ಹಳ್ಳಿಗೂ ವ್ಯಾಪಿಸಿತೇ ಕೊರೊನಾ?

ಈ ರೀತಿ ಮುಂದುವರಿದರೇ ಹಳ್ಳಿಗಳು ಕೊರೊನಾ ಹಾಟ್‌ಸ್ಪಾಟ್‌ ಆಗುವುದರಲ್ಲಿ ಸಂದೇಹವಿಲ್ಲ.

Team Udayavani, May 3, 2021, 7:08 PM IST

Halli

ಹುನಗುಂದ: ಮನುಕುಲವನ್ನು ಬೆಚ್ಚಿ ಬೀಳಿಸಿ ಮರಣ ಮೃದಂಗ ಬಾರಿಸುತ್ತಿರುವ ಕಿಲ್ಲರ್‌ ಕೊರೊನಾ ಸದ್ಯ ವಲಸಿಗರಿಂದ ಗ್ರಾಮೀಣ ಪ್ರದೇಶಕ್ಕೂ ಒಕ್ಕರಿಸಿಕೊಳ್ಳುವ ಎಲ್ಲ ಲಕ್ಷಣಗಳು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಹೌದು, ಕೊರೊನಾ ಎರಡನೆಯ ಅಲೆಯು ತಾಲೂಕಿನಲ್ಲಿ ನಿತ್ಯ ಕೊರೊನಾ ಪ್ರಕರಣಗಳು ಎರಡಂಕಿ ದಾಟಿ ಮುನ್ನಡೆಯುತ್ತಿದ್ದು, ಗ್ರಾಮೀಣ ಭಾಗದಲ್ಲೂ ಕೊರೊನಾದ ಕರಾಳ ಛಾಯೆ ವ್ಯಾಪಿಸುತ್ತಿದೆ.

ಕೊರೊನಾ ತಡೆಗೆ ಸರ್ಕಾರ ಕೊರೊನಾ ಕರ್ಫ್ಯೂ ಮುಂದುವ ರಿಸಿರುವುದರಿಂದ ಮಹಾರಾಷ್ಟ್ರ ಸೆರಿದಂತೆ ವಿವಿಧ ನಗರಗಳಿಗೆ ತೆರಳಿದ್ದ ವಲಸಿಗರು ತಾಲೂಕಿಗೆ ಮರಳುತ್ತಿದ್ದು, ಸೋಂಕು ಹರಡುವ ಆತಂಕ ಜನರಲ್ಲಿ ಮೂಡಿದೆ. ಅಲ್ಲದೇ ತಾಲೂಕಿನಲ್ಲಿ ದಿನದಿಂದ ದಿನ ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿದ್ದು, ತಾಲೂಕು ಆಡಳಿತ ಗಮನಹರಿಸುತ್ತಿಲ್ಲ ಎಂದು ನಾಗರಿಕರ ಆರೋಪವಾಗಿದೆ.

ಮೊದಲ ಹಂತದ ಕೊರೊನಾ ಸಂದರ್ಭದಲ್ಲಿ ವಲಸಿ ಬಂದ ಜನರನ್ನು ಕನಿಷ್ಠ 14 ರಿಂದ 28 ದಿನಗಳವರಗೆ ಕ್ವಾರಂಟೈನ್‌ ಮಾಡಿ ರೋಗ ಲಕ್ಷಣಗಳು ಕಂಡು ಬರದೇ ಇದ್ದಾಗ ಅವರ ಮನೆ ಕಳುಹಿಸುತ್ತಿದ್ದರು. ಆದರೆ, ಸದ್ಯ ಬೇರೆ ರಾಜ್ಯ ಮತ್ತು ಜಿಲ್ಲೆಗಳಿಂದ ಬಂದರೂ ಸಹ ಅವರ ಬಗ್ಗೆ ತಾಲೂಕು ಆಡಳಿತವಾಗಲಿ ಮತ್ತು ಆರೋಗ್ಯ ಇಲಾಖೆಯಾಗಲಿ ತಲೆಕೆಡಿಸಿಕೊಳ್ಳುತ್ತಿಲ್ಲ. ಇದರಿಂದ ವಲಸೆ ಬಂದ ಜನರಲ್ಲಿ ರೋಗ ಲಕ್ಷಣಗಳಿದ್ದರೂ ಸಹ ಹಳ್ಳಿಗಳಲ್ಲಿ ಇತರರೊಂದಿಗೆ ಸೇರಿ ಸಂಚರಿಸುತ್ತಿರುವುದರಿಂದ ಇಲ್ಲಿವರೆಗೂ ಸೇಫ್‌ ಆಗಿದ್ದ ಹಳ್ಳಿಗಳಲ್ಲಿ ಈಗ ಕೊರೊನಾದ ಆರ್ಭಟ ಆರಂಭಗೊಂಡಿದೆ.

ಹಳ್ಳಿಗಳು ಯಾವಾಗಲೂ ರೋಗಗಳಿಂದ ಸುರಕ್ಷಿತ ಎಂದು ಹೇಳಲಾಗುತ್ತಿತ್ತು. ಆದರೆ ದುಡಿಯಲು ಹೋಗಿ ಬಂದ ಜನರು ಗ್ರಾಮಗಳಿಗೆ ಪ್ರವೇಶಿಸುತ್ತಿದ್ದಂತೆ ಹಳ್ಳಿಗಳಲ್ಲಿ ಕೊರೊನಾ ಕರಿನೆರಳು ಆವರಿಸುತ್ತಿದೆ. ಪ್ರತಿಯೊಂದು ಹಳ್ಳಿಗರು ಜ್ವರ, ಶೀತ, ಕೆಮ್ಮಿನಿಂದ ಬೆಳಲುತ್ತಿದ್ದು. ಗ್ರಾಮೀಣ ಭಾಗದಲ್ಲಿರುವ ಆಸ್ಪತ್ರೆಗಳಲ್ಲೀಗ ಜ್ವರ, ಶೀತ ಕೆಮ್ಮುನಿಂದ ಬಳಲುವವರ ಸಂಖ್ಯೆ ಹೆಚ್ಚಿದೆ. ಈ ರೀತಿ ಮುಂದುವರಿದರೇ ಹಳ್ಳಿಗಳು ಕೊರೊನಾ ಹಾಟ್‌ಸ್ಪಾಟ್‌ ಆಗುವುದರಲ್ಲಿ ಸಂದೇಹವಿಲ್ಲ.

ಆರೋಗ್ಯ ಇಲಾಖೆ ನಿರ್ಲಕ್ಷ್ಯ:
ಕೊರೊನಾ ಮಹಾಮಾರಿ ರೋಗಕ್ಕೆ ಪಟ್ಟಣದಿಂದ ಹಳ್ಳಿಯ ಕಡೆಗೆ ನಿಧಾನವಾಗಿ ತಿರುಗುತ್ತಿದ್ದು. ರೋಗದ ತೀವ್ರತೆಯ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕಾದ ಆರೋಗ್ಯ ಇಲಾಖೆ ಕೇವಲ ನಾಮಕಾವಸ್ತೆ ಪರೀಕ್ಷೆ ಮಾಡಿ ರೋಗಿಗಳನ್ನು ಹೋಮ್‌ ಕ್ವಾರಂಟೈನ್‌ ಮಾಡುತ್ತಿದ್ದಾರೆ. ಜನರು ರೋಗದ ಬಗ್ಗೆ ಭಯ ಪಡದೇ ನಮ್ಮಗೇನು ರೋಗವಿಲ್ಲ ಎಂದು ಅನಗತ್ಯ ಸಂಚರಿಸಲು ಅವಕಾಶ ನೀಡಿದ್ದು ಆರೋಗ್ಯ ಇಲಾಖೆಯ ನಿರ್ಲಕ್ಷ ಎತ್ತಿ ತೋರಿಸುತ್ತದೆ. ಒಬ್ಬರಿಗೆ ಕೊರೊನಾ ಲಕ್ಷಣಗಳು ಕಂಡು ಬಂದ ತಕ್ಷಣವೇ ಸೂಕ್ತ ಚಿಕಿತ್ಸೆ ಮತ್ತು ಜಾಗೃತಿ ವಹಿಸಿದರೇ ಮತ್ತೂಬ್ಬರಿಗೆ ಹರಡುವುದಿಲ್ಲ. ಆದರೇ ಜ್ವರ, ಕೆಮ್ಮು, ಶೀತದಂತ ಲಕ್ಷಣಗಳು ಹಳ್ಳಿ ಹಳ್ಳಿಗಳಲ್ಲಿಗ ಕಾಣಿಸಿಕೊಳ್ಳುತ್ತಿದೆ.

ಈ ರೀತಿ ಮುಂದುವರಿದರೇ ಬೆಂಗಳೂರನಲ್ಲಿ ನಿತ್ಯ ಬರುವ ಪ್ರಕರಣಗಳಿಗಿಂತ ಹೆಚ್ಚು ಪಾಸಿಟಿವ್‌ ಕೇಸ್‌ಗಳು ಹಳ್ಳಿಗಳಿಂದ ಬಂದರೂ ಆಶ್ಚರ್ಯ ಪಡಬೇಕಾಗಿಲ್ಲ. ಕೊರೊನಾ ಗ್ರಾಮೀಣ ಭಾಗದ ಜನತೆಗೆ ಆವರಿಸುವುದಕ್ಕಿಂತ ಮುಂಚೆ ತಾಲೂಕು ಆಡಳಿತ ಎಚ್ಚೆತ್ತುಕೊಂಡು ಪಟ್ಟಣಗಳಿಂದ ಹಳ್ಳಿಗೆ ಬಂದ ಜನರನ್ನು ಸರಿಯಾಗಿ ಪರೀಕ್ಷಿಸಿ ರೋಗ ಲಕ್ಷಣಗಳಿದ್ದರೇ ಪ್ರತ್ಯೇಕವಾಗಿ ಇರಿಸಿ ಸೂಕ್ತ ಚಿಕಿತ್ಸೆ ನೀಡಬೇಕು. ಹಳ್ಳಿಯ ಜನರಿಗೆ ಜಾಗೃತಿ ಮೂಡಿಸುವುದು ಮುಖ್ಯ.

ಮೇ 1ರವರೆಗೆ ತಾಲೂಕಿನಾದ್ಯಂತ 323 ಪಾಸಿಟಿವ್‌ ಪ್ರಕರಣಗಳು ಕಂಡು ಬಂದಿದ್ದು. ಅದರಲ್ಲಿ 195 ಸಕ್ರಿಯ ಪ್ರಕರಣಗಳಿವೆ. 115 ಜನರು ಗುಣಮುಖವಾಗಿ ಮನೆ ಸೇರಿದರೇ, ಐವರು ತಾಲೂಕು ಆಸ್ಪತ್ರೆ ಹಾಗೂ 11 ಜನರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರೋಗ ಲಕ್ಷಣಗಳು ಕಂಡು ಬಂದ 55 ಜನರನ್ನು ಹೋಮ್‌ ಕ್ವಾರಂಟೈನ್‌ ಮಾಡಲಾಗಿದೆ. ಮೇ 2ರಂದು ಮತ್ತೇ 48 ಪಾಸಿಟಿವ್‌ ಪ್ರಕರಣಗಳು ದಾಖಲಾಗಿವೆ.
ಡಾ| ಪ್ರಶಾಂತ ತುಂಬಗಿ, ತಾಲೂಕು ವೈದ್ಯಾಧಿಕಾರಿ ಹುನಗುಂದ.

*ಮಲ್ಲಿಕಾರ್ಜುನ ಬಂಡರಗಲ್ಲ

ಟಾಪ್ ನ್ಯೂಸ್

1-weqwqe

Belagavi; ಇಂದು ಮತ್ತೊಂದು ಭೀಕರ ಅಪಘಾತ: 6 ಮಂದಿ ದುರ್ಮರಣ!

arrested

IAF; ವಿಂಗ್ ಕಮಾಂಡರ್ ಎಂದು ಏರ್ ಫೋರ್ಸ್ ಸ್ಟೇಷನ್ ಪ್ರವೇಶಿಸಿದವನ ಬಂಧನ

kejriwal-2

Delhi CM ಕೇಜ್ರಿವಾಲ್ ರನ್ನು ಬಂಧಿಸಿದರೆ ಜನರು ಬೀದಿಗಿಳಿಯುತ್ತಾರೆ: ಆಪ್ ಆಕ್ರೋಶ

HDK BJP

BJP ಯೊಂದಿಗೆ ಯಾವುದೇ ರೀತಿಯ ಸಮಸ್ಯೆಗಳಿಲ್ಲ: ಶಾ ಭೇಟಿ ಬಳಿಕ ಎಚ್.ಡಿ.ಕುಮಾರಸ್ವಾಮಿ

gmail

ಆಗಸ್ಟ್ ನಿಂದ Gmail ಸ್ಥಗಿತ? ಸ್ಪಷ್ಟನೆ ನೀಡಿದ ಗೂಗಲ್

CT Ravi

BJP; ಬೇಡಿಕೆಯಿಟ್ಟಿಲ್ಲ,ಪಕ್ಷ ಬಯಸಿದರೆ ಸ್ಪರ್ಧಿಸುತ್ತೇನೆ: ಸಿ.ಟಿ.ರವಿ

Rabkavi Banhatti; ಗಮನ ಸೆಳೆದ ತರಕಾರಿಯಿಂದ ಬನಶಂಕರಿಯ ದೇವಿಯ ಪೂಜೆ

Rabkavi Banhatti; ಗಮನ ಸೆಳೆದ ತರಕಾರಿಯಿಂದ ಬನಶಂಕರಿ ದೇವಿಯ ಪೂಜೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rabkavi Banhatti; ಗಮನ ಸೆಳೆದ ತರಕಾರಿಯಿಂದ ಬನಶಂಕರಿಯ ದೇವಿಯ ಪೂಜೆ

Rabkavi Banhatti; ಗಮನ ಸೆಳೆದ ತರಕಾರಿಯಿಂದ ಬನಶಂಕರಿ ದೇವಿಯ ಪೂಜೆ

satish jarakiholi

Water; ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ 2 ಟಿಎಂಸಿ ನೀರು ಹರಿಸಲು ಆದೇಶ

Rabkavi Banhatti: ಸಿಲಿಂಡರ್ ಪೈಪ್ ಸೋರಿಕೆ: ಹೋಟೆಲ್ ಕಾರ್ಮಿಕನಿಗೆ ಗಾಯ

Rabkavi Banhatti: ಸಿಲಿಂಡರ್ ಪೈಪ್ ಸೋರಿಕೆ: ಹೋಟೆಲ್ ಕಾರ್ಮಿಕನಿಗೆ ಗಾಯ

ಬಾಗಲಕೋಟೆ: ಕೋಟೆ ನಾಡಿನ ಭರವಸೆಗೆ ಸಿದ್ದರಾಮಯ್ಯ ತಣ್ಣೀರು

ಬಾಗಲಕೋಟೆ: ಕೋಟೆ ನಾಡಿನ ಭರವಸೆಗೆ ಸಿದ್ದರಾಮಯ್ಯ ತಣ್ಣೀರು

Wedding Invitation: ಮದುವೆ ಆಮಂತ್ರಣದ ಜೊತೆ `ಸಿಯಾ ರಾಮ್’ ಮೂರ್ತಿ ವಿತರಣೆ..!

Wedding Invitation: ಮದುವೆ ಆಮಂತ್ರಣದ ಜೊತೆ `ಸಿಯಾ ರಾಮ್’ ಮೂರ್ತಿ ವಿತರಣೆ..!

MUST WATCH

udayavani youtube

ಸಸಿಹಿತ್ಲು ಕಡಲು ಸೇರಿದ ಸೇರಿದ 88 ಆಲಿವ್‌ ಮರಿಗಳು

udayavani youtube

ಮಧುಮೇಹ ಕಿಡ್ನಿ ಸಮಸ್ಯೆಗೆ ಹೇಗೆ ಕಾರಣವಾಗುತ್ತದೆ ?

udayavani youtube

ಏನಿದು ಮಂಗನ ಕಾಯಿಲೆ?

udayavani youtube

ಅರಬ್ಬರ ನಾಡಿನಲ್ಲಿ ಹಿಂದೂ ದೇವಾಲಯ

udayavani youtube

ಶುಗರ್ ಬೀಟ್ : ನೂತನ ಪ್ರಯೋಗದತ್ತ ನಿಂಗಸಾನಿ ಸಹೋದರರು

ಹೊಸ ಸೇರ್ಪಡೆ

1-weqwqe

Belagavi; ಇಂದು ಮತ್ತೊಂದು ಭೀಕರ ಅಪಘಾತ: 6 ಮಂದಿ ದುರ್ಮರಣ!

1-adsddasds

Canada; Halton Regional ಸಾರ್ವಜನಿಕ ಆರೋಗ್ಯ ಮುಖ್ಯಸ್ಥೆಯಾಗಿ ಡಾ. ದೀಪಿಕಾ ಲೋಬೋ

arrested

IAF; ವಿಂಗ್ ಕಮಾಂಡರ್ ಎಂದು ಏರ್ ಫೋರ್ಸ್ ಸ್ಟೇಷನ್ ಪ್ರವೇಶಿಸಿದವನ ಬಂಧನ

kejriwal-2

Delhi CM ಕೇಜ್ರಿವಾಲ್ ರನ್ನು ಬಂಧಿಸಿದರೆ ಜನರು ಬೀದಿಗಿಳಿಯುತ್ತಾರೆ: ಆಪ್ ಆಕ್ರೋಶ

HDK BJP

BJP ಯೊಂದಿಗೆ ಯಾವುದೇ ರೀತಿಯ ಸಮಸ್ಯೆಗಳಿಲ್ಲ: ಶಾ ಭೇಟಿ ಬಳಿಕ ಎಚ್.ಡಿ.ಕುಮಾರಸ್ವಾಮಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.