ಅಂತರ ಕಾಯ್ದುಕೊಂಡು ಮಾವು-ಹಲಸು ಮೇಳ

ಮೇ 15- 20ರೊಳಗೆ ಮೇಳ ಆಯೋಜನೆಗೆ ಚಿಂತನೆ; 10 ಕೋಟಿ.ರೂ.ಗಳ ವ್ಯಾಪಾರ ವಹಿವಾಟು ನಿರೀಕ್ಷೆ

Team Udayavani, May 9, 2020, 10:35 AM IST

ಅಂತರ ಕಾಯ್ದುಕೊಂಡು ಮಾವು-ಹಲಸು ಮೇಳ

ಸಾಂದರ್ಭಿಕ ಚಿತ್ರ

ಬೆಂಗಳೂರು: ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣಾ ಸಂಘ (ಹಾಪ್‌ ಕಾಮ್ಸ್) ಸಾಮಾಜಿಕ ಅಂತರ ಕಾಯ್ದುಕೊಂಡು ಶೀಘ್ರದಲ್ಲೇ ಮಾವು ಮತ್ತು ಹಲಸಿನ ಮೇಳ ನಡೆಸಲು ತೀರ್ಮಾನಿಸಿದೆ. ಮೇ 15ರಿಂದ 20ರ ಒಳಗೆ ಮೇಳ ಆಯೋಜಿಸುವ ಕುರಿತು ಹಾಪ್‌ಕಾಮ್ಸ್ ನಿರ್ಧರಿಸಿದ್ದು, ತಿಂಗಳ ಕಾಲ ಬೆಂಗಳೂರಿನ ಈಗಿರುವ ಸುಮಾರು 220 ಮಳಿಗೆಗಳಲ್ಲೂ ಶೇ. 10ರ ರಿಯಾಯ್ತಿ ದರದಲ್ಲಿ ಮಾವು ಮತ್ತು ಹಲಸಿನ ಹಣ್ಣಿನ ಮಾರಾಟ ಪ್ರಕ್ರಿಯೆ ನಡೆಯಲಿದೆ.

ಪ್ರತಿ ವರ್ಷ ಹಾಪ್‌ಕಾಮ್ಸ್ ಮೇ 15ರ ಒಳಗೆ ಮೇಳ ಆರಂಭಿಸುತ್ತದೆ. ಈ ವರ್ಷ ಕೊರೊನಾ ಹಿನ್ನೆಲೆಯಲ್ಲಿ ಮಾರಾಟ ಪ್ರಕ್ರಿಯೆಯಲ್ಲಿ ಎಚ್ಚರವಹಿಸಲಾಗಿದ್ದು ಸಾಮಾಜಿಕ ಅಂತರದಲ್ಲಿ ಮಾವು ಮತ್ತು ಹಲಸಿನ ಹಣ್ಣುಗಳ ಮಾರಾಟ ನಡೆಯಲಿದೆ. ಈಗಾಗಲೇ ರಾಮನಗರ, ಚನ್ನಪಟ್ಟಣ ಹಾಗೂ ಬೆಂಗಳೂರು ಗ್ರಾಮಾಂತರ ಕೆಲ ಭಾಗಗಳಲ್ಲಿ ವಿವಿಧ ರೀತಿಯ ಮಾವು ಬಂದಿದೆ. ಇನ್ನೂ ಕೆಲವೇ ದಿನಗಳಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಸೇರಿ ಮತ್ತಿತರರ ಭಾಗದಲ್ಲಿ ಮತ್ತಷ್ಟು ಮಾವು ಬರಲಿದೆ ಎಂದು ಹಾಪ್‌ ಕಾಮ್ಸ್ ಅಧಿಕಾರಿಗಳು ಹೇಳಿದ್ದಾರೆ.

10 ಕೋಟಿ ವಹಿವಾಟು ನಿರೀಕ್ಷೆ: ಕಳೆದ ಬಾರಿಯ ಮೇಳದಲ್ಲಿ ಸುಮಾರು 750 ಟನ್‌ ಮಾವು ಮಾರಾಟವಾಗಿ 8 ಕೋಟಿ ರೂ.ವಹಿವಾಟು ನಡೆದಿತ್ತು. ಈ ಬಾರಿ ಸುಮಾರು 10 ಕೋಟಿ ರೂ. ವಹಿವಾಟು ನಿರೀಕ್ಷೆ ಮಾಡಲಾಗಿದೆ ಎಂದು ಹಾಪ್‌ ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ ಬಿ.ಎನ್‌. ಪ್ರಸಾದ್‌ ಹೇಳಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಮುಂಜಾಗ್ರತೆ ವಹಿಸಲಾಗುವುದು. ಸಾಮಾಜಿಕ ಅಂತರದ ಜತೆಗೆ ಸ್ಯಾನಿಟೈಸ್‌ ವ್ಯವಸ್ಥೆ ಮಾಡಲಾಗುವುದು. ಕೊರೊನಾ ಹಿನ್ನೆಲೆಯಲ್ಲಿ ಸಾಫ್ಟ್ ವೇರ್‌ ಕಂಪನಿಗಳು, ಕೆಲವು ಕಾರ್ಖಾನೆಗಳು ಬಂದ್‌ ಆಗಿವೆ.

ಕಳೆದ ಬಾರಿ ಸಾಫ್ಟ್ವೇರ್‌ ಸಂಸ್ಥೆ ಮತ್ತು ಕಾರ್ಖಾನೆಗಳಲ್ಲೂ ಉತ್ತಮ ವ್ಯಾಪಾರ ನಡೆದಿತ್ತು ಎಂದು ತಿಳಿಸಿದ್ದಾರೆ. ಮೊಬೈಲ್‌ ವಾಹನಗಳಲ್ಲಿ ಮಾರಾಟ:ಈ ಬಾರಿ ಸುಮಾರು 40 ಮೊಬೈಲ್‌ ವಾಹನಗಳಲ್ಲಿ ಮಾವು ಮತ್ತು ಹಲಸಿನ ಹಣ್ಣಿನ ಮಾರಾಟ ಪ್ರಕ್ರಿಯೆ ನಡೆಯಲಿದೆ. ಬಾದಾಮಿ, ಸೇಂದೂರ, ರಸಪುರಿ, ಅಮ್ರಪಾಲಿ, ತೋತಾಪುರಿ, ಕೇಸರಿ, ಮಲ್ಲಿಕಾ, ಮಲಗೋವಾ, ಸಕ್ಕರೆ ಗುತ್ತಿ, ಕಾಲಾಪಾಡು, ದಶೇರಿ, ರುಮೇನಿಯಾ, ನೀಲಂ ಇನ್ನೂ ಅನೇಕ ರೀತಿಯ ಹಣ್ಣುಗಳು ಮೇಳದಲ್ಲಿ ದೊರೆಯಲಿವೆ.

ಕೋವಿಡ್ ಹಿನ್ನೆಲೆಯಲ್ಲಿ ರಸ್ತೆ ಬದಿಯಲ್ಲಿ ಮಾವಿನ ಹಣ್ಣಿನ ಮಾರಾಟ ನಡೆಯುತ್ತಿಲ್ಲ. ಹೀಗಾಗಿ, ಸಾಮಾಜಿಕ ಅಂತರವನ್ನು ಕಾಯ್ದು ಕೊಂಡು ಮಾವು-ಹಲಸಿನ ಮೇಳ ನಡೆಸಲಾಗುವುದು. ಆ ಹಿನ್ನೆಲೆಯಲ್ಲಿ ಸುಮಾರು 10 ಕೋಟಿ. ರೂ.ಗಳ ವಹಿವಾಟು ನಿರೀಕ್ಷಿಸಲಾಗಿದೆ.
● ಬಿ.ಎನ್‌.ಪ್ರಸಾದ್‌,  ಹಾಪ್‌ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕರು

ಟಾಪ್ ನ್ಯೂಸ್

ದಿಲ್ಲಿಯಲ್ಲಿ ಮೆರೆದ ಉಡುಪಿ ವಿದ್ಯಾರ್ಥಿಗಳ ಕಂಗೀಲು ನೃತ್ಯ

ದಿಲ್ಲಿಯಲ್ಲಿ ಮೆರೆದ ಉಡುಪಿ ವಿದ್ಯಾರ್ಥಿಗಳ ಕಂಗೀಲು ನೃತ್ಯ

ನಾನಾಗಿಯೇ ಮಾತನಾಡಲ್ಲ, ಅವರಾಗಿ ಬಂದರೆ ಮಾತನಾಡುವೆ: ಸಿದ್ದರಾಮಯ್ಯ

ನಾನಾಗಿಯೇ ಮಾತನಾಡಲ್ಲ, ಅವರಾಗಿ ಬಂದರೆ ಮಾತನಾಡುವೆ: ಸಿದ್ದರಾಮಯ್ಯ

ಆಟಗಾರನಾಗಿ ಕಣಕ್ಕಿಳಿದ ಕ್ರಿಕೆಟ್‌ ಕೋಚ್‌!

ಆಟಗಾರನಾಗಿ ಕಣಕ್ಕಿಳಿದ ಕ್ರಿಕೆಟ್‌ ಕೋಚ್‌!

astrology today

ಗುರುವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹ ಬಲ

3,026 ಗ್ರಾ.ಪಂ.ನಲ್ಲಿ “ಗ್ರಾಮ ಒನ್‌’ ಯೋಜನೆ

3,026 ಗ್ರಾ.ಪಂ.ನಲ್ಲಿ “ಗ್ರಾಮ ಒನ್‌’ ಯೋಜನೆ

ಎಲೆಮರೆಯ ಕಾಯಿಯಂತಿದ್ದ ಸಾಧಕರಿಗೆ ಸಿಕ್ಕಿತು ಫ‌ಲ!

ಎಲೆಮರೆಯ ಕಾಯಿಯಂತಿದ್ದ ಸಾಧಕರಿಗೆ ಸಿಕ್ಕಿತು ಫ‌ಲ!

ಗೋಕಳ್ಳತನ ತಡೆಗೆ ನಿರ್ದಾಕ್ಷಿಣ್ಯ ಕ್ರಮ; ಪೊಲೀಸರಿಗೆ ಸಚಿವ ಸುನಿಲ್‌ ಸೂಚನೆ

ಗೋಕಳ್ಳತನ ತಡೆಗೆ ನಿರ್ದಾಕ್ಷಿಣ್ಯ ಕ್ರಮ; ಪೊಲೀಸರಿಗೆ ಸಚಿವ ಸುನಿಲ್‌ ಸೂಚನೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತೆರಿಗೆ ಬಾಕಿ ಉಳಿಸಿಕೊಂಡವರಿಗೆ ನೋಟಿಸ್‌ ನೀಡಿ : ಅಧಿಕಾರಿಗಳಿಗೆ ಗೌರವ್‌ ಗುಪ್ತ ತಾಕೀತು

ತೆರಿಗೆ ಬಾಕಿ ಉಳಿಸಿಕೊಂಡವರಿಗೆ ನೋಟಿಸ್‌ ನೀಡಿ : ಅಧಿಕಾರಿಗಳಿಗೆ ಗೌರವ್‌ ಗುಪ್ತ ತಾಕೀತು

ಚಿನ್ನ ಪಡೆದು ದುಡ್ಡು ಕೊಡುವ ನೆಪದಲ್ಲಿ ವ್ಯಕ್ತಿಯನ್ನೇ ಕೊಂದು ಕೆರೆಗೆ ಎಸೆದರು

ಚಿನ್ನ ಕೊಟ್ಟು ದುಡ್ಡು ಪಡೆಯುವ ನೆಪದಲ್ಲಿ ವ್ಯಕ್ತಿಯನ್ನೇ ಕೊಂದು ಕೆರೆಗೆ ಎಸೆದರು

ರಾಜ್ಯದಲ್ಲಿ ಇಂದು 48,905 ಹೊಸ ಕೋವಿಡ್ ಪ್ರಕರಣಗಳು ಪತ್ತೆ : 39 ಮಂದಿ ಬಲಿ

ರಾಜ್ಯದಲ್ಲಿ ಇಂದು 48,905 ಹೊಸ ಕೋವಿಡ್ ಪ್ರಕರಣಗಳು ಪತ್ತೆ : 39 ಮಂದಿ ಬಲಿ

ಅತಿಥಿ ಉಪನ್ಯಾಸಕರ ನೇಮಕ : 27 ರಿಂದ ಆನ್ ಲೈನ್ ಕೌನ್ಸೆಲಿಂಗ್

ಅತಿಥಿ ಉಪನ್ಯಾಸಕರ ನೇಮಕ : 27 ರಿಂದ ಆನ್ ಲೈನ್ ಕೌನ್ಸೆಲಿಂಗ್

ಪತ್ನಿ ದುಬಾರಿ ಜೀವನಕ್ಕೆ ಬೇಸತ್ತು ಪತಿ ಆತ್ಮಹತ್ಯೆ

ಪತ್ನಿ ದುಬಾರಿ ಜೀವನಕ್ಕೆ ಬೇಸತ್ತು ಪತಿ ಆತ್ಮಹತ್ಯೆ

MUST WATCH

udayavani youtube

ರಾಜಪಥ ಪರೇಡ್ ನಲ್ಲಿ ಯುದ್ಧವಿಮಾನಗಳ ಪವರ್ ಶೋ

udayavani youtube

73ನೇ ಗಣರಾಜ್ಯೋತ್ಸವದಲ್ಲಿ NCC ತಂಡ ಮುನ್ನಡೆಸಿದ ಮೈಸೂರಿನ ಯುವತಿ

udayavani youtube

ಪುನೀತ್ ಗೆ ಸಿಗದ ಪದ್ಮಪ್ರಶಸ್ತಿ: ಮಾತು ತಪ್ಪಿದ ಬೊಮ್ಮಾಯಿ

udayavani youtube

BSF ಮಹಿಳಾ ‘ಸೀಮಾ ಭವಾನಿ’ ತಂಡದಿಂದ ರೋಮಾಂಚಕ ಬೈಕ್ ಸಾಹಸ

udayavani youtube

ಭಯಾನಕ ಹೆಬ್ಬಾವಿನ ಎದುರು ಈ ಬೆಕ್ಕಿನ ಧೈರ್ಯ ನೋಡಿ!!

ಹೊಸ ಸೇರ್ಪಡೆ

ದಿಲ್ಲಿಯಲ್ಲಿ ಮೆರೆದ ಉಡುಪಿ ವಿದ್ಯಾರ್ಥಿಗಳ ಕಂಗೀಲು ನೃತ್ಯ

ದಿಲ್ಲಿಯಲ್ಲಿ ಮೆರೆದ ಉಡುಪಿ ವಿದ್ಯಾರ್ಥಿಗಳ ಕಂಗೀಲು ನೃತ್ಯ

ನಾನಾಗಿಯೇ ಮಾತನಾಡಲ್ಲ, ಅವರಾಗಿ ಬಂದರೆ ಮಾತನಾಡುವೆ: ಸಿದ್ದರಾಮಯ್ಯ

ನಾನಾಗಿಯೇ ಮಾತನಾಡಲ್ಲ, ಅವರಾಗಿ ಬಂದರೆ ಮಾತನಾಡುವೆ: ಸಿದ್ದರಾಮಯ್ಯ

ಆಟಗಾರನಾಗಿ ಕಣಕ್ಕಿಳಿದ ಕ್ರಿಕೆಟ್‌ ಕೋಚ್‌!

ಆಟಗಾರನಾಗಿ ಕಣಕ್ಕಿಳಿದ ಕ್ರಿಕೆಟ್‌ ಕೋಚ್‌!

astrology today

ಗುರುವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹ ಬಲ

3,026 ಗ್ರಾ.ಪಂ.ನಲ್ಲಿ “ಗ್ರಾಮ ಒನ್‌’ ಯೋಜನೆ

3,026 ಗ್ರಾ.ಪಂ.ನಲ್ಲಿ “ಗ್ರಾಮ ಒನ್‌’ ಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.