Fraud:ಪಾರ್ಟ್ ಟೈಂ ಕೆಲಸ ಕೊಡಿಸುವುದಾಗಿ ಎಂಜಿನಿಯರ್ಗೆ 20.85 ಲಕ್ಷ ವಂಚನೆ
Team Udayavani, Sep 10, 2023, 1:37 PM IST
ಬೆಂಗಳೂರು: ಪಾರ್ಟ್ ಟೈಂ ಕೆಲಸ ಕೊಡಿಸುವುದಾಗಿ ಮಹಿಳಾ ಎಂಜಿನಿಯರ್ಗೆ ಸೈಬರ್ ಕಳ್ಳರು 20.85 ಲಕ್ಷ ರೂ. ವಂಚಿಸಿದ್ದಾರೆ.
ಹೂಡಿ ನಿವಾಸಿ ಪಿ.ಗಾಯತ್ರಿ (32)ಗೆ ಪಾರ್ಟ್ ಟೈಮ್ ಕೆಲಸ ಇರುವುದಾಗಿ ಆ.31ರಂದು ವಾಟ್ಸ್ಆ್ಯಪ್ಗೆ ಅಪರಿಚಿತರು ಸಂದೇಶ ಕಳುಹಿಸಿದ್ದರು. ನಂತರ ಕೆಲಸ ಪಡೆಯಲು ಟೆಲಿಗ್ರಾಮ್ನಲ್ಲಿರುವ ತಮ್ಮ ಗ್ರೂಪ್ಗೆ ಸೇರ್ಪಡೆಯಾಗುವಂತೆ ಸೂಚಿಸಿದ್ದರು. ಗಾಯತ್ರಿ ಟೆಲಿಗ್ರಾಂನಲ್ಲಿ ಇವರ ಗ್ರೂಪ್ಗೆ ಸೇರ್ಪಡೆಯಾದ ಬಳಿಕ ಟಾಸ್ಕ್ಗಳನ್ನು ಪೂರ್ಣಗೊಳಿಸಬೇಕಾಗುತ್ತದೆ ಎಂದು ಮಾಹಿತಿ ನೀಡಿದ್ದರು. ಹೆಚ್ಚಿನ ಟಾಸ್ಕ್ ಪಡೆಯಲು ತಮ್ಮ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡುವಂತೆ ಅಪರಿಚಿತರು ಸೂಚಿಸಿದ್ದರು. ಅದರಂತೆ ಗಾಯತ್ರಿ ತಮ್ಮ ಪತಿಯ ಬ್ಯಾಂಕ್ ಖಾತೆಯಿಂದ ಹಂತವಾಗಿ 20.85 ಲಕ್ಷ ರೂ. ಅನ್ನು ಅಪರಿಚಿತರ ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದರು. ನೀವು ಕಳುಹಿಸಿರುವ ದುಡ್ಡು ವಿತ್ ಡ್ರಾ ಮಾಡಬೇಕಾದರೆ ಇನ್ನಷ್ಟು ದುಡ್ಡು ಜಮೆ ಮಾಡುವಂತೆ ಅಪರಿಚಿತರು ಸೂಚಿಸಿದ್ದರು. ಆತಂಕಗೊಂಡ ಗಾಯತ್ರಿ ಈ ಬಗ್ಗೆ ಪರಿಶೀಲಿಸಿದಾಗ ಇದು ಸೈಬರ್ ಕಳ್ಳರ ಕೈ ಚಳಕ ಎಂಬುದು ಗೊತ್ತಾಗಿದೆ.