ಸಿಇಟಿ ಕೀ ಉತ್ತರ ಪ್ರಕಟ
Team Udayavani, Apr 24, 2018, 7:20 AM IST
ಬೆಂಗಳೂರು : ವೃತ್ತಿಪರ ಕೋರ್ಸ್ಗಳ ಸರ್ಕಾರಿ ಕೋಟಾ ಸೀಟುಗಳಿಗೆ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆಯ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರ ವಿಷಯಗಳ ತಾತ್ಕಾಲಿಕ ಸರಿ ಉತ್ತರವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ.
ಸರಿ ಉತ್ತರಿಗಳಿಗೆ ಯಾವುದೇ ಆಕ್ಷೇಪಣೆಗಳಿದ್ದರೆ ಆಧಾರ ಸಹಿತವಾಗಿ ಪ್ರಾಧಿಕಾರದ ಇ-ಮೇಲ್ [email protected]n ಗೆ ಏ. 30ರ ಸಂಜೆ 5.30ರೊಳಗೆ ಕಳುಹಿಸಿಕೊಡಬಹುದು. ಆಕ್ಷೇಪಣೆ ಸಲ್ಲಿಸುವಾಗ ವಿಷಯದ ಹೆಸರು, ವರ್ಷನ್ ಕೋಡ್, ಪ್ರಶ್ನೆ ಸಂಖ್ಯೆ ಜತೆಗೆ ಆಕ್ಷೇಪಣೆಗೆ ವಿವರಣೆ ನೀಡಬೇಕು. ಆಧಾರ ರಹಿತ ಆಕ್ಷೇಪಣೆಗಳನ್ನು ಪರಿಗಣಿಸುವುದಿಲ್ಲ. ವಿಷಯ ತಜ್ಞರ ಸಮಿತಿ ನಿರ್ಧರಿಸಿ ನೀಡಿರುವ ಕೀ ಉತ್ತರ ಅಂತಿಮವಾಗಿರುತ್ತದೆ. ಮಾಹಿತಿಗಾಗಿ ಪ್ರಾಧಿಕಾರದ ವೆಬ್ಸೈಟ್ http://kea.kar.nic.in ಸಂಪರ್ಕಿಸಬಹುದು.