Udayavni Special

ಮೆಟ್ರೋ ಬಳಿ ಡ್ರಗ್ಸ್‌ ಮಾರಾಟ: ಇಬ್ಬರ ಸೆರೆ


Team Udayavani, Sep 24, 2020, 1:01 PM IST

ಮೆಟ್ರೋ ಬಳಿ ಡ್ರಗ್ಸ್‌ ಮಾರಾಟ: ಇಬ್ಬರ ಸೆರೆ

ಬೆಂಗಳೂರು: ಸಿ.ಟಿ. ಮಾರುಕಟ್ಟೆಯ ಮೆಟ್ರೋ ನಿಲ್ದಾಣದ ಎ ಗೇಟ್‌ ಹಿಂಭಾಗದ ಪಾರ್ಕಿಂಗ್‌ ಸ್ಥಳದಲ್ಲಿ ಮಾದಕ ವಸ್ತು ಮಾರಾಟಕ್ಕೆ ಯತ್ನಿಸಿದ್ದ ರಾಜಸ್ಥಾನ ಮೂಲದ ಇಬ್ಬರು ಆರೋಪಿಗಳನ್ನು ಪಶ್ಚಿಮ ವಿಭಾಗದ ಸಿಟಿ ಮಾರುಕಟ್ಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ರಾಜಸ್ಥಾನ ಮೂಲದ ರಾಜುರಾಮ್‌ ಬಿಷ್ಣೋಯ್‌ (31) ಮತ್ತು ಸುನೀಲ್‌ ಕುಮಾರ್‌ (21) ಬಂಧಿತರು. ಅವರಿಂದ 3.3 ಕೋಟಿ ರೂ. ಮೌಲ್ಯದ 1.280 ಗ್ರಾಂ ಬ್ರೌನ್‌ ಶುಗರ್‌, 475 ಗ್ರಾಂ ಅಫೀಮು, 25 ಎಲ್‌ಎಸ್‌ಡಿ ಸ್ಟ್ರೀಪ್ಸ್‌ಗಳು, 32 ಗ್ರಾಂ ತೂಕದ ಎಂಡಿಎಂಎ ಮಾತ್ರಗಳು, 3 ಮೂಬೈಲ್‌ಗ‌ಳು, ಎರಡು ಬೈಕ್‌, ಮೂರು ತೂಕದ ಯಂತ್ರಗಳನ್ನು ವಶಕ್ಕೆ ಪಡೆಯಲಾಗಿದೆ.

ಬುಧವಾರ ಬೆಳಗ್ಗೆ 8.30ರ ಸುಮಾರಿಗೆ ಮೆಟ್ರೋ ನಿಲ್ದಾಣ ಎ ಗೇಟ್‌ ಬಳಿ ಬಟ್ಟೆ ಬ್ಯಾಗ್‌ ಇಟ್ಟುಕೊಂಡು ಆರೋಪಿಗಳು ಅನುಮಾನಾಸ್ಪದ ರೀತಿಯಲ್ಲಿ ನಿಂತಿದ್ದರು. ಈ ಮಾಹಿತಿ ಮೇರೆಗೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ವಶಕ್ಕೆ ಪಡೆದು ಪರಿಶೀಲಿಸಿದ್ದಾರೆ. ಬ್ಯಾಗ್‌ನ ಒಳಭಾಗದ ಮತ್ತೂಂದು ಬ್ಯಾಗ್‌ನಲ್ಲಿ ಮಾದಕ ವಸ್ತು ಕಂಡು ಬಂದಿವೆ. ಈ ವೇಳೆ ಅಫೀಮು, ಎಂಡಿಎಂಎ, ಬ್ರೌನ್‌ ಶುಗರ್‌ ವಶಪಡಿಸಿಕೊಳ್ಳಲಾಗಿದೆ.

ಆ ನಂತರ ಮಾಗಡಿ ರಸ್ತೆಯ ರಾಜುರಾಮ್‌ ಬಿಷ್ಣೋಯ್‌ ಮನೆ ಮತ್ತು ಕುಂಬಳ ಗೋಡುನಲ್ಲಿರುವ ಸುನೀಲ್‌ಕುಮಾರ್‌ ಮನೆ ತಪಾಸಣೆ ನಡೆಸಿದಾಗ ಅಲ್ಲಿಯೂ ಮಾದಕ ವಸ್ತು ಪತ್ತೆಯಾಗಿದ್ದು, ಒಟ್ಟಾರೆ ವಶಕ್ಕೆ ಪಡೆದ ಮಾದಕ ವಸ್ತುವಿನ ಮೌಲ್ಯ 3.30 ಕೋಟಿ ರೂ. ಎಂದು ಅಂದಾಜಿಸಲಾಗಿದೆ ಎಂದು ಪೊಲೀಸರು ಹೇಳಿದರು.

42 ಪ್ರಕರಣ ದಾಖಲು, 61ಮಂದಿ ಬಂಧನ :  ಡ್ರಗ್ಸ್‌ ದಂಧೆಯನ್ನು ಗಂಭೀರವಾಗಿ ಪರಿಗಣಿಸಿರುವ ಪಶ್ಚಿಮ ವಿಭಾಗ ಪೊಲೀಸರು ಸೆ.1ರಿಂದ ಸೆ.22ರವರೆಗೆ 42 ಡ್ರಗ್ಸ್‌ ಪ್ರಕರಣಗಳನ್ನು ದಾಖಲಿಸಿದ್ದು, 61 ಮಂದಿಯನ್ನು ಬಂಧಿಸಿದ್ದಾರೆ. ಈ ಪ್ರಕರಣಗಳಲ್ಲಿ 51.555 ಕೆ.ಜಿ. ಗಾಂಜಾ, 600 ಅಫೀಮು, 90 ಗ್ರಾಂ ಬ್ರೌನ್‌ಶುಗರ್‌ ಹಾಗೂ 70 ಗ್ರಾಂ ಎಂಡಿಎಂಎ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಜತೆಗೆ ಮಾದಕ ವಸ್ತು ಸೇವನೆ ಮಾಡುತ್ತಿರುವವರ ವಿರುದ್ಧವೂ ಇದುವರೆಗೂ 121 ಪ್ರಕರಣ ದಾಖಲಿಸುತ್ತಿದ್ದು, 121 ಮಂದಿ ಬಂಧಿಸಲಾಗಿದೆ ಎಂದು ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್‌ ಎಂ.ಪಾಟೀಲ್‌ ಹೇಳಿದರು.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಬೆಳ್ತಂಗಡಿ: ಕಾಡಿನಿಂದ ನಾಡಿಗೆ ಆಹಾರ ಅರಸಿಬಂದ ಆನೆ ಮರಿ

ಬೆಳ್ತಂಗಡಿ: ಕಾಡಿನಿಂದ ನಾಡಿಗೆ ಆಹಾರ ಅರಸಿಬಂದ ಎರಡು ತಿಂಗಳ ಆನೆ ಮರಿ

ಪುಲ್ವಾಮಾ ದಾಳಿಗೆ ನಾವು ಕಾರಣವಲ್ಲ: ಮತ್ತೆ ಉಲ್ಟಾ ಹೊಡೆದ ಪಾಕ್ ಸಚಿವ ಫವಾದ್ ಚೌಧರಿ

ಪುಲ್ವಾಮಾ ದಾಳಿಗೆ ನಾವು ಕಾರಣವಲ್ಲ: ಮತ್ತೆ ಉಲ್ಟಾ ಹೊಡೆದ ಪಾಕ್ ಸಚಿವ ಫವಾದ್ ಚೌಧರಿ

ಉಗ್ರರಿಂದ ಗುಂಡಿನ ದಾಳಿ: ಮೂವರು ಬಿಜೆಪಿ ನಾಯಕರ ಹತ್ಯೆ

ಉಗ್ರರಿಂದ ಗುಂಡಿನ ದಾಳಿ: ಮೂವರು ಬಿಜೆಪಿ ನಾಯಕರ ಹತ್ಯೆ

ಉರುಳಿ ಬಿದ್ದ ಮದುವೆ ಮನೆಯಿಂದ ಬರುತ್ತಿದ್ದ ವ್ಯಾನ್: ಐವರು ಸಾವು, ಹಲವರಿಗೆ ಗಾಯ

ಪಲ್ಟಿಯಾದ ಮದುವೆ ಮನೆಯಿಂದ ಬರುತ್ತಿದ್ದ ವ್ಯಾನ್: ಆರು ಮಂದಿ ಸಾವು, ಹಲವರಿಗೆ ಗಾಯ

ಗುರಿ ಸಾಧಿಸಿಯೇ ಸಿದ್ಧ ; 5 ಲಕ್ಷ ಕೋಟಿ ಡಾಲರ್‌ ಆರ್ಥಿಕತೆ: ಮೋದಿ ಖಚಿತ ನುಡಿ

ಗುರಿ ಸಾಧಿಸಿಯೇ ಸಿದ್ಧ ; 5 ಲಕ್ಷ ಕೋಟಿ ಡಾಲರ್‌ ಆರ್ಥಿಕತೆ: ಮೋದಿ ಖಚಿತ ನುಡಿ

Interview: There is no goal to profit from the loss of others

ಸಂದರ್ಶನ: ಅನ್ಯರ ನಷ್ಟದಿಂದ ಲಾಭ ಗಳಿಸುವ ಗುರಿಯಿಲ್ಲ

ಸ್ವಂತ ಉನ್ನತಿಯ ಮಹತ್ವಾಕಾಂಕ್ಷೆ ; ಎಲ್ಲರ ಸೌಖ್ಯದ ದರ್ಶನ

ಸ್ವಂತ ಉನ್ನತಿಯ ಮಹತ್ವಾಕಾಂಕ್ಷೆ ; ಎಲ್ಲರ ಸೌಖ್ಯದ ದರ್ಶನ





ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

sudhakar

ನಮ್ಮನ್ನೇ ದೂರವಿಟ್ಟ ಕಾಂಗ್ರೆಸ್‌ನವರು, ರಾಜ್ಯದ ಒಕ್ಕಲಿಗರ ಉದ್ಧಾರ ಮಾಡುತ್ತಾರಾ?: ಸುಧಾಕರ್

ನ. 1ರಂದು ಮತ್ತೂಂದು ಸೆಂಟಿಮೆಂಟ್‌ ಸಿನಿಮಾ ರಿಲೀಸ್ ಆಗಲಿದೆ : ಮುನಿರತ್ನ

ನ. 1ರಂದು ಮತ್ತೊಂದು ಸೆಂಟಿಮೆಂಟ್‌ ಸಿನಿಮಾ ರಿಲೀಸ್ ಆಗಲಿದೆ : ಮುನಿರತ್ನ

ಕುಸುಮಾ ಕಣ್ಣೀರಿಗೂ, ಮುನಿರತ್ನ ಕಣ್ಣೀರಿಗೂ ವ್ಯತ್ಯಾಸ ಇದೆ: ಡಿ.ಕೆ ಶಿವಕುಮಾರ್

ಕುಸುಮಾ ಕಣ್ಣೀರಿಗೂ, ಮುನಿರತ್ನ ಕಣ್ಣೀರಿಗೂ ವ್ಯತ್ಯಾಸ ಇದೆ: ಡಿ.ಕೆ ಶಿವಕುಮಾರ್

ಆನ್ ಲೈನ್ ಶಿಕ್ಷಣದ ಅವಧಿ ಉಲ್ಲಂಘಿಸುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ : ಸುರೇಶ್ ಕುಮಾರ್

ಆನ್ ಲೈನ್ ಶಿಕ್ಷಣಕ್ಕೆ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ:ಗೈಡ್ ಲೈನ್ಸ್ ನಲ್ಲಿ ಏನಿದೆ?

ramalinga-‘

ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಇದೆಯೋ, ಇಲ್ಲವೋ? BJPಯಿಂದ ಕೀಳು ರಾಜಕೀಯ: ರಾಮಲಿಂಗಾ ರೆಡ್ಡಿ

MUST WATCH

udayavani youtube

ಅಪಾಯಕಾರಿ ತಿರುವು; ಎಚ್ಚರ ತಪ್ಪಿದರೆ ಅಪಘಾತ ಖಚಿತ!

udayavani youtube

Peoples take on reopening of schools | ಶಾಲೆ ಯಾಕೆ ಬೇಕು? ಯಾಕೆ ಬೇಡ ? | Udayavani

udayavani youtube

ಭಕ್ತಿ-ಸಂಭ್ರಮದ ಮಂಗಳೂರು ದಸರಾ -2020 ಸಂಪನ್ನ

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

udayavani youtube

ಕೊರೋನಾ: ಶೋಚನೀಯವಾದ ತಿರುಗುವ ತೊಟ್ಟಿಲು ತಿರುಗಿಸುವ ಕೈಗಳ ಕಥೆ!

ಹೊಸ ಸೇರ್ಪಡೆ

ಬೆಳ್ತಂಗಡಿ: ಕಾಡಿನಿಂದ ನಾಡಿಗೆ ಆಹಾರ ಅರಸಿಬಂದ ಆನೆ ಮರಿ

ಬೆಳ್ತಂಗಡಿ: ಕಾಡಿನಿಂದ ನಾಡಿಗೆ ಆಹಾರ ಅರಸಿಬಂದ ಎರಡು ತಿಂಗಳ ಆನೆ ಮರಿ

ಪುಲ್ವಾಮಾ ದಾಳಿಗೆ ನಾವು ಕಾರಣವಲ್ಲ: ಮತ್ತೆ ಉಲ್ಟಾ ಹೊಡೆದ ಪಾಕ್ ಸಚಿವ ಫವಾದ್ ಚೌಧರಿ

ಪುಲ್ವಾಮಾ ದಾಳಿಗೆ ನಾವು ಕಾರಣವಲ್ಲ: ಮತ್ತೆ ಉಲ್ಟಾ ಹೊಡೆದ ಪಾಕ್ ಸಚಿವ ಫವಾದ್ ಚೌಧರಿ

ಉಗ್ರರಿಂದ ಗುಂಡಿನ ದಾಳಿ: ಮೂವರು ಬಿಜೆಪಿ ನಾಯಕರ ಹತ್ಯೆ

ಉಗ್ರರಿಂದ ಗುಂಡಿನ ದಾಳಿ: ಮೂವರು ಬಿಜೆಪಿ ನಾಯಕರ ಹತ್ಯೆ

ಉರುಳಿ ಬಿದ್ದ ಮದುವೆ ಮನೆಯಿಂದ ಬರುತ್ತಿದ್ದ ವ್ಯಾನ್: ಐವರು ಸಾವು, ಹಲವರಿಗೆ ಗಾಯ

ಪಲ್ಟಿಯಾದ ಮದುವೆ ಮನೆಯಿಂದ ಬರುತ್ತಿದ್ದ ವ್ಯಾನ್: ಆರು ಮಂದಿ ಸಾವು, ಹಲವರಿಗೆ ಗಾಯ

ಗುರಿ ಸಾಧಿಸಿಯೇ ಸಿದ್ಧ ; 5 ಲಕ್ಷ ಕೋಟಿ ಡಾಲರ್‌ ಆರ್ಥಿಕತೆ: ಮೋದಿ ಖಚಿತ ನುಡಿ

ಗುರಿ ಸಾಧಿಸಿಯೇ ಸಿದ್ಧ ; 5 ಲಕ್ಷ ಕೋಟಿ ಡಾಲರ್‌ ಆರ್ಥಿಕತೆ: ಮೋದಿ ಖಚಿತ ನುಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.