ಕಾಮಗಾರಿ ಹೆಸರಲ್ಲಿ ಕೋಟ್ಯಂತರ ರೂ. ಲೂಟಿ
Team Udayavani, Mar 11, 2018, 11:07 AM IST
ಬೆಂಗಳೂರು: ಅಧಿಕಾರಯುಕ್ತ ಸಮಿತಿ (ಹೈಪವರ್ ಕಮಿಟಿ) ರಚಿಸುವ ಮೂಲಕ ಬಿಬಿಎಂಪಿಯನ್ನು ಸೂಪರ್ ಸೀಡ್ ಮಾಡಿರುವ ರಾಜ್ಯ ಸರ್ಕಾರ, ಆ ಮೂಲಕ ನಗರದಲ್ಲಿ ನಡೆಸಲಾಗುತ್ತಿರುವ ಕಾಮಗಾರಿಗಳ ಮೂಲಕ ಕೋಟ್ಯಂತರ ರೂ. ಲೂಟಿ ಹೊಡೆಯುತ್ತಿದೆ ಎಂದು ಬಿಜೆಪಿ ನಗರ ವಕ್ತಾರ ಎನ್. ಆರ್.ರಮೇಶ್ ಆರೋಪಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಪಾಲಿಕೆಯ ಸ್ಥಾಯಿ ಸಮಿತಿ, ಕೌನ್ಸಿಲ್, ಸದಸ್ಯರು, ಆಯುಕ್ತರ ಅಧಿಕಾರವನ್ನು ಕಿತ್ತು ಅಧಿಕಾರಯುಕ್ತ ಸಮಿತಿಗೆ ನೀಡುವ ಮೂಲಕ ಪಾಲಿಕೆಯನ್ನು ಸೂಪರ್ ಸೀಡ್ ಮಾಡಿದೆ. ಪಾಲಿಕೆಗೆ ನೀಡುವುದಾಗಿ ಘೋಷಿಸಿರುವ 7,300 ಕೋಟಿ ರೂ. ಗಳ ಕಾಮಗಾರಿಗಳಿಗೆ ತಾಂತ್ರಿಕ ಅನುಮೋದನೆ, ಟೆಂಡರ್ ಅನುಮೋದನೆ ನೀಡುವ ಅಧಿಕಾರವನ್ನು ಸಮಿತಿಗೆ ನೀಡಿ, ಆ ಮೂಲಕ ಚುನಾವಣಾ ನಿಧಿ ಸಂಗ್ರಹಕ್ಕಾಗಿ ಗುತ್ತಿಗೆದಾರರಿಂದ ಹಣ ಪಡೆಯಲು ಮುಂದಾಗಿದೆ ಎಂದು ದೂರಿದರು.
ಸರ್ಕಾರದ ಖಜಾನೆ ಖಾಲಿಯಾಗಿದ್ದರೂ ಸರ್ಕಾರ ಮಾತ್ರ ಪಾಲಿಕೆಗೆ ದಾಖಲೆಯ 7,300 ಕೋಟಿ ರೂ. ಬಿಡುಗಡೆ ಮಾಡಿದ್ದೇವೆ ಎಂದು ಸುಳ್ಳು ಹೇಳುತ್ತಿದ್ದಾರೆ. ಆದರೆ, ಈವರೆಗೆ ಬಿಡುಗಡೆ ಮಾಡಿರುವ ಅನುದಾನ ಕೇವಲ 1500 ಕೋಟಿ ರೂ. ಮಾತ್ರ ಎಂದರು.
ನಗರೋತ್ಥಾನ ಅನುದಾನದ 7,300 ಕೋಟಿ ಮೊತ್ತದ ಯೋಜನಾ ಕಾಮಗಾರಿಗಳನ್ನು ಅಧಿಕಾರ ಯುಕ್ತ ಸಮಿತಿ ನಿರ್ವಹಿಸುತ್ತಿದೆ. ಬೃಹತ್ ಯೋಜನೆಗಳ ಗುತ್ತಿಗೆಯನ್ನು ಸಮಿತಿಯಿಂದಲೇ ನೀಡಿ ಗುತ್ತಿಗೆದಾರ ರಿಂದ ನೂರಾರು ಕೋಟಿ ರೂ. ಕಿಕಿಬ್ಯಾಕ್ ಪಡೆಯಲಾಗಿದೆ ಎಂದು ಆರೋಪಿಸಿದ ಅವರು, ಸರ್ಕಾರ ರಾಜ್ಯದ ಹಣಕಾಸು ಸ್ಥಿತಿಯ ಬಗ್ಗೆ ಶ್ವೇತಪತ್ರ ಹೊರಡಿಸಬೇಕೆಂದು ಆಗ್ರಹಿಸಿದರು.
ನಗರೋತ್ಥಾನ ಯೋಜನೆಯಡಿ ಅಧಿಕಾರಯುಕ್ತ ಸಮಿತಿ ನೀಡಲಾಗಿರುವ ಕಾಮಗಾರಿಗಳಲ್ಲಿ ಕೋಟ್ಯಂ ತರ ರೂ.
ದುರುಪಯೋಗ, ವಂಚನೆ ಆಗಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಎಸಿಬಿ, ಬಿಎಂಟಿಎಫ್, ಲೋಕಾ ಯುಕ್ತಕ್ಕೆ
ದೂರು ನೀಡಿರುವುದಾಗಿ ರಮೇಶ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಿಸ್ಕೆಟ್ ವ್ಯವಹಾರಕ್ಕೆಂದು ಕೋಟಿಗಟ್ಟಲೆ ಸಾಲ ಪಡೆದು ಕ್ಯಾಸಿನೋ ಜೂಜಾಟ ಆಡಿದ ಆರೋಪಿ ಅರೆಸ್ಟ್
ಕ್ರಿಕೆಟ್ ಬೆಟ್ಟಿಂಗ್: ಸಾಲ ತೀರಿಸಲು ಬೈಕ್ ಕಳ್ಳತನ; ಆರೋಪಿ ಬಂಧನ
ಶಾಲೆ ಬಳಿ ಸಾರಿ.. ಸಾರಿ.. ಬರಹ: ಮುನಿಸಿಕೊಂಡ ಪ್ರಿಯತಮೆಯ ಓಲೈಕೆಗೆ ಪಾಗಲ್ ಪ್ರೇಮಿಯ ಕೃತ್ಯ?
ಶೋಕಿ ಜೀವನಕ್ಕಾಗಿ ಚಿನ್ನಾಭರಣ ಮಳಿಗೆಯಲ್ಲಿ ಕಳ್ಳತನ ; ಮೂವರ ಬಂಧನ
ಫೇಸ್ ಬುಕ್ ನಲ್ಲಿ ಹಾಕಿದ್ದ ಸೆಲ್ಫಿ ಪೋಸ್ಟ್ ನಿಂದ 5 ವರ್ಷದ ಬಳಿಕ ಅರೆಸ್ಟ್ ಆದ ಕೊಲೆ ಆರೋಪಿ!