Udayavni Special

ಜನರು ಗಾಯಗೊಂಡರೆ ಪಾಲಿಕೆ ಉತ್ತರದಾಯಿ?


Team Udayavani, Jul 31, 2019, 3:05 AM IST

highcourt2

ಬೆಂಗಳೂರು: ನಗರದಲ್ಲಿ “ರಸ್ತೆ ಗುಂಡಿಗಳು ಆಭಿವೃದ್ಧಿಯಾಗುವುದು ಸಹ ನಿರಂತರ ಪ್ರಕ್ರಿಯೆ ಆದಂತಿದೆ’ ಜನರು ಗಾಯಗೊಂಡರೆ ಅವರಿಗೆ ಪಾಲಿಕೆಯೇ ಪರಿಹಾರ ನೀಡಬೇಕು ಮತ್ತು ಅಧಿಕಾರಿಗಳನ್ನು ಉತ್ತರದಾಯಿಗಳನ್ನಾಗಿ ಮಾಡಬೇಕೆಂಬ ಆದೇಶ ಹೊರಡಿಸಲಾಗುವುದು ಎಂದು ಹೈಕೋರ್ಟ್‌ ಮಂಗಳವಾರ ತೀಕ್ಷ್ಣವಾಗಿ ಹೇಳಿತು.

ನಗರದ ರಸ್ತೆ ಗುಂಡಿಗಳ ದುಸ್ಥಿತಿ ಕುರಿತು ಕೋರಮಂಗಲದ ವಿಜಯ್‌ ಮೆನನ್‌ 2015ರಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾ. ಎ.ಎಸ್‌. ಓಕಾ ಹಾಗೂ ನ್ಯಾ. ಮೊಹಮ್ಮದ್‌ ನವಾಜ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಮಾತು ಹೇಳಿತು.

ಅರ್ಜಿ ವಿಚಾರಣೆ ಆರಂಭವಾಗುತ್ತಿದ್ದಂತೆ, ಬಿಬಿಎಂಪಿ ಪರ ವಕೀಲರು ಜ್ಞಾಪನಾ ಪತ್ರ (ಮೆಮೋ) ಸಲ್ಲಿಸಿ ಜುಲೈ 27ರವರೆಗೆ ಪಡೆದುಕೊಂಡ ಮಾಹಿತಿಯಂತೆ ಬೆಂಗಳೂರಿನಲ್ಲಿ 108 ಪ್ರಮುಖ ರಸ್ತೆಗಳ 401 ಕಿ.ಮೀ ಉದ್ದದ ರಸ್ತೆ ಗುಂಡಿಗಳಿಂದ ಕೂಡಿದೆ. 362 ಪ್ರಮುಖ ರಸ್ತೆಗಳ 943 ಕಿ.ಮೀ ಉದ್ದದ ರಸ್ತೆಗಳಲ್ಲಿ ಗುಂಡಿಗಳು ಇಲ್ಲ. ರಸ್ತೆ ಗುಂಡಿಗಳನ್ನು ಮುಚ್ಚು ಕೆಲಸ ಬಿಬಿಎಂಪಿ ನಿರಂತರವಾಗಿ ಮಾಡುತ್ತಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಆಗ ನ್ಯಾಯಪೀಠ, “ದುರದೃಷ್ಟವೆಂದರೆ ನಗರದಲ್ಲಿ ಗುಂಡಿಗಳು ಅಭಿವೃದ್ಧಿಯಾಗೋದು ಕೂಡ ನಿರಂತರ ಪ್ರಕ್ರಿಯೆಯೇ ಆಗಿದೆ. ಅಧಿಕಾರಿಗಳಿಗೆ ಹೊಣೆಗಾರಿಕೆ ನಿಗದಿಪಡಿಸದ ಹೊರತು ಈ ಸಮಸ್ಯೆ ಬಗೆಹರಿಯಲು ಸಾಧ್ಯವಿಲ್ಲ. ಕಾನೂನು ಪ್ರಕಾರ ಬಿಬಿಎಂಪಿಯೇ ಎಲ್ಲ ಹೊಣೆ ಹೊರಬೇಕು. ಹಾಗಾಗಿ ಇನ್ನು ಮುಂದೆ ರಸ್ತೆ ದುಸ್ಥಿತಿಯಿಂದ ಜನರು ಗಾಯಗೊಂಡರೆ ಅವರಿಗೆ ಪಾಲಿಕೆಯೇ ಪರಿಹಾರ ನೀಡಬೇಕು ಮತ್ತು ಅಧಿಕಾರಿಗಳನ್ನು ಉತ್ತರದಾಯಿಗಳನ್ನಾಗಿ ಮಾಡಬೇಕು. ಈ ಕುರಿತು ಆದೇಶ ಹೊರಡಿಸಲಾಗುವುದು” ಎಂದು ಹೇಳಿತು.

ಈ ವೇಳೆ, ಮೆಟ್ರೋ ಸೇರಿದಂತೆ ವಿವಿಧ ಸಂಸ್ಥೆಗಳು ಸಹ ರಸ್ತೆ ಹಾಳಾಗಲು ಕಾರಣರಾಗುತ್ತಾರೆ. ಅವರ ಮೇಲೂ ಸಮಾನ ಹೊಣೆಗಾರಿಕೆ ವಹಿಸಬೇಕು. ಉದಾಹರಣೆಗೆ ಮೆಟ್ರೋ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ರಸ್ತೆ ಗುಂಡಿಗಳು ಬಿದ್ದಿರುತ್ತವೆ. ಒಪ್ಪಂದದ ಪ್ರಕಾರ ಅವರೇ ಅವುಗಳನ್ನು ಮುಚ್ಚಬೇಕು. ಸಮಸ್ಯೆ ಏನೆಂದರೆ, ಕಾಮಗಾರಿ ಪೂರ್ಣಗೊಳ್ಳುವವರೆಗೆ ಅವರು ರಸ್ತೆ ಗುಂಡಿಗಳನ್ನು ಮುಚ್ಚುವುದಿಲ್ಲ. ಒಂದೊಮ್ಮೆ ನಾವು ದುರಸ್ತಿ ಮಾಡಿದರೂ, ಮತ್ತೇ ಗುಂಡಿಗಳು ಬೀಳುವ ಸಾಧ್ಯತೆ ಇರುತ್ತದೆ ಎಂದು ನ್ಯಾಯಪೀಠಕ್ಕೆ ಮನವರಿಕೆ ಮಾಡಿದರು.

ಅದಕ್ಕೆ , ನ್ಯಾಯಪೀಠ, ನೀವು ಒಪ್ಪಂದ ಮಾಡಿಕೊಂಡಿದ್ದರೂ ಸಹ ಮೂಲ ಕರ್ತವ್ಯ ಪಾಲಿಕೆಯದ್ದೇ. ನೀವು ನಿಮ್ಮ ಹೊಣೆಗಾರಿಕೆ ನಿಭಾಯಿಸಲೇಬೇಕು. ಕೇವಲ ರಸ್ತೆ ಗುಂಡಿಗಳನ್ನು ಮುಚ್ಚುವುದಲ್ಲ, ರಸ್ತೆಗಳು ಸಾರ್ವಜನಿಕರ ಸಂಚಾರಕ್ಕೆ ತೃಪ್ತಿದಾಯಕವಾಗಿರಬೇಕು. ರಸ್ತೆಗಳ ಸ್ಥಿತಿಗತಿ ಮೇಲೆ ನಿಗಾವಹಿಸಲು ಐಐಟಿ, ಐಐಎಸ್ಸಿಯಂತಹ ತಜ್ಞ ಸಂಸ್ಥೆಗಳನ್ನು ಪಾಲಿಕೆ ನೇಮಿಸಿಕೊಳ್ಳಬೇಕು ಎಂದು ನ್ಯಾಯಪೀಠ ಸಲಹೆ ಮಾಡಿತು.

ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲೆ ಎಸ್‌.ಆರ್‌. ಅನುರಾಧ, ಪಾಲಿಕೆಯ ಎಲ್ಲ 198 ವಾರ್ಡ್‌ಗಳಲ್ಲಿ ವಾರ್ಡ್‌ ಸಮಿತಿಗಳನ್ನು ರಚನೆ ಮಾಡಲಾಗಿದೆ. ಅವುಗಳಿಗೆ ಈ ರಸ್ತೆ ನಿರ್ವಹಣೆ ಹೊಣೆ ವಹಿಸಬೇಕು. ರಸ್ತೆ ಗುಂಡಿಗಳಿಂದ ಗಾಯಗೊಂಡರೆ ಅದಕ್ಕೆ ಪಾಲಿಕೆ ಪರಿಹಾರ ನೀಡುವಂತೆ ಆದೇಶ ನೀಡಬೇಕೆಂದು ಕೋರಿದರು.

ಟಾಪ್ ನ್ಯೂಸ್

Untitled-1

ಕುಂದಾನಗರಿಯಲ್ಲಿ ಗಣೇಶ ವಿಸರ್ಜನೆ ವೇಳೆ ಲಾಠಿ ಚಾರ್ಜ್

ಆರ್‌ಸಿಬಿ ನಾಯಕತ್ವಕ್ಕೂ ವಿರಾಟ್‌ ವಿದಾಯ

ಆರ್‌ಸಿಬಿ ನಾಯಕತ್ವಕ್ಕೂ ವಿರಾಟ್‌ ವಿದಾಯ

ಉತ್ತರ ಪ್ರದೇಶ ಈಗ ಗಲಭೆಮುಕ್ತ: ಸಿಎಂ ಯೋಗಿ ಆದಿತ್ಯನಾಥ್‌

ಉತ್ತರ ಪ್ರದೇಶ ಈಗ ಗಲಭೆಮುಕ್ತ: ಸಿಎಂ ಯೋಗಿ ಆದಿತ್ಯನಾಥ್‌

frty5y56

ಕೋವಿಡ್ ಹೊಡೆತ | ಸದ್ದು ಮಾಡದ ಕೊಂಬು ಕಹಳೆ ವಾದ್ಯ

fcgrdtr

ಅವಮಾನಿಸಿದ ಪಕ್ಷದಲ್ಲಿ ಇರಬೇಡಿ,ಬಿಜೆಪಿಗೆ ಬನ್ನಿ : ಅಮರೀಂದರ್ ಗೆ ಅಠಾವಳೆ ಆಹ್ವಾನ

1ರಿಂದ 5ನೇ ತರಗತಿ ಸದ್ಯಕ್ಕಿಲ್ಲ: ಸಚಿವ ನಾಗೇಶ್‌

1ರಿಂದ 5ನೇ ತರಗತಿ ಸದ್ಯಕ್ಕಿಲ್ಲ: ಸಚಿವ ನಾಗೇಶ್‌

ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ವಿರುದ್ಧ ಎಫ್ಐಆರ್‌?

ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ವಿರುದ್ಧ ಎಫ್ಐಆರ್‌?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನ್ಯಾಯಾಲಯ ಆರಂಭ ಯಾವಾಗ?

ನ್ಯಾಯಾಲಯ ಆರಂಭ ಯಾವಾಗ?

ಜಾನಪದ ತ್ರಿಪದಿಗಳಿಗೆ ಚಿತ್ರಕಲೆಯ ಜೀವಂತಿಕೆ

ಜಾನಪದ ತ್ರಿಪದಿಗಳಿಗೆ ಚಿತ್ರಕಲೆಯ ಜೀವಂತಿಕೆ

ಊರ್ಜಾ,ವಿಂದ್ಯಾ,ಅವನಿಯರ ಮೈಲುಗಲ್ಲು

ಊರ್ಜಾ,ವಿಂದ್ಯಾ,ಅವನಿಯರ ಮೈಲುಗಲ್ಲು

gfgrr

ತಾಂತ್ರಿಕ ದೋಷ : ರನ್‍ವೇನಲ್ಲೆ ನಿಂತ ಏರ್‌ ಇಂಡಿಯಾ ವಿಮಾನ

ftry5r

ಕೋವಿಡ್: ರಾಜ್ಯದಲ್ಲಿಂದು 889 ಹೊಸ ಪ್ರಕರಣ ಪತ್ತೆ|1080 ಜನ ಸೋಂಕಿತರು ಗುಣಮುಖ

MUST WATCH

udayavani youtube

ಗಿಡಗಳಿಗೆ “ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಕಾರು ಖರೀದಿಸಿ ತರುತ್ತಿದ್ದ ವೇಳೆ ಅಗ್ನಿ ಅವಘಡ ಕಣ್ಣೆದುರೇ ಹೊತ್ತಿ ಉರಿದ ಕಾರು

udayavani youtube

ನದಿಗೆ ಹಾರಿ ಎರಡು ದಿನ ಕಳೆದರೂ ಪತ್ತೆಯಾಗದ ದೇಹ : ಶೋಧ ಕಾರ್ಯ ಮುಂದುವರಿಕೆ

udayavani youtube

ಚರಣ್ ಜಿತ್ ಸಿಂಗ್ ಛನ್ನಿ ಪಂಜಾಬ್ ನೂತನ ಮುಖ್ಯಮಂತ್ರಿ|UDAYAVANI NEWS BULLETIN|19/9/2021

udayavani youtube

ಗಣೇಶನ ಆರಾಧನೆಯ ಜೊತೆಗೆ ಕೋವಿಡ್ ಲಸಿಕೆಯ ಬಗ್ಗೆ ಜನಜಾಗೃತಿ

ಹೊಸ ಸೇರ್ಪಡೆ

Untitled-1

ಜಿಲ್ಲೆಯ ಬಹುತೇಕ ಪಶು ಆಸ್ಪತ್ರೆಗಳಲ್ಲಿ ಸಿಬಂದಿ ಕೊರತೆ

Untitled-1

ಜಿಲ್ಲೆಯಲ್ಲೇ ಅತೀ ಹೆಚ್ಚು ಮಕ್ಕಳು: ಶಿಕ್ಷಕರ ಕೊರತೆ 

Untitled-1

ಪ್ರವೇಶಾತಿ ಏರಿಕೆ; ಮೂಲಸೌಕರ್ಯ ಕೊರತೆ

ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ಸ್ವಾವಲಂಬನೆಯತ್ತ ದ.ಕ. ಜಿಲ್ಲೆ ದಿಟ್ಟ ಹೆಜ್ಜೆ

ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ಸ್ವಾವಲಂಬನೆಯತ್ತ ದ.ಕ. ಜಿಲ್ಲೆ ದಿಟ್ಟ ಹೆಜ್ಜೆ

Untitled-1

ಚೆನ್ನಾವರ ಸರಕಾರಿ ಕಿ.ಪ್ರಾ.ಶಾಲೆ: ತರಗತಿ ಕೊಠಡಿ ಕೊರತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.