Crime News: ಕಿಡ್ನಾಪ್‌ನಲ್ಲಿ ಬಂಧಿತರೇ ಕೊಲೆಗಾರರು


Team Udayavani, Jan 11, 2024, 10:37 AM IST

1

ಬೆಂಗಳೂರು: ಕಾರ್ಪೆಂಂ‌ಟರ್‌ನನ್ನು ಅಪಹರಿಸಿ ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧಿಸಿರುವ ಜ್ಞಾನಭಾರತಿ ಠಾಣೆ ಪೊಲೀಸರು, ಇದೇ ವೇಳೆ ರಾಮನಗರದ ಕೂಟಗಲ್‌ ತಿಮ್ಮಪ್ಪಸ್ವಾಮಿ ಬೆಟ್ಟದ ತಪ್ಪಲಲ್ಲಿ ನಡೆದಿದ್ದ ಅಪರಿಚಿತ ವ್ಯಕ್ತಿಯ ಕೊಲೆ ಪ್ರಕರಣ ವನ್ನೂ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಾರ್ಪೆಂಂ‌ಟರ್‌ ನನ್ನು ಅಪಹರಿಸಿ ಕೊಲೆ ಯತ್ನ ನಡೆಸಿದ್ದ ಆರೋಪಿಗಳೇ ರಾಮನಗರದ ಕೂಟಗಲ್‌ ತಿಮ್ಮಪ್ಪಸ್ವಾಮಿ ಬೆಟ್ಟದ ತಪ್ಪಲಲ್ಲಿ ನಡೆದಿದ್ದ ಅಪರಚಿತ ವ್ಯಕ್ತಿ ಕೊಲೆ ಪ್ರಕರಣದಲ್ಲೂ ಭಾಗಿಯಾಗಿದ್ದಾರೆ ಅನ್ನುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಬೆಂ. ಗ್ರಾಮಾಂತರ ಜಿಲ್ಲೆಯ ರಾಮಸಂದ್ರದ ಗಾಯತ್ರಿ ಲೇಔಟ್‌ನ ಸಂಜಯ್(29) ನಗರದ ಎಸ್‌ಎಂವಿ ಲೇಔಟ್‌ 5ನೇ ಬ್ಲಾಕ್‌ ನಿವಾಸಿ ಆನಂದ(30) ಹಾಗೂ ನಾಗದೇವಹಳ್ಳಿಯ ಹನುಮಂತು(30) ಬಂಧಿತರು. ‌

ಮತ್ತೂಬ್ಬ ಆರೋಪಿ ನಾಪತ್ತೆಯಾಗಿದ್ದು, ಶೋಧ ನಡೆದಿದೆ. ಬಂಧಿತರಿಂದ 2.40 ಲಕ್ಷ ರೂ. ನಗದು, ಚಿನ್ನದ ಸರ, ಕೃತ್ಯಕ್ಕೆ ಉಪಯೋಗಿಸಿದ್ದ ಎರಡು ಮೊಬೈಲ್‌ ಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು 2023ರ ಡಿ.25ರಂದು ಕೆಂಗೇರಿ ನಿವಾಸಿ ಕಿಶನ್‌ ಕುಮಾರ್‌ ಎಂಬ ಕಾರ್ಪೆಂಂ‌ಟರ್‌ ನನ್ನು ಅಪಹರಿಸಿ, ಕೊಲೆಗೆ ಯತ್ನಿಸಿದ್ದರು. ಅಲ್ಲದೆ, ಡಿ.30ರಂದು ಜ್ಞಾನಭಾರತಿ ನಿವಾಸಿ ಗುರುಸಿದ್ದಪ್ಪ ಎಂಬವರವನ್ನು ಅಪಹರಿಸಿ, ರಾಮನಗರದ ತಿಮ್ಮಪ್ಪಸ್ವಾಮಿ ಬೆಟ್ಟದಲ್ಲಿ ಕೊಲೆಗೈದಿದ್ದರು. ಆರೋಪಿಗಳ ಪೈಕಿ ಸಂಜಯ್‌ ನಗರದ ವಿಶ್ವೇಶ್ವರಯ್ಯ ಲೇಔಟ್‌ನಲ್ಲಿ ಗ್ಯಾರೆಜ್‌ ನಡೆಸುತ್ತಿದ್ದ. ಆನಂದ್‌ ತರಕಾರಿ ಡೆಲಿವರಿ ನೌಕರ. ಇನ್ನು ಹನು ಮಂತು, ರಾಯಚೂರಿನ ದೇವದುರ್ಗದ ಮೂಲ ದವನಾಗಿದ್ದಾನೆ. ಯಾವುದೇ ಕೆಲಸಕ್ಕೆ ಹೋಗುತ್ತಿ ರಲಿಲ್ಲ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಅಪಹರಣ; ತಪ್ಪಿಸಿಕೊಂಡ ಕಾರ್ಪೆಂಂ‌ಟರ್‌: ಅಪಹರಣಕ್ಕೊಳಗಾದ ಕಿಶನ್‌ ಕುಮಾರ್‌, ಸಂಜಯ್‌ ಕುಮಾರ್‌ ಪಂಡಿತ್‌ ಎಂಬವರ ಇಂಟಿ ರಿಯರ್‌ ಕಂಪನಿಯಲ್ಲಿ ಕಾಪೆìಂಟರ್‌ ಕೆಲಸ ಮಾಡಿಕೊಂಡಿದ್ದ. ಮತ್ತೂಂದೆಡೆ ಆರೋಪಿಗಳ ಪೈಕಿ ಸಂಜಯ್‌, ಸಂಜಯ್‌ ಕುಮಾರ್‌ ಪಂಡಿತ್‌ ರನ್ನು ಅಪಹರಿಸಲು ಸಂಚು ರೂಪಿಸಿ, ಕೆಲಸದ ನಿಮಿತ್ತ ಬರುವಂತೆ ಕರೆ ಮಾಡಿದ್ದ. ಆದರೆ, ಕುಂದಾಪುರದಲ್ಲಿದ್ದ ಸಂಜಯ್‌ ಕುಮಾರ್‌ ಪಂಡಿತ್‌, ಸಹಾಯಕ ಕಿಶನ್‌ ಕುಮಾರ್‌ನನ್ನು ಕಳುಹಿಸಿದ್ದರು. ಆದರೆ, ಆರೋಪಿಗಳು ಕಿಶನ್‌ ಕುಮಾರ್‌ ಇಂಟಿಯರ್‌ ಕಂಪನಿ ಮಾಲೀಕ ಎಂದು ತಿಳಿದು ಅಪಹರಿಸಿದ್ದಾರೆ. ಬಳಿಕ ಆತ ಕೆಲಸಗಾರ ಎಂದು ತಿಳಿದು, 10 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು. ಕಿಶನ್‌ ಬಳಿ ಹಣವಿಲ್ಲ ಎಂದು ಗೊತ್ತಾಗಿ, ಬಳಿಕ ಮಾಲೀಕ ಸಂಜಯ್‌ ಕುಮಾರ್‌ ಪಂಡಿತ್‌ಗೆ ಕರೆ ಮಾಡಿಸಿ 1 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. ಬಳಿಕ ಮಾಲೀಕ ಕುಂದಾಪುರಕ್ಕೆ ಹೋಗಿದ್ದಾರೆ ಎಂದು ತಿಳಿದು, ಕಿಶನ್‌ ಮೇಲೆ ಹಲ್ಲೆ ನಡೆಸಿ ಕುಂದಾಪುರಕ್ಕೆ ಕರೆದೊಯ್ದಿದ್ದರು. ಮಾರ್ಗಮಧ್ಯೆ ಆರೋಪಿಗಳು ಊಟಕ್ಕೆಂದು ನಿಲ್ಲಿಸಿದಾಗ, ಕಿಶನ್‌ ಕುಮಾರ್‌ ತಪ್ಪಿಸಿಕೊಂಡು, ಸ್ಥಳೀಯರ ನೆರವಿನಿಂದ ಮಾಲೀಕರಿಗೆ ಕರೆ ಮಾಡಿ, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬೆಂಗಳೂರಿಗೆ ಬಂದಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿತ್ತು ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಸ್‌.ಗಿರೀಶ್‌ ಮಾಹಿತಿ ನೀಡಿದರು.

ಹೊಸವರ್ಷದ ಪಾರ್ಟಿ ಹಣಕ್ಕೆ ಕೃತ್ಯ : ಆರೋಪಿಗಳ ವಿಚಾರOಯಲ್ಲಿ ಹೊಸ ವರ್ಷದ ಪಾರ್ಟಿಗೆ ಗೋವಾಕ್ಕೆ ಹೋಗಲು ನಿರ್ಧರಿಸಿದ್ದರು. ಆದರೆ, ಯಾರ ಬಳಿಯೂ ಹಣ ಇರಲಿಲ್ಲ. ಹೀಗಾಗಿ ಕಿಶನ್‌ ಕುಮಾರ್‌ ಅಪ ಹರಿಸಿ ಹಣ ಸುಲಿಗೆಗೆ ಯತ್ನಿಸಿ ದ್ದರು. ಆದರೆ, ಅದು ವಿಫ‌ಲವಾದಾಗ, ಗುರುಸಿದ್ದಪ್ಪನನ್ನು ಅಪಹರಿಸಿ, ಕೊಲೆಗೈದಿದ್ದಾರೆ. ಈ ವೇಳೆ ಸುಲಿಗೆ ಮಾಡಿದ 4 ಲಕ್ಷ ರೂ.ನಲ್ಲಿ ಎಲ್ಲರೂ ಗೋವಾಕ್ಕೆ ಹೋಗಿ ಹೊಸ ವರ್ಷ ಆಚರಿಸಿಕೊಂಡು, ಮೋಜು-ಮಸ್ತಿ ಮಾಡಿದ್ದಾರೆ. ಬಳಿಕ ಧರ್ಮಸ್ಥಳಕ್ಕೆ ಹೋಗಿ, ಸಂಜಯ್‌ ಮತ್ತು ಆನಂದ್‌ ಮುಡಿ ಕೊಟ್ಟಿದ್ದಾರೆ. ಆನಂತರ ಬೆಂಗಳೂರಿಗೆ ಬಂದಾಗ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

4

ವಿಚ್ಛೇದನ ನೀಡದಿದ್ದರೆ ತಲೆಯನ್ನು ಕಡಿದು ಕುಕ್ಕರ್‌ನಲ್ಲಿ ಬೇಯಿಸುವೆ ಎಂದ ಪತಿ ವಿರುದ್ಧ FIR

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

Voting: ರಾಜಧಾನಿಯಲ್ಲಿ ಶಾಂತಿಯುತ ಮತದಾನ; ಬಿ.ದಯಾನಂದ್‌

Voting: ರಾಜಧಾನಿಯಲ್ಲಿ ಶಾಂತಿಯುತ ಮತದಾನ; ಬಿ.ದಯಾನಂದ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.