿಒಪಿ ಮೂರ್ತಿಗಳನ್ನು ಗುಳೇದಗುಡ್ಡದಲ್ಲಿ ಸಂಪೂರ್ಣವಾಗಿ ನಿಷೇಧಿಸಲು ಪುರಸಭೆ ಪಟ್ಟಣದ ಗಣೇಶ ಮೂರ್ತಿ ತಯಾರಿಕೆಯ ಅಂಗಡಿಗಳ ಮೇಲೆ ದಾಳಿ ನಡೆಸಿದರು.
ಪಟ್ಟಣದ ಮೂರ್ತಿ ತಯಾರಕರ ಅಂಗಡಿಗಳ ಮೇಲೆ ದಾಳಿ ಮಾಡಿ, ಪ್ಲಾಸ್ಟರ್ ಗಣೇಶ ಮೂರ್ತಿ ಸೀಜ್ ಮಾಡಲು ಮುಂದಾದಾಗ ಗಣೇಶ ಮೂರ್ತಿ ತೆಗೆದುಕೊಂಡು ಹೋಗಬೇಡಿ, ನಮ್ಮ ಜೀವನ ನಡೆಸಲು ತೊಂದರೆಯಾಗುತ್ತದೆ ಎಂದು ಮೂರ್ತಿ ತಯಾರಕರು ಮನವಿ ಮಾಡಿದರು. ಆದರೆ, ಪುರಸಭೆ ಅಧಿಕಾರಿಗಳು ನಿಮಗೆ ತಿಂಗಳುಗಳ ಮೊದಲೇ ತಿಳಿಸಿದ್ದೇವು, ಪಿಒಪಿ ಗಣೇಶ ಮಾಡಬಾರದು ಎಂದು ಮತ್ತೆ ಏಕೆ ಮಾಡಿದ್ದೀರಿ ಎಂದು ಪ್ರಶ್ನಿಸಿದರು. ಗಣೇಶ ಮೂರ್ತಿ ತಯಾರಿಸಿ ಜೀವನ ನಡೆಸುತ್ತಿದ್ದು, ಸದ್ಯ ತಯಾರಿಸಿರುವ ಗಣೇಶ ಮೂರ್ತಿಗಳನ್ನು ಸೀಜ್ ಮಾಡಿರುವುದರಿಂದ ನಮ್ಮ ಕುಟುಂಬ ನಿರ್ವಹಣೆ ಕಷ್ಟವಾಗುತ್ತದೆ. ನಮಗೆ ಪರಿಹಾರ ನೀಡಬೇಕೆಂದು ಗಣೇಶ ಮೂರ್ತಿ ಕಲಾಕಾರರು ಮನವಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ
Karnataka ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು
Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು
Bidar; ಹಣ ಹಂಚುವ ದೂರು: ನಾಗಮಾರಪಳ್ಳಿ ಮನೆಯಲ್ಲಿ ಪರಿಶೀಲನೆ
Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ