ಚಿತ್ರಕಲಾ ಪರಿಷತ್ತಿನ ರಂಗೇರಿಸಿದ ಮಾವು, ಹಲಸು


Team Udayavani, Jun 2, 2019, 3:07 AM IST

parishatina

ಬೆಂಗಳೂರು: ಸದಾ ಕಲಾಕೃತಿಗಳ ಕಲರವದಿಂದ ಕಳೆಗಟ್ಟುತ್ತಿದ್ದ ಚಿತ್ರಕಲಾ ಪರಿಷತ್ತಿನಲ್ಲೀಗ ಮಾವು, ಹಲಸಿನ ಹಣ್ನುಗಳ ಸುಮಧುರ ಪರಿಮಳ. ಚಿತ್ತಾರದ ಸಪ್ತ ವರ್ಣಗಳು ಕಾಣುತ್ತಿದ್ದ ಸ್ಥಳದಲ್ಲಿ, ಕೆಂಪು, ಹಳದಿ, ಹಸಿರು ಬಣ್ಣದ ಮಾವು ಮತ್ತು ಹಲಸಿನ ಹಣ್ಣುಗಳ ಮೇಳ.

ನಗರದ ಜನತೆಗೆ ತೋಟಗಾರಿಕೆ ಬೆಳೆಗಳನ್ನು ಪರಿಚಯಿಸುವ ಸಂಬಂಧ ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ, ಚಿತ್ರಕಲಾ ಪರಿಷತ್ತಿನಲ್ಲಿ ಎರಡು ದಿನಗಳ ಮಾವು-ಹಲಸಿನ ಹಣ್ಣಿನ ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಿದ್ದು, ಶನಿವಾರ ಕರ್ನಾಟಕ ಚಿತ್ರಕಲಾ ಪರಿಷತ್‌ ಅಧ್ಯಕ್ಷ ಡಾ.ಬಿ.ಎಲ್‌.ಶಂಕರ್‌ ಮೇಳಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿ.ಎಲ್‌.ಶಂಕರ್‌, ವಿವಿಧ ರಾಜ್ಯಗಳ ರೈತರು ಬೆಳೆದಿರುವ ಮಾವು ಮತ್ತು ಹಲಸಿನ ಹಣ್ಣಿನ ಮಾರಾಟ ಮತ್ತು ಪ್ರದರ್ಶನವನ್ನು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಆಯೋಜಿಸಿದೆ. ಕೃಷಿ ಕೂಡ ಲಾಭದಾಯಕ ವೃತ್ತಿ ಎಂಬುವುದನ್ನು ಈ ಮೂಲಕ ಹೇಳಲು ಹೊರಟಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮೀಣ ಪ್ರದೇಶದ ಯುವಕರು ನಗರಗಳಿಗೆ ವಲಸೆ ಹೋಗುತ್ತಿದ್ದು, ಕೃಷಿಯಲ್ಲೂ ಒಂದು ಬದುಕಿದೆ ಎಂಬುವುದನ್ನು ತೋರಿಸಿ ಕೊಡಬೇಕಾಗಿದೆ. ಕೃಷಿ ಕ್ಷೇತ್ರದಲ್ಲಿ ಹಲವು ರೀತಿಯ ಪ್ರಯೋಗ ಮಾಡಿದರೆ ಆರ್ಥಿಕವಾಗಿ ಸದೃಢರಾಗಬಹುದು ಎಂಬುವುದನ್ನು ಮೇಳಗಳು ತೋರಿಸಿ ಕೊಡುತ್ತಿವೆ ಎಂದು ಹೇಳಿದರು.

ತಳಿಗಳ ಬಗ್ಗೆ ಪರಿಚಯ: ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಹಿರಿಯ ವಿಜ್ಞಾನಿ ಡಾ.ಎಚ್‌.ಎಸ್‌.ಸುಮಂಗಲ ಮಾತನಾಡಿ, ನಗರ ಪ್ರದೇಶದ ಬಹುತೇಕರಿಗೆ ಮಾವು-ಹಲಸಿನ ತಳಿಗಳ ಬಗ್ಗೆ ಮಾಹಿತಿ ಇಲ್ಲ. ಆ ಹಿನ್ನೆಲೆಯಲ್ಲಿ ಮಾವು ಮತ್ತು ಹಲಸಿನ ಹಣ್ಣನ್ನು ಸವಿಯುವುದರ ಜತೆಗೆ ತಳಿಗಳ ಬಗ್ಗೆ ಜನರಿಗೆ ತಿಳಿಯಲಿ ಎಂಬ ಕಾರಣಕ್ಕಾಗಿ ಮೇಳ ಆಯೋಜನೆ ಮಾಡಲಾಗಿದೆ ಎಂದರು.

ಸುಮಾರು 350 ಜಾತಿಯ ಮಾವಿನ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ ನಡೆಯುತ್ತಿದೆ. ಜನ ಕೂಡ ಆಸಕ್ತಿಯಿಂದ ಪ್ರದರ್ಶನ ವೀಕ್ಷಿಸುವುದರ ಜತೆಗೆ ಸಸಿಗಳನ್ನು ಖರೀದಿಸುತ್ತಿದ್ದಾರೆ ಎಂದು ಹೇಳಿದರು.

ಸಿದ್ದು ಹಸಿಗೆ ಬೇಡಿಕೆ: ಮೇಳದಲ್ಲಿ ಅರ್ಕಾ ಪುನೀತ್‌, ತೋತಾಪುರಿ, ರಸಪುರಿ, ಬಾದಾಮಿ, ಬೇಗನ್‌ಪಲ್ಲಿ ಸೇರಿದಂತೆ ವಿವಿಧ ಮಾವಿನ ಹಣ್ಣಿನ ತಳಿಗಳ ಜತೆಗೆ ಎಲಿಫೆಂಟ್‌ ಹೆಡ್‌, ಲಾಲ್‌ ಸುಂದರಿ, ಸುವರ್ಣ ರೇಖಾ, ಗುಲಾಬ್‌ ಖಾಸ್‌ ಹೆಸರಿನ ಹಲಸಿನ ಹಣ್ಣುಗಳನ್ನು ಮಾರಾಟಕ್ಕಿಡಲಾಗಿದ್ದು, ತುಮಕೂರು ಮೂಲದ “ಸಿದ್ದು’ ಹಲಸಿಗೆ ಭಾರೀ ಬೇಡಿಕೆ ಇದೆ. ಮಾವು ಮತ್ತು ಹಲಸಿನ ಹಣ್ಣಿನಿಂದ ಮಾಡಲಾದ ಹಲವು ಬಗೆಯ ತಿನಿಸುಗಳು ಕೂಡ ಮೇಳದಲ್ಲಿ ದೊರೆಯುತ್ತವೆ.

ಟಾಪ್ ನ್ಯೂಸ್

bsy

ಬಿ.ಎಸ್ ಯಡಿಯೂರಪ್ಪ ಮೊಮ್ಮಗಳು ಆತ್ಮಹತ್ಯೆಗೆ ಶರಣು!

16arrest

ಉಡುಪಿ: ಹೈಟೆಕ್ ವೇಶ್ಯಾವಾಟಿಕೆ; ನಾಲ್ವರು ಆರೋಪಿಗಳ ಬಂಧನ

1-aff

ನಾನು ಸರಕಾರ ನಡೆಸುತ್ತಿರುವ ಟೀಮಿನ ಒಬ್ಬ ಸದಸ್ಯ: ಬಸವರಾಜ್ ಬೊಮ್ಮಾಯಿ

ಮುಂಗಡ ಮುನ್ನೋಟ: ಮನೆ ಖರೀದಿದಾರರಿಗೆ ಸಿಗುವುದೇ ಸಿಹಿಸುದ್ದಿ?

ಮುಂಗಡ ಮುನ್ನೋಟ: ಮನೆ ಖರೀದಿದಾರರಿಗೆ ಸಿಗುವುದೇ ಸಿಹಿಸುದ್ದಿ?

ನ್ಯೂನತೆಯನ್ನು ಮೆಟ್ಟಿ ನಿಂತು ಜನಪ್ರಿಯತೆಯ ಮೆಟ್ಟಿಲೇರಿದ ಅಪ್ರತಿಮ ಸಾಧಕಿ ಕೌರ್

ನ್ಯೂನತೆಯನ್ನು ಮೆಟ್ಟಿ ನಿಂತು ಜನಪ್ರಿಯತೆಯ ಮೆಟ್ಟಿಲೇರಿದ ಅಪ್ರತಿಮ ಸಾಧಕಿ ಕೌರ್

ಕೆಲಸದಿಂದ ಜನರ ವಿಶ್ವಾಸ ಗಳಿಸಬೇಕು, ಮಾತಿನಿಂದಲ್ಲ:ಪ್ರತಾಪ್ ಸಿಂಹಗೆ ಬಿಜೆಪಿ ಶಾಸಕರ ತಿರುಗೇಟು

ಕೆಲಸದಿಂದ ಜನರ ವಿಶ್ವಾಸ ಗಳಿಸಬೇಕು, ಮಾತಿನಿಂದಲ್ಲ:ಪ್ರತಾಪ್ ಸಿಂಹಗೆ ಬಿಜೆಪಿ ಶಾಸಕರ ತಿರುಗೇಟು

ಆಸ್ಟ್ರೇಲಿಯಾ ಓಪನ್ ಫೈನಲ್ ತಲುಪಿದ ರಫೆಲ್ ನಡಾಲ್: ದಾಖಲೆಗೆ ಬೇಕು ಇನ್ನೊಂದೇ ಗೆಲುವು

ಆಸ್ಟ್ರೇಲಿಯಾ ಓಪನ್ ಫೈನಲ್ ತಲುಪಿದ ರಫೆಲ್ ನಡಾಲ್: ದಾಖಲೆಗೆ ಬೇಕು ಇನ್ನೊಂದೇ ಗೆಲುವುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಕ್ರಮ ದಾಖಲೆ ಸೃಷ್ಟಿಸಿದ ಆರೋಪ:  ಬಾಂಗ್ಲಾ ಮೂಲದ ಮಹಿಳೆ ಬಂಧನ

ಅಕ್ರಮ ದಾಖಲೆ ಸೃಷ್ಟಿಸಿದ ಆರೋಪ: ಬಾಂಗ್ಲಾ ಮೂಲದ ಮಹಿಳೆ ಬಂಧನ

ಬಿಡಿಎ ಅಧಿಕಾರಿಗಳ ಭ್ರಷ್ಟಾಚಾರ: ಇಬ್ಬರು ಬಿಡಿಎ ಸಿಬ್ಬಂದಿ ಸೇರಿ ಆರು ಮಂದಿ ಬಂಧನ

ಬಿಡಿಎ ಅಧಿಕಾರಿಗಳ ಭ್ರಷ್ಟಾಚಾರ: ಇಬ್ಬರು ಬಿಡಿಎ ಸಿಬ್ಬಂದಿ ಸೇರಿ ಆರು ಮಂದಿ ಬಂಧನ

ತೆರಿಗೆ ಬಾಕಿ ಉಳಿಸಿಕೊಂಡವರಿಗೆ ನೋಟಿಸ್‌ ನೀಡಿ : ಅಧಿಕಾರಿಗಳಿಗೆ ಗೌರವ್‌ ಗುಪ್ತ ತಾಕೀತು

ತೆರಿಗೆ ಬಾಕಿ ಉಳಿಸಿಕೊಂಡವರಿಗೆ ನೋಟಿಸ್‌ ನೀಡಿ : ಅಧಿಕಾರಿಗಳಿಗೆ ಗೌರವ್‌ ಗುಪ್ತ ತಾಕೀತು

ಚಿನ್ನ ಪಡೆದು ದುಡ್ಡು ಕೊಡುವ ನೆಪದಲ್ಲಿ ವ್ಯಕ್ತಿಯನ್ನೇ ಕೊಂದು ಕೆರೆಗೆ ಎಸೆದರು

ಚಿನ್ನ ಕೊಟ್ಟು ದುಡ್ಡು ಪಡೆಯುವ ನೆಪದಲ್ಲಿ ವ್ಯಕ್ತಿಯನ್ನೇ ಕೊಂದು ಕೆರೆಗೆ ಎಸೆದರು

ರಾಜ್ಯದಲ್ಲಿ ಇಂದು 48,905 ಹೊಸ ಕೋವಿಡ್ ಪ್ರಕರಣಗಳು ಪತ್ತೆ : 39 ಮಂದಿ ಬಲಿ

ರಾಜ್ಯದಲ್ಲಿ ಇಂದು 48,905 ಹೊಸ ಕೋವಿಡ್ ಪ್ರಕರಣಗಳು ಪತ್ತೆ : 39 ಮಂದಿ ಬಲಿ

MUST WATCH

udayavani youtube

ತುಳುನಾಡಿನ ರಾಜಧಾನಿ ಬಾರ್ಕೂರನ್ನು ಆಳಿದ ರಾಜರ ಹೆಸರೇನು ಗೊತ್ತೇ ?

udayavani youtube

ಉತ್ತರಪ್ರದೇಶ ಚುನಾವಣೆ ಭಾರತದ ಭವಿಷ್ಯವನ್ನು ನಿರ್ಧರಿಸಲಿದೆ

udayavani youtube

ಮನೆಯಿಂದ ಹೊರ ಬಂದ್ರೆ ತಲೆಗೇ ಕುಕ್ಕುತ್ತೆ ಈ ಕಾಗೆ.!

udayavani youtube

ದೇಶದ ಧ್ವಜದ ಜೊತೆ ಘೋಷಣೆ ಕೂಗಿದ್ದಕ್ಕೆ ಬಂಧನ!

udayavani youtube

ಮೈಕೊರೆಯುವ ಚಳಿಯನ್ನೂ ಲೆಕ್ಕಿಸದೇ ವಾರದಿಂದ ಭಕ್ತರು ಯಲ್ಲಮ್ಮನ ಕ್ಷೇತ್ರಕ್ಕೆ ಬರುತ್ತಿದ್ದಾರೆ

ಹೊಸ ಸೇರ್ಪಡೆ

bsy

ಬಿ.ಎಸ್ ಯಡಿಯೂರಪ್ಪ ಮೊಮ್ಮಗಳು ಆತ್ಮಹತ್ಯೆಗೆ ಶರಣು!

davanagere news

ಗುಣಮುಖರ ಪ್ರಮಾಣ ಹೆಚ್ಚಳ

davanagere news

ಕ್ಯಾಂಪಸ್‌ ಸಂದರ್ಶನದಲ್ಲಿ ವಿದ್ಯಾರ್ಥಿಗಳ ಆಯ್ಕೆ

davanagere news

ದುಗ್ಗಮ್ಮ ಜಾತ್ರೆಗೆ ಮುಹೂರ್ತ ಫಿಕ್ಸ್‌

16arrest

ಉಡುಪಿ: ಹೈಟೆಕ್ ವೇಶ್ಯಾವಾಟಿಕೆ; ನಾಲ್ವರು ಆರೋಪಿಗಳ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.