ವಿಧಾನಸೌಧದಲ್ಲೇ ನಡೆದಿತ್ತು ಡೀಲ್‌


Team Udayavani, Feb 14, 2019, 7:07 AM IST

blore-1.jpg

ಬೆಂಗಳೂರು: ಸಚಿವ ಪುಟ್ಟರಂಗಶೆಟ್ಟಿ ಪ್ರಕರಣದಲ್ಲೂ ವಿಧಾನಸೌಧದಲ್ಲಿ ನಡೆದ “ಡೀಲ್‌’ ಬೆಳಕಿಗೆ ಬಂದು ರಾಜ್ಯಾದ್ಯಂತ ಚರ್ಚೆಯಾಗಿತ್ತು. ಇದೀಗ ನಕಲಿ ಸಚಿವನ ಮೋಸದ ಡೀಲ್‌ನಿಂದಾಗಿ ಶಕ್ತಿ ಕೇಂದ್ರ ಕೆಟ್ಟ ಹೆಸರು ಹೊತ್ತುಕೊಳ್ಳುವಂತಾಗಿದೆ. ವಿಧಾನಸೌಧದಲ್ಲೇ ಕೆಲಸ ಮಾಡುವ ಸರ್ಕಾರಿ ನೌಕರರ ಸಹಾಯದಿಂದ ಒಂದನೇ ಮಹಡಿಯಲ್ಲಿನ ಖಾಲಿ ಕೊಠಡಿ ಬಳಸಿಕೊಂಡಿರುವ ಮಾಜಿ ಶಾಸಕನ ಪುತ್ರ ಕಾರ್ತಿಕೇಯನ್‌ ಅಲಿಯಾಸ್‌ ಕೆ.ಕೆ.ಶೆಟ್ಟಿ ಶಾಸಕರ ಕಾರುಗಳು, ಪಾಸ್‌ಗಳನ್ನೂ ದುರ್ಬಳಕೆ ಮಾಡಿಕೊಂಡಿದ್ದಾನೆ. ಈ ಮೂಲಕ ತಮಿಳುನಾಡು ಮೂಲದ ಗೋಡಂಬಿ ವ್ಯಾಪಾರಿ ರಮೇಶ್‌ಗೆ 1.12 ಕೋಟಿ ರೂ. ವಂಚಿಸಿದ್ದಾನೆ.

ಬಂಧಿತರು ಯಾರು?: ಶೇಷಾದ್ರಿಪುರ ನಿವಾಸಿ ಪಿ. ಕಾರ್ತಿಕೇಯನ್‌ ಅಲಿಯಾಸ್‌ ಕೆ.ಕೆ.ಶೆಟ್ಟಿ (60), ಈತನ ಪುತ್ರ ಮಣಿಕಂಠ ವಾಸನ್‌ ಅಲಿಯಾಸ್‌ ಅಜಯ್‌ (25), ಕಾರ್ತಿಕೇಯನ್‌ ಸಂಬಂಧಿ ಕೆ.ಸ್ವರೂಪ್‌ (23), ತ್ಯಾಗರಾಜನಗರದ ಕೆ.ವಿ.ಸುಮನ್‌ (27), ಆರ್‌. ಅಭಿಲಾಷ್‌ ಅಲಿಯಾಸ್‌ ರಂಜಿತ್‌ (27), ತಮಿಳುನಾಡಿನ ಆರ್‌.ಕಾರ್ತಿಕ್‌ ಅಲಿಯಾಸ್‌ ಸೆಲ್ವಂ (34), ಎಂ.ಪ್ರಭು ಅಲಿಯಾಸ್‌ ರಾಮಚಂದ್ರನ್‌ (30), ಒಲ್ಡಗೊರಪ್ಪನ ಪಾಳ್ಯದ ಜಾನ್‌ಮೂನ್‌ ಅಲಿಯಾಸ್‌ ಜೋಬಿನ್‌ (49) ಬಂಧಿತರು.

ಆರೋಪಿಗಳಿಗೆ ಸಹಕಾರ ನೀಡುತ್ತಿದ್ದ ವಿಧಾನಸೌಧ ಸಿಬ್ಬಂದಿ ಮಹದೇವಸ್ವಾಮಿ ಹಾಗೂ ತಮಿಳುನಾಡಿನ ಇಳಮದಿರ ಎಂಬುವವರು ತಲೆಮರೆಸಿಕೊಂಡಿದ್ದು, ಹುಡುಕಾಟ ನಡೆಯುತ್ತಿದೆ. ಈ ಪೈಕಿ ಪ್ರಮುಖ ಆರೋಪಿ ಪಿ.ಕಾರ್ತಿಕೇಯನ್‌ ಮಾಜಿ ಶಾಸಕ ಪಳನಿಯಪ್ಪನ್‌ ಎಂಬುವವರ ಪುತ್ರ. ಹೀಗಾಗಿ ವಿಧಾನಸೌಧ ಹಾಗೂ ಶಾಸಕರ ಭವನದಲ್ಲಿ ಬಹಳಷ್ಟು ಮಂದಿ ಜತೆ ನಿಕಟ ಸಂಪರ್ಕ ಹೊಂದಿದ್ದು, ಸರ್ಕಾರಿ ನೌಕರ ಮಹದೇವಸ್ವಾಮಿ ಸಹಕಾರದಿಂದ ವಿಧಾನಸೌಧದ ಒಂದನೇ ಮಹಡಿಯಲ್ಲಿರುವ ಖಾಲಿ ಕೊಠಡಿಯನ್ನು ದುರ್ಬಳಕೆ ಮಾಡಿಕೊಂಡಿದ್ದ ಎಂದು
ಹೇಳಲಾಗಿದೆ.

ಏನಿದು ಘಟನೆ?: ತಮಿಳುನಾಡಿನ ಕೊಯಮತ್ತೂರು ನಿವಾಸಿ, ಬ್ಯಾಂಕ್‌ ಉದ್ಯೋಗಿಯಾಗಿರುವ ಇಂದಿರಾ ಅವರಿಗೆ ಪರಿಚಯವಿದ್ದ ಗೋಡಂಬಿ ವ್ಯಾಪಾರಿ ರಮೇಶ್‌ ಎಂಬುವವರು ತಮ್ಮ ಉದ್ಯಮಕ್ಕಾಗಿ 100 ಕೋಟಿ ರೂ. ಸಾಲ ಕೇಳಿದ್ದರು. ಇಂದಿರಾ, ತನಗೆ ಪರಿಚಯ ಇರುವ ಇಳಮದಿರ ಎಂಬಾತನನ್ನು ಸಂಪರ್ಕಿಸಿ ಸಾಲದ ವಿಚಾರ ತಿಳಿಸಿದ್ದರು. ಆತ ತನ್ನ ಸ್ನೇಹಿತರಾದ ಸುಂದರಂ, ಸೆಲ್ವಂ, ಅಜಯ್‌ ಮತ್ತು ಈತನ ತಂದೆ ಕಾರ್ತಿಕೇಯನ್‌ನನ್ನು ಉದ್ಯಮಿ ರಮೇಶ್‌ಗೆ ಪರಿಚಯಿಸಿಕೊಟ್ಟಿದ್ದ. ನಂತರ ತಾವು ಕಡಿಮೆ ಬಡ್ಡಿಗೆ ಸಾಲ ಕೊಡಿಸುತ್ತೇವೆ ಎಂದ ಆರೋಪಿಗಳು, ಸ್ಟಾಂಪ್‌ ಶುಲ್ಕವಾಗಿ ಸಾಲದ ಮೊತ್ತದಲ್ಲಿ ಶೇ.1.12 ರಷ್ಟು ನೀಡಬೇಕಾಗುತ್ತದೆ ಎಂದು ತಿಳಿಸಿದ್ದರು. 

ವ್ಯವಹಾರ ಹೇಗೆ?: ಸಚಿವರ ನಿಧಿಯಿಂದ 100 ಕೋಟಿ ರೂ. ಸಾಲ ಕೊಡಿಸುವ ವ್ಯವಹಾರದ ಕುರಿತು ಮಾತನಾಡಲು ವಿಧಾನಸೌಧದ ಮೊದಲ ಮಹಡಿಯ ಕೊಠಡಿಗೆ ಬರುವಂತೆ ಆರೋಪಿ ಕಾರ್ತಿಕೇಯನ್‌, ಗೋಡಂಬಿ ವ್ಯಾಪಾರಿ ರಮೇಶ್‌ಗೆ ಸೂಚಿಸಿದ್ದ. ಅದಕ್ಕೆ ಒಪ್ಪಿದ ಅವರು, ಜ.2ರಂದು ಶಕ್ತಿಕೇಂದ್ರದಲ್ಲಿ ಆರೋಪಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ನಂತರ ಎಂ.ಜಿ.ರಸ್ತೆಯಲ್ಲಿರುವ ಪಂಚತಾರಾ ಹೋಟೆಲ್‌ ಒಂದರಲ್ಲಿ ರಮೇಶ್‌ರಿಂದ 100 ರೂ. ಮೌಲ್ಯದ ಐದು ಸ್ಟಾಂಪ್‌ ಪೇಪರ್‌, 20 ರೂ. ಮೌಲ್ಯದ ಐದು ಸ್ಟಾಂಪ್‌ ಪೇಪರ್‌ಗಳ ಮೇಲೆ ಸಹಿ ಮಾಡಿಸಿಕೊಂಡ ಆರೋಪಿಗಳು, ಐದು ಚೆಕ್‌ಗಳು, ಆರು ಭಾವಚಿತ್ರಗಳನ್ನು ಪಡೆದುಕೊಂಡಿದ್ದರು.

ಅಲ್ಲದೆ, ಸಾಲ ಪಡೆಯುವುದಕ್ಕೂ ಮೊದಲು ಸ್ಟಾಂಪ್‌ ಡ್ನೂಟಿ ಶುಲ್ಕವಾಗಿ ತನ್ನ ಮಗನಿಗೆ 1.12 ಕೋಟಿ ರೂ. ಹಣವನ್ನು ಕೊಡುವಂತೆ ಕೆ.ಕೆ.ಶೆಟ್ಟಿ ಹೇಳಿದ್ದ. ಅದರಂತೆ ರಮೇಶ್‌, ಹೋಟೆಲ್‌ ಪಕ್ಕದಲ್ಲಿರುವ ಪಾರ್ಕಿಂಗ್‌ ಸ್ಥಳದಲ್ಲಿ ಅಜಯ್‌ಗೆ ಹಣ ಕೊಟ್ಟಿದ್ದಾರೆ. ಅನಂತರ ಸಾಲವನ್ನೂ ಕೊಡಿಸದೆ,
ಪಡೆದಿದ್ದ 1.12 ಕೋಟಿ ರೂ. ಹಣವನ್ನು ಹಿಂದಿರುಗಿಸದೆ ವಂಚಿಸಿದ್ದರು. ಈ ಸಂಂಬಧ ಇಂದಿರಾ ಅವರು ಜ.17ರಂದು ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ವಂಚಕರು ಪೊಲೀಸರ ಬಲೆಗೆ ಬಿದ್ದದ್ದು ಹೇಗೆ?
ವಂಚನೆ ಸಂಬಂಧ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಗಳು ಮೊಬೈಲ್‌ಗ‌ಳನ್ನು ಸ್ವಿಚ್‌ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದರು. ಆದರೆ, ಪಂಚತಾರ ಹೋಟೆಲ್‌ನಲ್ಲಿ ಉದ್ಯಮಿಯಿಂದ 1.12 ಕೋಟಿ ರೂ. ಹಣ ವರ್ಗಾವಣೆ ಮಾಡಿಕೊಂಡ ಬಳಿಕ, ಈ ಪೈಕಿ 50 ಸಾವಿರ ರೂ. ಹಣವನ್ನು ತಮಿಳುನಾಡಿನ ನಾಗನೇರಿ ತಾಲೂಕಿನ ದೇವಸ್ಥಾನವೊಂದರ ಟ್ರಸ್ಟಿ ಪ್ರಭು ಅಲಿಯಾಸ್‌ ರಾಮಚಂದನ್‌ ಖಾತೆಗೆ ವರ್ಗಾವಣೆ ಮಾಡಿದ್ದರು. ತನಿಖೆ ವೇಳೆ ಈ ಮಾಹಿತಿ ಸಂಗ್ರಹಿಸಿದ ತನಿಖಾಧಿಕಾರಿಗಳು, ಕೂಡಲೇ ಪ್ರಭುನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಜಯನಗರದಲ್ಲಿ ವಾಸವಾಗಿದ್ದ ಸುಮನ್‌ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈತನನ್ನು ವಶಕ್ಕೆ ಪಡೆದು, ಮೊಬೈಲ್‌ ಸಿಡಿಆರ್‌ಗಳನ್ನು ಪರಿಶೀಲಿಸಿದಾಗ ಆರೋಪಿಗಳು ತಮಿಳುನಾಡಿನ ಕರೂರಿನ ಮನೆಯೊಂದರಲ್ಲಿರುವ ಮಾಹಿತಿ ಸಿಕ್ಕಿತ್ತು. ಈ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಶಾಸಕರ ಭವನದ ವಾಹನ ದುರ್ಬಳಕೆ
ಆರೋಪಿ ಕಾರ್ತಿಕೇಯನ್‌, ಶಾಸಕರ ಭವನದ ಕೆಲ ಸಿಬ್ಬಂದಿ ಹಾಗೂ ಕಾರು ಚಾಲಕರನ್ನು ಪರಿಚಯಿಸಿಕೊಂಡು, ಅಗತ್ಯ
ಬಿದ್ದಾಗ ಚಾಲಕರು ಅಥವಾ ಸಿಬ್ಬಂದಿಗೆ ಕರೆ ಮಾಡಿ ವಾಹನಗಳನ್ನು ತಾನು ಇರುವಲ್ಲಿಗೆ ಕರೆಸಿಕೊಳ್ಳುತ್ತಿದ್ದ. ಹಣದಾಸೆಗೆ ಸಿಬ್ಬಂದಿಯು ಯಾರಾದರೂ ಶಾಸಕರ ಹೆಸರನ್ನು ಪುಸ್ತಕದಲ್ಲಿ ನಮೂದಿಸಿ ವಾಹನ ಕಳುಹಿಸುತ್ತಿದ್ದರು. ಇದೇ ವಾಹನದಲ್ಲಿ ಆರೋಪಿ ವಿಧಾನಸೌಧದ ಪ್ರವೇಶ ಮಾಡುತ್ತಿದ್ದ. ಸಂದರ್ಶಕರ ಪಾಸ್‌ ಇದ್ದ ಕಾರಣ ಭದ್ರತಾ ಸಿಬ್ಬಂದಿ ಯಾವುದೇ ಪರಿಶೀಲನೆ ಮಾಡದೆ ಪ್ರವೇಶ ನೀಡುತ್ತಿದ್ದರು ಎಂದು ಪೊಲೀಸರು ಹೇಳಿದರು.

ಹಣ ವರ್ಗಾವಣೆ
ಆರೋಪಿಗಳು ಪಡೆದಿದ್ದ 1.12 ಕೋಟಿ ರೂ. ಪೈಕಿ, ಆರೋಪಿ ಮಣಿಕಂಠ ವಾಸನ್‌ನ ತಾಯಿ 10 ಲಕ್ಷ ರೂ. ನಗದು ಮತ್ತು ಸ್ವರೂಪ್‌ ಪತ್ನಿ ಖಾತೆಯಿಂದ 25 ಲಕ್ಷ ರೂ. ಸೇರಿ ವಿವಿಧ ಮೂಲಗಳಿಂದ ಒಟ್ಟು 40 ಲಕ್ಷ ರೂ.ಗಳನ್ನು ದೂರುದಾರೆ ಇಂದಿರಾ ಅವರಿಗೆ ವಾಪಸ್‌ ನೀಡಿದ್ದಾರೆ. ಇನ್ನುಳಿದ 72 ಲಕ್ಷ ರೂ. ಗಳನ್ನು ವಶಪಡಿಸಿಕೊಳ್ಳಬೇಕಿದೆ ಎಂದು ಪೊಲೀಸರು ಹೇಳಿದರು.

ಟಾಪ್ ನ್ಯೂಸ್

bhagavanth-kubha

ರಸಗೊಬ್ಬರ ಕೊರತೆ; ಕಾಂಗ್ರೆಸ್ ಸುಳ್ಳಿನಿಂದ ಆತಂಕ ಸೃಷ್ಟಿ : ಭಗವಂತ್ ಖೂಬಾ

21school

ಊಟಕ್ಕಾಗಿ 1ಕಿ.ಮೀ ನಡೆಯುತ್ತಿದ್ದ ಮಕ್ಕಳು: ಕೊನೆಗೂ ಬಂತು ಬಿಸಿಯೂಟ

ನಮಗೂ ಮಾದರಿ: ನದಿ ಉಳಿಸಲು ಕಾನೂನು ರಚಿಸಿದ ದೇಶಗಳು..!

ನಮಗೂ ಮಾದರಿ: ನದಿ ಉಳಿಸಲು ಕಾನೂನು ರಚಿಸಿದ ದೇಶಗಳು..!

Tesla’s market cap crosses $1 trillion

ಟೆಸ್ಲಾ ಮಾರುಕಟ್ಟೆ ಮೌಲ್ಯ 1ಲಕ್ಷ ಕೋಟಿ ರೂ. ದಾಟಿದೆ..!

111111111

ನವೆಂಬರ್ ನಲ್ಲಿ ತೆರೆಯ ಮೇಲೆ ಮೂಡಿ ಬರಲಿದೆ ‘ಟಾಮ್ ಅಂಡ್ ಜೆರ್ರಿ’

siddaramaiah

ಜನತಾ ನ್ಯಾಯಾಲಯದ ಮುಂದೆ ಚರ್ಚೆಗೆ ಭಯವೇಕೆ : ಸಿಎಂಗೆ ಸಿದ್ದರಾಮಯ್ಯ ಪ್ರಶ್ನೆ

WS_Jazz 4

ಕನ್ನಡದಲ್ಲೇ ಮೊದಲ ಪ್ರಯೋಗ : ವಿಂಡೋಸೀಟ್ ನಲ್ಲಿ ಮೂಡಿ ಬಂತು ಜಾಝ್ ಸಾಂಗ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road accident

ರಸ್ತೆ ಅಪಘಾತ: ವರ್ಷಕ್ಕೆ 2.91 ಲಕ್ಷ ಕೋಟಿ ನಷ್ಟ!

High court of karnataka

ವರದಿಗೆ ಪ್ರತಿಕ್ರಿಯೆ ನೀಡಲು ಸರ್ಕಾರಕ್ಕೆ ಹೈ ಸೂಚನೆ‌

ನಟಿ ಮೇಲೆ ಹಲ್ಲೆ- ಮಾಜಿ ಪ್ರಿಯಕರ ಸೆರೆ

ನಟಿ ಮೇಲೆ ಹಲ್ಲೆ: ಮಾಜಿ ಪ್ರಿಯಕರ ಸೆರೆ

ನಿಷೇಧಿತ ನೋಟುಗಳ ಬದಲಾವಣೆ ಯತ್ನ ಬಿಬಿಎಂಪಿ ಉಪ ಗುತ್ತಿಗೆದಾರ ಸೇರಿ ಐವರ ಬಂಧನ | 80 ಲಕ್ಷ ರೂ. ಮೌಲ್ಯದ ಅಮಾನ್ಯಗೊಂಡ ನೋಟು ವಶ

ನಿಷೇಧಿತ ನೋಟುಗಳ ಬದಲಾವಣೆ ಯತ್ನ

ಪದವಿ ವಿದ್ಯಾರ್ಥಿಗಳಿಗೆ ಕನ್ನಡ ಕಡ್ಡಾಯ ಆದೇಶ ಮರುಪರಿಶೀಲನೆಗೆ ಹೈಕೋರ್ಟ್‌ ಸೂಚನೆ

ಪದವಿ ವಿದ್ಯಾರ್ಥಿಗಳಿಗೆ ಕನ್ನಡ ಕಡ್ಡಾಯ ಆದೇಶ ಮರುಪರಿಶೀಲನೆಗೆ ಹೈಕೋರ್ಟ್‌ ಸೂಚನೆ

MUST WATCH

udayavani youtube

ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಉಳಿಸಬೇಕಾಗಿದೆ : ಆರ್. ಅಶೋಕ್

udayavani youtube

ಆಧುನಿಕ ಪದ್ಧತಿಯೊಂದಿಗೆ ಬ್ಯಾಡಗಿ ಮೆಣಸಿನಕಾಯಿ ಕೃಷಿಗೆ ಮುಂದಾದ ಅಡಕೆ ಕೃಷಿಕ

udayavani youtube

ಬಸ್ ಕಂಡಕ್ಟರ್‌ನಿಂದ ಸೂಪರ್ ಸ್ಟಾರ್ ಆದ ರಜನಿಕಾಂತ್ ಕಥೆ

udayavani youtube

ಈ ಪ್ರೌಢ ಶಾಲೆಯಲ್ಲಿ ಒಂದಲ್ಲ, ಎರಡಲ್ಲ ಹಲವಾರು ಸಮಸ್ಯೆಗಳು!

udayavani youtube

ಪಾಕಿಸ್ಥಾನದ ವಿಜಯವನ್ನು ಸಂಭ್ರಮಿಸಿದ ರಾಜಸ್ಥಾನದ ಟೀಚರ್

ಹೊಸ ಸೇರ್ಪಡೆ

bhagavanth-kubha

ರಸಗೊಬ್ಬರ ಕೊರತೆ; ಕಾಂಗ್ರೆಸ್ ಸುಳ್ಳಿನಿಂದ ಆತಂಕ ಸೃಷ್ಟಿ : ಭಗವಂತ್ ಖೂಬಾ

21school

ಊಟಕ್ಕಾಗಿ 1ಕಿ.ಮೀ ನಡೆಯುತ್ತಿದ್ದ ಮಕ್ಕಳು: ಕೊನೆಗೂ ಬಂತು ಬಿಸಿಯೂಟ

ಮೈಸೂರು ಆರ್ಟಿಸ್ಟ್‌ ಅಸೋಸಿಯೇಷನ್‌ನಿಂದ ಸಾಮೂಹಿಕ ನಾಡಗೀತೆ

ಅನಂತಸ್ವಾಮಿ ಗೀತೆಯನ್ನೇ ನಾಡಗೀತೆಯಾಗಿ ಘೋಷಿಸಿ

ನಮಗೂ ಮಾದರಿ: ನದಿ ಉಳಿಸಲು ಕಾನೂನು ರಚಿಸಿದ ದೇಶಗಳು..!

ನಮಗೂ ಮಾದರಿ: ನದಿ ಉಳಿಸಲು ಕಾನೂನು ರಚಿಸಿದ ದೇಶಗಳು..!

20lake

ಇನ್ನೂ ತುಂಬಿಲ್ಲ ನಿಡಶೇಸಿ ಕೆರೆಯಂಗಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.