ಕರುಣಾಜನಕ ಕಥೆಗಳು: ತಾಯಿ ಮುಖ ನೋಡುವ ಅವಕಾಶವೂ ಸಿಗಲಿಲ್ಲ

ಅಮ್ಮ-ಮಗನನ್ನು ದೂರ ಮಾಡಿದ ಮಹಾಮಾರಿ | ಆಕ್ಸಿಜನ್‌ ಸಿಗದೆ ಸ್ವ್ಯಾಬ್‌ ಕಲೆಕ್ಟರ್‌ ಸಾವು

Team Udayavani, Apr 25, 2021, 11:39 AM IST

ಕರುಣಾಜನಕ ಕಥೆಗಳು: ತಾಯಿ ಮುಖ ನೋಡುವ ಅವಕಾಶವೂ ಸಿಗಲಿಲ್ಲ

ಬೆಂಗಳೂರು: “ಯಾರಿಗೂ ಈ ರೀತಿ ಕಷ್ಟ ಬರಬಾರದು ಸರ್‌. ನಮ್ಮ ಶತ್ರುಗಳಿಗೂ ಈ ರೀತಿಯ ಪರಿಸ್ಥಿತಿ ಬರಬಾರದಿತ್ತು. ನನ್ನ ಮಗನಿಗೂ ಕೋವಿಡ್ ಪಾಸಿಟಿವ್‌ ಬಂದಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಅಮ್ಮ ಹೇಗಿದ್ದಾರೆ ಅಪ್ಪ ಎಂದು ಪೋನ್‌ನಲ್ಲಿ ಕೇಳುತ್ತಿದ್ದಾನೆ. ಅಯ್ಯೋ ದೇವರೇ, ಅವನಿಗೆ ನಿಮ್ಮ ಅಮ್ಮ ಇಲ್ಲ ಎಂದು ಹೇಗೆ ಹೇಳಲಿ’

ಹೀಗೆ. ಕೋವಿಡ್ ದಿಂದ ತನ್ನ ಪತ್ನಿಯನ್ನು ಕಳೆದುಕೊಂಡ ಪತಿ ಚಿತಾಗಾರದ ಬಳಿ ಶನಿವಾರ ಪತ್ನಿ ಮತ್ತು ಮಗನ ಸ್ಥಿತಿ ನೆನೆದು ಕಣ್ಣೀರಾದರು. ಕೋವಿಡ್ ಅಮ್ಮ -ಮಗನನ್ನು ದೂರ ಮಾಡಿದೆ. ಮಗ ಸಂಜಯ್‌ ಗಾಂಧಿ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕೊನೆ ಬಾರಿ ಹೆತ್ತತಾಯಿಯ ಮುಖ ನೋಡುವ ಅವಕಾಶವೂ ಮಗನಿಗಿಲ್ಲ. ಕರೆ ಮಾಡಿದಾಗೆಲ್ಲಾ ಅಪ್ಪ, ಅಮ್ಮ ಹೇಗಿದ್ದಾರೆ ಎಂದು ಕೇಳುತ್ತಾನೆ. ಏನೆಂದು ಹೇಳಲಿ ಎಂದು ಗೋಳಾಡಿದರು.

ಕೋವಿಡ್ ದೃಢಪಟ್ಟ ಹಿನ್ನೆಲೆಯಲ್ಲಿ ಪತ್ನಿಯನ್ನು ಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ, ಉಸಿ-ರಾಟದ ತೊಂದರೆಯಿಂದ ಸಾವನ್ನಪ್ಪಿದ್ದಾರೆ. ನನಗೆ ಮೂವರುಮಕ್ಕಳು. ಮಗಳಿಗೆ ಮದುವೆಯಾಗಿದೆ. ಎರಡನೇಯವನು ಆಸ್ಪತ್ರೆಯಲ್ಲಿದ್ದಾನೆ. ಇನ್ನೊಬ್ಬ ಮಗ ಇಲ್ಲೇ ಇದ್ದಾನೆ. ಅಂತ್ಯ ಸಂಸ್ಕಾರದ ಬಳಿಕ ಆಸ್ಪತ್ರೆ ಹತ್ತಿರ ಹೋಗಬೇಕು ಎಂದು ಕಣ್ಣೀರಾದರು.

“ನಾನು ನನ್ನ ತಮ್ಮನೇ ಅಮ್ಮನನ್ನು ಆಸ್ಪತ್ರೆಗೆ ಸೇರಿಸಿದ್ದೆವು. ಸ್ಯಾಚುರೇಷನ್‌ 92 ಇತ್ತು. ಆಸ್ಪತ್ರೆಯ ಒಳಗೆ ಅಮ್ಮನೇ ನಡೆದುಕೊಂಡು ಹೋದರು. ಐದು ದಿನಗಳಲ್ಲಿಸಾವನ್ನಪ್ಪಿದ್ದಾರೆ. ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ನೀಡಿಲ್ಲ. ತಮ್ಮನಿಗೆ ಇನ್ನೂ ಅಮ್ಮ ಮೃತಪಟ್ಟ ವಿಷಯ ಹೇಳಿಲ್ಲ.ಅವನಿಗೂ ಉಸಿರಾಟದ ತೊಂದರೆ ಇದೆ. ವಿಷಯ ತಿಳಿದರೆ ಸಮಸ್ಯೆ ಆಗಬಹುದು. ಅಮ್ಮ ಚೆನ್ನಾಗಿಯೇ ಇದ್ದಾರೆ ಎಂದು ಧೈರ್ಯ ತುಂಬುತ್ತಿದ್ದೇನೆ’ ಎಂದು ತಾಯಿಯನ್ನು ಕಳೆದುಕೊಂಡ ಮತ್ತೂಬ್ಬ ಮಗ ಚಿತಾಗಾರದ ಮುಂದೆ ಗೋಳಾಡಿದರು.

ಆರು ತಿಂಗಳ ಮಗುಗೂ ಜ್ವರ: ಮತ್ತೂಂದು ಪ್ರಕರಣದಲ್ಲಿ ಬಿಬಿಎಂಪಿನಿರ್ಲಕ್ಷ್ಯದ ಬಗ್ಗೆ ಮಹಿಳೆಯೊಬ್ಬರು ಆಕ್ರೋಶ ಹೊರಹಾಕಿದ್ದಾರೆ. “ಮೊದಲು ನೆಗಟಿವ್‌ ಅಂದರು. ನಂತರ ಮಗ, ಸೊಸೆ ಎಲ್ಲರಿಗೂ ಪಾಸಿಟಿವ್‌ಬಂತು. ಆರು ತಿಂಗಳ ಮಗುಗೂ ಜ್ವರ ಬಂದಿದೆ. ಬಿಯು ಸಂಖ್ಯೆ ನಾಲ್ಕು ದಿನ ಆದರೂ ಕೊಡಲಿಲ್ಲ. ಚಿಕಿತ್ಸೆಗಾಗಿ ಅಲೆದಾಡುವಂತಾಯಿತು ಎಂದು ಕಣ್ಣೀರಿಡುತ್ತಾ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೋವಿಡ್‌ ಚೆಕ್‌ ಮಾಡಿಸಿದಾಗ ಮೊದಲು ಪಾಸಿಟಿವ್‌ ಬಂದಿತ್ತು. ಕಿಮ್ಸ್ ಆಸ್ಪತ್ರೆಯಲ್ಲಿ ಯಾವುದೇ ಚಿಕಿತ್ಸೆ ನೀಡದೇನೆ ಒಂದು ಲಕ್ಷ ರೂ. ಹಣ ಪಡೆದಿದ್ದಾರೆ. ಆಮೇಲೆ ಬಿಬಿಎಂಪಿಗೆ ಹೋದರೆ ಉಚಿತವಾಗಿ ಆಗುತ್ತದೆ. ಅಲ್ಲಿಗೆ ಹೋಗಿ ಅಂದರು. ಬಿಬಿಎಂಪಿಗೆ ಹೋಗಿ ಆಯುಕ್ತರ ಆಪ್ತಸಹಾಯಕಿಯನ್ನು ಭೇಟಿ ಯಾಗಿ ಮಾತಾನಾಡಿದ್ದೆವು.  ಆದರೆ, ಬಿಯು ನಂಬರ್‌ ಬರಲೇ ಇಲ್ಲ ಎಂದು ದೂರಿದ್ದಾರೆ.

ನಮ್ಮ ಸೊಸೆ ಮತ್ತು ಮಗನಿಗೂ ಪಾಸಿಟಿವ್‌: ನಾಲ್ಕು ದಿನದ ಬಳಿಕ ಬಿಯು ನಂಬರ್‌ ಬಂತು. ಆಗ ವರದಿ ನೋಡಿದಾಗ ನೆಗೆಟಿವ್‌ ಬಂದಿತ್ತು. ಆಮೇಲೆ ನಮ್ಮ ಮಗನಿಗೆ ಹೆಚ್ಚು ಉಸಿರಾಟ ತೊಂದರೆ ಉಂಟಾಯಿತು. ಆಮೇಲೆಭಯಪಟ್ಟು ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿದ ಬಳಿಕಪಾಸಿಟಿವ್‌ ಬಂತು. ಆಗ ಬಿಬಿಎಂಪಿನವರು ಮನೆ ಫೋಟೋ ತೆಗಿಯೋಕೆ ಬಂದರು. ಈಗ ನಮ್ಮ ಸೊಸೆ ಮತ್ತು ಮಗನಿಗೂ ಪಾಸಿಟಿವ್‌ ಬಂದಿದೆ ಎಂದು ತಿಳಿಸಿದ್ದಾರೆ.

ನಮ್ಮ ಮನೆಯಲ್ಲಿ ಆರು ತಿಂಗಳ ಮಗು ಇದೆ. ಆ ಮಗುವಿಗೂ ಕೂಡ ಜ್ವರ ಬಂದಿದೆ. ತಾಯಿಇಲ್ಲದಿರುವುದರಿಂದ ಹಾಲು ಸಹ ಕುಡಿಯುತ್ತಿಲ್ಲ. ನಾವೇನುಮಾಡಬೇಕು. ನಮ್ಮ ಸಮಸ್ಯೆ ಯಾರ ಬಳಿ ಹೇಳಿಕೊಳ್ಳಬೇಕು. ಎಲ್ಲರೂ ಹಾಳಾಗೋಗಿ ಎಂದು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಮಹಿಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೋವಿಡ್ ವಾರಿಯರ್‌ಗೂ ಸಿಗಲಿಲ್ಲ ಹಾಸಿಗೆ :

ಕೋವಿಡ್ ವಾರಿಯರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೊರೊನಾ ಸೋಂಕಿತ ಮಹಿಳೆಯೊಬ್ಬರು ಹಾಸಿಗೆ ಹಾಗೂ ಆಕ್ಸಿಜನ್‌ ಸಿಗದೆ ಸಾವನ್ನಪ್ಪಿರುವ ಘಟನೆ ನಡೆದಿದೆ. ನಗರದ ಸ್ವ್ಯಾಬ್‌ ಕಲೆಕ್ಟರ್‌ ಗೀತಾ(35) ಕೋವಿಡ್ ಸೋಂಕಿನಿಂದ ಮೃತಪಟ್ಟ ಕೋವಿಡ್ ವಾರಿಯರ್‌. ಬಿಬಿಎಂಪಿ ಈಸ್ಟ್‌ ಝೊàನ್‌ನ ಮರ್ಫಿಟೌನ್‌ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ವಾಬ್‌ ಕಲೆಕ್ಟರ್‌ ಆಗಿದ್ದ ಗೀತಾ ಅವರಿಗೆ ಕಳೆದ ಒಂದು ವಾರದ ಹಿಂದೆ ಪಾಸಿಟಿವ್‌ ಆಗಿತ್ತು. ನಾಲ್ಕೈದು ಆಸ್ಪತ್ರೆಗಳಿಗೆ ಅಲೆದಾಡಿದರೂ ಹಾಸಿಗೆ ಸಿಕ್ಕಿರಲಿಲ್ಲ. ಕೊನೆಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಾಲ್ಕು ಗಂಟೆ ಕಾದ ಬಳಿಕ ಹಾಸಿಗೆಸಿಕ್ಕಿದೆ. ಅಷ್ಟರಲ್ಲಿ ಆಕ್ಸಿಜನ್‌ ಲೆವಲ್‌ ಕಡಿಮೆಯಾಗಿ, ಸಾವನ್ನಪ್ಪಿದ್ದಾರೆ. ಕೋವಿಡ್ ಪಾಸಿಟಿವ್‌ ಬಂದ ನಂತರ ಐಸಿಯು ಬೆಡ್‌ ಸಹ ನೀಡಿರಲಿಲ್ಲ. ಕೋವಿಡ್ ವಾರಿಯರ್‌ ಆಗಿ ಕೆಲಸ ನಿರ್ವಹಿಸುತ್ತಿದ್ದರೂ ಬಿಬಿಎಂಪಿಯಿಂದ ಸರಿಯಾದ ಗ್ಲೌಸ್‌, ಮಾಸ್ಕ್ ಕೊಡುತ್ತಿಲ್ಲ. ಮೃತ ಸೋಂಕಿತ ಮಹಿಳೆಗೆ ಎಂಟು ವರ್ಷದ ಮಗಳು ಇದ್ದಾಳೆ. ಮಗಳಿಗೆ ಯಾರು ದಿಕ್ಕು ಎಂದು ಸಂಬಂಧಿಕರು ಕಣ್ಣೀರು ಹಾಕಿದರು.

ಮಾವನ ಸಂಸ್ಕಾರಕ್ಕೆ ಬಡ್ಡಿಗೆ ಹಣ ತಂದ ಸೊಸೆ :

ಚಿತಾಗಾರದ ಸಿಬ್ಬಂದಿಗೆ ಹೆಚ್ಚು ಹಣ ನೀಡಿದರೆ ಅವರೇ ಎಲ್ಲಾ ಕೆಲಸ ಮಾಡುತ್ತಾರೆ. ಕಡಿಮೆ ದುಡ್ಡು ಕೊಟ್ರೆ ಎಲ್ಲವನ್ನೂ ನಮ್ಮ ಕೈಯಲ್ಲೇ ಮಾಡಿಸುತ್ತಾರೆ. ಉಚಿತ ಎಂದು ಬೋರ್ಡ್‌ ಹಾಕಿದ್ದಾರೆ. ಆದರೂ ಹಣ ಕೊಡಬೇಕು’ ಇದು, ಶನಿವಾರ ಕೋವಿಡ್  ದಿಂದ ಮಾವನನ್ನು ಕಳೆದುಕೊಂಡ ಮಹಿಳೆಯೊಬ್ಬರು ಚಿತಾಗಾರದ ಬಳಿ ಹೇಳಿದ್ದು. ತನ್ನ ಮಾವ ಕೋವಿಡ್ ಸೋಂಕಿನಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಅವರ ಅಂತ್ಯಸಂಸ್ಕಾರ ಮಾಡಲು ಯಲಹಂಕ ಚಿತಾಗಾರಕ್ಕೆ ಬಂದ ಮಹಿಳೆ ಅಲ್ಲಿ ಹಣ ಪೀಕುವ ವ್ಯವಸ್ಥೆ ಕಂಡು ಕಣ್ಣೀರು ಹಾಕಿದರು. ಕೊರೊನಾ ಸೋಂಕಿನಿಂದ ಮೃತಪಟ್ಟ ಮಾವನಸಂಸ್ಕಾರ ಮಾಡೋದಕ್ಕೆ ಆ್ಯಂಬುಲೆನ್ಸ್‌ ಚಾಲಕ ಐದು ಸಾವಿರ ರೂ. ಹಾಗೂ ಚಿತಾಗಾರದ ಸಿಬ್ಬಂದಿ ಮೂರು ಸಾವಿರ ರೂ. ಪಡೆದಿದ್ದಾರೆ. ಮೂರು ಸಾವಿರ ರೂ. ಕೊಟ್ಟರೂ ಮೃತದೇಹದ ಮೇಲಿನ ಪಿಪಿಇ ಕಿಟ್‌, ಶವದ ಮೇಲೆ ಹಾಕಿದ್ದ ಹೂವಿನ ಹಾರವನ್ನು ನಮ್ಮ ಕೈಯಲ್ಲೇ ಎತ್ತಿ ಬಿಸಾಕಿಸಿದರು. ಮಾವನ ಅಂತ್ಯ ಸಂಸ್ಕಾರಕ್ಕಾಗಿ ಫೈನಾನ್ಸರ್‌ ಹತ್ತಿರ ಹೋಗಿ 10 ಸಾವಿರ ರೂ. ಸಾಲ ತೆಗೆದುಕೊಂಡು ಬಂದಿದ್ದೇನೆ ಎಂದು ಹೇಳಿದರು.

ಟಾಪ್ ನ್ಯೂಸ್

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

11-

Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

KKRvsPBKS; Gautam Gambhir’s Heated Argument With Official

IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

4

ವಿಚ್ಛೇದನ ನೀಡದಿದ್ದರೆ ತಲೆಯನ್ನು ಕಡಿದು ಕುಕ್ಕರ್‌ನಲ್ಲಿ ಬೇಯಿಸುವೆ ಎಂದ ಪತಿ ವಿರುದ್ಧ FIR

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

Voting: ರಾಜಧಾನಿಯಲ್ಲಿ ಶಾಂತಿಯುತ ಮತದಾನ; ಬಿ.ದಯಾನಂದ್‌

Voting: ರಾಜಧಾನಿಯಲ್ಲಿ ಶಾಂತಿಯುತ ಮತದಾನ; ಬಿ.ದಯಾನಂದ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

11-

Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.