Udayavni Special

ಬಾಯ್ಲರ್‌ ಸ್ಫೋಟ: ಬಿಹಾರದ ಇಬ್ಬರು ಸಾವು

ಇಬ್ಬರು ಮಹಿಳೆಯರು ಸೇರಿ ಮೂವರಿಗೆ ಗಂಭೀರ ಗಾಯ ; ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ

Team Udayavani, Aug 24, 2021, 2:47 PM IST

ಬಾಯ್ಲರ್‌ ಸ್ಫೋಟ: ಬಿಹಾರದ ಇಬ್ಬರು ಸಾವು

ಬೆಂಗಳೂರು: ತಿನಿಸುಗಳನ್ನು ಉತ್ಪಾದಿಸುತ್ತಿದ್ದ ಫುಡ್ ಫ್ಯಾಕ್ಟರಿಯಲ್ಲಿ ಬಾಯ್ಲರ್‌ ಸ್ಫೋಟಗೊಂಡು ಬಿಹಾರ ಮೂಲದ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಜೀವ ದಹನವಾಗಿದ್ದು, ಇಬ್ಬರು ಮಹಿಳೆಯರು ಸೇರಿ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಾಗಡಿ ರಸ್ತೆಯ ಗೋಪಾಲಪುರದಲ್ಲಿರುವ ಎಂ.ಎಂ. ಫುಡ್ ಪ್ರಾಡಕ್ಟ್ ಉತ್ಪಾದನಾ ಘಟನೆಯಲ್ಲಿ ನಡೆದಿದೆ.

ಬಿಹಾರ ಮೂಲದ ಸೌರವ್‌ ಕುಮಾರ್‌ (21), ಮನೀಶ್‌ ಕುಮಾರ್‌ (24) ಮೃತರು. ಅದೇ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಧನಲಕ್ಷ್ಮೀ  (52), ಶಾಂತಿ (45), ಸಚಿನ್‌ (35) ಗಂಭೀರವಾಗಿ ಗಾಯಗೊಂಡಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂವರ ಸ್ಥಿತಿ ಚಿಂತಾಜನಕವಾಗಿದೆ.

ವಿಜಯ್‌ ಮೆಹ್ತಾ ಮತ್ತು ಗಾಯಗೊಂಡಿರುವ ಸಚಿನ್‌ ಪಾಲುದಾರಿಕೆಯಲ್ಲಿ ಮಾಗಡಿ ರಸ್ತೆಯಲ್ಲಿರುವ ಗೋಪಾಲಪುರದ 5ನೇ ಅಡ್ಡ ರಸ್ತೆಯಲ್ಲಿ ಎಂ.ಎಂ. ಫುಡ್ ಪ್ರಾಡಕ್ಟ್ ಉತ್ಪಾದನಾ ಕಾರ್ಖಾನೆ ನಡೆಸುತ್ತಿದ್ದು, ನಗರದ ಕೆಲ ಅಂಗಡಿಗಳಿಗೆ ತಿನಿಸುಗಳನ್ನು ಸಗಟು ರೂಪದಲ್ಲಿ ಮಾರಾಟ ಮಾಡುತ್ತಾರೆ. ಈ ಕಾರ್ಖಾನೆಯಲ್ಲಿ ಹತ್ತಾರು ಮಂದಿ ಕೆಲಸ ಮಾಡುತ್ತಿದ್ದಾರೆ. ಸೌರವ್‌ ಕುಮಾರ್‌ ಮತ್ತು ಮನೀಶ್‌ ಕುಮಾರ್‌ 2021ರ ಜುಲೈನಿಂದ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು.

ಇದನ್ನೂ ಓದಿ:ಕಾಂಗ್ರೆಸ್‍ನಲ್ಲಿ ಪ್ರಮೋಷನ್ ಸಿಗಬೇಕೆಂದರೆ ಜೈಲಿಗೆ ಹೋಗಬೇಕು: ಸಿ.ಟಿ.ರವಿ ವ್ಯಂಗ್ಯ

ಭಾರೀ ಸ್ಫೋಟ: ತಿನಿಸು ತಯಾರಿಸಲು ಫ್ಯಾಕ್ಟರಿಯಲ್ಲಿ ಬಾಯ್ಲರ್‌ ಇದ್ದು, ಸೋಮವಾರ ಮೃತರು ಹಾಗೂ ಗಾಯಗೊಂಡವರು ಕೆಲಸ ಮಾಡುತಿ ತ್ತಿದ್ದರು. ಮಧ್ಯಾಹ್ನ 1.30ರ ಸುಮಾರಿಗೆ ಬಾಯ್ಲರ್‌ ತಾಪ ಹೆಚ್ಚಾಗಿ ಏಕಾಏಕಿ ಸ್ಫೋಟಗೊಂಡಿದೆ. ಪರಿಣಾಮ ಪಕ್ಕದಲ್ಲೇ ಇದ್ದ ಮನೀಶ್‌ ಮತ್ತು ಸೌರವ್‌ ಸ್ಥಳದಲ್ಲೇ ಸಜೀವ ದಹನಗೊಂಡಿದ್ದಾರೆ. ಇಬ್ಬರು ಮಹಿಳೆಯರು ಸೇರಿ ಮೂವರಿಗೆ ಬೆಂಕಿ ತಗುಲಿ ರಕ್ಷಣೆಗಾಗಿ ಜೋರಾಗಿ ಕೂಗಿಕೊಂಡು ಕಾರ್ಖಾನೆಯಿಂದ ಹೊರಗಡೆ ಬಂದಿದ್ದಾರೆ. ಅವರನ್ನು ಗಮನಿಸಿದ ‌ ಸ್ಥಳೀಯರು ಕೂಡಲೇ ನೀರು ಹಾಕಿ,ಗೋಣಿ ಚೀಲಗ ‌ಳಿಂದ ಮೂವರು ದೇಹ ಮುಚ್ಚಿದ್ದಾರೆ. ಬಳಿಕ ಆ್ಯಂಬುಲೆನ್ಸ್‌ ಕರೆಸಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಶೇ.45ರಷ್ಟು ಮೂವರಿಗೆ ಸುಟ್ಟ ಗಾಯಗ ‌ಳಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದರು.

ಸುದ್ದಿ ತಿಳಿದ ಕೂಡಲೇ ಎರಡು ಅಗ್ನಿಶಾಮಕ ವಾಹನಗಳ ಜತೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಖಾನೆಯೊಳಗೆ ಹೊತ್ತಿ ಉರಿಯುತ್ತಿದ್ದ ಬೆಂಕಿ ನಂದಿಸಿದ್ದು, ಎರಡು ಮೃತದೇಹಗಳನ್ನು ಹೊರಗಡೆತೆಗೆದಿದ್ದಾರೆ. ಜತೆಗೆ ಅಲ್ಲೇ ಇದ್ದ ಹತ್ತು ಸಿಲಿಂಡರ್‌ಗಳನ್ನು ಹೊರಗಡೆ ತರಲಾಗಿದೆ. ಒಂದು ವೇಳೆ ಅವುಗಳು ಸ್ಫೋಟಗೊಂಡಿದ್ದರೆ, ಭಾರೀ ಪ್ರಮಾಣದಲ್ಲಿ ಸ್ಫೋಟ ಸಂಭವಿಸುವ ಸಾಧ್ಯತೆ ಇತ್ತು.

ವಿಧಿ ವಿಜ್ಞಾನ ಪ್ರಯೋಗಾಲಯ ಸಿಬ್ಬಂದಿ ಭೇಟಿ: ಘಟನಾ ಸ್ಥಳಕ್ಕೆ ವಿಧಿ ವಿಜ್ಞಾನ ಪ್ರಯೋಗಾಲಯ ಸಿಬ್ಬಂದಿ, ಕಾರ್ಖಾನೆ ಮತ್ತು ಬಾಯ್ಲರ್‌ ಇಲಾಖೆಯ ಜಂಟಿ ನಿರ್ದೇಶಕರು ಹಾಗೂ ಮಾಗಡಿ ರಸ್ತೆ ಠಾಣೆ ಅಧಿಕಾರಿ-ಸಿಬ್ಬಂದಿ, ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್‌ ಎಂ.ಪಾಟೀಲ್‌ ಭೇಟಿ ನೀಡಿ ಪರಿಶೀಲಿಸಿದರು. ಸ್ಫೋಟಕ್ಕೆ ಕಾರಣವೇನು?, ಕಾರ್ಖಾನೆ ಸಕ್ರಮವೇ? ಅಥವಾ ಅಕ್ರಮವೇ? ಎಂಬ ಬಗ್ಗೆ ದಾಖಲೆ ಪರಿಶೀಲಿಸುತ್ತಿದ್ದಾರೆ. ಮೇಲ್ನೋಟಕ್ಕೆ ಮಿತಿಗಿಂತ ಅಧಿಕ ಪ್ರಮಾಣದಲ್ಲಿ ತಿನಿಸುಗಳ ತಯಾರಿಕೆ ಹಾಗೂ ತಾಪ ಹೆಚ್ಚಾಗಿದ್ದರಿಂದ ಬಾಯ್ಲರ್‌ ಸ್ಫೋಟಗೊಂಡಿದೆ ಎಂದು ಹೇಳಲಾಗಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

3 ದಿಕ್ಕಿಗೆ ಛಾವಣಿಗಳು!
ಬಾಯ್ಲರ್‌ ಸ್ಫೋಟದ ತೀವ್ರತೆಗೆಕಾರ್ಖಾನೆಯ ಛಾವಣಿಗಳು ಮೂರು ದಿಕ್ಕಿಗೆ ಹಾರಿ ಹೋಗಿವೆ. ಒಳಗಿದ್ದಕಬ್ಬಿಣದ ವಸ್ತುಗಳು, ಮತ್ತೊಂದು ಸಣ್ಣ
ಬಾಯ್ಲರ್‌ಕೂಡ ಹಾನಿಗೊಂಡಿದೆ. ಕೆಲ ವಸ್ತುಗಳು ಸುಟ್ಟುಕರಕಲಾಗಿವೆ. ಅಕ್ಕ-ಪಕ್ಕದ  ಮನೆಗಳ ಗೋಡೆಗಳು ಸಣ್ಣ ಪ್ರಮಾಣದಲ್ಲಿ ಬಿರುಕು
ಬಿಟ್ಟುಗೊಂಡಿವೆ ಎಂದು ಸ್ಥಳೀಯರು ಹೇಳಿದರು

ಮಾರ್ಚ್‌ನಲ್ಲಿ ಮದುವೆ!
ಎರಡು ತಿಂಗಳಿಂದಕೆಲಸ ಮಾಡುತ್ತಿರುವ ಮನೀಶ್‌ ಮತ್ತು ಸೌರವ್‌ಕುಮಾರ್‌ಗೆ ಮುಂದಿನ ಮಾರ್ಚ್‌ನಲ್ಲಿ ವಿವಾಹ ನಿಶ್ಚಿಯವಾಗಿತ್ತು ಅವರ ಜತೆ ಇನ್ನೂ ನಾಲ್ವರು ಬಿಹಾರದಿಂದ ನಗರಕ್ಕೆ ಬಂದಿದ್ದು, ಎಲ್ಲರೂ ಕಾರ್ಖಾನೆ ಸಮೀಪದ ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದಾರೆ ಎಂದು ಪೊಲೀಸರು ಹೇಳಿದರು

ಶಾಲೆಗೆ ಹೊಂದಿಕೊಂಡಂತೆ ಫ‌ುಡ್‌ ಫ್ಯಾಕ್ಟರಿ!
ನಾಲ್ಕು ತಿಂಗಳಿಂದ ಆರಂಭವಾಗಿರುವ ಕಾರ್ಖಾನೆಯನ್ನು ಟ್ಯಾಗೂರ್‌ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಗೋಡೆಗೆ ಹೊಂದಿಕೊಂಡಂತೆ ನಿರ್ಮಿಸಲಾಗಿದೆ. ಅದೃಷ್ಟಶಾತ್‌ ಶಾಲೆಗೆ ಯಾವುದೇ ರೀತಿಯ ಹಾನಿಯಾಗಿಲ್ಲ. ಮಕ್ಕಳು ಸುರಕ್ಷಿತವಾಗಿದ್ದಾರೆ. ಇನ್ನು ಕಾರ್ಖಾನೆ ದಾಖಲೆ ಸಲ್ಲಿಸುವಂತೆ ವಿಜಯ್‌ ಮೆಹ್ತಾಗೆ ಸೂಚಿಸಲಾಗಿತ್ತು. ಆದರೆ,ಆತ ಫೋನ್‌ ಸ್ವಿಚ್‌ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾನೆ. ಇಕ್ಕಟ್ಟಿನ ಪ್ರದೇಶದಲ್ಲಿ ಕಾರ್ಖಾನೆಗೆ ಅವಕಾಶ ಕೊಟ್ಟರುವ ಬಗ್ಗೆ ಮಾಹಿತಿ ಪಡೆಯಬೇಕಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಟಾಪ್ ನ್ಯೂಸ್

ರಾಜ್ಯಸಭೆಗೆ ಹಲವರ ಅವಿರೋಧ ಆಯ್ಕೆ

ರಾಜ್ಯಸಭೆಗೆ ಹಲವರ ಅವಿರೋಧ ಆಯ್ಕೆ

ಸನ್‌ರೈಸರ್ ಹೈದರಾಬಾದ್‌ಗೆ ದ್ವಿತೀಯ ಗೆಲುವು

ಸನ್‌ರೈಸರ್ ಹೈದರಾಬಾದ್‌ಗೆ ದ್ವಿತೀಯ ಗೆಲುವು

ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಸಂಬಂಧಿಸಿ ವಿಟಿಯು ಜತೆ ಚರ್ಚೆ

ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಸಂಬಂಧಿಸಿ ವಿಟಿಯು ಜತೆ ಚರ್ಚೆ

ಒಂದೇ ದೋಣಿಯಲ್ಲಿ ಮುಂಬೈ ಇಂಡಿಯನ್ಸ್‌ -ಪಂಜಾಬ್‌ ಕಿಂಗ್ಸ್‌

ಒಂದೇ ದೋಣಿಯಲ್ಲಿ ಮುಂಬೈ ಇಂಡಿಯನ್ಸ್‌ -ಪಂಜಾಬ್‌ ಕಿಂಗ್ಸ್‌

ಪಿಯು ಉಪನ್ಯಾಸಕರ ವರ್ಗಾವಣೆ ಈ ವರ್ಷವೂ ಅನುಮಾನ?

ಪಿಯು ಉಪನ್ಯಾಸಕರ ವರ್ಗಾವಣೆ ಈ ವರ್ಷವೂ ಅನುಮಾನ?

ಪೊಲೀಸ್‌ ನೇಮಕಾತಿ ಪರೀಕ್ಷೆಯಲ್ಲಿ ವಂಚನೆ: ಐವರ ಬಂಧನ

ಪೊಲೀಸ್‌ ನೇಮಕಾತಿ ಪರೀಕ್ಷೆಯಲ್ಲಿ ವಂಚನೆ: ಐವರ ಬಂಧನ

ಮಗುವಿನ ಚಿಕಿತ್ಸೆಗೆ ಆರ್ಥಿಕ ನೆರವು ಹೈಕೋರ್ಟ್‌ ಮೊರೆ ಹೋದ ತಂದೆ

ಮಗುವಿನ ಚಿಕಿತ್ಸೆಗೆ ಆರ್ಥಿಕ ನೆರವು ಹೈಕೋರ್ಟ್‌ ಮೊರೆ ಹೋದ ತಂದೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೋವಿಡ್ : ರಾಜ್ಯದಲ್ಲಿಂದು 504 ಮಂದಿಯಲ್ಲಿ ಪ್ರಕರಣ ಪತ್ತೆ : 893 ಸೋಂಕಿತರು ಗುಣಮುಖ

ಕೋವಿಡ್ : ರಾಜ್ಯದಲ್ಲಿಂದು 504 ಮಂದಿಯಲ್ಲಿ ಪ್ರಕರಣ ಪತ್ತೆ : 893 ಸೋಂಕಿತರು ಗುಣಮುಖ

ಕರಾವಳಿಯ ಪ್ರತಿ ಇಬ್ಬರಲ್ಲಿ ಒಬ್ಬರ ಬಳಿ ಆಯುಷ್ಮಾನ್‌ ಕಾರ್ಡ್‌

ಕರಾವಳಿಯ ಪ್ರತಿ ಇಬ್ಬರಲ್ಲಿ ಒಬ್ಬರ ಬಳಿ ಆಯುಷ್ಮಾನ್‌ ಕಾರ್ಡ್‌

ಬಹು ಮಹಡಿ ಕಟ್ಟಡ ಸುರಕ್ಷಿತವೇ?

ಬಹುಮಹಡಿ ಕಟ್ಟಡ ಸುರಕ್ಷಿತವೇ?

ಬೆಂಗಳೂರು: ಕುಸಿದುಬಿತ್ತು ಮೂರಂತಸ್ತಿನ ಮನೆ, ತಪ್ಪಿದ ಭಾರೀ ಅನಾಹುತ

ಬೆಂಗಳೂರು: ಕುಸಿದುಬಿತ್ತು ಮೂರಂತಸ್ತಿನ ಮನೆ, ತಪ್ಪಿದ ಭಾರೀ ಅನಾಹುತ

ಜೆಡಿಎಸ್‌ ಹೆಸರಿಗಷ್ಟೇ ಜಾತ್ಯತೀತ, ಅವರದ್ದು ಅವಕಾಶವಾದಿ ರಾಜಕಾರಣ : ಸಿದ್ದರಾಮಯ್ಯ

ಜೆಡಿಎಸ್‌ ಹೆಸರಿಗಷ್ಟೇ ಜಾತ್ಯತೀತ, ಅವರದ್ದು ಅವಕಾಶವಾದಿ ರಾಜಕಾರಣ : ಸಿದ್ದರಾಮಯ್ಯ

MUST WATCH

udayavani youtube

ದೇವಸ್ಥಾನಕ್ಕೆ ಬೀಗ ದೇವರ ದರ್ಶನಕ್ಕಾಗಿ ಬಾಗಿಲ ಬಳಿ ಕಾದು ನಿಂತ ಬಸವ

udayavani youtube

ತಾಳಿಕೋಟೆ ಬಳಿ ಡೋಣಿ ಸೇತುವೆ ಕುಸಿತ : ಸಂಚಾರ ಬಂದ್, ಪ್ರಯಾಣಿಕರ ಪರದಾಟ

udayavani youtube

ಭಾರತದಲ್ಲಿ ಹಸಿರು ಕ್ರಾಂತಿ: ಫಲ ಏನಾಯ್ತು?

udayavani youtube

ಪ್ರಿಯಕರನ ಮೋಹಕ್ಕೆ ಬಿದ್ದು ತಾಳಿ ಕಟ್ಟಿದ ಗಂಡನಿಗೇ ಇಟ್ಳು ಮುಹೂರ್ತ

udayavani youtube

Horror, Romance, Comedyಯಲ್ಲಿ ಅನಂತ ನಾಗ್ ಅವ್ರ ಆಯ್ಕೆ ಯಾವುದಂದ್ರೆ…?

ಹೊಸ ಸೇರ್ಪಡೆ

ರಾಜ್ಯಸಭೆಗೆ ಹಲವರ ಅವಿರೋಧ ಆಯ್ಕೆ

ರಾಜ್ಯಸಭೆಗೆ ಹಲವರ ಅವಿರೋಧ ಆಯ್ಕೆ

ಸನ್‌ರೈಸರ್ ಹೈದರಾಬಾದ್‌ಗೆ ದ್ವಿತೀಯ ಗೆಲುವು

ಸನ್‌ರೈಸರ್ ಹೈದರಾಬಾದ್‌ಗೆ ದ್ವಿತೀಯ ಗೆಲುವು

ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಸಂಬಂಧಿಸಿ ವಿಟಿಯು ಜತೆ ಚರ್ಚೆ

ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಸಂಬಂಧಿಸಿ ವಿಟಿಯು ಜತೆ ಚರ್ಚೆ

ಒಂದೇ ದೋಣಿಯಲ್ಲಿ ಮುಂಬೈ ಇಂಡಿಯನ್ಸ್‌ -ಪಂಜಾಬ್‌ ಕಿಂಗ್ಸ್‌

ಒಂದೇ ದೋಣಿಯಲ್ಲಿ ಮುಂಬೈ ಇಂಡಿಯನ್ಸ್‌ -ಪಂಜಾಬ್‌ ಕಿಂಗ್ಸ್‌

ಪಿಯು ಉಪನ್ಯಾಸಕರ ವರ್ಗಾವಣೆ ಈ ವರ್ಷವೂ ಅನುಮಾನ?

ಪಿಯು ಉಪನ್ಯಾಸಕರ ವರ್ಗಾವಣೆ ಈ ವರ್ಷವೂ ಅನುಮಾನ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.