Cricket betting: ಗಲ್ಲಿ ಗಲ್ಲಿಗಳಲ್ಲಿ ನಡೆಯುತ್ತಿದೆ ಕ್ರಿಕೆಟ್‌ ಬೆಟ್ಟಿಂಗ್‌ ದಂಧೆ 

Team Udayavani, Mar 27, 2024, 11:26 AM IST

12

ಬೆಂಗಳೂರು: ದೇಶಾದ್ಯಂತ ಐಪಿಎಲ್‌ ಕ್ರಿಕೆಟ್‌ ಹವಾ ರಂಗೇರಿರುವ ಬೆನ್ನಲ್ಲೇ ಬೆ ಟ್ಟಿಂಗ್‌ ಭರಾಟೆಯೂ ಜೋರಾಗಿದ್ದು ಕರ್ನಾಟಕದ ಗಲ್ಲಿ-ಗಲ್ಲಿಗಳಲ್ಲಿ ಕುರುಡು ಕಾಂಚಾ ಣ ಹರಿಯಲಾರಂಭಿಸಿದೆ.

ಮತ್ತೂಂದೆಡೆ ಕ್ರಿಕೆಟ್‌ ಬೆಟ್ಟಿಂಗ್‌ ದಂಧೆ ಮೇಲೆ ಪೊಲೀಸ್‌ ಇಲಾಖೆಯು ಹದ್ದಿನ ಕಣ್ಣಿಟ್ಟಿದೆ.ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಗಿಂತ ಹೆಚ್ಚಾಗಿ ಐಪಿಎಲ್‌ನತ್ತ ಎಲ್ಲರ ಚಿತ್ತ ನೆಟ್ಟಿದೆ.  ಕರ್ನಾಟಕದ ಗಲ್ಲಿ- ಗಲ್ಲಿಗಳಲ್ಲಿ ಐಪಿಎಲ್‌ ಪಂದ್ಯಗಳ ಮೇಲೆ ನೂರಾರು ಕೋಟಿ ಕುರುಡು ಕಾಂಚಾಣ ಕುಣಿಯುತ್ತಿದೆ.  ಎಲ್ಲ ವಯೋಮಾನದವರೂ ಕ್ರಿಕೆಟ್‌ ಬುಕ್ಕಿಗಳ ಮೂಲಕ ಆನ್‌ಲೈನ್‌ ಬೆಟ್ಟಿಂಗ್‌ನಲ್ಲಿ ಸಕ್ರಿಯವಾಗಿರುವುದು ಪೊಲೀಸ್‌ ಇಲಾಖೆ ಗಮನಕ್ಕೆ ಬಂದಿದೆ. ರಾಜ್ಯದೆಲ್ಲೆಡೆ ಕ್ರಿಕೆಟ್‌ ಬೆಟ್ಟಿಂಗ್‌ ದಂಧೆ ಮೇಲೆ ಹದ್ದಿನ ಕಣ್ಣಿಡುವಂತೆ ಹಿರಿಯ ಪೊಲೀಸ್‌ ಅಧಿಕಾರಿಗಳಿಂದ ಪೊಲೀ ಸರಿಗೆ ಮೌಖೀಕ ಸೂಚನೆ ರವಾನೆಯಾಗಿದೆ.

ಕ್ರಿಕೆಟ್‌ ಬೆಟ್ಟಿಂಗ್‌ ಹವಾ ರಾಜ್ಯದಲ್ಲಿ ಎಷ್ಟರ ಮಟ್ಟಿಗೆ ಇವೆ ಎಂದರೆ ಟಾಸ್‌ ಹಾಕು ವುದರಿಂದ ಹಿಡಿದು ಪಂದ್ಯ ಮುಕ್ತಾಯ ಗೊಳ್ಳುವ ಪ್ರತಿ ಕ್ಷಣಕ್ಕೂ ಬೆಟ್ಟಿಂಗ್‌ ಮೇನಿಯಾ ಶುರುವಾಗಿದೆ. ಪ್ರತಿ ಬಾಲ್, ರನ್‌, ಸಿಕ್ಸ್‌, ಬೌಂಡರಿಗಳ ಮೇಲೂ ಬುಕ್ಕಿಗಳು ಭಾರೀ ಲೆಕ್ಕಾಚಾರದಲ್ಲಿ ಸಾವಿ ರಾರು ರೂ. ಬಾಜಿ ಕಟ್ಟಿಸುತ್ತಿದ್ದಾರೆ. 16ರಿಂದ 40 ವರ್ಷದವರೇ  ಶೇ.80 ಬೆಟ್ಟಿಂಗ್‌ ದಂಧೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಇವರು ಹೆಚ್ಚಾಗಿ ಸಾವಿರದಿಂದ 25 ಸಾವಿರ ರೂ. ವರೆಗೂ ಬೆಟ್ಟಿಂಗ್‌ ಕಟ್ಟುತ್ತಾರೆ. ಶ್ರೀಮಂತ ಕುಳಗಳು ಬೆಟ್ಟಿಂಗ್‌ನಿಂದ ಲಕ್ಷಾಂತರ ರೂ. ಕಳೆದುಕೊಳ್ಳುತ್ತಾರೆ ಎಂದು ಪೊಲೀಸ್‌ ಮೂಲಗಳು ಹೇಳಿವೆ.

ಬುಕ್ಕಿಗಳಿಂದ ಆನ್‌ಲೈನ್‌ನಲ್ಲೇ ವ್ಯವಹಾರ:   ಸಾಮಾಜಿಕ ಜಾಲತಾಣಗಳು, ವಾಟ್ಸ್‌ಆ್ಯಪ್‌, ಇನ್‌ಸ್ಟಾಗ್ರಾಂಗಳಲ್ಲಿ ಐಪಿಎಲ್‌ ಕ್ರಿಕೆಟ್‌ ಬೆಟ್ಟಿಂಗ್‌ಗೆಂದೇ ಹತ್ತಾರು ಗ್ರೂಪ್‌ಗ್ಳು ಈಗಾಗಲೇ ಸೃಷ್ಟಿಯಾಗಿವೆ. ಅಂತರ್ಜಾ ಲದಲ್ಲಿ ಇದಕ್ಕೆಂದೇ ತೆರೆದಿರುವ ನೂರಾರು ವೆಬ್‌ಸೈಟ್‌ಗಳ ಮೂಲಕವೂ ಕರ್ನಾಟಕದಲ್ಲಿ ಲಕ್ಷಾಂತರ ಮಂದಿ ಬಾಜಿ ಕಟ್ಟುವವರಿದ್ದಾರೆ. ಶೇ.90 ಆನ್‌ಲೈನ್‌ನಲ್ಲೇ ಬೆಟ್ಟಿಂಗ್‌ ವಹಿ ವಾಟು ನಡೆಯುತ್ತಿದೆ. ದುಡ್ಡು ವರ್ಗಾವಣೆ ಮಾಡುವ ಆ್ಯಪ್‌ಗ್ಳಲ್ಲಿ ವ್ಯವಹಾರ ಕುದುರಿಸಲಾಗುತ್ತದೆ. ರಾಜ್ಯದ ಗ್ರಾಮೀಣ ಭಾಗದಲ್ಲಿರುವವರನ್ನೂ ಬೆಟ್ಟಿಂಗ್‌ ಗಾಳಕ್ಕೆ ಸಿಲುಕಿಸಲು ಇದು ಸಹಕಾರಿಯಾಗಿದೆ.

ಕಾನೂನಿನಲ್ಲಿ ಏನಿದೆ?:  ಕಾನೂನಿನಲ್ಲಿ ಬೆಟ್ಟಿಂಗ್‌ ಅಸಂಜ್ಞೆಯ ಅಪರಾಧ ಎಂದಿದೆ. ಕೋರ್ಟ್‌ನಿಂದ ಅನುಮತಿ ಪಡೆದ ಬಳಿಕ ಬೆಟ್ಟಿಂಗ್‌ ದಂಧೆಕೋರರ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶಗಳಿವೆ. ಕೆಲವು ಬೆಟ್ಟಿಂಗ್‌ ದಂಧೆಯಲ್ಲಿ ಸಿಕ್ಕಿ ಬಿದ್ದ ಕೆಲವು ಪ್ರಕರಣಗಳಲ್ಲಿ ದಂಡ ಕಟ್ಟಿಯೂ ಬಿಡಲು ಅವಕಾಶವಿದೆ. ಕೆಲವು ಪ್ರಕರಣ ಸಾಬೀತಾದರೆ 3 ರಿಂದ 6 ತಿಂಗಳು ಶಿಕ್ಷೆ ವಿಧಿಸಲು ಅವಕಾಶಗಳಿವೆ.

ಹಳ್ಳಿ ಹಳ್ಳಿಗಳಲ್ಲೂ ಐಪಿಎಲ್‌ ಬೆಟ್ಟಿಂಗ್‌:  ಹಳ್ಳಿ ಹಳ್ಳಿಗಳಲ್ಲೂ ಯುವಕರು ಐಪಿಎಲ್‌ ಬೆ ಟ್ಟಿಂಗ್‌ ಮೋಹಕ್ಕೆ ಒಳಗಾಗಿದ್ದಾರೆ. ಬೆಟ್ಟಿಂಗ್‌ ಕಟ್ಟಲು ಸಾಲ ಮಾಡುತ್ತಿದ್ದಾರೆ. ಕಡಿಮೆ ಸಮಯಕ್ಕೆ ಹೆಚ್ಚು ಹಣ ಮಾಡುವ ದುರಾಸೆಯಿಂದ ಇದ್ದ ಹಣವನ್ನೂ ಕಳೆದುಕೊಂಡು ಸಾಲದ ಸುಳಿಗೆ ಸಿಲುಕುದ್ದಾರೆ. ಸಾಲ ತೀರಿಸಲಾಗದೆ ಕೆಲವರು ಊರು ಬಿಟ್ಟರೆ, ಮತ್ತೆ ಕೆಲ ಯುವಕರು ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ.

ಬೆಟ್ಟಿಂಗ್‌ ವಿರುದ್ಧ ಪೊಲೀಸ್‌ ಇಲಾಖೆ ಯಿಂದ ನಿರಂತರ ಕಾರ್ಯಾಚರಣೆ ನಡೆಯಲಿದೆ. ಐಪಿಎಲ್‌ ಕ್ರಿಕೆಟ್‌ ಪಂದ್ಯದ ವೇಳೆ ಬೆಟ್ಟಿಂಗ್‌ ಪ್ರಕರಣಗಳು ಹೆಚ್ಚಾಗುತ್ತವೆ. ದಂಧೆಕೋರರ ವಿರುದ್ಧ ನಿಗಾ ಇಡಲಾಗಿದೆ.-ಬಿ.ದಯಾನಂದ್‌, ಬೆಂಗಳೂರು ಪೊಲೀಸ್‌ ಆಯುಕ್ತ  

– ಅವಿನಾಶ್‌ ಮೂಡಂಬಿಕಾನ

ಟಾಪ್ ನ್ಯೂಸ್

Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ

“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ

20

State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

19

Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

4

ವಿಚ್ಛೇದನ ನೀಡದಿದ್ದರೆ ತಲೆಯನ್ನು ಕಡಿದು ಕುಕ್ಕರ್‌ನಲ್ಲಿ ಬೇಯಿಸುವೆ ಎಂದ ಪತಿ ವಿರುದ್ಧ FIR

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

Voting: ರಾಜಧಾನಿಯಲ್ಲಿ ಶಾಂತಿಯುತ ಮತದಾನ; ಬಿ.ದಯಾನಂದ್‌

Voting: ರಾಜಧಾನಿಯಲ್ಲಿ ಶಾಂತಿಯುತ ಮತದಾನ; ಬಿ.ದಯಾನಂದ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್

Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.