Udayavni Special

ಒತ್ತುವರಿಗೆ ಸಹಕರಿಸದ ಅಧಿಕಾರಿಗಳನ್ನು ಜೈಲಿಗೆ ಹಾಕಿ


Team Udayavani, Jun 15, 2019, 3:05 AM IST

ottuvarii

ಬೆಂಗಳೂರು: ರಾಜಕಾರಣಿಗಳು, ಪ್ರಭಾವಿಗಳ ಜತೆ ಶಾಮೀಲಾಗಿರುವ ಬಿಬಿಎಂಪಿ ಅಧಿಕಾರಿಗಳಿಗೆ ರಾಜಕಾಲುವೆ ಹಾಗೂ ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ಮುಂದಾಗುತ್ತಿಲ್ಲ. ಇಂತಹ ಅಧಿಕಾರಿಗಳನ್ನು ಕೂಡಲೇ ಜೈಲಿಗೆ ಹಾಕಬೇಕು ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ರಾಜಕಾಲುವೆ ಮತ್ತು ಕೆರೆಗಳ ಒತ್ತುವರಿ ತೆರವಿಗೆ ಒತ್ತಾಯಿಸಿ ದೊರೆಸ್ವಾಮಿ ಅವರ ನೇತೃತ್ವದಲ್ಲಿ ಭೂ ಕಬಳಿಕೆ ವಿರೋಧ ಹೋರಾಟ ಸಮಿತಿಯಿಂದ ಬಿಬಿಎಂಪಿ ಕೇಂದ್ರ ಕಚೇರಿಯ ಎದುರು ಪ್ರತಿಭಟನೆ ನಡೆಸಲಾಯಿತು.

ಕೆರೆ, ಕಾಲುವೆಗಳನ್ನು ಒತ್ತುವರಿ ಮಾಡಿಕೊಂಡು ಅನಧಿಕೃತವಾಗಿ ಕಟ್ಟಡಗಳನ್ನು ನಿರ್ಮಿಸಿರುವುದರಿಂದ ಮಳೆಗಾಲದಲ್ಲಿ ಬಹುತೇಕ ಪ್ರದೇಶಗಳು ಜಲಾವೃತದ ಭೀತಿ ಎದುರಿಸುತ್ತಿವೆ. ಆದರೆ, ಪಾಲಿಕೆಯ ಅಧಿಕಾರಿಗಳು ಮಾತ್ರ ಕಿಂಚಿತ್ತೂ ಕಾಳಜಿಯಿಲ್ಲದೆ ಭೂಗಳ್ಳರಿಗೆ ಸಹಾಯ ಮಾಡುತ್ತಿದ್ದಾರೆ ಎಂದು ಸಮಿತಿ ಸದಸ್ಯರು ಬಿಬಿಎಂಪಿ ವಿರುದ್ಧ ಘೋಷಣೆ ಕೂಗಿದರು.

ಪ್ರತಿಭಟನೆಯನ್ನು ಉದ್ದೇಶಿಸಿದ ಮಾತನಾಡಿದ ದೊರೆಸ್ವಾಮಿ ಅವರು, ರಾಜಕಾಲುವೆ ಮತ್ತು ಕೆರೆ ಒತ್ತುವರಿ ಸಂಬಂಧ ಹಲವು ವರ್ಷಗಳಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಆದರೆ, ಬಿಬಿಎಂಪಿ ಅಧಿಕಾರಿಗಳು ಮಾತ್ರ ತಮಗೆ ಯಾವುದೇ ಸಂಬಂಧವಿಲ್ಲವೆಂಬಂತೆ ವರ್ತಿಸುತ್ತಿದ್ದು, ಪ್ರಭಾವಿಗಳು, ರಾಜಕಾರಣಿಗಳ ಜತೆ ಶಾಮೀಲಾಗಿ ಒತ್ತುವರಿ ತೆರವಿಗೆ ಸೂಕ್ತ ಕ್ರಮ ವಹಿಸುತ್ತಿಲ್ಲ ಎಂದು ಆರೋಪಿಸಿದರು.

ರಾಜಕಾಲುವೆ ಒತ್ತುವರಿ ತೆರವಿಗೆ ಆದೇಶ ನೀಡಿದ ವೇಳೆ ಆರ್‌ಆರ್‌ನಗರ ಸೇರಿದಂತೆ ಹಲವೆಡೆ ಬಡವರು, ಧ್ವನಿಯಿಲ್ಲದವರ ಮನೆಗಳನ್ನು ಮಾತ್ರ ಕೆಡವಿ ಬೀದಿಗೆ ಬೀಳುವಂತೆ ಮಾಡಿದ್ದಿರಾ. ಅದೇ ರಾಜಕಾಲುವೆ ಮೇಲೆಯೇ ನಿರ್ಮಿಸಿರುವ ನಟ ದರ್ಶನ್‌ ಮನೆ, ಮಾಜಿ ಸಚಿವ ಶ್ಯಾಮನೂರು ಶಿವಶಂಕರಪ್ಪ ಅವರ ಒಡೆತನದ ಆಸ್ಪತ್ರೆಯನ್ನು ನೀವು ಏಕೆ ಒಡೆದಿಲ್ಲ? ಯಾಕೆ ನೀವು ಅವರ ಜತೆ ಶಾಮಿಲಾಗಿದ್ದೀರಾ? ನಿಮಗೆ ಆ ಕಟ್ಟಡಗಳನ್ನು ತೆರವುಗೊಳಿಸಲು ಧೈರ್ಯವಿಲ್ಲವೆ? ಎಂದು ಪಾಲಿಕೆ ಆಯುಕ್ತರು ಮತ್ತು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ನಗರದ ಜನತೆಯ ಕ್ಷೇಮಕ್ಕಾಗಿ ಸರ್ಕಾರದ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ನಿಜವಾಗಿಯೂ ಎಲ್ಲಿ ಸಮಸ್ಯೆ ಆಗುತ್ತಿದೆಯೋ ಅಲ್ಲಿ ಯಾವುದೇ ಮುಲಾಜಿಲ್ಲದೆ ತೆರವುಗೊಳಿಸುವ ಸಾಮರ್ಥಯ ಅಧಿಕಾರಿಗಳಲ್ಲಿರಬೇಕು. ಆದರೆ, ನೀವುಗಳು ರಾಜಕಾರಣಿಗಳ ಗುಲಾಮರಾಗಿ ಅವರೇಳಿದ ರೀತಿಯಲ್ಲಿ ಕೆಲಸ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ತರಾಟೆಗೆ ತೆಗೆದುಕೊಂಡರು.

ಒತ್ತುವರಿ ತೆರವುಗೊಳಿಸುವ ಮೊದಲು ಅವರಿಗೆ ನೋಟಿಸ್‌ ಜಾರಿಗೊಳಿಸಬೇಕು. ಜತೆಗೆ ಅವರಿಗೆ ಪುನರ್ವಸತಿ ಕಲ್ಪಿಸಬೇಕಾಗುತ್ತದೆ. ಆದರೆ, ಪಾಲಿಕೆಯ ಅಧಿಕಾರಿಗಳು ಯಾವುದೇ ನೋಟಿಸ್‌ ನೀಡದೆ ಏಕಾಏಕಿ ಬಡವರ ಮನೆಗಳನ್ನು ಒಡೆದು ಅವರನ್ನು ಬೀದಿಗೆ ತಳ್ಳಿದಿರಿ ಎಂದು ದೂರಿದರು.

ನಗರದಲ್ಲಿನ ರಾಜಕಾಲುವೆ ಒತ್ತುವರಿ ಪ್ರಕರಣಗಳ ತೆರವಿಗೆ ಕೂಡಲೇ ಕ್ರಿಯಾ ಯೋಜನೆ ರೂಪಿಸಿ, ಮುಂದಿನ 15 ದಿನಗಳಲ್ಲಿ ಅಂತಹ ಪ್ರಕರಣಗಳಲ್ಲಿ ಪಾಲಿಕೆಯಿಂದ ಕೈಗೊಂಡಿರುವ ಕ್ರಮಗಳು ಕುರಿತು ಮಾಹಿತಿ ನೀಡಬೇಕು. ಇಲ್ಲದಿದ್ದರೆ ಅನಿರ್ದಿಷ್ಟಾವಧಿ ಧರಣಿ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ವಾರದಲ್ಲಿ ಕ್ರಿಯಾಯೋಜನೆ: ಒಂದು ವಾರದಲ್ಲಿ ರಾಜಕಾಲುವೆ ಒತ್ತುವರಿ ತೆರವಿಗೆ ಕೈಗೊಂಡಿರುವ ಕ್ರಮಗಳು ಮತ್ತು ಕೆರೆಗಳ ಅಭಿವೃದ್ಧಿ ಕುರಿತ ವಿಸ್ತೃತವಾದ ಕ್ರಿಯಾಯೋಜನಾ ವರದಿ ನೀಡಲಾಗುವುದು. ಜತೆಗೆ ಪಾಲಿಕೆಯ ವೆಬ್‌ಸೈಟ್‌ನಲ್ಲಿ ಫೋಟೊ ಸಹಿತ ವಿವರಗಳನ್ನು ಪ್ರಕಟಿಸಲಾಗುವುದು ಎಂದು ಮನವಿ ಪತ್ರ ಸ್ವೀಕರಿಸಿದ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಭರವಸೆ ನೀಡಿದರು.

ಕೆರೆಗಳ ಒಡೆತನ ಕಂದಾಯ ಇಲಾಖೆಯದ್ದಾಗಿದ್ದು, ಬಿಬಿಎಂಪಿಯಿಂದ ಕೆರೆಗಳ ನಿರ್ವಹಣೆ ಮಾತ್ರ ಮಾಡಲಾಗುತ್ತಿದೆ. ಈಗಾಗಲೇ ಪಾಲಿಕೆಯಿಂದ 74 ಕೆರೆಗಳನ್ನು ಅಭಿವೃದ್ಧಿಪಡಿಸಿದ್ದು, ಒಳಚರಂಡಿ ನೀರು ಕೆರೆಗಳಿಗೆ ಹರಿಯದಂತೆ ಕ್ರಮಕೈಗೊಳ್ಳಲಾಗಿದೆ. ಕೆರೆಗಳ ಒತ್ತುವರಿ ತೆರವಿಗೆ ಕಂದಾಯ ಇಲಾಖೆಯೊಂದಿಗೆ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದರು.

ನಗರದಲ್ಲಿ 842 ಕಿ.ಮೀ ಉದ್ದದ ರಾಜಕಾಲುವೆ ಮಾರ್ಗವಿದ್ದು, ಈಗಾಗಲೇ 349 ಕಿ.ಮೀ ಉದ್ದದ ಕಾಲುವೆ ಅಭಿವೃದ್ಧಿಪಡಿಸಿ, ತಡೆಗೋಡೆ ನಿರ್ಮಿಸಲಾಗಿದೆ. ಭೂಮಾಪಕರಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ 1950 ಒತ್ತುವರಿ ಪ್ರಕರಣಗಳನ್ನು ಗುರುತಿಸಿದ್ದು, ತೆರವು ಕಾರ್ಯಾಚರಣೆ ಆರಂಭಿಸಲಾಗಿದೆ.

ಕಂದಾಯ ವಿಭಾಗ ಹಾಗೂ ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭೂಮಾಪಕರ ಮೂಲಕ ತಿಂಗಳಿಗೆ 250 ಒತ್ತುವರಿಗಳನ್ನು ಗುರುತಿಸಿ, ಅದನ್ನು ತೆರವುಗೊಳಿಸುವ ಯೋಜನೆ ರೂಪಿಸಲಾಗಿದ್ದು, ಒತ್ತುವರಿಗೆ ಸಹಕರಿಸದ‌ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಟಾಪ್ ನ್ಯೂಸ್

Championd

ಸೂಪರ್‌ ಚೆನ್ನೈಗೆ 4ನೇ ಐಪಿಎಲ್‌ ಕಿರೀಟ

“ಸರ್ದಾರ್‌ ಪಟೇಲ್‌ರ ಹಾದಿಯಲ್ಲೇ ನಡೆಯಿರಿ’

“ಸರ್ದಾರ್‌ ಪಟೇಲ್‌ರ ಹಾದಿಯಲ್ಲೇ ನಡೆಯಿರಿ’

ಜೆಇಇ- ಅಡ್ವಾನ್ಸ್ಡ್ ಫ‌ಲಿತಾಂಶ ಪ್ರಕಟ: ಮೃದುಲ್‌ ಟಾಪರ್‌

ಜೆಇಇ- ಅಡ್ವಾನ್ಸ್ಡ್ ಫ‌ಲಿತಾಂಶ ಪ್ರಕಟ: ಮೃದುಲ್‌ ಟಾಪರ್‌

ಉನ್ನತ ಶಿಕ್ಷಣ ಸಚಿವರಿಗೆ ಸನ್ಮಾನ ಸಲ್ಲಿಸಿದ ದುಬೈ ಕನ್ನಡಿಗರು

ಉನ್ನತ ಶಿಕ್ಷಣ ಸಚಿವರಿಗೆ ಸನ್ಮಾನ ಸಲ್ಲಿಸಿದ ದುಬೈ ಕನ್ನಡಿಗರು

ಭೀತಿ ಹುಟ್ಟಿಸಲು ನಾಗರಿಕರ ಹತ್ಯೆ: ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌

ಭೀತಿ ಹುಟ್ಟಿಸಲು ನಾಗರಿಕರ ಹತ್ಯೆ: ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌

ಮಾಜಿ ಪಿಎಂ ಮನಮೋಹನ್‌ ಸಿಂಗ್‌ ಆರೋಗ್ಯ ಸ್ಥಿರ

ಮಾಜಿ ಪಿಎಂ ಮನಮೋಹನ್‌ ಸಿಂಗ್‌ ಆರೋಗ್ಯ ಸ್ಥಿರ

ವಿಕ್ರಾಂತ್‌ ನಿರ್ಮಾಣದ ವೆಚ್ಚ ವ್ಯರ್ಥವಾಗದು: ಕರಮ್‌ಬೀರ್‌ ಸಿಂಗ್‌ ಭರವಸೆ

ವಿಕ್ರಾಂತ್‌ ನಿರ್ಮಾಣದ ವೆಚ್ಚ ವ್ಯರ್ಥವಾಗದು: ಕರಮ್‌ಬೀರ್‌ ಸಿಂಗ್‌ ಭರವಸೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

hjuyuty

ಕೋವಿಡ್: ರಾಜ್ಯದಲ್ಲಿಂದು 470 ಹೊಸ ಪ್ರಕರಣ ಪತ್ತೆ | 368 ಸೋಂಕಿತರು ಗುಣಮುಖ 

fgdre

ನಟ ಜಿ.ಕೆ.ಗೋವಿಂದ ರಾವ್ ನಿಧನಕ್ಕೆ ನಳಿನ್‍ ಕುಮಾರ್ ಸಂತಾಪ

fgdfdtrr

ಉಪಚುನಾವಣೆ: ಅ.17 ರಿಂದ ಹಾನಗಲ್ ನಲ್ಲಿ ಸಿ.ಎಂ ಪ್ರಚಾರ

FDFT

ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ಮತ್ತೆ ಪ್ರಾರಂಭ : ಆರ್ ಅಶೋಕ್

jyutyuty

ದೇವಾಲಯಗಳ ಆಧ್ಯಾತ್ಮಿಕ ವಾತಾವರಣ ಇನ್ನಷ್ಟು ಸುಧಾರಣೆಗೆ ಕ್ರಮ: ಸಚಿವೆ ಶಶಿಕಲಾ ಜೊಲ್ಲೆ

MUST WATCH

udayavani youtube

ಯಾರಿಗೆ ಒಲಿಯುತ್ತೆ IPL ಟ್ರೋಫಿ|UDAYAVANI NEWS BULLETIN|15/10/2021

udayavani youtube

ನವರಾತ್ರಿ ಸಂಭ್ರಮ: ಶಿರಸಿ ಮಾರಿಕಾಂಬಾ ದೇವಸ್ಥಾನಕ್ಕೆ ಭಕ್ತರ ದಂಡು

udayavani youtube

ಅಂಬಾರಿ ಹೊರುವ ಅಭಿಮನ್ಯುಗೆ ಮತ್ತು ದಸರಾ ಗಜಪಡೆಗೆ ಬಣ್ಣದ ಅಲಂಕಾರ..

udayavani youtube

ಇದೇ ದಸರಾ ಇತಿಹಾಸದಲ್ಲೇ ಮೊದಲ ಬಾರಿಗೆ ಅಂಬಾರಿ‌ಉತ್ಸವ ಮೂರ್ತಿ ಮೆರವಣಿಗೆ…

udayavani youtube

ಮೈಸೂರು ದಸರಾ: ಅಭಿಮನ್ಯು ಕಂಡರೆ ಕಾಡಾನೆಗೆ ಮೈನಡುಕ!

ಹೊಸ ಸೇರ್ಪಡೆ

Championd

ಸೂಪರ್‌ ಚೆನ್ನೈಗೆ 4ನೇ ಐಪಿಎಲ್‌ ಕಿರೀಟ

“ಸರ್ದಾರ್‌ ಪಟೇಲ್‌ರ ಹಾದಿಯಲ್ಲೇ ನಡೆಯಿರಿ’

“ಸರ್ದಾರ್‌ ಪಟೇಲ್‌ರ ಹಾದಿಯಲ್ಲೇ ನಡೆಯಿರಿ’

ಜೆಇಇ- ಅಡ್ವಾನ್ಸ್ಡ್ ಫ‌ಲಿತಾಂಶ ಪ್ರಕಟ: ಮೃದುಲ್‌ ಟಾಪರ್‌

ಜೆಇಇ- ಅಡ್ವಾನ್ಸ್ಡ್ ಫ‌ಲಿತಾಂಶ ಪ್ರಕಟ: ಮೃದುಲ್‌ ಟಾಪರ್‌

ಉನ್ನತ ಶಿಕ್ಷಣ ಸಚಿವರಿಗೆ ಸನ್ಮಾನ ಸಲ್ಲಿಸಿದ ದುಬೈ ಕನ್ನಡಿಗರು

ಉನ್ನತ ಶಿಕ್ಷಣ ಸಚಿವರಿಗೆ ಸನ್ಮಾನ ಸಲ್ಲಿಸಿದ ದುಬೈ ಕನ್ನಡಿಗರು

ಭೀತಿ ಹುಟ್ಟಿಸಲು ನಾಗರಿಕರ ಹತ್ಯೆ: ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌

ಭೀತಿ ಹುಟ್ಟಿಸಲು ನಾಗರಿಕರ ಹತ್ಯೆ: ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.