Udayavni Special

ಸಿದ್ದು ಗರಂ, ಎಚ್‌ಡಿಕೆ ಬೇಸರ ವೇಣುಗೋಪಾಲ್‌ ತಲೆಬಿಸಿ

Team Udayavani, Sep 17, 2018, 6:55 AM IST

siddu-hd-vi.jpg

ಬೆಂಗಳೂರು:ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ “ಗರಂ’ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರ “ಬೇಸರ’ದ ಮಾತುಗಳಿಂದ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ತಲೆಬಿಸಿ ಮಾಡಿಕೊಳ್ಳುವಂತಾಗಿದೆ.

ಕಾವೇರಿ ನಿವಾಸದಲ್ಲಿ ವೇಣುಗೋಪಾಲ್‌ ಭೇಟಿ ಮಾಡಿದ ಸಂದರ್ಭದಲ್ಲಿ  ವಿಷಯ ಪ್ರಸ್ತಾಪಿಸಿದ ಸಿದ್ದರಾಮಯ್ಯ, ಸಮ್ಮಿಶ್ರ ಸರ್ಕಾರ ಕೆಡವಲು ತಮ್ಮ ಬೆಂಬಲಿಗರೇ ಪ್ರಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ನವರೇ ಬಿಂಬಿಸುತ್ತಿರುವ  ಬಗ್ಗೆ ಕೆ.ಸಿ.ವೇಣುಗೋಪಾಲ್‌ ಮುಂದೆ “ಗರಂ’ಆಗಿ ಮಾತನಾಡಿದರು. ಎಲ್ಲದಕ್ಕೂ ನಾನೇ ಕಾರಣ ಎಂಬುದು ಎಷ್ಟು ಸರಿ. ಸರ್ಕಾರದ ನೇತೃತ್ವ ವಹಿಸಿರುವವರು ಎಲ್ಲರನ್ನೂ ಒಟ್ಟಾಗಿ ಕರೆದೊಯ್ಯಬೇಕಲ್ಲವೇ ಎಂದರು.

ಪಾಲುದಾರ ಪಕ್ಷದ ಪ್ರತಿನಿಧಿಯಾಗಿ ಸರ್ಕಾರದಲ್ಲಿರುವ  ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಕಾಂಗ್ರೆಸ್‌ ಶಾಸಕರ ಮನವಿಗಳಿಗೆ ಸ್ಪಂದಿಸಬೇಕಲ್ಲವೇ ಎಂದು ಪ್ರಶ್ನಿಸಿದರು.ನಾನು ವಿದೇಶ ಪ್ರವಾಸ ಹೋದರೂ, ಕ್ಷೇತ್ರ ಭೇಟಿಗೆ ಹೋದರೂ ಅದಕ್ಕೆ ಒಂದು ಕಥೆ ಕಟ್ಟಲಾಗುತ್ತಿದೆ. ಇದು ನನಗೂ ನೋವು ತಂದಿದೆ ಎಂದು ಹೇಳಿದರು ಎನ್ನಲಾಗಿದೆ.

ಎಚ್‌ಡಿಕೆ ಅಸಮಾಧಾನ
ಮತ್ತೂಂದೆಡೆ ಶನಿವಾರ ತಡರಾತ್ರಿ ಕುಮಾರಕೃಪ ಅತಿಥಿಗೃಹದಲ್ಲಿ ಭೇಟಿ ಮಾಡಿದ್ದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸಹ, ಕಾಂಗ್ರೆಸ್‌ ನಾಯಕರಿಂದಲೇ ಗೊಂದಲ ಉಂಟಾಗುತ್ತಿದೆ. ಪಕ್ಷದ ಆಂತರಿಕ ಸಮಸ್ಯೆಗೂ ಸಮ್ಮಿಶ್ರ ಸರ್ಕಾರಕ್ಕೂ ಸಂಬಂಧ ಕಲ್ಪಿಸಲಾಗುತ್ತಿದೆ. ಸಾಲ ಮನ್ನಾದಂತಹ ಮಹತ್ವದ ತೀರ್ಮಾನ ಕೈಗೊಂಡರೂ ಬಂಡಾಯದ ಹೇಳಿಕೆ, ಗೊಂದಲಗಳಿಂದಾಗಿ ಅದು ಮರೆಯಾಗಿದೆ ಎಂದು ಅಸಮಾಧಾನ ತೋಡಿಕೊಂಡರು.

ಸಮ್ಮಿಶ್ರ ಸರ್ಕಾರ ರಚನೆಗೆ ಕಾಂಗ್ರೆಸ್‌ ಪಕ್ಷವೇ ಮುಂದಾಗಿ ಪ್ರಸ್ತಾವನೆ ನೀಡಿತು. ನಾವು ಅದಕ್ಕೆ ಒಪ್ಪಿದೆವು. ಆದರೆ, ಕೆಲವು ನಾಯಕರು ದಿನ ಬೆಳಗಾದರೆ ಸರ್ಕಾರ ಬೀಳಿಸುವ ಧಾಟಿಯಲ್ಲೇ ಮಾತನಾಡುತ್ತಿದ್ದಾರೆ. ಎಷ್ಟು ದಿನ ಹೀಗೆ ಮುಂದುವರಿಯುವುದು ಎಂದು ಪ್ರಶ್ನಿಸಿದರು ಎನ್ನಲಾಗಿದೆ.ಇದೇ ಸಂದರ್ಭದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಸಹ ವೇಣುಗೋಪಾಲ ಜತೆ ದೂರವಾಣಿ ಮೂಲಕ ಚರ್ಚಿಸಿದರು ಎಂದು ಹೇಳಲಾಗಿದೆ.

ಅತ್ತ  ಕುಮಾರಸ್ವಾಮಿ ಹಾಗೂ ಹಾಗೂ ಇತ್ತ ಸಿದ್ದರಾಮಯ್ಯ ಅವರ ಮಾತುಗಳಿಂದ ಇಕ್ಕಟ್ಟಿಗೆ ಸಿಲುಕಿದಂತಾದ ವೇಣುಗೋಪಾಲ್‌, ಹೈಕಮಾಂಡ್‌ ಜತೆ ಚರ್ಚಿಸಿ ಬಗೆಹರಿಸಲಾಗುವುದು ಎಂದು  ಇಬ್ಬರಿಗೂ ಭರವಸೆ ನೀಡಿದರು ಎಂದು ತಿಳಿದು ಬಂದಿದೆ.

ಟಾಪ್ ನ್ಯೂಸ್

ಕುಟುಂಬ ಯೋಜನೆಗೆ ಇಸ್ಲಾಂನಲ್ಲಿ ವಿರೋಧವಿಲ್ಲ :ಚುನಾವಣಾ ಆಯೋಗದ ಮಾಜಿ ಅಧ್ಯಕ್ಷ ಖುರೇಷಿ ಹೇಳಿಕೆ

ಕುಟುಂಬ ಯೋಜನೆಗೆ ಇಸ್ಲಾಂನಲ್ಲಿ ವಿರೋಧವಿಲ್ಲ :ಚುನಾವಣಾ ಆಯೋಗದ ಮಾಜಿ ಅಧ್ಯಕ್ಷ ಖುರೇಷಿ ಹೇಳಿಕೆ

ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ : ಸಿದ್ದರಾಮಯ್ಯ ಆರೋಪ

ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ : ಸಿದ್ದರಾಮಯ್ಯ ಆರೋಪ

ಆಸ್ಟ್ರೇಲಿಯವನ್ನು 7 ವಿಕೆಟ್‌ಗಳಿಂದ ಮಣಿಸಿ ಟಿ20 ಸರಣಿ ಗೆದ್ದ ನ್ಯೂಜಿಲ್ಯಾಂಡ್‌

ಆಸ್ಟ್ರೇಲಿಯವನ್ನು 7 ವಿಕೆಟ್‌ಗಳಿಂದ ಮಣಿಸಿ ಟಿ20 ಸರಣಿ ಗೆದ್ದ ನ್ಯೂಜಿಲ್ಯಾಂಡ್‌

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಿಂದ ವಾರ್ಷಿಕ ಪ್ರಶಸ್ತಿ ಪ್ರದಾನ

Interaction Between kudroli Ganesh

ಜಾದು ಕಲೆಯ ಗುಟ್ಟು ವಿನಾಕಾರಣ ರಟ್ಟಾಗುತ್ತಿದೆ : ಕುದ್ರೋಳಿ ಗಣೇಶ್

ನ್ಯೂಯಾರ್ಕ್ ನಲ್ಲಿ ಭಾರತೀಯ ರೆಸ್ಟೋರೆಂಟ್ ತೆರೆದ ಪ್ರಿಯಾಂಕಾ ಚೋಪ್ರಾ

ಪ್ರಧಾನಿಗೆ ರ್ಯಾಲಿ ಮಾಡಲು ಸಮಯವಿದೆ ರೈತರನ್ನು ಭೇಟಿ ಮಾಡಲು ಸಮಯವಿಲ್ಲ : ಶರದ್ ಪವಾರ್ ಟೀಕೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ : ಸಿದ್ದರಾಮಯ್ಯ ಆರೋಪ

ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ : ಸಿದ್ದರಾಮಯ್ಯ ಆರೋಪ

ಮೀಸಲಾತಿ ತೆಗೆಯಲು ಕೇಂದ್ರ ಹುನ್ನಾರ ಮಾಡುತ್ತಿದೆ : ಯು.ಟಿ ಖಾದರ್

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಿಂದ ವಾರ್ಷಿಕ ಪ್ರಶಸ್ತಿ ಪ್ರದಾನ

ನನ್ನ ಬಳಿ ಯಾವುದೇ ಗಣ್ಯರ ಲೈಂಗಿಕ ಹಗರಣದ ಯಾವುದೇ ಸಿಡಿ ಇಲ್ಲ: ಮುಲಾಲಿ

ನನ್ನ ಬಳಿ ಯಾವುದೇ ಗಣ್ಯರ ಲೈಂಗಿಕ ಹಗರಣದ ಸಿಡಿ ಇಲ್ಲ: ಮುಲಾಲಿ

ಬಿಜೆಪಿ ಕುಟುಂಬ ಸೀಮಿತ ಪಕ್ಷವಲ್ಲ, ಅದು ಸರ್ವವ್ಯಾಪಿ: ಸಚಿವ ಅರವಿಂದ್ ಲಿಂಬಾವಳಿ

ಬಿಜೆಪಿ ಕುಟುಂಬ ಸೀಮಿತ ಪಕ್ಷವಲ್ಲ, ಅದು ಸರ್ವವ್ಯಾಪಿ: ಸಚಿವ ಅರವಿಂದ್ ಲಿಂಬಾವಳಿ

MUST WATCH

udayavani youtube

ಬಿಜೆಪಿ ಸೇರಿದ ನಟ ಮಿಥುನ್ ಚಕ್ರವರ್ತಿ | ಇಂದಿನ ಸುದ್ದಿ ಸಮಾಚಾರ 7- 3- 2021

udayavani youtube

ಸಿದ್ದರಾಮಯ್ಯ ಬಳಿ ಏನೂ ಇಲ್ಲ ಬರೀ ಬೂಟಾಟಿಕೆ ಮಾಡ್ತಾರೆ: ಡಿ.ವಿ. ಸದಾನಂದ ಗೌಡ

udayavani youtube

ಖ್ಯಾತ ಕವಿ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರುಇನ್ನಿಲ್ಲ | Udayavani News Bulletin 6-3-21

udayavani youtube

ಮುಂಬೈನಲ್ಲೇನೂ ನಡೆದಿಲ್ಲ, ನಮ್ಮ ಕೈ, ಬಾಯಿ ಶುದ್ಧವಿದೆ: ಸಚಿವ ಭೈರತಿ ಬಸವರಾಜ್

udayavani youtube

ಗ್ರಾಹಕನ ಸೋಗಿನಲ್ಲಿ ಬಂದು ಚಿನ್ನ ಕಳ್ಳತನ; ಸಿನೀಮಿಯ ಶೈಲಿಯಲ್ಲಿ ಬೆನ್ನಟ್ಟಿ ಹಿಡಿದ ಮಾಲೀಕ

ಹೊಸ ಸೇರ್ಪಡೆ

ಕುಟುಂಬ ಯೋಜನೆಗೆ ಇಸ್ಲಾಂನಲ್ಲಿ ವಿರೋಧವಿಲ್ಲ :ಚುನಾವಣಾ ಆಯೋಗದ ಮಾಜಿ ಅಧ್ಯಕ್ಷ ಖುರೇಷಿ ಹೇಳಿಕೆ

ಕುಟುಂಬ ಯೋಜನೆಗೆ ಇಸ್ಲಾಂನಲ್ಲಿ ವಿರೋಧವಿಲ್ಲ :ಚುನಾವಣಾ ಆಯೋಗದ ಮಾಜಿ ಅಧ್ಯಕ್ಷ ಖುರೇಷಿ ಹೇಳಿಕೆ

ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ : ಸಿದ್ದರಾಮಯ್ಯ ಆರೋಪ

ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ : ಸಿದ್ದರಾಮಯ್ಯ ಆರೋಪ

Movies should be thought-provoking

ಸಿನೆಮಾಗಳು ಚಿಂತನೆಗೆ ಪ್ರೇರಣೆಯಾಗಬೇಕು: ಗಿರೀಶ್‌ ಕಾಸರವಳ್ಳಿ

Surgery for MP Ananthakumara Hegde

ಸಂಸದ ಅನಂತಕುಮಾರ ಹೆಗಡೆ ಕಾಲಿಗೆ ಶಸ್ತ್ರ ಚಿಕಿತ್ಸೆ

ಆಸ್ಟ್ರೇಲಿಯವನ್ನು 7 ವಿಕೆಟ್‌ಗಳಿಂದ ಮಣಿಸಿ ಟಿ20 ಸರಣಿ ಗೆದ್ದ ನ್ಯೂಜಿಲ್ಯಾಂಡ್‌

ಆಸ್ಟ್ರೇಲಿಯವನ್ನು 7 ವಿಕೆಟ್‌ಗಳಿಂದ ಮಣಿಸಿ ಟಿ20 ಸರಣಿ ಗೆದ್ದ ನ್ಯೂಜಿಲ್ಯಾಂಡ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.