ಮುಂಜಾನೆ ಮಾರುವೇಷ!


Team Udayavani, Jun 25, 2018, 11:55 AM IST

munjaane.jpg

ಸೂರ್ಯ ಹುಟ್ಟುವ ಮುಂಚಿನ ಮಬ್ಬುಗತ್ತಲಲ್ಲಿ ಆರಂಭವಾಗಿ ಬಿಸಿಲ ಕಿರಣಗಳು ಭೂಮಿ ಸ್ಪರ್ಶಿಸುವ ಹೊತ್ತಿಗಾಗಲೇ ಮುಗಿದು ಹೋಗುವುದೇ ಮಹಾನಗರದ ಮುಂಜಾನೆ ಮಾರುಕಟ್ಟೆ. ಸೂಪರ್‌ ಮಾರ್ಕೆಟ್‌ ಸಂಸ್ಕೃತಿ ಹಾಸುಹೊಕ್ಕಾಗಿರುವ ಸಿಲಿಕಾನ್‌ ಸಿಟಯಲ್ಲಿ ಈ ಮುಂಜಾನೆ ಮಾರುಕಟ್ಟೆಗಳಿಗೆ ಎಲ್ಲಿಲ್ಲದ ಬೇಡಿಕೆಯಿದೆ. ಪಾಲಿಕೆ ಗಡಿಗೆ ಹೊಂದಿಕೊಂಡಿರುವ ಜನವಸತಿ ಪ್ರದೇಶಗಳಲ್ಲಿ ಇಂತಹ ಮಾರುಕಟ್ಟೆಗಳ ಭರಾಟೆ ಹೆಚ್ಚು. ತಾಜಾ ತರಕಾರಿ, ಹಣ್ಣು ಸಿಗುವುದು ಇವುಗಳ ವಿಶೇಷ. ಮಹಾನಗರದ ನಾಲ್ಕೂ ದಿಕ್ಕಲ್ಲಿ ಕಾಣಸಿಗುವ ಇಂಥ ಮಾರುಕಟ್ಟೆಗಳ ಮಾಹಿತಿಯನ್ನು ಈ ಬಾರಿಯ “ಸುದ್ದಿ ಸುತ್ತಾಟ’ ಹೊತ್ತು ತಂದಿದೆ.

ಬೆಂಗಳೂರು: ಕತ್ತಲು ಕರಗಿ ಬೆಳಕು ಮೂಡುವ ಹೊತ್ತಿಗೆ ದಿಢೀರ್‌ ತೆರೆದುಕೊಳ್ಳುವ ಸಾಲು ಸಾಲು ಮಳಿಗೆಗಳು. ಸೀಸನ್‌ಗೆ ತಕ್ಕಂತೆ ಸಿಗುವ ತರಹೇವಾರಿ ತರಕಾರಿ, ಹಣ್ಣುಗಳು. ಗ್ರಾಂ, ಕೆ.ಜಿ., ಗುಡ್ಡೆ, ಕೈಯಳತೆ ತೂಕದಲ್ಲೂ ಬಿಕರಿಯಾಗುವ ತರಕಾರಿ. ಬಿಡುವಿಲ್ಲದಂತೆ ಕೂಗಿ ಕರೆದು, ಅಳೆದು ತೂಗುವ ವ್ಯಾಪಾರಿಗಳ ಮುಂದೆ ಗ್ರಾಹಕರ ಗುಂಪು. ಕೆಲವೇ ಗಂಟೆಗಳಲ್ಲಿ ಕರಗುವ ಹಣ್ಣು, ತರಕಾರಿ ಗುಡ್ಡೆ, ಕೊಂಡ ಕೂಡಲೇ ಜಾಗ ಕಾಲಿ ಮಾಡುವ ಗ್ರಾಹಕರು. ನಾಲ್ಕು ಅಥವಾ ಐದು ಗಂಟೆ ಕಳೆದರೆ ಮಳಿಗೆಗಳೂ ಮಾಯ!

ರಾಜಧಾನಿಯ ಬಹುತೇಕ ಕಡೆ, ಅದರಲ್ಲೂ ವಸತಿ ಬಡಾವಣೆ, ಎಕ್ಸ್‌ಟೆನ್ಷನ್‌ ಏರಿಯಾಗಳು, ಬಿಬಿಎಂಪಿ ಗಡಿ ಪ್ರದೇಶಕ್ಕೆ ಹೊಂದಿಕೊಂಡ ಬಡಾವಣೆ, ಅಪಾರ್ಟ್‌ಮೆಂಟ್‌ಗಳ ಸಮೂಹವಿರುವ ಪ್ರದೇಶಗಳಲ್ಲಿ ನಿತ್ಯ ಬೆಳಗ್ಗೆ ಈ ದೃಶ್ಯ ಸಾಮಾನ್ಯ. ಮಿನಿ ಟೆಂಪೋ ಇಲ್ಲವೇ ಸರಕು ಸಾಗಣೆ ಆಟೊಗಳಲ್ಲಿ ತಾಜಾ ತರಕಾರಿ, ಹಣ್ಣುಗಳನ್ನು ಹೊತ್ತು ಬರುವ ಸಂಚಾರಿ ಮಳಿಗೆಗಳು ಗಂಟೆಗಳಲ್ಲೇ ಭರ್ಜರಿ ವ್ಯಾಪಾರ ಮುಗಿಸಿ ಹೊರಡುತ್ತವೆ. ಈ ಸಂಚಾರಿ ಮಳಿಗೆಗಳಿಗೆ ಎಲ್ಲಿಲ್ಲದ ಬೇಡಿಕೆ.

10 ರೂ. ಬೆಲೆಯ ವಸ್ತುವಿಗೆ ಚೆಂದದ ಪ್ಯಾಕಿಂಗ್‌ ಮಾಡಿ 20 -30 ರೂ. ಬೆಲೆ ನಿಗದಿಪಡಿಸಿ, ಯಾವುದೇ ವ್ಯಾವಹಾರಿಕ ಮಾತುಕತೆ ಇಲ್ಲದೇ ನಡೆಸುವ “ಸೂಪರ್‌ ಮಾರ್ಕೆಟ್‌’ ವ್ಯವಹಾರ ಈಗ ಹೆಚ್ಚು ಪ್ರಚಲಿತ. ವಸ್ತುವಿನ ಬೆಲೆ ಪಟ್ಟಿ ನೋಡಿ ಖರೀದಿಸುವುದು ಮತ್ತು ರಿಯಾಯ್ತಿ ಲೆಕ್ಕಾಚಾರದಲ್ಲಿ ಆನ್‌ಲೈನ್‌ನಲ್ಲಿ ತರಕಾರಿ, ಹಣ್ಣು ಖರೀದಿಸುವ ಟ್ರೆಂಡ್‌ ಕೂಡ ಚಾಲ್ತಿಯಲ್ಲಿದೆ. ಈ ಸಾಂಸ್ಥಿಕ ಮಾರುಕಟ್ಟೆಯ ಯಾವುದೇ ಸ್ವರೂಪವಿಲ್ಲದೆ ತಾಜಾ ತರಕಾರಿ, ಹಣ್ಣುಗಳು ಕೈಗೆಟುಕುವ ದರದಲ್ಲಿ ಸಿಗುವ ಮೊಬೈಲ್‌ ಮಳಿಗೆಗಳು ಹೆಚ್ಚು ಜನಪ್ರಿಯವಾಗುತ್ತಿವೆ.

ಕೊತ್ತುಂಬರಿ ಸೊಪ್ಪಿನಿಂದ ಹಿಡಿದು ಕುಂಬಳಕಾಯಿವರೆಗೆ, ಬಾಳೇಹಣ್ಣಿನಿಂದ ಹಲಸಿನವರೆಗೆ ತಹರೇವಾರಿ ಹಣ್ಣು-ತರಕಾರಿ ಆನ್‌ಲೈನ್‌ನಲ್ಲೇ ಲಭ್ಯವಾಗುವ ದಿನಗಳಲ್ಲೂ ರಾಜಧಾನಿಯ ಬಹುತೇಕ ಭಾಗಗಳಲ್ಲಿ ಸಂತೆ ತನ್ನ ಅಸ್ತಿತ್ವ ಉಳಿಸಿಕೊಂಡು ಬಂದಿದೆ. ಇದೀಗ ರೈತರೇ ವ್ಯಾಪಾರದ ಅಖಾಡಕ್ಕಿಳಿದು ತಮ್ಮ ಉತ್ಪನ್ನಗಳಿಗೆ ತಾವೇ ಬೆಲೆ ನಿಗದಿಪಡಿಸಿಕೊಂಡು ನೇರವಾಗಿ ಗ್ರಾಹಕರಿಗೆ ಅವುಗಳನ್ನು ತಲುಪಿಸುವ ಕಾರ್ಯಕ್ಕೆ ಮುಂದಾಗಿದ್ದು, ಸ್ಪಂದನೆಯೂ ಉತ್ತಮವಾಗಿದೆ.

ರೈತರ ಉತ್ಪನ್ನಗಳಿಗೆ ಮಾರುಕಟ್ಟೆಗಳಲ್ಲಿ ಬಹುತೇಕ ಸಂದರ್ಭದಲ್ಲಿ ಉತ್ತಮ ಬೆಲೆ ದೊರೆಯುವುದಿಲ್ಲ. ಸಿಗುವ ಒಂದಿಷ್ಟು ಲಾಭವೂ ಮಧ್ಯವರ್ತಿಗಳ ಪಾಲಾಗುತ್ತದೆ ಎಂಬ ಮಾತಿದೆ. ಇನ್ನು ಎಪಿಎಂಸಿಗಳಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡಲು ಒಂದಿಷ್ಟು ಕಮೀಷನ್‌ ನೀಡಬೇಕು. ಮಾರಾಟದ ನಂತರವೂ ಹಣಕ್ಕಾಗಿ ಒಂದು ದಿನ ಕಾಯಬೇಕು. ಆ ಹಿನ್ನೆಲೆಯಲ್ಲಿ ಮಾರುಕಟ್ಟೆಗಳಿಂದ ವಿಮುಖವಾಗಿರುವ ರೈತರು ತಮ್ಮ ಉತ್ಪನ್ನಗಳನ್ನು ತಾವೇ ನೇರವಾಗಿ ಗ್ರಾಹಕರಿಗೆ ತಲುಪಿಸಲು ಮುಂದಾಗಿದ್ದಾರೆ. 

ಸ್ವಲ್ಪ ತ್ರಾಸು, ಅಧಿಕ ಲಾಭ: ರೈತರು ತಾವು ಬೆಳೆದ ಹಣ್ಣು-ತರಕಾರಿಯನ್ನು ಟೆಂಪೋ, ಟಂಟಂನಲ್ಲಿ ತುಂಬಿಕೊಂಡು ಫ‌ುಟ್‌ಪಾತ್‌, ರಸ್ತೆಬದಿ ಮಾರುವುದು ಕಷ್ಟವಾದರೂ ಉತ್ತಮ ಬೆಲೆ ಸಿಗುತ್ತಿದೆ. ಎಪಿಎಂಸಿ ಹಾಗೂ ಮಾರುಕಟ್ಟೆಗಳಿಗೆ ಹೋಲಿಸಿದರೆ, ತಾವೇ ನೇರವಾಗಿ ಮಾರುವುದರಿಂದ ಹೆಚ್ಚು ಲಾಭ ಪಡೆಯುತ್ತಿದ್ದಾರೆ. ಹಾಗಾಗಿ ಇಂತಹ ಪ್ರಯತ್ನ ಹೆಚ್ಚಾಗಿದೆ.

ವಿಮುಖವಾಗಲು ಕಾರಣವೇನು?: ಬಹುತೇಕ ರೈತರು ತಾವು ಬೆಳೆದ ಉತ್ಪನ್ನಗಳನ್ನು ಎಪಿಎಂಸಿಗೆ ಮಾರುತ್ತಾರೆ. ಮಾರುಕಟ್ಟೆಯಲ್ಲಿರುವ ಮಧ್ಯವರ್ತಿಗಳೆಲ್ಲಾ ಒಂದಾಗಿ ಆಯಾ ದಿನದ ಹಣ್ಣು-ತರಕಾರಿಗಳ ಬೆಲೆ ನಿಗದಿಪಡಿಸುತ್ತಾರೆ. ಇದರಿಂದ ರೈತರ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ರೈತರು ಪಡೆಯುವ ಹಣದಲ್ಲಿ ಎಪಿಎಂಸಿಯು ಶೇ.10ರಿಂದ ಶೇ. 15ರಷ್ಟು ಕಮೀಷನ್‌ ಪಡೆಯುತ್ತದೆ. ಜತೆಗೆ ತಕ್ಷಣ ಹಣ ರೈತರಿಗೆ ಸಿಗುವುದಿಲ್ಲ. ಇದರಿಂದಾಗಿ ರೈತರು ಮಾರುಕಟ್ಟೆಗಳಿಂದ ವಿಮುಖರಾಗುತ್ತಿದ್ದಾರೆ.

ಗ್ರಾಹಕರಿಗೆ ಸುಗ್ಗಿ: ರೈತರು ತಾವು ಬೆಳೆದು ನೇರವಾಗಿ ತಂದು ಮಾರಾಟ ಮಾಡುವುದರಿಂದ ಹಣ್ಣು, ತರಕಾರಿಗಳು ತಾಜಾತನದಿಂದ ಕೂಡಿರುತ್ತವೆ. ಒಂದೇ ಕಡೆ ಸಾಕಷ್ಟು ಬಗೆ ಬಗೆಯ ತರಕಾರಿಗಳು, ಬೇಕಾದ ಪ್ರಮಾಣದಲ್ಲಿ ಸಿಗುವುದರಿಂದ ಕಡಿಮೆ ದರದಲ್ಲಿ ದೊರೆಯುವುದರಿಂದ ಜನರು ಸಹ ಖರೀದಿಗೆ ಆಸಕ್ತಿ ತೋರುತ್ತಾರೆ. ಸಣ್ಣ ಹಾಗೂ ಬೀದಿಬದಿ ವ್ಯಾಪಾರಿಗಳು, ಮಾರುಕಟ್ಟೆ ಹಾಗೂ ಎಪಿಎಂಸಿಗೆ ಬದಲಾಗಿ ಈ ರೀತಿಯ ಮಾರಾಟಗಾರರಿಂದಲೇ ಖರೀದಿಸಿ ಸಗಟು ರೂಪದಲ್ಲಿ ಮಾರುತ್ತಾರೆ. ಇದೇ ಸೊಪ್ಪು, ತರಕಾರಿಯನ್ನು ವ್ಯಾಪಾರಿಗಳು ತುಸು ಲಾಭ ಇಟ್ಟುಕೊಂಡು ಹೆಚ್ಚಿನ ಬೆಲೆಗೆ ತಳ್ಳುಗಾಡಿಯಲ್ಲಿ ಮಾರುತ್ತಾರೆ.

ಬೆಳಗ್ಗೆ- ಸಂಜೆ ವ್ಯಾಪಾರ ಜೋರು: ಬನಶಂಕರಿ ದೇವಾಲಯ ಆಸುಪಾಸಿನಲ್ಲಿ ನಿತ್ಯ ಹಲವು ವಾಹನಗಳಲ್ಲಿ ಈ ರೀತಿಯ ವ್ಯಾಪಾರ ಬೆಳಗ್ಗೆ ನಡೆದಿರುತ್ತದೆ. ನಸುಕಿನಲ್ಲೇ ಸುತ್ತಮುತ್ತಲ ಪ್ರದೇಶಗಳಿಂದ ಆಗಮಿಸುವ ರೈತರು, ವ್ಯಾಪಾರಿಗಳು ಬಡಾವಣೆಗಳ ಉದ್ಯಾನ, ಆಟದ ಮೈದಾನ, ದೇವಸ್ಥಾನ, ಬಸ್‌ನಿಲ್ದಾಣ, ಶಾಲೆಗಳ ಬಳಿ ಪ್ರತಿಷ್ಠಾಪನೆಯಾಗಿ ವ್ಯಾಪಾರ ನಡೆಸುತ್ತಾರೆ. ಸಂಜೆ ವೇಳೆ ಕೆಲ ಗಾರ್ಮೆಂಟ್‌, ಕೈಗಾರಿಕಾ ಪ್ರದೇಶಗಳು, ಐಟಿಬಿಟಿ ಕಂಪೆನಿಗಳು, ದೇವಸ್ಥಾನಗಳು, ಮೆಟ್ರೋ ನಿಲ್ದಾಣಗಳ ಬಳಿಯೂ ಇದೇ ರೀತಿ ವ್ಯಾಪಾರ ನಡೆಯುತ್ತದೆ.

ಎಲ್ಲೆಲ್ಲಿಂದ ಬರುತ್ತಾರೆ?: ಕನಕಪುರ ರಸ್ತೆಯ ಹೊಸದೊಡ್ಡಿ, ಸೋಮನಹಳ್ಳಿ, ರಾವುಗೋಡ್ಲು, ವೀರಸಂದ್ರ, ನೆಲ್ಲಗುಳಿ, ರಘುವನಹಳ್ಳಿ, ಭೂತನಹಳ್ಳಿ, ಪರವನ ಪಾಳ್ಯ, ಹಾರೋಹಳ್ಳಿ, ಕನಕಪುರ, ಗಬ್ಟಾಡಿ, ಬೆಟ್ಟದಹಳ್ಳಿ ಕಾವಲು, ಗೊಲ್ಲಹಟ್ಟಿ ಕಾವಲು ಇತರೆ ಪ್ರದೇಶಗಳ ರೈತರು, ವ್ಯಾಪಾರಿಗಳು ದಕ್ಷಿಣ ಭಾಗದಲ್ಲಿ ವ್ಯಾಪಾರ ನಡೆಸುತ್ತಾರೆ. ರೈತರು, ಟೊಮ್ಯಾಟೋ, ಬೆಂಡೇಕಾಯಿ, ಮೂಲಂಗಿ, ಸೌತೆಕಾಯಿ, ಪಡವಲಕಾಯಿ, ಹಾಗಲಕಾಯಿ, ಬೆಂಡೇಕಾಯಿ, ಎಲೆಕೋಸು, ಸೊಪ್ಪು, ರೋಜಾ, ಸಂಪಿಗೆ, ಕನಕಾಂಬರ, ಮಲ್ಲಿಗೆ, ಹಲಸಿನ ಹಣ್ಣು, ತೆಂಗಿನಕಾಯಿ, ಮಾವು, ಸೀಬೆಹಣ್ಣು, ನೇರಳೆ ಸೇರಿದಂತೆ ಇತರೆ ಉತ್ಪನ್ನಗಳನ್ನು ತರುತ್ತಾರೆ. 

ಯಲಹಂಕ ಸಂತೆ ಜನಪ್ರಿಯ: ನಗರೀಕರಣದ ನಡುವೆಯೂ ರೈತ ಸಮಿತಿ ವತಿಯಿಂದ ಯಲಹಂಕದಲ್ಲಿ ನಡೆಯುವ ಸಂತೆ ಇಂದಿಗೂ ತನ್ನ ಮಹತ್ವ ಉಳಿಸಿಕೊಂಡು ಬಂದಿದ್ದು, ನಗರದ ಸುತ್ತಮುತ್ತಲ ಹಳ್ಳಿಗಳ ರೈತರು ತಾವು ಬೆಳೆದ ಬೆಳೆಗಳನ್ನು ಖುದ್ದು ಮಾರಾಟ ಮಾಡುತ್ತಾರೆ. ಪ್ರತಿ ಭಾನುವಾರ ಇಲ್ಲಿನ ರಸ್ತೆಗಳ ಅಕ್ಕಪಕ್ಕದಲ್ಲಿ ವ್ಯಾಪಾರ ಜೋರಾಗಿರುತ್ತದೆ. ರಸ್ತೆಯ ಪಕ್ಕದ ಬಿಡಾರಗಳಲ್ಲಿ ತರಕಾರಿ, ಹಣ್ಣು, ಆಹಾರ ಧಾನ್ಯಗಳನ್ನು ಸಾಲು ಸಾಲಾಗಿ ಜೋಡಿಸಿರುತ್ತಾರೆ. ಯಲಹಂಕ ಮುಖ್ಯರಸ್ತೆಯ 2 ಕಿ.ಮೀ.ವರೆಗೂ ಸಂತೆ ನಡೆಯುತ್ತದೆ. 

ದೇವನಹಳ್ಳಿ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ ಸೇರಿದಂತೆ ಬೆಂಗಳೂರು ಸುತ್ತಮುತ್ತಲ ರೈತರು ಆಗಮಿಸುತ್ತಾರೆ. ಅದರಂತೆ ಯಲಹಂಕ, ದೇವನಹಳ್ಳಿ, ಅಟ್ಟೂರು, ಬಿಎಸ್‌ಎಫ್, ಹಾರೋಹಳ್ಳಿ, ರಾಜಾನುಕುಂಟೆ, ವೀರಸಾಗರ, ಹೆಸರಘಟ್ಟ, ಬ್ಯಾಟರಾಯನ ಪುರ, ಹೆಬ್ಟಾಳ, ಆರ್‌.ಟಿ.ನಗರ ಭಾಗದ ಜನರು ಸಂತೆಗಳಿಗೆ ಭೇಟಿ ನೀಡಿ ಖರೀದಿಯಲ್ಲಿ ತೊಡಗುತ್ತಾರೆ.

ಯಶವಂತಪುರ ಸಂತೆ: ಯಶವಂತಪುರ ರೈಲ್ವೆ ನಿಲ್ದಾಣದ ಬಳಿ ಪ್ರತಿ ಭಾನುವಾರ ರೈತರು ಸಂತೆ ನಡೆಸಿಕೊಂಡು ಬಂದಿದ್ದಾರೆ. ನೆಲಮಂಗಲ ಅಕ್ಕ ಪಕ್ಕದ ಸೋಲೂರು, ಗುಡೇಮಾರನಹಳ್ಳಿ, ಸಿದ್ದನಹಳ್ಳಿ, ಟಿ.ಬೇಗೂರು, ತ್ಯಾಮಗೊಂಡ್ಲು, ಚಿಕ್ನಳ್ಳಿ, ಹುಲಿಪುರ, ಕಂಬದಕಲ್ಲು, ದಾಬಸ್‌ಪೇಟೆ, ಗೆದ್ನಳ್ಳಿ, ಸೂಲುಕುಂಟೆ, ಮಾಗಡಿ ತಾಲೂಕಿನ ಕುದೂರು ಹೋಬಳಿಯ ಸಿರಿಗಿರಿಪುರ, ಶಿವಗಂಗೆ, ತುಮಕೂರು, ಕುಣಿಗಲ…, ಅರಸೀಕೆರೆ ಸುತ್ತಲಿನ ಹಳ್ಳಿಗಳ ರೈತರು ಸೇರುತ್ತಾರೆ. ಸಮೀಪದ ಯಶವಂತಪುರ, ರಾಜಾಜಿನಗರ, ಪ್ರಕಾಶನಗರ, ಮಿಲ್ಕ್ ಕಾಲೋನಿ, ನಂದಿನಿ ಬಡಾವಣೆ, ಮಹಾಲಕ್ಷ್ಮೀ ಬಡಾವಣೆಯ ಜನರು ವಹಿವಾಟಿನಲ್ಲಿ ತೊಡಗುತ್ತಾರೆ. 

ಕೆ.ಆರ್‌.ಪುರ ಸಂತೆ: ಹಳೆ ಮದ್ರಾಸ್‌ ರಸ್ತೆಯ ಕೃಷ್ಣರಾಜಪುರದಲ್ಲಿ ಹತ್ತಾರು ವರ್ಷಗಳಿಂದ ಪ್ರತಿ ಮಂಗಳವಾರ ಸಂತೆ ನಡೆದುಕೊಂಡು ಬಂದಿದ್ದು, ವರ್ತೂರು, ಬೆಳ್ಳಂದೂರು, ಕುರುಬರಹಳ್ಳಿ, ಹೊಸಕೋಟೆ, ತವರೆಕೆರೆ, ಚಿಂತಾಮಣಿ, ಕೋಲಾರ, ನಂದಗುಡಿ ಸೇರಿದಂತೆ ಹಲವಾರು ಭಾಗಗಳಿಂದ ರೈತರು ತಮ್ಮ ಉತ್ಪನ್ನಗಳನ್ನು ತಂದು ಮಾರಾಟ ಮಾಡುತ್ತಾರೆ. ಕೆ.ಆರ್‌.ಪುರ ಹಾಗೂ ಮಹದೇವಪುರ ಭಾಗದ ಜನರು ಸಂತೆಯಲ್ಲಿ ಭಾಗಿಯಾಗುತ್ತಾರೆ. ಇಲ್ಲಿ ರೈತರೇ ತಮ್ಮ ಉತ್ಪನ್ನಗಳನ್ನು ನೇರವಾಗಿ ಮಾರಾಟ ಮಾಡುವುದರಿಂದ ಹೆಚ್ಚು ಲಾಭ ಅವರ ಕೈ ಸೇರುತ್ತದೆ. ಜತೆಗೆ ಗ್ರಾಹಕರಿಗೂ ಸ್ಪರ್ಧಾತ್ಮಕ ಬೆಲೆಯಲ್ಲಿ ಉತ್ಪನ್ನಗಳು ಸಿಗುತ್ತಿವೆ. ಇದು ಪರಸ್ಪರ ವಹಿವಾಟು ವೃದ್ಧಿಗೆ ಸಹಕಾರಿಯಾಗಿದೆ.

* ದೇವೇಶ ಸೂರಗುಪ್ಪ, ಜಯಪ್ರಕಾಶ್‌ ಬಿರಾದಾರ್‌

ಟಾಪ್ ನ್ಯೂಸ್

LS Polls: ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ಪ್ರಿಯಾಂಕಾ ಗಾಂಧಿ…? ವರದಿ ಹೇಳೋದೇನು

Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

3

Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಕೆಂಡದಂಥ ಬಿಸಿಲಿಗೆ ಬಳಲಿದ ಬೆಂಗಳೂರಿಗರು

Bengaluru: ಕೆಂಡದಂಥ ಬಿಸಿಲಿಗೆ ಬಳಲಿದ ಬೆಂಗಳೂರಿಗರು

Crime: ವಿಚ್ಛೇದನ ಪಡೆಯಲು ಬಯಸಿದ್ದ ಹೆಂಡತಿಯ ಕೊಂದ ಪತಿ ಬಂಧನ

Crime: ವಿಚ್ಛೇದನ ಪಡೆಯಲು ಬಯಸಿದ್ದ ಹೆಂಡತಿಯ ಕೊಂದ ಪತಿ ಬಂಧನ

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!

Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!

LS Polls: ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ಪ್ರಿಯಾಂಕಾ ಗಾಂಧಿ…? ವರದಿ ಹೇಳೋದೇನು

Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ

Sandalwood: ಧೀರೇನ್‌ ರೀ ಇಂಟ್ರೊಡಕ್ಷನ್‌

Sandalwood: ಧೀರೇನ್‌ ರೀ ಇಂಟ್ರೊಡಕ್ಷನ್‌

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Bengaluru: ಕೆಂಡದಂಥ ಬಿಸಿಲಿಗೆ ಬಳಲಿದ ಬೆಂಗಳೂರಿಗರು

Bengaluru: ಕೆಂಡದಂಥ ಬಿಸಿಲಿಗೆ ಬಳಲಿದ ಬೆಂಗಳೂರಿಗರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.