Udayavni Special

ದಲಿತರಿಗೆ ಮಾನಸಿಕ ಸ್ಥಾನಮಾನವಿಲ್ಲ

Team Udayavani, Jul 27, 2018, 12:16 PM IST

dalita.jpg

ಬೆಂಗಳೂರು: ದಲಿತರ ಮೇಲಿನ ದೈಹಿಕ ಅಸ್ಪೃಶ್ಯತೆ ನಿವಾರಣೆಯಾಗಿದ್ದರೂ ಮಾನಸಿಕ ಅಸ್ಪೃಶ್ಯತೆ ಮುಂದುವರೆಯುತ್ತಲೇ ಇದೆ ಎಂದು ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್‌ ಬೇಸರ ವ್ಯಕ್ತಪಡಿಸಿದರು.

ಛತ್ರಪತಿ ಶಾಹು ಮಹಾರಾಜ್‌ ಜನ್ಮ ದಿನದ ಅಂಗವಾಗಿ ಗುರುವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾದ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿ ಎಲ್ಲರಿಗೂ ಸಮಾನತೆ ದೊರೆಯುವಂತೆ ಡಾ.ಬಿ.ಆರ್‌.ಅಂಬೇಡ್ಕರ್‌ ಸಂವಿಧಾನ ರಚಿಸಿದರು.

ಸಾಮಾಜಿಕ ನ್ಯಾಯಕ್ಕೆ ಪ್ರಾಮುಖ್ಯತೆ ದೊರೆತಿದ್ದರಿಂದ ಹಿಂದುಳಿದ ವರ್ಗದವರು ವಿದ್ಯಾವಂತರಾಗಿ ಸಮಾಜದಲ್ಲಿ ಗೌರವಯುತ ಸ್ಥಾನ ಪಡೆಯಲು ಸಾಧ್ಯವಾಯಿತು. ಪ್ರಜಾಪ್ರಭುತ್ವ ವ್ಯವಸ್ಥೆ ದಲಿತರಿಗೆ ಗೌರವಯುತ ಸ್ಥಾನಮಾನ ದೊರಕಿಸಿಕೊಟ್ಟರೂ ಮಾನಸಿಕವಾಗಿ ಅವು ಸಿಗುತ್ತಿಲ್ಲ ಎಂದು ಹೇಳಿದರು.

ಮೀಸಲಾತಿ ಬಗ್ಗೆ ಇತ್ತೀಚಿನ ದಿನಗಳಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ನ್ಯಾಯಾಂಗ, ಆಡಳಿತದ ಬಹಪಾಲು ಅಂಗಗಳು ಮೀಸಲಾತಿ ಬೇಕಿಲ್ಲ ಎಂದು ಅಭಿಪ್ರಾಯಪಡುತ್ತಿವೆ. ಅತ್ಯಂತ ಶ್ರೇಷ್ಠವೆಂದು ಭಾವಿಸಿರುವ ನ್ಯಾಯಾಂಗವೇ ಬಡ್ತಿ ಮೀಸಲಾತಿಗೆ ವಿರುದ್ಧವಾಗಿ ತೀರ್ಪು ನೀಡಿದೆ. ಸಾವಿರಾರು ವರ್ಷಗಳಿಂದ ಶೋಷಣೆಗೆ ಒಳಗಾಗಿದ್ದ ಸಮುದಾಯಗಳಿಗೆ ಸಂವಿಧಾನ ಬದ್ಧವಾಗಿ ನೀಡಲಾಗಿರುವ ಮೀಸಲಾತಿ ಕುರಿತ ವಿಚಾರಗಳಲ್ಲಿ ನ್ಯಾಯಾಂಗಕ್ಕೆ ಸೂಕ್ಷ್ಮತೆ ಇರಬೇಕು ಎಂದರು.

ಮಹಾರಾಷ್ಟ್ರದ ಶಾಹು ಮಹಾರಾಜ್‌ ದೇಶದಲ್ಲೇ ಮೊದಲ ಬಾರಿ ದಲಿತರಿಗೆ ಮೀಸಲಾತಿ ಕಲ್ಪಿಸಿದವರು. ಸಾಹು ಮಹಾರಾಜ್‌ರಿಂದ ಸ್ಫೂರ್ತಿ ಪಡೆದು ನಾಲ್ವಡಿ ಕೃಷ್ಣರಾಜ ಒಡೆಯರ್‌ ಕೂಡ ಮೈಸೂರು ಸಂಸ್ಥಾನದಲ್ಲಿ ಮೀಸಲಾತಿ ಸೌಲಭ್ಯ ನೀಡಿದ್ದರು ಎಂದು ತಿಳಿಸಿದರು.

ದಸಂಸ ರಾಜ್ಯ ಸಂಚಾಲಕ ಆರ್‌.ಮೋಹನ್‌ರಾಜ್‌, ತುಮಕೂರು ವಿವಿ ಪ್ರಾಧ್ಯಾಪಕ ಡಾ.ಲಿಂಗಣ್ಣ, ದಲಿತ ವಿಮೋಚನೆ ಮಾನವ ಹಕ್ಕುಗಳ ವೇದಿಕೆ ರಾಜ್ಯಾಧ್ಯಕ್ಷ ಬಸವರಾಜ್‌ ಕೌತಾಳ್‌, ವಿಚಾರವಾದಿ ಕಲೈಸೆಲ್ವಿ, ಡಿಎಸ್‌ಫೋರ್‌ ಸಂಘಟನೆಯ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಮತ್ತಿತರರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

ಸಚಿವ ಆರ್.ಅಶೋಕ್

ಕಾಂಗ್ರೆಸ್ ನದ್ದು ಜಾತಿ ಲೆಕ್ಕಾಚಾರ, ನಮ್ಮದು ಜಾತಿ ಇಲ್ಲದ ರಾಜಕಾರಣ: ಅಶೋಕ್

ಅರ್ಚಕರಿಗೆ, ದೇಗುಲ ನೌಕಕರಿಗೆ ಆರೋಗ್ಯ ವಿಮೆ ಜಾರಿಗೆ ಶೀಘ್ರ ಕ್ರಮ: ಶಶಿಕಲಾ ಜೊಲ್ಲೆ

ಅರ್ಚಕರಿಗೆ, ದೇಗುಲ ನೌಕಕರಿಗೆ ಆರೋಗ್ಯ ವಿಮೆ ಜಾರಿಗೆ ಶೀಘ್ರ ಕ್ರಮ: ಶಶಿಕಲಾ ಜೊಲ್ಲೆ

fghtry5rt

ಕೇಕ್ ಕತ್ತರಿಸುತ್ತಿದ್ದ ನಟಿ ಕೂದಲಿಗೆ ಹೊತ್ತಿಕೊಂಡ ಬೆಂಕಿ | ವಿಡಿಯೋ  

Untitled-1

ಕಾಫಿಗೂ ಬಂತು ಸ್ನಾತಕೋತ್ತರ ಪದವಿ!

ಸಾರ್ಕ್ ಸಭೆಗೆ ತಾಲಿಬಾನ್ ಗೆ ಆಹ್ವಾನ ನೀಡಿ; ಪಾಕ್ ಪಟ್ಟು, ಭಾರತವನ್ನು ಕೆಣಕಿದ ಟರ್ಕಿ

ಸಾರ್ಕ್ ಸಭೆಗೆ ತಾಲಿಬಾನ್ ಗೆ ಆಹ್ವಾನ ನೀಡಿ; ಪಾಕ್ ಪಟ್ಟು, ಭಾರತವನ್ನು ಕೆಣಕಿದ ಟರ್ಕಿ

sfsdfer4e

ಮತ್ತೆ ಬಣ್ಣ ಹಚ್ಚುವ ಸುಳಿವು ನೀಡಿದ ಮೋಹಕ ತಾರೆ ರಮ್ಯಾ

navnita gautam

ಆರ್ ಸಿಬಿ ಕ್ಯಾಂಪ್ ನಲ್ಲಿ ಮಿಂಚುತ್ತಿರುವ ಯುವತಿ: ಯಾರಿದು? ಆರ್ ಸಿಬಿಯಲ್ಲಿ ಈಕೆಯ ಕೆಲಸವೇನು?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Corona

ಸ್ಥಾನಿಕ ವೈದ್ಯರಿಗೆ ಕೊರೊನಾ ಅಪಾಯ ಭತ್ಯೆಗೆ ಆಗ್ರಹ

ದೇಶದಲ್ಲೇ ಮೂರು ಕೈಗಾರಿಕಾ ಕಾರಿಡಾರ್ ಗಳನ್ನು ಹೊಂದಿದ ಏಕೈಕ ರಾಜ್ಯ ಕರ್ನಾಟಕ: ಸಚಿವ ನಿರಾಣಿ

ದೇಶದಲ್ಲೇ ಮೂರು ಕೈಗಾರಿಕಾ ಕಾರಿಡಾರ್ ಗಳನ್ನು ಹೊಂದಿದ ಏಕೈಕ ರಾಜ್ಯ ಕರ್ನಾಟಕ: ಸಚಿವ ನಿರಾಣಿ

dk-620×342

ಚಾಣಕ್ಯ ವಿವಿಗೆ ಜಮೀನು: ದೊಡ್ಡ ಹಗರಣ

Mahatma-Gandhi-620×455 copy copy

ಗಾಂಧಿ ಧೋತಿ ಶತಮಾನೋತ್ಸವ

ಶಾಲೆಯಲ್ಲಿ ಮಹಿಳೆಯಿಂದ ಮಸಾಜ್‌ ಮಾಡಿಸಿಕೊಳ್ಳುತ್ತಿದ್ದ ಶಿಕ್ಷಕ ಅಮಾನತು

ಶಾಲೆಯಲ್ಲಿ ಮಹಿಳೆಯಿಂದ ಮಸಾಜ್‌ ಮಾಡಿಸಿಕೊಳ್ಳುತ್ತಿದ್ದ ಶಿಕ್ಷಕ ಅಮಾನತು

MUST WATCH

udayavani youtube

ಹೊಳೆ ಸೇರುತ್ತಿರುವ ಮಲೀನ ತ್ಯಾಜ್ಯ,ಮೀನುಗಳ ಮಾರಣ ಹೋಮ

udayavani youtube

ಮುಸಲ್ಮಾನರೊಬ್ಬರು ಹಾಡಿದ ‘ಮಹಾಭಾರತ ಕಥಾ’..!

udayavani youtube

ಆಯುರ್ವೇದ – ಅಲೋಪತಿ ಒಂದು ಸಂಕ್ಷಿಪ್ತ ಮಾಹಿತಿ

udayavani youtube

ಈ ಹೋಟೆಲ್‌ನಲ್ಲಿ ಸೀರೆಗಿಲ್ಲ ಅವಕಾಶ!

udayavani youtube

22 ಕಿ.ಮೀ ದೂರ ಬಿಟ್ಟು ಬಂದರೂ ಲಾರಿ ಹತ್ತಿ ಮತ್ತೆ ಅದೇ ಜಾಗಕ್ಕೆ ಬಂದ ಕೋತಿ

ಹೊಸ ಸೇರ್ಪಡೆ

salamanna-620×386

ಮಳೆ ಕೊರತೆಯಿಂದ ಬಾಡಿದ ಬೆಳೆ

ಸಚಿವ ಆರ್.ಅಶೋಕ್

ಕಾಂಗ್ರೆಸ್ ನದ್ದು ಜಾತಿ ಲೆಕ್ಕಾಚಾರ, ನಮ್ಮದು ಜಾತಿ ಇಲ್ಲದ ರಾಜಕಾರಣ: ಅಶೋಕ್

ನಾಡಿನ ಸಂಸ್ಕೃತಿ-ಸಂಸ್ಕಾರಗಳನ್ನು ಯುವ ಪೀಳಿಗೆಗೆ ಪರಿಚಯಿಸಬೇಕು: ವಿನೋದಾ ಡಿ. ಶೆಟ್ಟಿ

ನಾಡಿನ ಸಂಸ್ಕೃತಿ-ಸಂಸ್ಕಾರಗಳನ್ನು ಯುವ ಪೀಳಿಗೆಗೆ ಪರಿಚಯಿಸಬೇಕು: ವಿನೋದಾ ಡಿ. ಶೆಟ್ಟಿ

ವಾಲ್ಕೇಶ್ವರ ಶ್ರೀ ಕವಳೆ ಮಠ: ವಾರ್ಷಿಕ ಗಣೇಶೋತ್ಸವ ಸಂಪನ್ನ

ವಾಲ್ಕೇಶ್ವರ ಶ್ರೀ ಕವಳೆ ಮಠ: ವಾರ್ಷಿಕ ಗಣೇಶೋತ್ಸವ ಸಂಪನ್ನ

ಅರ್ಚಕರಿಗೆ, ದೇಗುಲ ನೌಕಕರಿಗೆ ಆರೋಗ್ಯ ವಿಮೆ ಜಾರಿಗೆ ಶೀಘ್ರ ಕ್ರಮ: ಶಶಿಕಲಾ ಜೊಲ್ಲೆ

ಅರ್ಚಕರಿಗೆ, ದೇಗುಲ ನೌಕಕರಿಗೆ ಆರೋಗ್ಯ ವಿಮೆ ಜಾರಿಗೆ ಶೀಘ್ರ ಕ್ರಮ: ಶಶಿಕಲಾ ಜೊಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.