ಉಚಿತ ಪಾಸ್‌: ಜು.21ಕ್ಕೆ ಶಾಲಾ ಕಾಲೇಜು ಬಂದ್‌

Team Udayavani, Jul 17, 2018, 7:00 AM IST

ಬೆಂಗಳೂರು: ರಾಜ್ಯದ ಶಾಲಾ -ಕಾಲೇಜುಗಳ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌ ವಿತರಿಸಬೇಕು ಎಂದು ಆಗ್ರಹಿಸಿ ವಿವಿಧ ವಿದ್ಯಾರ್ಥಿ ಸಂಘಟನೆಗಳು ಜು.21ರಂದು ಶಾಲಾ ಕಾಲೇಜು ಬಂದ್‌ ನಡೆಸಿ ಸರ್ಕಾರದ ಮೇಲೆ ಒತ್ತಡ ಹೇರಲು ನಿರ್ಧರಿಸಿವೆ.

ಆಲ್‌ ಇಂಡಿಯಾ ಡೆಮಾಕ್ರಟಿಕ್‌ ಸ್ಟೂಡೆಂಟ್‌ ಆರ್ಗನೈಸೇಷನ್‌(ಎಐಡಿಎಸ್‌ಒ), ಆಲ್‌ ಇಂಡಿಯಾ ಡೆಮಾಕ್ರಟಿಕ್‌ ಯೂತ್‌ ಆರ್ಗನೈಸೇಷನ್‌(ಎಐಡಿವೈಎಸ್‌) ಹಾಗೂ ಆಲ್‌ ಇಂಡಿಯಾ ಮಹಿಳಾ ಸಾಂಸ್ಕೃತಿಕ ಸಂಘಟನೆ(ಎಐಎಂಎಸ್‌ಎಸ್‌) ಶಾಲಾ ಕಾಲೇಜು ಬಂದ್‌ಗೆ ಕರೆ ಕೊಟ್ಟಿದೆ.

ಎಬಿವಿಪಿ ಬೆಂಬಲ ಇಲ್ಲ: ವಿವಿಧ ಸಂಘಟನೆಗಳು ನೀಡಿರುವ ಶಾಲಾ ಕಾಲೇಜು ಬಂದ್‌ಗೆ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಬೆಂಬಲ ಸೂಚಿಸಿಲ್ಲ ಎಂದು ಎಬಿವಿಪಿ ಮುಖಂಡ ಜಯಪ್ರಕಾಶ್‌ ತಿಳಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ