ಮುಂಗಾರು ಹಂಗಾಮಿಗೆ ಅಣಿ
ಕೃಷಿ ಚಟುವಟಿಕೆಯಲ್ಲಿ ಮಗ್ನ | ಕುಂಟಿ- ಜೋಡೆತ್ತುಗಳೊಂದಿಗೆ ಹೊಲದತ್ತ ಹೆಜ್ಜೆ
Team Udayavani, May 20, 2021, 2:58 PM IST
ಶಿರೂರ: ಮುಂಗಾರು ಹಂಗಾಮಿಗೆ ರೈತ ಬಾಂಧವರು ಸಿದ್ಧತೆ ಆರಂಭಿಸಿದ್ದು, ಶಿರೂರ, ಬೆನಕಟ್ಟಿ, ನೀಲಾನಗರ, ಬೇವಿನಮಟ್ಟಿ, ಗುಂಡನಪಲ್ಲೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರು ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ.
ಕಳೆದ ಬಾರಿ ಮುಂಗಾರು ಉತ್ತಮವಾಗದಿದ್ದರೂ ಸೂಕ್ತ ಬೆಳೆ ಇಲ್ಲದೆ ರೈತರು ಕಷ್ಟ ಪಡಬೇಕಾಯಿತು. ಕಳೆದ ವರ್ಷದಿಂದ ಈ ವರ್ಷದ ಮುಂಗಾರು ಪ್ರಾರಂಭದ ಮುನ್ನವೇ ಕೊರೊನಾ ವಕ್ಕರಿಸಿ ಎಲ್ಲರ ಬದುಕನ್ನು ಬರಿದಾಗಿಸಿ ಸಂಕಷ್ಟಕ್ಕೆ ಸಿಗುವಂತೆ ಮಾಡಿದೆ. ಕೋವಿಡ್ ಮಧ್ಯದಲ್ಲಿ ಸರಕಾರ ಕೃಷಿ ಚಟುವಟಿಕೆಗಳಿಗೆ ರಿಯಾಯಿತಿ ನೀಡಿದ್ದರಿಂದ ರೈತ ಸಮುದಾಯ ಮುಂಗಾರು ಹಂಗಾಮಿನ ಕಾಮಗಾರಿಯಲ್ಲಿ ಮಗ್ನರಾಗಿದ್ದಾರೆ. ವರ್ಷವಿಡಿ ಜಾನುವಾರುಗಳಿಗೆ ಬೇಕಾಗುವ ಒಣಮೇವು, ಹೊಟ್ಟನ್ನು ಬಣವೆಗಳ ಮೂಲಕ ಸಂಗ್ರಹ ಮಾಡಿಕೊಂಡಿಟ್ಟಿದ್ದಾರೆ.
ಬಿತ್ತನೆ ಪೂರ್ವದಲ್ಲಿ ಭೂಮಿ ಹದಗೊಳಿಸಲು ರೈತರು ಕುಂಟಿ, ಜೋಡೆತ್ತುಗಳೊಂದಿಗೆ ಬೆಳಗ್ಗೆ ಹೊಲದತ್ತ ಹಜ್ಜೆ ಹಾಕುತ್ತಿದ್ದಾನೆ. ಈಗಾಗಲೇ ಕೃತ್ತಿಕಾ ಮಳೆ ಚಾಲ್ತಿಯಲ್ಲಿದ್ದು ಮುಂಬರುವ ರೋಹಿಣಿ ಮಳೆ ಉತ್ತಮವಾಗಿಯಾದರೇ ರೈತರ ಬಿತ್ತನೆಗೆ ಉಡಿ ಕಟ್ಟಿಸುತ್ತದೆ ಎಂಬ ಪ್ರತೀತಿ ಇದೆ ಎನ್ನುತ್ತಾರೆ ರೈತ ಸಿದ್ಲಿಂಗಪ್ಪ ಅಚನೂರ.
ರೋಹಿಣಿ ಮಳೆ ಸುರಿದರೆ, ಮುಂಗಾರು ಬೆಳೆ ಸಜ್ಜೆ, ತೊಗರಿ, ಹೆಸರು, ಸೂರ್ಯ ಕಾಂತಿ, ಗೋವಿನಜೋಳ ಬಿತ್ತಲು ಮುಂದಾಗುತ್ತಾನೆ. ಕೃಷಿ ಕಾರ್ಯಗಳಿಗೆ ಅವಕಾಶ ಕಲ್ಪಿಸಿದ್ದರಿಂದ ರೈತರು ಭೂಮಿ ಹದಗೊಳಿಸಿ ಮಡಕಿ ಹೊಡೆಯುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಕೆಲವರು ಟ್ಯಾಂಕರ್ ಮೂಲಕ ಹೊಲ ಸ್ವತ್ಛತೆಗೆ ಮುಂದಾಗಿದ್ದಾರೆ. ಮುಂದಿನ ದಿನಗಳಲ್ಲಿ ರೋಹಿಣಿ ಮಳೆ ರೈತರಪಾಲಿಗೆ ಹರ್ಷದಾಯಕವಾಗಲಿ ಎಂಬುದು ಈ ಭಾಗದ ರೈತ ಸಮುದಾಯದ ಆಶಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಮಲ್ಲಾರು : ಗಾಳಿ ಮಳೆಗೆ ಹಾರಿ ಹೋದ ಶಾಲೆಯ ಮೇಲ್ಛಾವಣಿ, ವಿದ್ಯಾರ್ಥಿಗಳು ಕಂಗಾಲು
ಬಾಳೆ ಕೃಷಿ ಮಾಡಿ ಸೈ ಎನಿಸಿಕೊಂಡಿರುವ ಕಳಸದ ಪ್ರಕಾಶ್ ಕುಮಾರ್
ಕಾಪು ತಾಲೂಕಿನಾದ್ಯಂತ ಭಾರೀ ಮಳೆ ತಗ್ಗು ಪ್ರದೇಶಗಳಲ್ಲಿ ನೆರೆ ಭೀತಿ
ಮಹಾ ತಿರುವು ; ಏಕನಾಥ್ ಶಿಂಧೆಗೆ ಮುಖ್ಯಮಂತ್ರಿ ಹುದ್ದೆ ಬಿಟ್ಟು ಕೊಟ್ಟ ಬಿಜೆಪಿ
ಸುರತ್ಕಲ್ ಸುತ್ತಮುತ್ತ 15 ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು
ಹೊಸ ಸೇರ್ಪಡೆ
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೆ ಇಂದು ಇಡಿ ವಿಚಾರಣೆ
ಸುಳ್ಯ-ಸಂಪಾಜೆಯಲ್ಲಿ ಮತ್ತೆ ಕಂಪನ; ಒಂದೇ ವಾರದಲ್ಲಿ ನಾಲ್ಕನೇ ಬಾರಿ ನಡುಗಿದ ಭೂಮಿ!
ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎಂ.ಡಿ ಲಕ್ಷ್ಮಿ ನಾರಾಯಣ್ಗೆ ಶೋಕಾಸ್ ನೋಟಿಸ್
ಇಂಗ್ಲೆಂಡ್ ವಿರುದ್ಧ ಟಿ20 ಏಕದಿನ ಸರಣಿಗೆ ತಂಡ ಪ್ರಕಟ; ಮರಳಿದ ಶಿಖರ್ ಧವನ್
ಬರ್ಮಿಂಗ್ಹ್ಯಾಮ್: ಭಾರತಕ್ಕೆ ಸವಾಲಿನ ಟೆಸ್ಟ್