ಅಂತ್ಯಸಂಸ್ಕಾರಕ್ಕೂ ಬಾರದ ರಮ್ಯಾ: ಅಸಮಾಧಾನ

Team Udayavani, Nov 27, 2018, 11:39 AM IST

antyasamsk.jpg

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಅಂಬರೀಶ್‌ ನೆರಳಿನಲ್ಲಿಯೇ ಬೆಳೆದು ಮಂಡ್ಯದ ಮಾಜಿ ಸಂಸದೆಯೂ ಆಗಿರುವ ರಮ್ಯಾ ಅವರು ಅಂಬರೀಶ್‌ ಅಂತಿಮ ದರ್ಶನ ಪಡೆಯದಿರುವುದು, ಅಂತ್ಯಕ್ರಿಯೆಗೆ ಆಗಮಿಸದಿರುವುದು ಚರ್ಚೆಗೆ ಗ್ರಾಸವಾಗಿದೆ. 

ಅಂಬರೀಶ್‌ ನಿಧನ ಸುದ್ದಿ ತಿಳಿದು ಟ್ವೀಟ್‌ ಮೂಲಕ ಶ್ರದ್ಧಾಂಜಲಿ ಸಲ್ಲಿಸಿರುವ ರಮ್ಯಾ, ಅಂತಿಮ ನಮನ ಸಲ್ಲಿಸಲು ಆಗಮಿಸದಿರುವುದು ಮಂಡ್ಯ ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.

ಕನ್ನಡ ಚಿತ್ರರಂಗದಲ್ಲಿ ಬಹಳಷ್ಟು ಮಂದಿಗೆ “ಗಾಡ್‌ ಫಾದರ್‌’ ಆಗಿದ್ದ ಅಂಬರೀಶ್‌ ಅವರನ್ನು ರಮ್ಯಾ “ಅಂಕಲ್‌’ ಎಂದೇ ಕರೆಯುತ್ತಿದ್ದರು. ಅಲ್ಲದೇ ಮಂಡ್ಯದಲ್ಲಿ 2013ರಲ್ಲಿ ನಡೆದ ಲೋಕಸಭಾ ಉಪ ಚುನಾವಣೆಗೆ ರಮ್ಯಾ ಅಭ್ಯ ರ್ಥಿ ಯಾಗಲು ಅಂಬ ರೀಶ್‌ ಅವರೇ ಕಾರಣ.

ಅಲ್ಲದೆ, ರಮ್ಯಾ ಗೆಲುವಿಗೂ ಪ್ರಮುಖ ಪಾತ್ರ ವಹಿಸಿದ್ದರು. ಹೀಗಾಗಿ, ಅಂಬಿ ಅವರ ಅಂತಿಮ ದರ್ಶನಕ್ಕೆ ಆಗಮಿಸುತ್ತರೆ ಎಂದು ಮಂಡ್ಯದ ಜನ ನಿರೀಕ್ಷಿಸಿದ್ದರು. ರಮ್ಯಾ ಅನುಪಸ್ಥಿತಿಗೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ಸಂಪರ್ಕಕ್ಕೂ ಲಭ್ಯವಾಗಿಲ್ಲ. 

ಸಂಸದೆಯಾಗಿ ಆಯ್ಕೆಯಾದ ಮೇಲೆ ರಮ್ಯಾ ಆರಂಭದಲ್ಲಿ ಮಾಜಿ ಸಿಎಂ ಎಸ್‌.ಎಂ. ಕೃಷ್ಣ ಬಣದಲ್ಲಿ ಗುರುತಿಸಿಕೊಂಡು, ನಂತರ ರಾಷ್ಟ್ರೀಯ ನಾಯಕರ  ಸಂಪರ್ಕ ಹೆಚ್ಚಾದಂತೆ ಸ್ಥಳೀಯ ನಾಯಕರನ್ನು ಕಡೆಗಣಿಸಿದರು ಎಂಬ ಆರೋಪ ಅವರ ಮೇಲಿದೆ.
ನಂತರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ಸೋಲಿಗೆ ಅಂಬರೀಶ್‌ ಕಾರಣ ಎಂದು ಭಾವಿಸಿದ್ದ ರಮ್ಯಾ ಆಗಿನಿಂದಲೇ ಅವರಿಂದ ಅಂತರ ಕಾಯ್ದುಕೊಂಡಿದ್ದರೆನ್ನಲಾಗಿದೆ. ಆದರೆ ಈ ರಾಜಕೀಯ ಭಿನ್ನಾಭಿಪ್ರಾಯದಿಂದಲೇ ಅಂತಿಮ ದರ್ಶನಕ್ಕೆ ಆಗಮಿಸಲಿಲ್ಲವೇ ಎನ್ನುವುದು ಖಚಿತವಾಗಿಲ್ಲ. 

ಅಂತಿಮ ದರ್ಶನ ಪಡೆಯಲು ಆಗಮಿಸದ ರಮ್ಯಾ ಅವರಿಗೆ ವೈಯಕ್ತಿಕವಾಗಿ ಯಾವ ಕಾರಣ ಇದೆಯೋ ನಮಗೆ ಗೊತ್ತಿಲ್ಲ. ಅವರು ಪಾಳೊYಳ್ಳದಿರಲು ಏನು ಕಾರಣ ಎಂಬ ಬಗ್ಗೆ ನಮಗೆ  ಮಾಹಿತಿ ಇಲ್ಲ. ಪಾಲ್ಗೊಳ್ಳುವುದು, ಬಿಡುವುದು ಅವರ ವೈಯಕ್ತಿಕ ವಿಷಯ.
-ಗಂಗಾಧರ್‌, ಮಂಡ್ಯ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ

ಸಾವಿನಲ್ಲಿ ಗೌರವಿಸದವರು  ಮನರೂಪದ ರಾಕ್ಷಸ ಗುಣದವರು. ಕ್ರೂರತ್ವದ ಮಗ್ಗಲು ಪ್ರಕಟಿಸಿದ ಮಹನೀಯರು. ದೇವನೊಬ್ಬ ಇರುವ ಅವ ಎಲ್ಲ ನೋಡುತಿರುವ. ದೋಸೆ ಮಗಚಿ ತಳ ಸೀಯುತ್ತದೆ ತಪ್ಪದೆ ಒಂದು ದಿನ. ಯಥಾ ಮನಃ ತಥಾ ಜೀವನ.
-ಜಗ್ಗೇಶ್‌, ಚಿತ್ರ ನಟ

ಟಾಪ್ ನ್ಯೂಸ್

ಕನ್ನಡ ಸಂಘಟನೆಗಳು ಏನು ಮಾಡುತ್ತಿವೆ: ಡಿಕೆಶಿ ಪ್ರಶ್ನೆ

ಕನ್ನಡ ಸಂಘಟನೆಗಳು ಏನು ಮಾಡುತ್ತಿವೆ: ಡಿಕೆಶಿ ಪ್ರಶ್ನೆ

ವನಿತಾ ಟಿ20 ಚಾಲೆಂಜ್‌: ಸೂಪರ್‌ ನೋವಾ -ವೆಲಾಸಿಟಿ ಫೈನಲ್‌

ವನಿತಾ ಟಿ20 ಚಾಲೆಂಜ್‌: ಸೂಪರ್‌ ನೋವಾ -ವೆಲಾಸಿಟಿ ಫೈನಲ್‌

ರಾಷ್ಟ್ರೀಯ ಸರ್ಫಿಂಗ್‌: ಮೊದಲ ದಿನ ತಮಿಳುನಾಡು ಪ್ರಾಬಲ್ಯ

ರಾಷ್ಟ್ರೀಯ ಸರ್ಫಿಂಗ್‌: ಮೊದಲ ದಿನ ತಮಿಳುನಾಡು ಪ್ರಾಬಲ್ಯ

ಮೆಲ್ಟ್ ವಾಟರ್‌ ಚೆಸ್‌ : ಪ್ರಗ್ನಾನಂದ ಪ್ರಯತ್ನ ವಿಫ‌ಲ

ಮೆಲ್ಟ್ ವಾಟರ್‌ ಚೆಸ್‌ : ಪ್ರಗ್ನಾನಂದ ಪ್ರಯತ್ನ ವಿಫ‌ಲ

ಐಪಿಎಲ್‌ 2022: ಜಾಸ್‌ ಬಟ್ಲರ್‌ ಶತಕದ ಜೋಶ್‌; ಆರ್‌ಸಿಬಿ ಔಟ್‌

ಐಪಿಎಲ್‌ 2022: ಜಾಸ್‌ ಬಟ್ಲರ್‌ ಶತಕದ ಜೋಶ್‌; ಆರ್‌ಸಿಬಿ ಔಟ್‌

ಕೋವಿಡ್‌ ಲಸಿಕೆ ಪಡೆದ ತತ್‌ಕ್ಷಣ ಪ್ರಮಾಣಪತ್ರ: ಕೇಂದ್ರ ಸರಕಾರ

ಕೋವಿಡ್‌ ಲಸಿಕೆ ಪಡೆದ ತತ್‌ಕ್ಷಣ ಪ್ರಮಾಣಪತ್ರ: ಕೇಂದ್ರ ಸರಕಾರ

ನಾರಾವಿಯಲ್ಲಿ ಮುರಿದುಬಿತ್ತು ಅದ್ದೂರಿ ಮದುವೆ

ನಾರಾವಿಯಲ್ಲಿ ಮುರಿದುಬಿತ್ತು ಅದ್ದೂರಿ ಮದುವೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಂದಿರಾ ಕ್ಯಾಂಟೀನ್‌ಗೆ ಇಸ್ಕಾನ್‌ ಊಟ; ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆ

ಇಂದಿರಾ ಕ್ಯಾಂಟೀನ್‌ಗೆ ಇಸ್ಕಾನ್‌ ಊಟ; ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆ

ತಾಜಾ ಮಾವು, ಹಲಸು ಬೇಕಾ?ಮೇಳಕ್ಕೆ ಬನ್ನಿ;ಲಾಲ್‌ಬಾಗ್‌ನಲ್ಲಿ ಜೂ.13ರವರೆಗೆ ಪ್ರದರ್ಶನ, ಮಾರಾಟ

ತಾಜಾ ಮಾವು, ಹಲಸು ಬೇಕಾ?ಮೇಳಕ್ಕೆ ಬನ್ನಿ;ಲಾಲ್‌ಬಾಗ್‌ನಲ್ಲಿ ಜೂ.13ರವರೆಗೆ ಪ್ರದರ್ಶನ, ಮಾರಾಟ

5theft

ಸ್ತ್ರೀಯರ ವೇಷದಲ್ಲಿ ಫೈನಾನ್ಸ್‌ನಲ್ಲಿ ಕಳವಿಗೆ ಯತ್ನ: ಸೈರನ್‌ ಶಬ್ದ ಕೇಳಿ ಆರೋಪಿಗಳು ಪರಾರಿ  

4fraud

ಮೆಡಿಕಲ್‌ ಸೀಟ್‌ ನೆಪದಲ್ಲಿ ವಂಚನೆ: ವಂಚಿಸಿದ ಹಣ ಕೇಳಿದ್ದಕ್ಕೆ ಹನಿಟ್ರ್ಯಾಪ್‌

3lake

ಕೆರೆಯಲ್ಲಿ ಮುಳುಗಿ ಮೂವರು ಬಾಲಕರು ಸಾವು

MUST WATCH

udayavani youtube

ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶ್ರೀ ಹುಲಿಗೆಮ್ಮ ದೇವಿಯ ಮಹಾರಥೋತ್ಸವ

udayavani youtube

ಶಂಕರನಾರಾಯಣ : ವಾರಾಹಿ ನದಿಯಲ್ಲಿ ಮುಳುಗಿ ರೈತ ಸಾವು

udayavani youtube

ಚಿತ್ರದುರ್ಗದ ಐತಿಹಾಸಿಕ ಮುರುಘಾ ಮಠದ ಉತ್ತರಾಧಿಕಾರಿಯಾಗಿ ಬಸವಾದಿತ್ಯ ಶ್ರೀ ಆಯ್ಕೆ

udayavani youtube

ಉಸಿರಾಟದ ಸಮಸ್ಯೆ: ಕೇದಾರನಾಥದಲ್ಲಿ ಮತ್ತೆ ನಾಲ್ವರು ಯಾತ್ರಾರ್ಥಿಗಳ ಸಾವು

udayavani youtube

ಮಳಲಿ ಮಸೀದಿಯ ಸರ್ವೇ ನಡೆಯಲಿ ಜನರು ಸತ್ಯ ತಿಳಿಯಲಿ : ಡಾ ಸುರೇಂದ್ರ ಕುಮಾರ್ ಜೈನ್

ಹೊಸ ಸೇರ್ಪಡೆ

ಕನ್ನಡ ಸಂಘಟನೆಗಳು ಏನು ಮಾಡುತ್ತಿವೆ: ಡಿಕೆಶಿ ಪ್ರಶ್ನೆ

ಕನ್ನಡ ಸಂಘಟನೆಗಳು ಏನು ಮಾಡುತ್ತಿವೆ: ಡಿಕೆಶಿ ಪ್ರಶ್ನೆ

ವನಿತಾ ಟಿ20 ಚಾಲೆಂಜ್‌: ಸೂಪರ್‌ ನೋವಾ -ವೆಲಾಸಿಟಿ ಫೈನಲ್‌

ವನಿತಾ ಟಿ20 ಚಾಲೆಂಜ್‌: ಸೂಪರ್‌ ನೋವಾ -ವೆಲಾಸಿಟಿ ಫೈನಲ್‌

ರಾಷ್ಟ್ರೀಯ ಸರ್ಫಿಂಗ್‌: ಮೊದಲ ದಿನ ತಮಿಳುನಾಡು ಪ್ರಾಬಲ್ಯ

ರಾಷ್ಟ್ರೀಯ ಸರ್ಫಿಂಗ್‌: ಮೊದಲ ದಿನ ತಮಿಳುನಾಡು ಪ್ರಾಬಲ್ಯ

ಮೆಲ್ಟ್ ವಾಟರ್‌ ಚೆಸ್‌ : ಪ್ರಗ್ನಾನಂದ ಪ್ರಯತ್ನ ವಿಫ‌ಲ

ಮೆಲ್ಟ್ ವಾಟರ್‌ ಚೆಸ್‌ : ಪ್ರಗ್ನಾನಂದ ಪ್ರಯತ್ನ ವಿಫ‌ಲ

ಐಪಿಎಲ್‌ 2022: ಜಾಸ್‌ ಬಟ್ಲರ್‌ ಶತಕದ ಜೋಶ್‌; ಆರ್‌ಸಿಬಿ ಔಟ್‌

ಐಪಿಎಲ್‌ 2022: ಜಾಸ್‌ ಬಟ್ಲರ್‌ ಶತಕದ ಜೋಶ್‌; ಆರ್‌ಸಿಬಿ ಔಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.