ಪರೀಕ್ಷಾ ಕೇಂದ್ರದ ಭೌತಿಕ ಸೌಲಭ್ಯಗಳ ಪರಿಶೀಲನೆ


Team Udayavani, Jun 13, 2020, 2:07 PM IST

ಪರೀಕ್ಷಾ ಕೇಂದ್ರದ ಭೌತಿಕ ಸೌಲಭ್ಯಗಳ ಪರಿಶೀಲನೆ

ಕೆರೂರ: ನೀರಬೂದಿಹಾಳ ಗ್ರಾಮದ ಕರ್ನಾಟಕ ಪಬ್ಲಿಕ್‌ ಶಾಲೆಯ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಕ್ಕೆ ಶುಕ್ರವಾರ ಬಾದಾಮಿ ಬಿಇಒ ರುದ್ರಪ್ಪ ಹುರುಳಿ ಭೇಟಿ ನೀಡಿ, ಪರೀಕ್ಷಾರ್ಥಿಗಳಿಗೆ ನೀಡುವ ಭೌತಿಕ ಸೌಲಭ್ಯಗಳನ್ನು ಪರಿಶೀಲಿಸಿದರು.

ಮುಖ್ಯ ಪರೀಕ್ಷಾ ಕೇಂದ್ರ ಹಾಗೂ ಬ್ಲಾಕ್‌ ಪರೀಕ್ಷಾ ಕೇಂದ್ರದ ಎಲ್ಲ ಕೊಠಡಿಗಳನ್ನು ವೀಕ್ಷಿಸಿದ ಅವರು, ಜೋಡಣೆಯಾದ ಸುತ್ತಲಿನ ಪ್ರೌಢಶಾಲೆಗಳ ಮುಖ್ಯಶಿಕ್ಷಕರು, ಉಪಾಧ್ಯಾಯರು ಸೇರಿದಂತೆ ವಿವಿಧ ಶಿಕ್ಷಕರಿಗೆ ಕೇಂದ್ರದಲ್ಲಿ ಕೈಗೊಳ್ಳಬೇಕಾದ ಅಗತ್ಯ ಮಾರ್ಗದರ್ಶನಗಳ ಕುರಿತು ಸೂಚನೆ ನೀಡಿದರು.

ಮುಖ್ಯವಾಗಿ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾರ್ಥಿಗಳಿಗೆ ಕುಡಿಯುವ ನೀರು, ವಿದ್ಯುತ್‌ ಹಾಗೂ ಸಿಸಿ ಕ್ಯಾಮೆರಾಗಳ ಸೌಲಭ್ಯ ಸೇರಿದಂತೆ ಸಾಮಾಜಿಕ ಅಂತರ ಪಾಲನೆಯ ಜತೆಗೆ ಆಸನಗಳ ವ್ಯವಸ್ಥೆ ಕೈಗೊಂಡ ಕೊಠಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರು, ಶಿಕ್ಷಕರು ಸಹಿತ ಪಾಲ್ಗೊಂಡಿದ್ದ ಸಭೆಯಲ್ಲಿ ಬಿಇಒ ಹುರುಳಿ ಅವರು, ಎಲ್ಲ ರೀತಿಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಅಚ್ಚುಕಟ್ಟಾಗಿ ನಡೆಯಬೇಕು. ಯಾವುದೇ ಕಾರಣಕ್ಕೂ ಇಲಾಖೆಯ ಸೂಚನೆಗಳನ್ನು ತಪ್ಪದೇ ಪಾಲಿಸುವಂತೆ ಸೂಚಿಸಿದರು. ನೀರಬೂದಿಹಾಳ ಕಾಲೇಜಿನ ಉಪ ಪ್ರಾಚಾರ್ಯ ನಾಗರಾಜ ದೇಶಪಾಂಡೆ, ಈ ಪರೀಕ್ಷಾಕೇಂದ್ರದಲ್ಲಿ ಕೈಗೊಂಡ ಭೌತಿಕ ಸೌಲಭ್ಯಗಳು, ಪರೀಕ್ಷಾರ್ಥಿಗಳ ವಿವರ, ಕೊಠಡಿಗಳ ಹಂಚಿಕೆ ಹಾಗೂ ಕೋವಿಡ್‌-19 ನಿಮಿತ್ತ ಕೈಗೊಳ್ಳಲಾದ ಸಮಗ್ರ ಮುಂಜಾಗ್ರತಾ ಕ್ರಮಗಳ ಕುರಿತು ಸಭೆಗೆ ಮಾಹಿತಿ ನೀಡಿದರು.

ತಾಲೂಕು ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ವಿ.ಎಸ್‌. ಮೇಟಿ ಮಾತನಾಡಿ, ಸಲಹೆ ನೀಡಿದರು. ಸಭೆಯಲ್ಲಿ ಹೂಲಗೇರಿ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕಿ ರಾಜೇಶ್ವರಿ ಬಾದವಾಡಗಿ, ಅನವಾಲದ ಮುಖ್ಯಶಿಕ್ಷಕ ಎಂ.ಎನ್‌. ಪೊಲೀಶಿ, ಶಿಕ್ಷಣ ಸಂಯೋಜಕ ಆರ್‌.ಜಿ. ಗಿರಿಯಪ್ಪಗೌಡ್ರ, ಸಿಆರ್‌ ಪಿಯ ಎಂ.ಎಚ್‌. ಗಂಗಲ್‌, ಹಿರಿಯ ಶಿಕ್ಷಕ ಗವಿಸಿದ್ದಪ್ಪ ಬೂದಿಹಾಳ ಮುಂತಾದವರು ಪಾಲ್ಗೊಂಡಿದ್ದರು. ಮುಲ್ಲು ಗಂಗಲ್‌ ನಿರೂಪಿಸಿದರು.

 

 

 

ಟಾಪ್ ನ್ಯೂಸ್

twenty one hours kannada movie

ಥಿಯೇಟರ್ ನಲ್ಲಿ ‘ಟ್ವೆಂಟಿ ಒನ್ ಹವರ್ಸ್’; ಡಾಲಿ ಅಭಿನಯದ ಚಿತ್ರ ಮೇ.20ಕ್ಕೆ ರಿಲೀಸ್

basavaraj horatti

ವಿಧಾನಪರಿಷತ್ ಸಭಾಪತಿ‌ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ

ಬಜರಂಗದಳದ ಬಗ್ಗೆ ಮಾತಾನಾಡುವ ನೈತಿಕ ಹಕ್ಕು ಇವರಿಗಿಲ್ಲ: ರಘು ಸಕಲೇಶಪುರ ವಾಗ್ದಾಳಿ

ಬಜರಂಗದಳದ ಬಗ್ಗೆ ಮಾತಾನಾಡುವ ನೈತಿಕ ಹಕ್ಕು ಇವರಿಗಿಲ್ಲ: ರಘು ಸಕಲೇಶಪುರ ವಾಗ್ದಾಳಿ

jameer-ak

ರಾಷ್ಟ್ರಗೀತೆಯನ್ನು ನಮಗೆ ಮುತಾಲಿಕ್ ಹೇಳಿ ಕೊಡಬೇಕಾ?: ಜಮೀರ್ ಅಹ್ಮದ್ ಕಿಡಿ

Ashok Gehlot questions PM Modi’s ‘silence on communal clashes

ದೇಶದಲ್ಲಿನ ಕೋಮು ಘರ್ಷಣೆಗಳ ಬಗ್ಗೆ ಪ್ರಧಾನಿ ಮೌನವೇಕೆ?: ಅಶೋಕ್ ಗೆಹ್ಲೋಟ್ ಪ್ರಶ್ನೆ

ಗರುಡ ಜೊತೆ ಐಂದ್ರಿತಾ ಎಂಟ್ರಿ; ಮೇ 20ಕ್ಕೆ ಚಿತ್ರ ತೆರೆಗೆ

ಗರುಡ ಜೊತೆ ಐಂದ್ರಿತಾ ಎಂಟ್ರಿ; ಮೇ 20ಕ್ಕೆ ಚಿತ್ರ ತೆರೆಗೆ

ಒಬಿಸಿಗಳಿಗೆ ಆದ್ಯತೆ ನೀಡಿದ್ರೂ; ನ್ಯಾಯ ಸಿಗೋದು ಅನುಮಾನ

ಒಬಿಸಿಗಳಿಗೆ ಆದ್ಯತೆ ನೀಡಿದ್ರೂ; ನ್ಯಾಯ ಸಿಗೋದು ಅನುಮಾನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12

ಆದರ್ಶ ದಂಪತಿಗಳಾಗಿ ಮಾದರಿ ಜೀವನ ಸಾಗಿಸಿ

11

ಐಟಿ ಕ್ಷೇತ್ರ ಓಟದ ಕುದುರೆ ಇದ್ದಂತೆ : ಸಿದ್ದನಗೌಡ

10

ಸಸಾಲಟ್ಟಿ ಏತ ನೀರಾವರಿಗೆ ಕೊನೆಗೂ ಸಿಕ್ಕಿತು ಚಾಲನೆ

7

53 ದೇಶಕ್ಕೆ ಶಾಂತಿ ಪಾಲನೆ ಹೇಳಿದ ಹೆಮ್ಮೆಯ ಯೋಧ!

ನಾಮದೇವ ಸಿಂಪಿ ಸಮಾಜದ ಅಭಿವೃದ್ಧಿಗಾಗಿ ಬದ್ಧ : ಶಾಸಕ ಸಿದ್ದು ಸವದಿ

ನಾಮದೇವ ಸಿಂಪಿ ಸಮಾಜದ ಅಭಿವೃದ್ಧಿಗಾಗಿ ಬದ್ಧ : ಶಾಸಕ ಸಿದ್ದು ಸವದಿ

MUST WATCH

udayavani youtube

ಫಲಜ್ಯೋತಿಷ್ಯದಲ್ಲಿ ದೀರ್ಘಕಾಲೀನ ಫಲಾದೇಶ ಮಾಡುವುದು ಹೇಗೆ ?

udayavani youtube

ಥಾಮಸ್ ಕಪ್ ಗೆದ್ದು ಇತಿಹಾಸ ನಿರ್ಮಿಸಿದ ಭಾರತದ ಬಾಡ್ಮಿಂಟನ್ ತಾರೆಯರು

udayavani youtube

ಅಮೃತಕಾಲದಲ್ಲಿ ದೇಶ ವಿಶ್ವಗುರು – ನಿರ್ಮಲಾ ಸೀತಾರಾಮನ್‌

udayavani youtube

ದೇಶದಲ್ಲಿ ಭ್ರಷ್ಟಾಚಾರ ಬಿತ್ತಿದ್ದು, ಬೆಳೆಸಿದ್ದು ಕಾಂಗ್ರೆಸ್ ಪಕ್ಷ : ಸಿ.ಟಿ.ರವಿ

udayavani youtube

ಪಿಲಿ ಬತ್ತ್ಂಡ್‌ ಪಿಲಿ… ಬಲಿಪುಲೇ… ಕಾಪುವಿನಲ್ಲಿ ದ್ವೈ ವಾರ್ಷಿಕ ಪಿಲಿಕೋಲ…

ಹೊಸ ಸೇರ್ಪಡೆ

twenty one hours kannada movie

ಥಿಯೇಟರ್ ನಲ್ಲಿ ‘ಟ್ವೆಂಟಿ ಒನ್ ಹವರ್ಸ್’; ಡಾಲಿ ಅಭಿನಯದ ಚಿತ್ರ ಮೇ.20ಕ್ಕೆ ರಿಲೀಸ್

basavaraj horatti

ವಿಧಾನಪರಿಷತ್ ಸಭಾಪತಿ‌ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ

18social

ಶಿಕ್ಷಣದಿಂದ ಮಾತ್ರ ಸಮಾಜ ಅಭಿವೃದ್ದಿ

12

ಆದರ್ಶ ದಂಪತಿಗಳಾಗಿ ಮಾದರಿ ಜೀವನ ಸಾಗಿಸಿ

ಬಜರಂಗದಳದ ಬಗ್ಗೆ ಮಾತಾನಾಡುವ ನೈತಿಕ ಹಕ್ಕು ಇವರಿಗಿಲ್ಲ: ರಘು ಸಕಲೇಶಪುರ ವಾಗ್ದಾಳಿ

ಬಜರಂಗದಳದ ಬಗ್ಗೆ ಮಾತಾನಾಡುವ ನೈತಿಕ ಹಕ್ಕು ಇವರಿಗಿಲ್ಲ: ರಘು ಸಕಲೇಶಪುರ ವಾಗ್ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.