Udayavni Special

ಎಸ್‌ಬಿಐಗೆ ಕರವೇ ಗಡುವು


Team Udayavani, Aug 10, 2017, 11:37 AM IST

sbi pic.jpg

ಬೆಂಗಳೂರು: ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾದ ಎಲ್ಲ ಶಾಖೆಗಳಲ್ಲಿ ಕನ್ನಡದಲ್ಲೇ ವ್ಯವಹಾರ, ಸಿಬ್ಬಂದಿ ನೇಮಕದಲ್ಲಿ ಕನ್ನಡಿಗರಿಗೆ ಆದ್ಯತೆ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆ
ಕಾರ್ಯಕರ್ತರು, ಬ್ಯಾಂಕ್‌ಗೆ ಈ ಸಂಬಂಧ ಒಂದು ತಿಂಗಳ ಗಡುವು ನೀಡಿದರು. ಟಿ.ಎ. ನಾರಾಯಣಗೌಡ ನೇತೃತ್ವದಲ್ಲಿ ಬ್ಯಾಂಕ್‌
ನ ಪ್ರಧಾನ ಕಚೇರಿ ಎದುರು ಬುಧವಾರ ಜಮಾವಣೆಗೊಂಡ ವೇದಿಕೆ ಕಾರ್ಯಕರ್ತರು, ಸ್ಥಳೀಯ ಭಾಷೆಯಲ್ಲಿಯೇ ಎಲ್ಲಾ ರೀತಿಯ
ವ್ಯವಹಾರ ನಡೆಸಬೇಕು ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ರೂಪಿಸಿರುವ ನಿಯಮ ಹೇಳುತ್ತದೆ. ಆದರೆ ನಿಯಮ ಸಮರ್ಪಕ ಪಾಲನೆ ಆಗುತ್ತಿಲ್ಲ. ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಿದ್ದು, ಇದು ಪ್ರಜಾಪ್ರಭುತ್ವದ ವಿರೋಧಿ ಧೋರಣೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ನಾರಾಯಣಗೌಡ, ಮುಂದಿನ ಒಂದು ತಿಂಗಳಲ್ಲಿ ಬ್ಯಾಂಕ್‌ನ ಎಲ್ಲಾ ವ್ಯವಹಾರಗಳನ್ನು ಕನ್ನಡದಲ್ಲಿಯೇ ಮಾಡಬೇಕು. ಕನ್ನಡಬಾರ 
ದವರನ್ನು ವರ್ಗಾವಣೆ ಮಾಡಿ ಅವರ ಸ್ಥಾನಕ್ಕೆ ಕನ್ನಡಿಗರನ್ನು ನೇಮಿಸಬೇಕು ಎಂದು ಗಡುವು ನೀಡಿದರು. ಎಟಿಎಂ, ಆನ್‌ಲೈನ್‌ ಹಾಗೂ ಮೊಬೈಲ್‌ ಸೇವೆಗಳು ಸೇರಿದಂತೆ ಎಸ್‌ಬಿಎಂನ ಎಲ್ಲಾ ಸೇವೆಗಳು ಕನ್ನಡದಲ್ಲಿ ಸಿಗುವಂತಾಗಬೇಕು. ಬ್ಯಾಂಕ್‌ನ ಎಲ್ಲಾ ಹಂತದ ಹುದ್ದೆಗಳ ನೇಮಕಾತಿಯಲ್ಲಿಯೂ ಕನ್ನಡಿಗರಿಗೆ ಅವಕಾಶ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಕನ್ನಡದ ಹಿರಿಯ ಸಾಹಿತಿಗಳ ನೇತೃತ್ವದಲ್ಲಿ ಸಮಿತಿ ರಚಿಸಿ. ಬ್ಯಾಂಕ್‌ ಗಳಲ್ಲಿ ಕನ್ನಡ ಅನುಷ್ಠಾನದ ಬಗ್ಗೆ ವರದಿ ತರಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ಎಸ್‌ಬಿಐನಲ್ಲಿ ಇಂಗ್ಲಿಷ್‌ ಮತ್ತು ಹಿಂದಿಯ ನಾಮಫ‌ಲಕ, ಸೂಚನೆಗಳು, ಪ್ರಕಟಣೆಗಳು, ಅರ್ಜಿ ನಮೂನೆಗಳಿಗೆ ಕನ್ನಡದಲ್ಲಿ ಯಾವ ವ್ಯವಹಾರವೂ ನಡೆಯುತ್ತಿಲ್ಲ ಎಂಬ ಆರೋಪಗಳು ಬರುತ್ತಿವೆ. ಚೆಕ್‌ ಪುಸ್ತಕಗಳಲ್ಲೂ ಇಂಗ್ಲಿಷ್‌ ಮತ್ತು ಹಿಂದಿ ಮಾತ್ರ ಇದೆ. ನೇಮಕಾತಿಯಲ್ಲೂ ಕನ್ನಡಿಗರನ್ನು ಕಡೆಗಣಿಸಿ ಅನ್ಯಭಾಷಿಕರನ್ನೇ ಹೆಚ್ಚಿನ ಸಂಖ್ಯೆಯಲ್ಲಿ ನೇಮಿಸಿಕೊಳ್ಳಲಾಗುತ್ತಿದೆ. ಉತ್ತರ ಭಾರತೀಯ
ನೌಕರರು ಕನ್ನಡ ಗ್ರಾಹಕರೊಂದಿಗೆ ಉದ್ಧಟತನದಿಂದ ವರ್ತಿಸುತ್ತಿದ್ದಾರೆ. ಕನ್ನಡ ನಾಡಿನಲ್ಲಿ ವ್ಯವಹರಿಸುವ ಎಸ್‌ಬಿಐ ಅಧಿಕಾರಿಗಳು ಕೂಡಲೇ ಕನ್ನಡ ವಿರೋಧಿ ಧೋರಣೆ ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಕನ್ನಡಕ್ಕೆ ಧಕ್ಕೆಯಾಗಿಲ್ಲ ರಾಜ್ಯದಲ್ಲಿರುವ ಎಸ್‌ಬಿಐನ ಎಲ್ಲಾ ಶಾಖೆಗಳಲ್ಲಿ ಕನ್ನಡ ಭಾಷೆಗೆ ಹೆಚ್ಚು ಅದ್ಯತೆ ನೀಡಲಾಗಿದೆ. ಅಲ್ಲದೆ, ನೇಮಕಾತಿಗಳಲ್ಲಿಯೂ ಕನ್ನಡಿಗರಿಗೆ ಸಮಾನ ಅವಕಾಶ ನೀಡಲಾಗುತ್ತಿದೆ. ಎಸ್‌ಬಿಐ ಪ್ರಕಟಿಸುವ ಕ್ಯಾಲೆಂಡರ್‌ಗಳೂ ಸಹ ಕನ್ನಡದಲ್ಲಿಯೇ ಪ್ರಕಟವಾಗುತ್ತಿವೆ. ಕನ್ನಡ ಭಾಷೆಗೆ ‌ದಕ್ಕೆಯಾಗುವುದಕ್ಕೆ ಅವಕಾಶ ನೀಡಿಲ್ಲ ಎಂದು ಮಾನವ ಸಂಪನ್ಮೂಲ ವಿಭಾಗದ ಸಹಾಯಕ ಪ್ರಧಾನ ವ್ಯವಸ್ಥಾಪಕ ವಾಸುದೇವ ಅಡಿಗ ಸ್ಪಷ್ಟನೆ ನೀಡಿದರು.

ಟಾಪ್ ನ್ಯೂಸ್

“ಜಾಗೃತ ಭಾರತ, ಸಮೃದ್ಧ ಭಾರತ”

ಜಾಗೃತ ಭಾರತ, ಸಮೃದ್ಧ ಭಾರತ

ffhjutgfd

ತುಮಕೂರು : ಮದುವೆ ಮಾಡಿಸುವಂತೆ ಡಿಸಿಗೆ ಅರ್ಜಿ ಸಲ್ಲಿಸಿದ ಯುವಕರು

ಇಂದಿನ ರಾಜಕಾರಣ ನನಗೆ ತೃಪ್ತಿ ಎನಿಸುತ್ತಿಲ್ಲ: ಬಸವರಾಜ ಹೊರಟ್ಟಿ

ಇಂದಿನ ರಾಜಕಾರಣ ನನಗೆ ತೃಪ್ತಿ ಎನಿಸುತ್ತಿಲ್ಲ: ಬಸವರಾಜ ಹೊರಟ್ಟಿ

ಇಂದು ಚಿರು ಹುಟ್ಟುಹಬ್ಬ: ಮೇಘನಾ ಹೊಸ ಸಿನಿಮಾ ಆರಂಭ

ಇಂದು ಚಿರು ಹುಟ್ಟುಹಬ್ಬ: ಮೇಘನಾ ಹೊಸ ಸಿನಿಮಾ ಆರಂಭ

bommai and siddaramaiah

ಒಂದೇ ಹೋಟೆಲ್ ನಲ್ಲಿದ್ದರೂ ಪರಸ್ಪರ ಭೇಟಿಯಾಗದ ಸಿಎಂ-ಮಾಜಿ ಸಿಎಂ!

ಗಂಗಾವತಿ: ಹೆಚ್ಚಳವಾಗುತ್ತಿರುವ ಅನಾಥ ವಯೋವೃದ್ಧರು, ಭಿಕ್ಷುಕರ ಸಂಖ್ಯೆ ಜಿಲ್ಲಾಡಳಿತ ಮೌನ

ಗಂಗಾವತಿ: ಹೆಚ್ಚಳವಾಗುತ್ತಿರುವ ಅನಾಥ ವಯೋವೃದ್ಧರು, ಭಿಕ್ಷುಕರ ಸಂಖ್ಯೆ ಜಿಲ್ಲಾಡಳಿತ ಮೌನ

shrikrishna gmail com movie review

ಶ್ರೀಕೃಷ್ಣ ಅಟ್‌ ಜಿಮೇಲ್‌. ಕಾಂ ಚಿತ್ರ ವಿಮರ್ಶೆ: ಫ್ಯಾಮಿಲಿ ಟೈಮ್‌ ನಲ್ಲಿ ಕೃಷ್ಣ ಸುಂದರ ಯಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

ಮಲೀನ ನೀರು ರಸೆಗೆ ಹರಿಯದಂತೆ ಕ್ರಮವಹಿಸಿ

8

ಗಿರಿಜನರೆಡೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ

ಸತತ ಮಳೆಗೆ ಮನೆ ಕುಸಿಯುವ ಭೀತಿ

ಸತತ ಮಳೆಗೆ ಮನೆ ಕುಸಿಯುವ ಭೀತಿ

4

ಚೈತನ್ಯ ಇನ್ಫಿನಿಟಿ ಲರ್ನ್ ರೋಹಿತ್‌ ಶರ್ಮ ರಾಯಭಾರಿ

3

ಕೊರೊನಾ ನಂತರ ಮಾನಸಿಕ ಸಮಸ್ಯೆ ಹೆಚ್ಚಳ

MUST WATCH

udayavani youtube

ಪರಸ್ಪರ ಮಜ್ಜಿಗೆ ಎರಚಿಕೊಂಡು ಗೌಳಿ ಬುಡಕಟ್ಟು ಸಮುದಾಯದಿಂದ ದಸರಾ ಆಚರಣೆ

udayavani youtube

ಟೀಂ ಇಂಡಿಯಾ ಮುಖ್ಯ ಕೋಚ್ ಸ್ಥಾನಕ್ಕೆ ದ್ರಾವಿಡ್ ನೇಮಕ

udayavani youtube

ಅಸಹಾಯಕ ಸ್ಥಿತಿಯಲ್ಲಿದ್ದ ವ್ಯಕ್ತಿ ಹಾಗೂ ಕೋತಿಯನ್ನು ರಕ್ಷಿಸಿ ಮಾದರಿಯಾದ ಯುವಕರು

udayavani youtube

ರಾಮನ ಹೆಸರಲ್ಲಿ ಅಧಿಕಾರಕ್ಕೆ ಬಂದವರಿಗೆ ಕುತ್ತು? ಮೈಲಾರಸ್ವಾಮಿ ಕಾರ್ಣಿಕ ನುಡಿ ಏನು ಗೊತ್ತಾ?

udayavani youtube

ಹುಮನಾಬಾದ್ ನಲ್ಲಿ ವಿಜಯ ದಶಮಿ ಸಂಭ್ರಮ : ನೋಡುಗರ ಗಮನ ಸೆಳೆದ ರಾವಣನ ಪ್ರತಿಕೃತಿ

ಹೊಸ ಸೇರ್ಪಡೆ

“ಜಾಗೃತ ಭಾರತ, ಸಮೃದ್ಧ ಭಾರತ”

ಜಾಗೃತ ಭಾರತ, ಸಮೃದ್ಧ ಭಾರತ

ಸೀತಾರಾಮ ಕೆದಿಲಾಯ ಅವರ ಗ್ರಾಮಯಾತ್ರೆಯ ವಿಶೇಷ ಸಾಕ್ಷ್ಯಚಿತ್ರ ‘ಪರಿಕ್ರಮ ಸಂತ’ ಅನಾವರಣ

ಸೀತಾರಾಮ ಕೆದಿಲಾಯ ಅವರ ಗ್ರಾಮಯಾತ್ರೆಯ ವಿಶೇಷ ಸಾಕ್ಷ್ಯಚಿತ್ರ ‘ಪರಿಕ್ರಮ ಸಂತ’ ಅನಾವರಣ

ಜಿಲ್ಲಾಧಿಕಾರಿ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮಕ್ಕೆ ತಹಶೀಲ್ದಾರ್‌ ಚಾಲನೆ

ಜನರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸಿಗಬೇಕು ಶಾಸಕ ಎಲ್‌.ಎನ್‌.ನಾರಾಯಣಸ್ವಾಮಿ

ffhjutgfd

ತುಮಕೂರು : ಮದುವೆ ಮಾಡಿಸುವಂತೆ ಡಿಸಿಗೆ ಅರ್ಜಿ ಸಲ್ಲಿಸಿದ ಯುವಕರು

ವಾರದಲ್ಲಿ ವಿದ್ಯುತ್ ಸಂಪರ್ಕಕ್ಕೆ  ಶಾಸಕ ಮಂಜುನಾಥ್ ಆದೇಶ

ವಾರದಲ್ಲಿ ವಿದ್ಯುತ್ ಸಂಪರ್ಕಕ್ಕೆ ಶಾಸಕ ಮಂಜುನಾಥ್ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.