Bengaluru: ಅಪಘಾತ ಗಲಾಟೆ: ಕಪಾಳಮೋಕ್ಷಕ್ಕೆ ವ್ಯಕ್ತಿ  ಬಲಿ


Team Udayavani, May 7, 2024, 1:30 PM IST

15

ಪ್ರಭುರಾಮ್‌ ಪ್ರಸಾದ್‌ (ಮೃತ ವ್ಯಕ್ತಿ), ಅನಿಲ್‌(ಬಂಧಿತ ಉದ್ಯಮಿ)

ಬೆಂಗಳೂರು: ಬೈಕ್‌ಗೆ ಕಾರು ಟಚ್‌ ಮಾಡಿದನ್ನು ಪ್ರಶ್ನಿಸಿದ ಸವಾರನಿಗೆ ರಿಯಲ್‌ ಎಸ್ಟೇಟ್‌ ಉದ್ಯಮಿಯೊಬ್ಬ ಕೋಪಗೊಂಡು ಕಪಾಳಮೋಕ್ಷ ಮಾಡಿದ್ದು, ಆತ ಮೃತಪಟ್ಟಿರುವ ಘಟನೆ ಕಾಡುಗೋಡಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬೆಳ್ತೂರು ಕಾಲೋನಿ ನಿವಾಸಿ ಪ್ರಭುರಾಮ್‌ ಪ್ರಸಾದ್‌ (33) ಮೃತ ವ್ಯಕ್ತಿ. ಕೃತ್ಯ ಎಸಗಿದ ರಿಯಲ್‌ ಎಸ್ಟೇಟ್‌ ಉದ್ಯಮಿ ಅನಿಲ್‌ನನ್ನು ಬಂಧಿಸಲಾಗಿದೆ.

ಕಾರು ಚಾಲಕನಾಗಿರುವ ಬೆಳ್ತೂರು ನಿವಾಸಿ ಪ್ರಭುರಾಮ್‌ ಪ್ರಸಾದ್‌, ಸಹೋದರಿ ಪುತ್ರ ಅಭಿಲಾಷ್‌ ಜತೆ ದ್ವಿಚಕ್ರ ವಾಹನದಲ್ಲಿ ಭಾನುವಾರ ಬೆಳ್ತೂರಿನಲ್ಲಿ ನಡೆಯುತ್ತಿದ್ದ ಜಾತ್ರೆಗೆ ಹೋಗಿದ್ದರು. ರಾತ್ರಿ 7 ಗಂಟೆಗೆ ವಾಪಸ್‌ ಬರುತ್ತಿದ್ದರು. ಮಾರ್ಗ ಮಧ್ಯೆ ದುರ್ಗಮ್ಮ ದೇವಾಲಯದ ಬಳಿ ದ್ವಿಚಕ್ರ ವಾಹನದಲ್ಲಿ ಏನೋ ಶಬ್ಧ ಬಂದಿದೆ. ಅದರಿಂದ ಅನುಮಾನಗೊಂಡ ಪ್ರಭುರಾಮ್‌ ಪ್ರಸಾದ್‌, ಬೈಕ್‌ಅನ್ನು ಪಕ್ಕಕ್ಕೆ ನಿಲುಗಡೆ ಮಾಡಿ ಪರಿಶೀಲಿಸುತ್ತಿದ್ದರು. ಈ ವೇಳೆ ಆರೋಪಿ ಅನಿಲ್‌ ಪತ್ನಿ ಕಾರು ಚಾಲನೆ ಮಾಡಿಕೊಂಡು ಬಂದಿದ್ದು, ಹಾರ್ನ್ ಮಾಡಿದ್ದಾರೆ. ಆದರೆ, ಪ್ರಭುರಾಮ್‌ ಪ್ರಸಾದ್‌ಗೆ ಕೇಳಿಸಿಲ್ಲ. ಹೀಗಾಗಿ ಬೈಕ್‌ಗೆ ಸಣ್ಣ ಪ್ರಮಾಣದಲ್ಲಿ ತಗುಲಿಸಿಕೊಂಡು ಹೋಗಿದ್ದಾರೆ. ಅದರಿಂದ ಕೋಪಗೊಂಡ ಪ್ರಭುರಾಮ್‌ ಪ್ರಸಾದ್‌, ಕಾರನ್ನು ಹಿಂಬಾಲಿಸಿ ಅಡ್ಡಗಟ್ಟಿ ಮಹಿಳೆಯನ್ನು ಪ್ರಶ್ನಿಸಿದ್ದಾನೆ. ಅದಕ್ಕೆ ಆಕೆ, ರಸ್ತೆಯಲ್ಲಿ ಮಾತನಾಡುವುದು ಬೇಡ. ಪಕ್ಕದಲ್ಲೇ ಮನೆ ಇದೆ ಬನ್ನಿ ಎಂದು ಹೇಳಿ ಹೋಗಿದ್ದಾರೆ. ಹಿಂದೆಯೇ ಮನೆಗೆ ಹೋದಾಗ, ಅಷ್ಟರಲ್ಲಿ ನಡೆದ ಘಟನೆಯನ್ನು ಮಹಿಳೆ ತನ್ನ ಪತಿ ಅನಿಲ್‌ಗೆ ವಿವರಿಸಿದ್ದರು. ಈ ವೇಳೆ ಅನಿಲ್‌ ಮತ್ತು ಪ್ರಭುರಾಮ್‌ ಪ್ರಸಾದ್‌ ನಡುವೆ ವಾಗ್ವಾದ ನಡೆದಿದೆ. ಅದು ವಿಕೋಪಕ್ಕೆ ಹೋದಾಗ, ಕೋಪಗೊಂಡ ಅನಿಲ್‌, ಪ್ರಭುರಾಮ್‌ ಪ್ರಸಾದ್‌ ಕಪಾಳಕ್ಕೆ ನಾಲ್ಕೈದು ಬಾರಿ ಹೊಡೆದಿದ್ದು, ಸ್ಥಳೀಯರು ಜಗಳ ಬಿಡಿಸಿದ್ದಾರೆ.

ಆ ನಂತರ ಮನೆಗೆ ಹೋಗಿ, ನೋವಿನಿಂದಲೇ ಮಲಗಿದ್ದ ಪ್ರಭುರಾಮ್‌ ಪ್ರಸಾದ್‌, ತಡರಾತ್ರಿ 1 ಗಂಟೆಗೆ ಮೃತಪಟ್ಟಿದ್ದಾನೆ. ಇತ್ತ ತಾಯಿ, ನೋವು ಹೇಗಿದೆ ಎಂದು ಪುತ್ರನನ್ನು ಕೇಳಲು ಹೋದಾಗ ಘಟನೆ ಬೆಳಕಿಗೆ ಬಂದಿದೆ.

ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಅನಿಲ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ವೃದ್ದ ತಂದೆ ತಾಯಿ ಬೀದಿಪಾಲು: ರಿಯಲ್‌ ಎಸ್ಟೇಟ್‌ ಉದ್ಯಮಿ ಅನಿಲ್‌ಕುಮಾರ್‌ ಪ್ರಭಾವಿ ವ್ಯಕ್ತಿಯಾಗಿದ್ದು, ತನ್ನ ದುರಹಂಕಾರದಿಂದ ಪ್ರಭುರಾಮ್‌ ಪ್ರಸಾದ್‌ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಇದರಿಂದಲೆ ಪ್ರಭು ಸಾವನ್ನಪ್ಪಿದ್ದಾನೆ. ಮೃತನ ತಂದೆ ತಾಯಿ ವೃದ್ಧರಾಗಿದ್ದು, ಮನೆ ಮಗನ ಕಳೆದುಕೊಂಡು ಬೀದಿ ಪಾಲಗಿದ್ದಾರೆ ಎಂದು ಬೆಳತ್ತೂರು ನಿವಾಸಿ ಪರಮೇಶ ಆರೋಪಿಸಿದರು.

ಟಾಪ್ ನ್ಯೂಸ್

Modi Interview

24 ವರ್ಷ 101 ಬಾರಿ ಬೈಗುಳ: ವಿಪಕ್ಷಗಳ ಕುರಿತು ಪಿಎಂ ಮೋದಿ ಹೇಳಿದ್ದೇನು?

arrested

Madhya Pradesh ಶಾಲೆಗಳಲ್ಲಿ 100 ಕೋಟಿ ರೂ. ಪುಸ್ತಕ ಹಗರಣ: 20 ಪ್ರಾಂಶುಪಾಲರ ಬಂಧನ

penPen Drive Case ಪ್ರಜ್ವಲ್‌ ವಿಡಿಯೋ ಮಾಡಿರುವುದು ಎಲ್ಲಿಂದ?: ಪತ್ತೆಗಿಳಿದ ಎಸ್‌ಐಟಿ

Pen Drive Case ಪ್ರಜ್ವಲ್‌ ವಿಡಿಯೋ ಮಾಡಿರುವುದು ಎಲ್ಲಿಂದ?: ಪತ್ತೆಗಿಳಿದ ಎಸ್‌ಐಟಿ

1-qweqweqw

Everest ಪರ್ವತ ತಪ್ಪಲಲ್ಲಿ ಈಗ ಟ್ರಾಫಿಕ್‌ ಜಾಮ್‌

ಮಳೆಗಾಲದ ಸಂಭಾವ್ಯ ಸವಾಲು ಎದುರಿಸಲು ಮೆಸ್ಕಾಂ ಇಲಾಖೆ ಸಜ್ಜು

ಮಳೆಗಾಲದ ಸಂಭಾವ್ಯ ಸವಾಲು ಎದುರಿಸಲು ಮೆಸ್ಕಾಂ ಇಲಾಖೆ ಸಜ್ಜು

1-wqewew

Odisha; ನಡುಗುತ್ತಿದ್ದ ಪಟ್ನಾಯಕ್‌ ಅವರ ಕೈ ಎಳೆದ ಪಾಂಡ್ಯನ್‌: ಬಿಜೆಪಿಯಿಂದ ಲೇವಡಿ

Devarajegowda ಜಾಮೀನು ಅರ್ಜಿ ವಿಚಾರಣೆ ಇಂದು

Devarajegowda ಜಾಮೀನು ಅರ್ಜಿ ವಿಚಾರಣೆ ಇಂದು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12

Violation of road rules: ಸದಾಶಿವನಗರಠಾಣೆ ವ್ಯಾಪ್ತಿಯಲ್ಲೇ 5 ತಿಂಗಳಲ್ಲಿ 1 ಲಕ್ಷ ಕೇಸ್‌!

Bengaluru: ನಟ ಧ್ರುವ ಸರ್ಜಾ ಜಿಮ್‌ ತರಬೇತುದಾರನ ಮೇಲೆ ಹಲ್ಲೆ

Bengaluru: ನಟ ಧ್ರುವ ಸರ್ಜಾ ಜಿಮ್‌ ತರಬೇತುದಾರನ ಮೇಲೆ ಹಲ್ಲೆ

10

Rave party: ನಟಿ ಹೇಮಾ ಸೇರಿ 8 ಮಂದಿ ವಿಚಾರಣೆಗೆ ಗೈರು

Arrested: ಹಿಟ್‌ ಆ್ಯಂಡ್‌ ರನ್‌ ಕೇಸ್‌; 4 ತಿಂಗಳ ಬಳಿಕ ಆರೋಪಿಗಳ ಸೆರೆ

Arrested: ಹಿಟ್‌ ಆ್ಯಂಡ್‌ ರನ್‌ ಕೇಸ್‌; 4 ತಿಂಗಳ ಬಳಿಕ ಆರೋಪಿಗಳ ಸೆರೆ

7

Bengaluru: ಮೊಬೈಲ್‌ ದೋಚುತ್ತಿದ್ದ ಇಬ್ಬರ ಬಂಧನ

MUST WATCH

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

ಹೊಸ ಸೇರ್ಪಡೆ

Modi Interview

24 ವರ್ಷ 101 ಬಾರಿ ಬೈಗುಳ: ವಿಪಕ್ಷಗಳ ಕುರಿತು ಪಿಎಂ ಮೋದಿ ಹೇಳಿದ್ದೇನು?

arrested

Madhya Pradesh ಶಾಲೆಗಳಲ್ಲಿ 100 ಕೋಟಿ ರೂ. ಪುಸ್ತಕ ಹಗರಣ: 20 ಪ್ರಾಂಶುಪಾಲರ ಬಂಧನ

penPen Drive Case ಪ್ರಜ್ವಲ್‌ ವಿಡಿಯೋ ಮಾಡಿರುವುದು ಎಲ್ಲಿಂದ?: ಪತ್ತೆಗಿಳಿದ ಎಸ್‌ಐಟಿ

Pen Drive Case ಪ್ರಜ್ವಲ್‌ ವಿಡಿಯೋ ಮಾಡಿರುವುದು ಎಲ್ಲಿಂದ?: ಪತ್ತೆಗಿಳಿದ ಎಸ್‌ಐಟಿ

IMD

Pakistan; ತಾಪ 52 ಡಿಗ್ರಿ: ಆರ್ಥಿಕ ಸಂಕಷ್ಟದ ನಡುವೆ ಏರಿದ ಬಿಸಿಲು

1-qweqweqw

Everest ಪರ್ವತ ತಪ್ಪಲಲ್ಲಿ ಈಗ ಟ್ರಾಫಿಕ್‌ ಜಾಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.