ದೂರು ದಾಖಲಾದರೆ ಶೀಘ್ರ ಕ್ರಮ

ಆರ್‌.ಆರ್‌.ನಗರ ಉಪ ಚುನಾವಣೆ ಅಗತ್ಯ ಸಿದ್ಧತೆಗಾಗಿ ತಂಡಗಳ ರಚನೆ

Team Udayavani, Oct 4, 2020, 11:36 AM IST

ದೂರು ದಾಖಲಾದರೆ ಶೀಘ್ರ ಕ್ರಮ

ಬೆಂಗಳೂರು: ರಾಜರಾಜೇಶ್ವರಿ ನಗರ ಉಪ ಚುನಾವಣೆಗೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಎಲೆಕ್ಷನ್‌ ವೇಳೆ ದೂರು ದಾಖಲಾದರೆ ತಕ್ಷಣ ಕ್ರಮಕೈಗೊಳ್ಳಲಾಗುವುದು ಎಂದು ಚುನಾವಣಾಧಿಕಾರಿಯೂ ಆದ ಪಾಲಿಕೆ ಆಯುಕ್ತ ಎನ್‌. ಮಂಜುನಾಥ್‌ ಪ್ರಸಾದ್‌ ತಿಳಿಸಿದ್ದಾರೆ.

ಆರ್‌.ಆರ್‌. ನಗರ ಉಪ ಚುನಾವಣೆ ಕುರಿತು ಪಾಲಿಕೆಆಯುಕ್ತರು, ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ನೇತೃತ್ವದಲ್ಲಿ ಮಲ್ಲೇಶ್ವರದ ಐಪಿಪಿ ಕಚೇರಿಯಲ್ಲಿ ಪೊಲೀಸ್‌ ಇಲಾಖೆ, ಅಬಕಾರಿ, ಆದಾಯ ತೆರಿಗೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಶನಿವಾರ ಸಭೆ ನಡೆಸಲಾಯಿತು.

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಆಯುಕ್ತರು, ಉಪ ಚುನಾವಣೆ ಸಂಬಂಧ ಎಲ್ಲ ರೀತಿಯ ಸಿದ್ಧತೆಗಳನ್ನು ಪಾಲಿಕೆ ಮಾಡಿಕೊಳ್ಳುತ್ತಿದ್ದು, ಚುನಾವಣೆ ವೇಳೆಯಾವುದೇ ದೂರು ಕೇಳಿ ಬಂದರೂ, ದೂರು ದಾಖಲಾದ24 ಗಂಟೆಗಳಒಳಗಾಗಿವಿಚಾರಣೆ ನಡೆಸಿ ವರದಿ ಪಡೆಯಲಾಗುವುದು ಎಂದರು.

ಎಲ್ಲ ರೀತಿಯ ಮಾಧ್ಯಮಗಳಿಂದ ‌ ದಾಖಲಾಗುವ ದೂರುಗಳನ್ನು 24 ಗಂಟೆಯನ್ನು ತನಿಖೆ ನಡೆಸಿ ವರದಿ ಸಲ್ಲಿಸುವುದಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಉಪ ಚುನಾವಣೆಗೆ ಸಂಬಂಧಿಸಿದಂತೆ 31 ನೋಡ‌ಲ್‌ ಅಧಿಕಾರಿಗ‌ಳು, 27 ಫ್ಲೈಯಿಂಗ್‌ ಸ್ಕ್ವಾಡ್‌, 10 ಸ್ಟಾಟಿಕ್‌ ಸ್ಕ್ವಾಡ್‌, 10 ಚಕ್‌ ಫೋಸ್ಟ್‌, ಐದು ವಿಡಿಯೋ ಸರ್ವೆಲೇನ್ಸ್‌, ವಿಡಿಯೋ ವೀಕ್ಷಣಾ ತಂಡ ‌ ರಚನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಆದಾಯ ತೆರಿಗೆ ಇಲಾಖೆ ಜತೆ ಸಮನ್ವಯತೆ ಸಾಧಿಸಲಾಗುವುದು. ಅಬಕಾರಿ ಇಲಾಖೆಯಿಂದಲೂ ತಂಡಗಳನ್ನು ರಚನೆ ಮಾಡಿ ತಪಾಸಣೆ ಮಾಡುವ ವ್ಯವಸ್ಥೆ ಮಾಡಿಕೊಳ್ಳಲಿದ್ದೇವೆ. ದೂರು ನೀಡಲು ಶೀಘ್ರ ಸಹಾಯವಾಣಿ ಸಂಖ್ಯೆ ಬಿಡುಗಡೆ ಮಾಡಲಾಗುವುದು. ಚುನಾವಣಾ ಆಯೋಗವೂ ಚುನಾ ವಣಾ ವೀಕ್ಷಕರನ್ನು ನಿಯೋಜನೆ ಮಾಡಲಿದೆ ಎಂದರು.

ಹೆಚ್ಚುವರಿ ಪೊಲೀಸ್‌ ಆಯುಕ್ತ ಸೌಮೇಂದು ಮುಖರ್ಜಿ ಮಾತನಾಡಿ, ಕೋವಿಡ್ ತಡೆಗೆರೂಪಿಸಿರುವ ನಿರ್ಬಂಧಗಳು ಚುನಾವಣೆಗೂ ಅನ್ವಯಿಸಲಿದೆ. ಹೀಗಾಗಿ, 100 ಜನಕ್ಕಿಂತ ಹೆಚ್ಚಿನ ಜನ ಸೇರಿ ಸಭೆ ಸೇರುವಂತಿಲ್ಲ. ನಿಯಮ ಉಲ್ಲಂಘಿಸಿದರೆ, ಕಾನೂನು ಕ್ರಮ ಕೈಗೊಳ್ಳಲಾಗುವುದು. ಮತಗಟ್ಟೆಗಳಸಂಖ್ಯೆ 381 ರಿಂದ 688 ಹೆಚ್ಚಿಸಲಾಗಿದೆ. ಇದರಲ್ಲಿ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆ ವಿಂಗಡಿಸಲಾಗುತ್ತಿದೆ ಎಂದರು.

ಈ ವೇಳೆ ವಿಶೇಷ ಆಯುಕ್ತ ಜೆ.ಮಂಜುನಾಥ್‌, ಆರ್‌.ಆರ್‌.ನಗರ ವಲಯದ ಜಂಟಿ ಆಯುಕ್ತ ನಾಗರಾಜ್‌ ಸೇರಿದಂತೆ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

ಶಿಕ್ಷೆಗೆ ಒಳಪಟ್ಟಿರುವ ಅಧಿಕಾರಿಗಳಿಗೆ ನಿರ್ಬಂಧ :  ಅಧಿಕಾರಿಗಳ ಪೈಕಿ ಯಾರಾದರೂ ಇಲಾಖಾ ವಿಚಾರಣೆಯಾಗಿ ಶಿಕ್ಷಗೆಒಳಪಟ್ಟಿದ್ದರೆ,ಚುನಾವಣಾ ಕಾರ್ಯದಲ್ಲಿ ಭಾಗವಹಿಸುವಂತಿಲ್ಲ. ಉಪ ಚುನಾವಣೆ ಕಾರ್ಯಕ್ಕೆ ನೇಮಿಸಲಾಗಿರುವ ಸಿಬ್ಬಂದಿಯಲ್ಲಿ ಯಾರಾದರೂ ಈ ರೀತಿ ಶಿಕ್ಷೆಗೆ ಒಳಪಟ್ಟಿದ್ದರೆ, ತಿಳಿಸುವಂತೆ ಸೂಚನೆ ನೀಡಲಾಗಿದೆ. ಇವರ ಜಾಗಕ್ಕೆ ಬೇರೆ ಅಧಿಕಾರಿಯನ್ನುನೇಮಕಮಾಡಲಾಗುವುದು ಎಂದು ಆಯುಕ್ತರು ಮಾಹಿತಿ ನೀಡಿದರು.

ಜನಪ್ರತಿನಿಧಿಗಳ ಭಿತ್ತ ಪತ್ರ ತೆರವಿಗೆ ಸೂಚನೆ :  ಆರ್‌. ಆರ್‌ ನಗರ ವ್ಯಾಪ್ತಿಯ ಬಸ್‌ ನಿಲ್ದಾಣ, ಶುದ್ಧಕುಯುವ ನೀರಿನ ಘಟಕ, ಉದ್ಯಾನ ಸೇರಿದಂತೆ ಯಾವುದೇಸಾರ್ವಜನಿಕ ಪ್ರದೇಶದಲ್ಲಿ  ಜನಪ್ರತಿನಿಧಿಗಳ ಭಾವಚಿತ್ರ, ಹೆಸರು ಇರುವ ಭಿತ್ತಿಪತ್ರಗಳು, ನಾಮಫ‌ಲಕಗಳು ಇದ್ದರೆ ತತಕ್ಷಣದಿಂದಲೇ ತೆರವುಗೊಳಿಸುವಂತೆ ಆಯುಕ್ತರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು

ಟಾಪ್ ನ್ಯೂಸ್

1ra

ಗೋವಾದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅಬ್ಬರದ ಪ್ರಚಾರ

Covid test

ಇಂದೂ ರಾಜ್ಯದಲ್ಲಿ 50  ಸಾವಿರದ ಸನಿಹದಲ್ಲಿ ಕೋವಿಡ್ ಕೇಸ್ : 22 ಸಾವು

1-fdsfsdf

35 ಯೂ ಟ್ಯೂಬ್ ಚಾನಲ್‌ಗಳನ್ನು ಬ್ಲಾಕ್ ಮಾಡಿದ ಭಾರತ ಸರಕಾರ

1-asfsd

ಬಂಡಾಯ ಅಭ್ಯರ್ಥಿಯಾದ ಪರ್ರಿಕರ್ ಪುತ್ರ : ನಾಚಿಕೆಗೇಡು ಎಂದ ಉತ್ಪಲ್

ರೈತರಿಗೆ ನ್ಯಾಯ ಒದಗಿಸುವ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿಯಿಲ್ಲ

ರೈತರಿಗೆ ನ್ಯಾಯ ಒದಗಿಸುವ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿಯಿಲ್ಲ: ಸಚಿವ ಭಗವಂತ್ ಖೂಬಾ

congress

ವೀಕೆಂಡ್ ಕರ್ಫ್ಯೂ ವಾಪಸ್ : ಟ್ವೀಟ್ ಮೂಲಕ ಕಾಂಗ್ರೆಸ್ ಆಕ್ರೋಶ

nirani

ಹೌದು,ನಾನು ಸೂಟ್ ಹೊಲಿಸಿಕೊಂಡಿದ್ದೇನೆ:ಯತ್ನಾಳ್ ಗೆ ನಿರಾಣಿ ತಿರುಗೇಟುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೂರು ತಿಂಗಳೊಳಗೆ ಬಿಬಿಎಂಪಿ ಚುನಾವಣೆ ನಡೆಸುತ್ತೇವೆ: ಸಚಿವ ಸೋಮಣ್ಣ

ಮೂರು ತಿಂಗಳೊಳಗೆ ಬಿಬಿಎಂಪಿ ಚುನಾವಣೆ ನಡೆಸುತ್ತೇವೆ: ಸಚಿವ ಸೋಮಣ್ಣ

1-wqqwe

ಬೈಕ್‌ ಟ್ಯಾಕಿಗೆ ಕಡಿವಾಣ ಹಾಕಲು ಆಟೋ ಚಾಲಕರ ಆಗ್ರಹ

arrested

ವಂಚನೆ: ಆಯೇಷಾ ಅಮಿನಾ ಟ್ರಸ್ಟ್‌ನ ಟ್ರಸ್ಟಿ ಸೆರೆ

rape

ಮ್ಯಾಟ್ರಿಮೋನಿಯಲ್‌ ಪರಿಚಯ: ಯುವತಿ ಖಾಸಗಿ ಫೋಟೋ ಸೆರೆಹಿಡಿದು ಬ್ಲ್ಯಾಕ್‌ಮೇಲ್

ರಾಜ್ಯಕ್ಕೆ ಶುಭ ಸುದ್ದಿ : 1200ಕೋ.ರೂ. ವೆಚ್ಚದಲ್ಲಿ ಶಿರಾಡಿ ಘಾಟ್ ರಸ್ತೆ ಮೇಲ್ದರ್ಜೆಗೆ

ರಾಜ್ಯಕ್ಕೆ ಶುಭ ಸುದ್ದಿ : 1200ಕೋ.ರೂ. ವೆಚ್ಚದಲ್ಲಿ ಶಿರಾಡಿ ಘಾಟ್ ರಸ್ತೆ ಮೇಲ್ದರ್ಜೆಗೆ

MUST WATCH

udayavani youtube

‘ಯೂಸ್ ಅಂಡ್ ಥ್ರೋ’ ಕೇಜ್ರಿವಾಲ್‍ಗಿಂತ ಚೆನ್ನಾಗಿ ಯಾರೂ ಮಾಡಲಾರರು

udayavani youtube

ತ್ಯಾಜ್ಯದಿಂದ ಗೊಬ್ಬರ ಹಲವು ಲಾಭ

udayavani youtube

ವಿದ್ಯುತ್ ದರ ಏರಿಕೆ ಅನಿವಾರ್ಯ: ಇಂಧನ ಸಚಿವ ಸುನಿಲ್ ಕುಮಾರ್

udayavani youtube

ಸಿಮೆಂಟ್ ರಿಂಗ್ ಬಳಸಿ ಯಶಸ್ವಿ ದಾಳಿಂಬೆ ಕೃಷಿ

udayavani youtube

‘ಅಮರ್ ಜವಾನ್ ಜ್ಯೋತಿ’ ರಾಷ್ಟ್ರೀಯ ಯುದ್ಧ ಸ್ಮಾರಕ ಜ್ವಾಲೆಯೊಂದಿಗೆ ವಿಲೀನಗೊಳ್ಳಲಿದೆ|

ಹೊಸ ಸೇರ್ಪಡೆ

arrested

ಮಂಗಳೂರು: ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ; ಇಬ್ಬರ ಬಂಧನ

1-rwr

ಭಟ್ಕಳ : ಕಂಟೈನರ್ ಗೆ ಹಿಂಬದಿಯಿಂದ ಢಿಕ್ಕಿಯಾದ ಅಂಬುಲೆನ್ಸ್ ;ರೋಗಿ ಪಾರು

ಎರತಯುಇಒಇಕಜಹಗ್

ಐತಿಹಾಸಿಕ ನೆಲೆಗಳ ಸಂರಕ್ಷ ಣೆ ಅಗತ್ಯ: ಎಡಿಸಿ ಬಾಲಕೃಷ್ಣ

eಟತಯುಯರಹ

ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ

1ra

ಗೋವಾದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅಬ್ಬರದ ಪ್ರಚಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.