ಕೋರಮಂಗಲ: ಚಲಿಸುತ್ತಿರುವ ಕಾರಿನಲ್ಲಿ ಯುವತಿಯ ಮೇಲೆ ಗ್ಯಾಂಗ್‌ರೇಪ್
Team Udayavani, Apr 25, 2017, 2:13 PM IST
ಬೆಂಗಳೂರು : ನಗರದಲ್ಲಿ ಇನ್ನೊಂದು ಗ್ಯಾಂಗ್ ರೇಪ್ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಕೋರಮಂಗಲದಲ್ಲಿ ಮಾರ್ಚ್ 30 ರಂದು ಚಲಿಸುತ್ತಿರುವ ಕಾರಿನಲ್ಲಿ ಉತ್ತರ ಭಾರತ ಮೂಲದ ಮಹಿಳೆಯ ಮೇಲೆ ನಾಲ್ವರು ನಿರಂತರ 4.30 ಗಂಟೆಗಳ ಕಾಲ ಗ್ಯಾಂಗ್ ರೇಪ್ ನಡೆಸಿದ ಬಗ್ಗೆ ಪ್ರಕರಣ ದಾಖಲಾಗಿದೆ.
ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದ ಮಹಿಳೆಯ ಮೇಲೆ ಮಧ್ಯರಾತ್ರಿ ಸಾಮೂಹಿಕವಾಗಿ ಅತ್ಯಾಚಾರ ಎಸಗಲಾಗಿದ್ದು, ನಾಲ್ವರು ಕಾಮುಕರು ಮಹಿಳೆಯನ್ನು ಕಾರಿನಲ್ಲಿ ವಿವಿಧೆಡೆ ಸುತ್ತಾಡಿಸಿ ಗ್ಯಾಂಗ್ ರೇಪ್ ಎಸಗಿದ್ದಾರೆ. ರಾತ್ರಿ 12.30 ರಿಂದ 5 ಗಂಟೆಯ ವರೆಗೆ ನಿರಂತರವಾಗಿ ಹೇಯ ಕೃತ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.
ಘಟನೆ ನಡೆದು 10 ದಿನಗಳ ಬಳಿಕ ಮಹಿಳೆ ಸ್ನೇಹಿತೆಯೊಂದಿಗೆ ಬಂದು ಕೋರಮಂಗಲ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಶಂಕಿತ ಆರೋಪಿಗಳಾದ ಕಾರು ಚಾಲಕ, ರಾಕೇಶ್, ನರಸಿಂಹ ಮತ್ತು ರಾಚಪ್ಪ ಎನ್ನುವವರಿಗಾಗಿ ಶೋಧ ಆರಂಭಿಸಿದ್ದಾರೆ.
ಇದೀಗ ಸಂತ್ರಸ್ತ ಮಹಿಳೆ ಊರಿಗೆ ತೆರಳಿದ್ದು, ದೂರು ನೀಡುವ ವೇಳೆ ಠಾಣೆಗೆ ಬಂದಿದ್ದ ಸ್ನೇಹಿತೆ ಕೂಡ ತನಿಖೆಗೆ ಸಹಕಾರ ನೀಡುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ಸಂತ್ರಸ್ತ ಮಹಿಳೆಗೆ ಈಗಾಗಲೇ ಮದುವೆಯಾಗಿದ್ದು, ಪತಿ ವಿಚ್ಛೇಧನ ನೀಡಿದ್ದಾರೆ.
ದೂರು ನೀಡುವ ಸಂದರ್ಭದಲ್ಲಿ ಗೊಂದಲದ ಹೇಳಿಕೆಗಳನ್ನು ನೀಡುತ್ತಿದ್ದರು. ಘಟನೆ ನಡೆದ ದಿನಾಂಕವೇ ಅವರಿಗೆ ಗೊತ್ತಿಲ್ಲ. ಮೊದಲಿಗೆ ಆರೋಪಿಗಳು ಅಪರಿಚಿತರು ಎನ್ನುತ್ತಿದ್ದರು. ಬಳಿಕ ದೂರಿನಲ್ಲಿ ಆರೋಪಿಗಳ ಹೆಸರು ಬರೆದಿದ್ದಾರೆ. ಆದರೆ, ದೂರಿನ್ವಯ ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ