ಶಬರಿಮಲೆ ಮಹಿಳೆಯರಲ್ಲಿಯೇ ಅಪಸ್ವರಕ್ಕೆ ವಿಷಾದ

Team Udayavani, Oct 8, 2018, 6:30 AM IST

7bnp-19.jpg

ಬೆಂಗಳೂರು: ತ್ರಿವಳಿ ತಲಾಖ್‌, ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶ ನಿರ್ಬಂಧದಂತಹ ಧಾರ್ಮಿಕ ಕಂದಾಚಾರಗಳ ವಿರುದ್ಧದ ಮಹಿಳೆಯರ ಹೋರಾಟ, ಲಿಂಗ ಪರಿವರ್ತಿತ ಮಹಿಳೆಯರು ಅನುಭವಿಸುವ ಅವಮಾನಗಳು, ನಟ-ನಟಿಯರು ತಮ್ಮದೇ ಕ್ಷೇತ್ರದಲ್ಲಿ ಎದುರಿಸುವ ಸಮಸ್ಯೆಗಳು, ಕ್ರೀಡೆಗಳಲ್ಲಿ ಮಹಿಳೆಯರಿಗಿರುವ ತೊಡಕಿನ ವಿಚಾರಗಳು ಫೇಸ್‌ಬುಕ್‌ ಹಾಗೂ ಯುನೈಟೆಡ್‌ ನೇಷನ್ಸ್‌ ವುಮೆನ್‌ ಸಂಘಟನೆಗಳು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅನಾವರಣಗೊಂಡವು.

“ವಿ ದಿ ವುಮೆನ್‌’ ಎಂಬ ಶೀರ್ಷಿಕೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿನ ಮಹಿಳಾ ಸಾಧಕಿರೊಂದಿಗೆ ಹಿರಿಯ ಪತ್ರಕರ್ತೆ ಬರ್ಕಾ ದತ್‌ ಅವರು ಸಂವಾದ ನಡೆಸಿದರು. ಈ ವೇಳೆ ಸಾಧಕಿಯರು ತಾವು ನಡೆದು ಬಂದ ಹಾದಿ, ಎದುರಿಸಿದ ಸವಾಲುಗಳು, ಅವುಗಳನ್ನು ಮೀರಿ ಬೆಳೆದ ಬಗೆ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು.

ಫೇಸ್‌ಬುಕ್‌ ಮತ್ತು ಯುನೈಟೆಡ್‌ ನೇಷನ್ಸ್‌ ವುಮೆನ್‌ ಸಂಘಟನೆಗಳು ನಗರದಲ್ಲಿ ಭಾನುವಾರ ಜಂಟಿಯಾಗಿ ಆಯೋಜಿಸಿದ್ದ “ವಿ ದ ವುಮೆನ್‌’ ಎಂಬ ಸಂವಾದ ಕಾರ್ಯಕ್ರಮದಲ್ಲಿ ಶಬರಿಮಲೆ ಪ್ರಕರಣದಲ್ಲಿ ವಾದ ಮಂಡಿಸಿದ್ದ ಭಾರತೀಯ ಯುವ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಭಕ್ತಿ ಪಸ್ರಿàಜಾ ಸೇಥಿ,  ಸುಪ್ರೀಂ ಕೋರ್ಟ್‌ ಶಬರಿಮಲೆ ಪ್ರಕರಣದಲ್ಲಿ ನೀಡಿರುವ ತೀರ್ಪನ್ನು ಎಲ್ಲರೂ ಪಾಲಿಸಬೇಕು. ಆದರೆ, ಕೆಲ ಮಹಿಳೆಯರೇ ತೀರ್ಪು ಪಾಲನೆ ಬೇಡವೆಂದು ದನಿಯೆತ್ತಿರುವುದು ವಿಷಾದನೀಯ. ಮಹಿಳೆ ಎಂದೆಂದಿಗೂ ಪವಿತ್ರೆಯಾಗಿದ್ದು, ಆಕೆಯನ್ನು ಭಿನ್ನ ದೃಷ್ಟಿಯಿಂದ ನೋಡುವುದು ಸರಿಯಲ್ಲ ಎಂದರು.

ಮಾಸಿಕ ಋತುಚಕ್ರದ ನೆಪದಲ್ಲಿ ಆಕೆಯನ್ನು ದೇವಾಲಯಕ್ಕೆ ಹೋಗದಂತೆ ತಡೆಯುವುದು ಸಹ ಆಕೆಯ ಸ್ವಾತಂತ್ರ್ಯ ಹರಣ ಮಾಡಿದಂತೆ. ಸುಪ್ರೀಂ ಕೋರ್ಟ್‌ ಶಬರಿಮಲೆ ದೇವಾಲಯಕ್ಕೆ ಮಹಿಳಾ ಪ್ರವೇಶಕ್ಕೆ ಅವಕಾಶ ನೀಡಿದ್ದು, ಇದನ್ನು ಪ್ರಶ್ನಿಸಿ ಯಾರಾದರೂ ಮೇಲ್ಮನವಿ ಸಲ್ಲಿಸಿದರೆ ಅದರ ವಿರುದ್ಧವೂ ಕಾನೂನಾತ್ಮಕ ಹೋರಾಟ ಮುಂದುವರಿಸಲು ಸಿದ್ಧ ಎಂದು ಹೇಳಿದರು.

ಬಳಿಕ “ನಾವು ತ್ರಿಲಿಂಗಿ- ಮಹಿಳೆಯರು’ ವಿಷಯ ಕುರಿತು ಡಾ.ಅಕ್ಕೆ„ ಪದ್ಮಶಾಲಿ, ಅನಿದ್ಯ ಹಜ್ರಾ, ಅನುಭೂಮಿ ಬ್ಯಾನರ್ಜಿ ಅವರು ಪರಮೇಶ್‌ ಶಹಾನಿ ಅವರೊಂದಿಗೆ ತಮ್ಮ ಒಡನಾಡಿಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಂವಾದ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿಯವರು ತ್ರಿಲಿಂಗಿಗಳ ಬಗ್ಗೆ ಒಂದೂ ಮಾತನಾಡುವುದಿಲ್ಲ. ಅವರು ತಮ್ಮ ಮೌನ ಮುರಿದು ನಮ್ಮ ಸಮಸ್ಯೆಗಳನ್ನು ಆಲಿಸಲು ಮುಂದಾಗಬೇಕು. ತ್ರಿಲಿಂಗಿಗಳ ಪೈಕಿ ಶೇ.92ರಷ್ಟು ಮಂದಿ ನಿರುದ್ಯೋಗಿಗಳಿದ್ದಾರೆ. ಇದಕ್ಕೆ ಪ್ರಮುಖ ಕಾರಣ ತ್ರಿಲಿಂಗಿ ಎಂಬ ಕೀಳರಿಮೆ ಹಾಗೂ ಸಮಾಜ ನಮ್ಮನ್ನು ನೋಡುವ ದೃಷ್ಟಿಕೋನ ಎಂದು ವಿಷಾದಿಸಿದರು.

ತ್ರಿಲಿಂಗಿಗಳು ಸರಿಯಿರುವುದಿಲ್ಲ. ಅವರೊಂದಿಗೆ ಮಾತನಾಡಬೇಡಿ ಎಂದು ಪೋಷಕರೇ ಮಕ್ಕಳಿಗೆ ಹೇಳುತ್ತಾರೆ. ಇದರಿಂದಾಗಿ ಮಕ್ಕಳು ಸಹ ನಮ್ಮನ್ನು ಅನುಮಾನದಿಂದಲೇ ನೋಡುತ್ತಾರೆ. ಇಂತಹ ಭಾವನೆಗಳು ಜನರ ಮನಸ್ಸಿನಿಂದ ಹೋಗಬೇಕಿದೆ ಎಂದು ಅಭಿಪ್ರಾಯಪಟ್ಟರು.

ನನ್ನದೇ ಆದ ಐಡೆಂಟಿಟಿ ಬೇಕಿತ್ತು: ಶ್ವೇತಾ ಬಚ್ಚನ್‌ ಸಂವಾದದಲ್ಲಿ ಭಾಗವಹಿಸಿದ್ದ ಬಾಲಿವುಡ್‌ ನಟ ಅಮಿತಾಬ್‌ ಬಚ್ಚನ್‌ ಪುತ್ರಿ ಶ್ವೇತಾ ಬಚ್ಚನ್‌, “ಇವತ್ತಿನ ಭಾರತೀಯ ಮಹಿಳೆಯರು’ ವಿಷಯ ಕುರಿತು ಮಾತನಾಡಿದರು. ಈ ವೇಳೆ ನಾನು ಖ್ಯಾತ ನಟನ ಮಗಳಾಗಿದ್ದರೂ, ಆ ಗುರುತ್ವದಿಂದ ಹೊರತಾಗಿ ಸ್ವತಂತ್ರವಾಗಿ ಜನರು ನನ್ನನ್ನು ಗುರುತಿಸಬೇಕೆಂಬ ಉದ್ದೇಶದಿಂದ ಉದ್ಯಮ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಬಂದಿದ್ದೇನೆ ಎಂದರು.

ನಾನು ಮೊದಲು ಎಲ್ಲಿಗೆ ಹೋದರೂ ಬಚ್ಚನ್‌ ಮಗಳು ಎಂದು ಜನ ಗುರುತಿಸುತ್ತಿದ್ದರು. ನನ್ನ ಸ್ನೇಹಿತರಾದವರು ತುಂಬಾ ಜನರು ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿ ತಮ್ಮದೇ ಆದ ಐಡೆಂಟಿಟಿ ಕಂಡುಕೊಂಡಿದ್ದರು. ಹೀಗಾಗಿ ನನಗೂ ನನ್ನದೇ ಆದ ಐಡೆಂಟಿಟಿ ಬೇಕು ಎಂದೆನಿಸಿತ್ತು. ಇನ್ನು ನಟನೆಯಲ್ಲಿ ಆಸಕ್ತಿಯಿದ್ದರೂ, ಶಾಲೆಯಲ್ಲಿದ್ದಾಗ ತಮ್ಮ ಪ್ರಮುಖ ಪಾತ್ರ ಮಾಡಿದರೆ, ನಾನು ಸಣ್ಣ ಪಾತ್ರ ಮಾಡಿದ್ದೇ ಕೊನೆಯಾಯಿತು ಎಂದು ಸ್ಮರಿಸಿದರು.

ನನಗೆ 23 ವರ್ಷವಿದ್ದಾಗ ಮದುವೆಯಾಯಿತು. ಗಂಡ ಉದ್ಯೋಗದಲ್ಲಿದ್ದಾಗ ಹೆಚ್ಚು ಕೆಲಸವಿರುತ್ತಿರಲಿಲ್ಲ. ಹೀಗಾಗಿ ಓದುವ ಹಾಗೂ ಬರೆಯುವ ಹವ್ಯಾಸ ರೂಢಿಸಿಕೊಂಡಿದ್ದೆ. ಜತೆಗೆ ಈ ಮೊದಲೇ ನನ್ನ ಅಜ್ಜ-ಅಜ್ಜಿ ಪ್ರತಿವರ್ಷ ಹುಟ್ಟುಹಬ್ಬಕ್ಕೆ ಪದ್ಯಗಳನ್ನು ಬರೆದುಕೊಡುತ್ತಿದ್ದರು. ಅವೆಲ್ಲವೂ ನನ್ನ ಮೇಲೆ ಗಾಢ ಪ್ರಭಾವ ಬೀರಿದ್ದು, ಇಂದು ಕಾದಂಬರಿ ಬರೆಯಲು ಸಾಧ್ಯವಾಯಿತು ಎಂದು ಹರ್ಷ ವ್ಯಕ್ತಪಡಿಸಿದರು.ಸಂವಾದದಲ್ಲಿ ನಟಿಯರಾದ ಸೋನಂ ಕೆ.ಅಹುಜಾ, ತನುಶ್ರೀ ದತ್ತ, ತಾಸ್ಸಿ ಪನ್ನು, ನಟ ವಿಕಿ ಕೌಶಲ್‌, ಮಹಿಳಾ ಕ್ರಿಕೆಟ್‌ ತಂಡದ ನಾಯಕಿ ಮಿಥಾಲಿ ರಾಜ್‌, ಸ್ಯಾಕೊಫೋನ್‌ ವಾದಕಿ ಸುಬ್ಬಲಕ್ಷ್ಮೀ ಭಾಗವಹಿಸಿದ್ದರು.

ಟಾಪ್ ನ್ಯೂಸ್

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

1-weeeqwe

ಅಮೃತಶಿಲೆಯಲ್ಲಿ ಕೆತ್ತಿದ 18 ಅಡಿ ಕಾಳಿ ಮಾತೆ ಪ್ರತಿಮೆ ಇಂದು ಕೇರಳಕ್ಕೆ

ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.