ದೇಶಕ್ಕೆಲ್ಲ ನಮ್ಮ ಮೆಟ್ರೋನೇ ಮೇಷ್ಟ್ರು


Team Udayavani, Jul 5, 2018, 11:25 AM IST

blore-1.jpg

ಬೆಂಗಳೂರು: ದೇಶದ ವಿವಿಧ ಮಹಾನಗರಗಳಲ್ಲಿ ಚಾಲ್ತಿಯಲ್ಲಿರುವ ಮೆಟ್ರೋ ಯೋಜನೆಗಳಿಗೆ ಅಗತ್ಯ
ಸಿಬ್ಬಂದಿಯನ್ನು ಸಜ್ಜುಗೊಳಿಸುವ ಕಾರ್ಖಾನೆ ಈಗ “ನಮ್ಮ ಮೆಟ್ರೋ’! ಹೌದು, ನಮ್ಮ ಮೆಟ್ರೋ ಮೊದಲ ಹಂತ ಪೂರ್ಣಗೊಂಡು ಈಗಷ್ಟೇ ಒಂದು ವರ್ಷ ಆಗಿದೆ. ಆದರೆ, ಈ ಅಲ್ಪಾವಧಿಯಲ್ಲಿ ದೇಶದ ಪ್ರಮುಖ ಮೆಟ್ರೋ ಯೋಜನೆಗಳ ಸಿಬ್ಬಂದಿಗೆ ಬೆಂಗಳೂರು ಮೆಟ್ರೋ ರೈಲು ನಿಗಮದ (ಬಿಎಂಆರ್‌ಸಿಎಲ್‌) ತರಬೇತಿ ಸಂಸ್ಥೆಯೇ ತರಬೇತಿ ನೀಡುತ್ತಿದ್ದು, ಈ ಮೂಲಕ ದೇಶದಲ್ಲಿ ನಡೆಯುತ್ತಿರುವ ಬಹುತೇಕ ಎಲ್ಲ ಮೆಟ್ರೋ ಯೋಜನೆಗಳ ಸಿಬ್ಬಂದಿಗೆ ನಮ್ಮ ಮೆಟ್ರೋನೇ ಮೇಷ್ಟ್ರು ಆಗಿದೆ.

ಇದಕ್ಕೆ ಪ್ರಮುಖ ಕಾರಣ, ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ತರಬೇತಿ ಹಾಗೂ “ಥರ್ಡ್‌ ರೈಲ್‌’ (ಹಳಿ ಪಕ್ಕದಿಂದಲೇ ವಿದ್ಯುತ್‌ ಸಂಪರ್ಕ) ವ್ಯವಸ್ಥೆ ಹೊಂದಿರುವುದು ಎನ್ನಲಾಗಿದೆ. ಅಹಮದಾಬಾದ್‌ನ ಮೆಗಾ ಮೆಟ್ರೋ, ಕೊಲ್ಕತ್ತ ಸೇರಿದಂತೆ ದಕ್ಷಿಣ ಭಾರತದಲ್ಲಿ ನಡೆಯುತ್ತಿರುವ ಹೈದರಾಬಾದ್‌, ಕೊಚ್ಚಿ, ಚೆನ್ನೈ ಮೆಟ್ರೋ ಯೋಜನೆಗಳ ಸಿಬ್ಬಂದಿಗೆ ಬೈಯಪ್ಪನಹಳ್ಳಿಯಲ್ಲಿರುವ “ಮೆಟ್ರೋ ಸ್ಕೂಲ್‌’ನಲ್ಲಿ ಪಾಠ
ಹೇಳಿಕೊಡಲಾಗುತ್ತಿದೆ. ದೇಶದಲ್ಲಿ ಮೊದಲ ಬಾರಿಗೆ ಮೆಟ್ರೋ ರೈಲು ಬಂದಿದ್ದು ದೇಶದ ರಾಜಧಾನಿ ದೆಹಲಿಯಲ್ಲಿ. ಆದರೆ, ಅಲ್ಲಿ “ಓವರ್‌ ಹೆಡ್‌’ ಅಂದರೆ ರೈಲಿನ ಮೇಲಿನ ತುದಿಯಿಂದ ವಿದ್ಯುತ್‌ ಸಂಪರ್ಕ
ಕಲ್ಪಿಸಲಾಗಿದೆ. ಥರ್ಡ್‌ ರೈಲ್‌ ವ್ಯವಸ್ಥೆ ಮೊದಲ ಬಾರಿಗೆ ಅಳವಡಿಕೆಯಾಗಿದ್ದು ಬೆಂಗಳೂರು ಮೆಟ್ರೋ
ಯೋಜನೆಯಲ್ಲಿ. ಈಗ ಚಾಲ್ತಿಯಲ್ಲಿರುವ ಬಯುತೇಕ ಮೆಟ್ರೋ ಯೋಜನೆಗಳು ಈ ಮುಂದುವರಿದ ವ್ಯವಸ್ಥೆಯನ್ನು ಅನುಸರಿಸುತ್ತಿವೆ.

ಇದೇ ಕಾರಣಕ್ಕೆ “ನಮ್ಮ ಮೆಟ್ರೋ’ ಟ್ರೈನಿಂಗ್‌ ಇನ್‌ ಸ್ಟಿಟ್ಯೂಟ್‌ ಎಲ್ಲರಿಗೂ ಅಚ್ಚುಮೆಚ್ಚು ಆಗುತ್ತಿದೆ. ಬೈಯಪ್ಪನಹಳ್ಳಿಯಲ್ಲಿರುವ ತರಬೇತಿ ಸಂಸ್ಥೆಯು ದಕ್ಷಿಣ ಭಾರತದ ಏಕೈಕ ಮೆಟ್ರೋ ಶಾಲೆಯಾಗಿದೆ. 2011ರಲ್ಲಿ ಒಬ್ಬಿಬ್ಬರು ವಿದ್ಯಾರ್ಥಿಗಳಿಂದ ಆರಂಭಗೊಂಡ ಸಂಸ್ಥೆ, ಈಗ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದೆ. ಕಳೆದ ಏಳು ವರ್ಷಗಳಲ್ಲಿ 2,111 ಮಂದಿ ಇಲ್ಲಿ ತರಬೇತಿ ಪಡೆದಿದ್ದು, ಇದರಲ್ಲಿ 570 ಸಿಬ್ಬಂದಿ ಹೊರರಾಜ್ಯಗಳ ಮೆಟ್ರೋ ಯೋಜನೆಯಲ್ಲಿ ಕೆಲಸ ಮಾಡುವವರು ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿ) ತರಬೇತಿ ಸಂಸ್ಥೆ ಮುಖ್ಯಸ್ಥರು ಮಾಹಿತಿ ನೀಡಿದರು. 

ಏನೇನು ತರಬೇತಿ?: ಐದು ತಿಂಗಳ ತರಬೇತಿಯಲ್ಲಿ ರೋಲಿಂಗ್‌ ಸ್ಟಾಕ್‌, ಸಿಗ್ನಲಿಂಗ್‌, ಟೆಲಿಕಾಂ, ಎಲೆಕ್ಟ್ರಿಕ್‌ ಆಂಡ್‌ ಮೆಂಟೇನೆನ್ಸ್‌, ಪಿ-ವೇ ಬಗ್ಗೆ ತರಬೇತಿ ನೀಡಲಾಗುತ್ತದೆ. ಜತೆಗೆ ಸಿಮ್ಯುಲೇಟರ್‌ಗಳು ಮತ್ತು ಪ್ರಯಾಣಿಕರನ್ನು ಕೊಂಡೊಯ್ಯುವ ರೈಲುಗಳ ಚಾಲನೆಗೂ ಅವಕಾಶ ನೀಡಲಾಗುವುದು ಎಂದು ಅವರು ವಿವರಿಸಿದರು.

ಸಂಸ್ಥೆ ಮೂಲಕ ಬಂದವರಿಗೆ ಮಾತ್ರ ತರಬೇತಿ ನೀಡುತ್ತಿದ್ದು, 8 ಮಂದಿ ಕಾಯಂ ತರಬೇತುದಾರರು ಸೇರಿ 25 ಜನ ತರಬೇತುದಾರರಿದ್ದಾರೆ. ಒಂದೊಂದು ಬ್ಯಾಚ್‌ನಲ್ಲಿ 20-30 ಅಭ್ಯರ್ಥಿಗಳು ಇರುತ್ತಾರೆ. ಬೆಳಗ್ಗೆ 9ರಿಂದ ಸಂಜೆ 5ರವರೆಗೆ ತರಗತಿಗಳು ನಡೆಯುತ್ತವೆ. ಸಂಸ್ಥೆಯಲ್ಲಿ “ಮೆಟ್ರೋ ಎಂದರೆ
ಏನು?’ ಎಂಬ ಮೊದಲ ಪಾಠದಿಂದ ಹಿಡಿದು ಎಲ್ಲವನ್ನೂ ಹೇಳಿಕೊಡಲಾಗುವುದು. ತರಬೇತಿ ಪಡೆಯುವವರಿಗೆ ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಶೆಟಲ್‌, ಬ್ಯಾಡ್ಮಿಂಟನ್‌ ಸೇರಿದಂತೆ ವಿವಿಧ ಕ್ರೀಡೆಗಳು, ವಾರಕ್ಕೊಮ್ಮೆ ಪರೀಕ್ಷೆ ಇರುತ್ತದೆ. ಮತ್ತೂಂದೆಡೆ ದೆಹಲಿ ಮೆಟ್ರೋ ತರಬೇತಿ ಸಂಸ್ಥೆ ತುಂಬಿ ತುಳುಕುತ್ತಿದೆ.

ಇದೆಲ್ಲದರ ಹಿನ್ನೆಲೆಯಲ್ಲಿ “ನಮ್ಮ ಮೆಟ್ರೋ’ ತರಬೇತಿ ಸಂಸ್ಥೆಗೆ ಹೆಚ್ಚು ಬೇಡಿಕೆ ಬಂದಿದೆ ಎಂದು ಸಂಸ್ಥೆಯ ಮತ್ತೂಬ್ಬ ಅಧಿಕಾರಿ ಸ್ಪಷ್ಟಪಡಿಸಿದರು. “ನಮ್ಮ ಮೆಟ್ರೋ’ ಸಿಬ್ಬಂದಿಗೆ ಆರಂಭದಲ್ಲಿ ದೆಹಲಿ ಮೆಟ್ರೋ ತರಬೇತಿ ನೀಡಿದ್ದರೂ, ಬೈಯಪ್ಪನಹಳ್ಳಿ ತರಬೇತಿ ಸಂಸ್ಥೆಯಲ್ಲಿ ಮತ್ತೂಂದು ಸುತ್ತಿನ ತರಬೇತಿ ನೀಡಲಾಯಿತು ಎಂದೂ ಅವರು ಹೇಳಿದರು. 

ಅಹಮದಾಬಾದ್‌ಗೆ ಕನ್ಸಲ್ಟಂಟ್‌?
ಅಹಮದಾಬಾದ್‌ ಮೆಟ್ರೋ ಯೋಜನೆಗೆ ಕನ್ಸಲ್ಟಂಟ್‌ (ಸಲಹೆಗಾರ) ಆಗಿ ಕಾರ್ಯನಿರ್ವಹಿಸುವಂತೆ ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ (ಬಿಎಂಆರ್‌ಸಿಎಲ್‌) ಆಹ್ವಾನ ಬಂದಿದೆ. ಈ ಸಂಬಂಧದ ಚರ್ಚೆ
ಪ್ರಾಥಮಿಕ ಹಂತದಲ್ಲಿದ್ದು, ನಿಗಮವು ಕೂಡ ಬಹುತೇಕ ಒಪ್ಪಿಗೆ ಸೂಚಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಹಾಗೊಂದು ವೇಳೆ ನಿಗಮವು ಕನ್ಸಲ್ಟಂಟ್‌ ಆಗಿ ನೇಮಕಗೊಂಡರೆ, ಅಹಮದಾಬಾದ್‌ ಮೆಟ್ರೋ ಯೋಜನೆಯ ಅಂದಾಜು ವೆಚ್ಚ, ನೀಲನಕ್ಷೆ, ಯೋಜನಾ ವರದಿ ಸೇರಿದಂತೆ
ವಿವಿಧ ಹಂತಗಳಲ್ಲಿ ಸಲಹೆಗಳನ್ನು ನೀಡಲಾಗುವುದು. ಇದು ನಿಗಮದ ಮಟ್ಟಿಗೆ ಹೆಗ್ಗಳಿಕೆ ಸಂಗತಿ ಎಂದು ಯೋಜನಾ ವಿಭಾಗದ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.

ಶೀಘ್ರದಲ್ಲೇ ಸಂಸ್ಥೆ ಮೇಲ್ದರ್ಜೆಗೆ ಮುಂಬರುವ ದಿನಗಳಲ್ಲಿ ಸಂಸ್ಥೆಯನ್ನು ಮೇಲ್ದರ್ಜೆಗೇರಿಸಲು ಚಿಂತನೆ
ನಡೆದಿದೆ. ಅನಿಮೇಷನ್‌ ಮೂಲಕ ಪಾಠ ಹೇಳಿಕೊಡುವುದು, 7 ಕಿ.ಮೀ.ಗೆ ಸೀಮಿತವಾಗಿರುವ ಸಿಮ್ಯುಲೇಟರ್‌ಗಳ ಸಂಚಾರ ಮಾರ್ಗವನ್ನು 20 ಕಿ.ಮೀಗೆ ವಿಸ್ತರಿಸುವುದು, ಟೆಕ್ನಿಕಲ್‌ ಮ್ಯಾನ್ಯುವಲ್‌ಗ‌ಳ ಬಗ್ಗೆ ತಿಳಿಸಿಕೊಡುವ ಯೋಜನೆ ಇದೆ. ಪ್ರಸ್ತುತ ಸಂಸ್ಥೆಯಲ್ಲಿ 120 ವಿದ್ಯಾರ್ಥಿಗಳ ಸಾಮರ್ಥ್ಯ ಇರುವ ಸಭಾಂಗಣ, 20ರಿಂದ 30 ವಿದ್ಯಾರ್ಥಿಗಳು ಕುಳಿತುಕೊಳ್ಳಬಹುದಾದ ಏಳು ಕೊಠಡಿಗಳು, ಸಿಮ್ಯುಲೇಟರ್‌, ಕಂಪ್ಯೂಟರ್‌ ಆಧಾರಿತ ತರಬೇತಿ ಕೊಠಡಿ, ಎಟಿಎ ಸಿಮ್ಯುಲೇಟರ್‌ಗಳ ವ್ಯವಸ್ಥೆ ಇದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

11-srrest

Bengaluru: ಅತಿಕ್ರಮಿಸಿ ಏರ್‌ಪೋರ್ಟ್‌ನಲ್ಲಿ ವಿಡಿಯೋ: ಯುಟ್ಯೂಬರ್‌ ಬಂಧನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.