ಐಟಿ-ಬಿಟಿ ವಲಯದಲ್ಲೇ ಹೆಚ್ಚು ಸೋಂಕು


Team Udayavani, Jan 3, 2022, 11:23 AM IST

ಐಟಿ-ಬಿಟಿ ವಲಯದಲ್ಲೇ ಹೆಚ್ಚು ಸೋಂಕು

ಬೆಂಗಳೂರು: ಐಟಿ-ಬಿಟಿ ವಲಯದ ಹಬ್‌ನಲ್ಲಿರುವ ಪ್ರದೇಶಗಳೇ ಈಗ ಬಿಬಿಎಂಪಿ ಮತ್ತು ಬೆಂಗಳೂರು ನಗರ ಜಿಪಂಗೆ ತಲೆನೋವಾಗಿ ಪರಿಗಣಿಸಿದೆ.

ವಿದೇಶ ಮತ್ತು ಹೊರ ರಾಜ್ಯಗಳಿಂದ ಬರುವ ವರು ಅಧಿಕ ಸಂಖ್ಯೆಯಲ್ಲಿ ಈ ಭಾಗಕ್ಕೆ ಭೇಟಿ ನೀಡು ತ್ತಿದ್ದು ಕೋವಿಡ್‌ ಸೋಂಕಿನ ಪ್ರಮಾಣ ಹೆಚ್ಚಳಕ್ಕೆ ಇದು ಒಂದು ಕಾರಣ ಎಂಬ ಮಾಹಿತಿ ಪತ್ತೆಯಾಗಿದೆ. ಬೊಮ್ಮನಹಳ್ಳಿ, ಮಹಾದೇವಪುರ, ವರ್ತೂರು, ಎಚ್‌. ಎಸ್‌.ಆರ್‌.ಲೇಔಟ್‌, ಅನೇಕಲ್‌, ಕೋರಮಂಗಲ,ಬೆಳ್ಳಂದೂರು ಪ್ರದೇಶ ವ್ಯಾಪ್ತಿಯಲ್ಲಿ ಕೊರೊನಾ ಪ್ರಕರಣಸಂಖ್ಯೆ ದಿನ ಕಳೆದಂತೆ ಅಧಿಕ ವಾಗುತ್ತಿದೆ. ಐಟಿ-ಬಿಟಿ ಕಂಪನಿಗಳು ನೆಲೆಯೂರಿ ರುವ ವಸತಿ ಪ್ರದೇಶಗಳಲ್ಲೇಸೋಂಕಿನ ಅಧಿಕ ಪ್ರಕರಣಗಳು ಕಂಡು ಬರುತ್ತಿದ್ದು ಇದು ಪಾಲಿಕೆ ಮತ್ತು ನಗರ ಜಿಪಂ ಚಿಂತೆಗೆ ಕಾರಣವಾಗಿದೆ.

ಬೊಮ್ಮನಹಳ್ಳಿ, ಮಹಾದೇವಪುರ, ವರ್ತೂರು ಪ್ರದೇಶ ವ್ಯಾಪ್ತಿಯ ಕೆಲವು ವಸತಿ ಸಮುತ್ಛಯಗಳಲ್ಲಿ ದಿನಕ್ಕೆ ಕನಿಷ್ಠ 3-4ಸೋಂಕಿತ ಪ್ರಕರಣಗಳು ದಾಖ ಲಾಗುತ್ತಿದ್ದು, ಆ ಹಿನ್ನೆಲೆಯಲ್ಲಿ ವಸತಿ ಸಮುತ್ಛಯ ಗಳ ಮೇಲೂ ನಿಗಾ ಇಡಲಾಗಿದೆ.

ನಗರದಲ್ಲಿ ಈಗಾಗಲೇ 110 ಕೋವಿಡ್‌ ಕಂಟೈನ್ಮೆಂಟ್‌ ವಲಯಗಳಿದ್ದು, ಅದರಲ್ಲಿ ಅರ್ಧದಷ್ಟು ಭಾಗ ಐಟಿಬಿಟಿ ಹಬ್‌ ವ್ಯಾಪ್ತಿಯಲ್ಲಿರುವ ವಸತಿ ಸಮುತ್ಛಯಗಳೇ ಆಗಿವೆ. ಕಳೆದು 10 ದಿನಗಳಲ್ಲಿ ಬಿಬಿಎಂಪಿ ಕೊರೊನಾ ವಾರ್‌ ರೂಮ್‌ ಅಂಕಿ-ಅಂಶಗಳನ್ನು ಗಮನನಿಸಿದಾಗ ಬೆಳ್ಳಂ ದೂರಿನಲ್ಲಿ 26, ಹಗದೂರ್‌ನಲ್ಲಿ 10, ದೊಡ್ಡನೆಕ್ಕುಂದಿಯಲ್ಲಿ 11 ಅನೇಕಲ್‌ನಲ್ಲಿ 10, ಎಚ್‌ಎಸ್‌.ಆರ್‌.ಲೇಔಟ್‌ನಲ್ಲಿ1ಒ, ಶಾಂತಲಾನಗರ ದಲ್ಲಿ 7, ವರ್ತೂರ್‌ನಲ್ಲಿ 9, ಕೋರಮಂಗಲದಲ್ಲಿ 8 ಮತ್ತು ಬ್ಯಾಟರಾಯನಪುರದಲ್ಲಿ 6 ಪಾಸಿಟಿವ್‌ ಪ್ರಕರಣಗಳು ದಾಖಲಾಗಿವೆ.

ಈಜು ಕೊಳದ ಬಗ್ಗೆ ಎಚ್ಚರಿಕೆ ವಹಿಸಬೇಕು: ಬೆಂಗಳೂರು ನಗರ ಜಿಪಂ ವ್ಯಾಪ್ತಿಯ ಆವಲ ಹಳ್ಳಿಯ ಅಪಾರ್ಟ್‌ ಮೆಂಟ್‌ ಒಂದರಲ್ಲಿ ಕೂಡ ಕೋವಿಡ್‌ ಸೋಂಕಿನ ಪ್ರಕರಣ ಕಂಡುಬಂದಿದೆ. ಅಲ್ಲಿನ ವ್ಯಕ್ತಿಯೊಬ್ಬ ಮುಂಬೈಗೆ ಭೇಟಿ ನೀಡಿ ಬೆಂಗಳೂರಿಗೆ ವಾಪಸ್‌ ಆಗಿದ್ದ ಎಂದು ಹಿರಿಯ ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹೊರರಾಜ್ಯ ಮತ್ತು ವಿದೇಶದಿಂದ ಬಂದವರಆರೋಗ್ಯ ತಪಾಸಣೆ ನಡೆಸಿದಾಗ ಕೋವಿಡ್‌ ಸೋಂಕಿನಪ್ರಕರಣಗಳು ಪತ್ತೆಯಾಗುತ್ತಿದೆ. ಇದರಿಂದ ಸೋಂಕುಹೆಚ್ಚುವ ಸಾಧ್ಯತೆಯಿದೆ. ಈ ಬಗ್ಗೆ ವಸತಿ ಸಮುತ್ಛಯಗಳ ನಿವಾಸಿಗಳು ಎಚ್ಚರದಿಂದ ಇರಬೇಕಿದೆ.

ಅಂತಾರಾಷ್ಟ್ರೀಯ ಪ್ರಯಾಣಿಕರಲ್ಲಿ ಕೊರೊನಾ :  ಡಿ.22 ರಂದು 1,178 ಮಂದಿ ವಿದೇಶದಿಂದ ಬಂದಿದ್ದು ಅದರಲ್ಲಿ 9 ಮಂದಿಯಲ್ಲಿ ಪಾಸಿಟಿವ್‌ ಕಂಡು ಬಂದಿದೆ. ಡಿ.23ರಂದು 133 ಮಂದಿ ಆಗಮಿಸಿದ್ದು, 6 ಮಂದಿಗೆ ಪಾಸಿಟಿವ್‌ ಬಂದಿದೆ. ಡಿ.24 ರಂದು 529 ಮಂದಿ ಆಗಮಿಸಿದ್ದು, 508 ಮಂದಿತಪಾಸಣೆ ನಡೆದು ನಾಲ್ವರಿಗೆ ಪಾಸಿಟಿವ್‌ ಆಗಿತ್ತು. ಡಿ.25 ರಂದು 865 ಮಂದಿಆಗಮಿಸಿದ್ದು, ಅದರಲ್ಲಿ 11 ಮಂದಿಗೆ ಕೊರೊನಾ ಕಂಡು ಬಂದಿದೆ. ಡಿ. 26ರಂದು933 ಮಂದಿ ಆಗಮಿಸಿದ್ದು ಅದರಲ್ಲಿ 14 ಪಾಸಿಟಿವ್‌ ದಾಖಲಾಗಿದೆ.ಡಿ.27ರಂದು 704 ಮಂದಿ ಆಗಮಿಸಿದ್ದು ಅವರಲ್ಲಿ 9 ಮಂದಿಗೆ ಪಾಸಿಟಿವ್‌ಬಂದಿದೆ. ಡಿ.28 ರಂದು 129 ಮಂದಿ ಆಗಮಿಸಿದ್ದು, 3 ಪಾಸಿಟಿವ್‌ ಪ್ರಕರಣ ದಾಖಲಾಗಿದೆ. ಡಿ.29ರಂದು 1,282 ಮಂದಿಯಲ್ಲಿ 20 ಪಾಸಿಟಿವ್‌ ಪ್ರಕರಣ ದಾಖಲಾಗಿದೆ. ಡಿ.30ರಂದು 75 ಜನ ಬಂದಿದ್ದು 9 ಪಾಸಿಟಿವ್‌ ಪ್ರಕರಣ ದಾಖಲಾಗಿವೆ. ಹಾಗೆಯೇ ಡಿ.31ರಂದು 416 ಮಂದಿ ನಗರಕ್ಕೆ ಆಗಮಿಸಿದ್ದು 9 ಪಾಸಿಟಿವ್‌ ಬಂದಿದೆ.

ಬೆಂಗಳೂರಿನಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆಹೆಚ್ಚಳವಾಗುತ್ತಿದ್ದು, ಆ ಹಿನ್ನೆಲೆಯಲ್ಲಿ ಪರೀಕ್ಷೆ ಪ್ರಮಾಣವನ್ನು 40 ಸಾವಿರದಿಂದ 60 ಸಾವಿರಕ್ಕೆ ಏರಿಕೆ ಮಾಡಲು ತೀರ್ಮಾನಿಸಲಾಗಿದೆ. ವಸತಿ ಸಮುತ್ಛಯಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಪ್ರಕರಣಗಳು ಕಂಡುಬರುತ್ತಿದ್ದು, ವಲಯಆಯುಕ್ತರು ಆಯಾ ಭಾಗದ ವಸತಿ ಸಮುತ್ಛಯಗಳ ಅಸೋಶಿಯೇಷನ್‌ಗಳ ಜತೆಗೆ ಸಮಾಲೋಚನೆ ನಡೆಸಿದ್ದಾರೆ. ಈ ಬಗ್ಗೆ ಎಚ್ಚರಿಕೆ ವಹಿಸಲಾಗಿದೆ. ಗೌರವ್‌ ಗುಪ್ತ, ಪಾಲಿಕೆ ಆಯುಕ್ತ

ದೇವೇಶ ಸೂರಗುಪ್ಪ

ಟಾಪ್ ನ್ಯೂಸ್

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mamata Banerjee: ಹೆಲಿಕಾಪ್ಟರ್ ಹತ್ತುವಾಗ ಬಿದ್ದು ಮತ್ತೆ ಗಾಯ ಮಾಡಿಕೊಂಡ ಮಮತಾ ಬ್ಯಾನರ್ಜಿ

Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ

siddaramaiah

Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

13-bk-hariprasad

ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್

Hubli; ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡ ಶಕ್ತಿ: ದಿಂಗಾಲೇಶ್ವರ ಸ್ವಾಮೀಜಿ

ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ

12-prakash-raj

April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-bk-hariprasad

ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್

b y vijayendra

LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ‌ ವ್ಯಂಗ್ಯ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Moksha Kushal

Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

15

UV Fusion: ಜೀವನವನ್ನು ಪ್ರೀತಿಸೋಣ

Mamata Banerjee: ಹೆಲಿಕಾಪ್ಟರ್ ಹತ್ತುವಾಗ ಬಿದ್ದು ಮತ್ತೆ ಗಾಯ ಮಾಡಿಕೊಂಡ ಮಮತಾ ಬ್ಯಾನರ್ಜಿ

Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.