Udayavni Special

ಸರ್ಕಾರಕ್ಕೆ “ಉರುಳುವ’ ಆತಂಕ

Team Udayavani, Aug 28, 2018, 6:00 AM IST

hd-kumaraswamy-siddaramaiah-2222.jpg

ಬೆಂಗಳೂರು: ರಾಜ್ಯ ರಾಜಕೀಯದ ಇತ್ತೀಚೆಗಿನ ವಿದ್ಯಮಾನಗಳು ಸಮ್ಮಿಶ್ರ ಸರ್ಕಾರಕ್ಕೆ ಕಂಟಕ  ಇದೆಯೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸುತ್ತವೇ ಕರ್ನಾಟಕ ರಾಜಕಾರಣ ಸುತ್ತುತ್ತಿದೆ.

ಸಿದ್ದರಾಮಯ್ಯ ಅವರು ಸೆ.2 ರಂದು ಯೂರೋಪ್‌ ಪ್ರವಾಸಕ್ಕೆ ಹೋಗುತ್ತಿದ್ದಂತೆ ಇತ್ತ ಸಮ್ಮಿಶ್ರ ಸರ್ಕಾರ ಉರುಳಿಸುವ ಪ್ರಯತ್ನ ನಡೆಯಲಿದೆ ಎಂಬ ಮಾತುಗಳು ಹಲವಾರು ದಿನಗಳಿಂದ ಕೇಳಿಬರುತ್ತಿವೆ. ಅದಕ್ಕೆ ತಕ್ಕಂತೆ ಕೆಲವು ಘಟನಾವಳಿಗಳೂ ನಡೆಯುತ್ತಿವೆ.

ಇದರ ನಡುವೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು  ಈ ಸರ್ಕಾರ ಕೆಡವಲು ನಾನಾ ರೀತಿಯ ಪ್ರಯತ್ನ ನಡೆಯುತ್ತಿದೆ. ಆದರೆ, ಅದ್ಯಾವುದೂ ಫ‌ಲ ಕೊಡುವುದಿಲ್ಲ. ದೇವರ ಆರ್ಶೀವಾದ ಸರ್ಕಾರಕ್ಕೆ ಇದೆ ಎಂದು ಹೇಳುತ್ತಿದ್ದಾರೆ. ಮೇಲ್ನೋಟಕ್ಕೆ ಅವರಿಗೂ ಆತಂಕ ಇರುವುದಂತೂ ಸತ್ಯ.

ಇತ್ತೀಚೆಗೆ ಸಚಿವರೊಬ್ಬರು ಪಿರಿಯಾಪಟ್ಟಣದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕಿತ್ತು ಎಂದು ಹೇಳಿದ್ದನ್ನು ಸ್ಥಳೀಯ ಶಾಸಕರು ಮುಖ್ಯಮಂತ್ರಿಯಾಗ್ತಾರೆ ಎಂದು ಹೇಳಿದ್ದಾಗಿ ಅರ್ಥೈಸಿಕೊಂಡು ನೇರವಾಗಿ ಕುಮಾರಸ್ವಾಮಿಯವರಿಗೆ ಕರೆ ಮಾಡಿ ತಿಳಿಸಿದ್ದರು. ಬಳಿಕ ಅದೇ ಭಾಗದಲ್ಲಿ ಪ್ರವಾಸದಲ್ಲಿದ್ದ  ಮತ್ತಿಬ್ಬರು ಸಚಿವರು ತಕ್ಷಣ ಧಾವಿಸಿ ಹೇಳಿಕೆ ನೀಡಿದ್ದ ಸಚಿವರ ಜತೆ ಮಾತನಾಡಿ ಆ ರೀತಿ ಹೇಳಿಲ್ಲ ಎಂಬುದನ್ನು ದೃಢಪಡಿಸಿಕೊಂಡಿದ್ದಾರೆ.
ಒಂದೆಡೆ ಬಿಜೆಪಿಯವರು ಆಪರೇಷನ್‌ ಕಮಲ ಕಾರ್ಯಾಚರಣೆ ನಡೆಸುತ್ತಾರೆ ಎಂಬ ಗುಸುಗುಸು, ಮತ್ತೂಂದೆಡೆ ಕಾಂಗ್ರೆಸ್‌ನವರೇ ಸರ್ಕಾರ ಕೆಡವಲು ಕಾರ್ಯತಂತ್ರ ರೂಪಿಸಿದ್ದಾರೆ. ಸಂಪುಟದಲ್ಲಿ ಸ್ಥಾನ ಸಿಗದ ಅತೃಪ್ತರು ಇದಕ್ಕೆ ಹೆಗಲು ಕೊಡಲಿದ್ದಾರೆ ಎಂಬ ಅರ್ಧಸತ್ಯ. ಇದು ಸರ್ಕಾರದ ಆಯುಷ್ಯದ ಬಗ್ಗೆ ಅನುಮಾನ ಮೂಡಲು ಕಾರಣವಾಗಿದೆ.

ಮುಖಾಮುಖೀಯಾಗದ ಸಿಎಂ, ಮಾಜಿ ಸಿಎಂ
ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಸಹ ಮುಖಾಮುಖೀ ಆಗುತ್ತಿಲ್ಲ. ಒಂದೇ ವೇದಿಕೆಯಲ್ಲಿ ಕೂರುವ ಅನಿವಾರ್ಯತೆ ಎದುರಾದರೂ ತಪ್ಪಿಸಿಕೊಳ್ಳುತ್ತಿದ್ದಾರೆ. ಸ್ವಾತಂತ್ರೊéàತ್ಸವ ದಿನದಂದು ಸಂಗೊಳ್ಳಿ ರಾಯಣ್ಣ ಪ್ರತಿಮೆ ಬಳಿ ನಡೆದ ಪ್ರಸಂಗ ಇದಕ್ಕೆ ಸಾಕ್ಷಿ. ಕುಮಾರಸ್ವಾಮಿ ಮಂಗಳವಾರ ಮೈಸೂರಿಗೆ ತೆರಳಲಿದ್ದು ಸಿದ್ದರಾಮಯ್ಯ ಬಾದಾಮಿಯತ್ತ ಹೊರಟಿದ್ದಾರೆ. ದಸರಾ ಸಿದ್ಧತೆ ಸಭೆಯಲ್ಲಿ ಭಾಗವಹಿಸುವುದು ಅನುಮಾನ ಎಂದು ಹೇಳಲಾಗುತ್ತಿದೆ.

ಸಿದ್ದರಾಮಯ್ಯ ಅವರು ಹಾಸನದ ಸಮಾರಂಭವೊಂದರಲ್ಲಿ ನಾನು ಮುಖ್ಯಮಂತ್ರಿಯಾಗಬೇಕಿತ್ತು ಎಂದು ಹೇಳಿದ್ದ ಮಾತು ಕ್ಷಣಗಳಲ್ಲಿ ಬೇರೆ ಬೇರೆ ರೀತಿಯ ವಾಖ್ಯಾನಗಳಿಗೂ ಕಾರಣವಾಗಿದೆ. ಅದಕ್ಕೆ ಪ್ರತಿಕ್ರಿಯೆಯಾಗಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು, ಇನ್ನೇನು  ಈ ಸರ್ಕಾರ ಸೆ.2 ಕ್ಕೆ ಬಿದ್ದು ಹೋಗಿ ಹೊಸ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಸುದ್ದಿಗಳು ಹರಡಲಾಗುತ್ತಿದೆ. ಕೆಲವರು ಮುಖ್ಯಮಂತ್ರಿಯಾಗಲು ಹೊರಟಿದ್ದಾರೆ. ಆದರೆ, ಅದು ಸಾಧ್ಯವಿಲ್ಲ, ಸರ್ಕಾರ ಕಡೆವಲು ಪ್ರಯತ್ನ ನಡೆಯುತ್ತಿದೆಯಾದರೂ ಅದರಲ್ಲಿ ಯಶಸ್ಸು ಕಾಣಲು ಸಾಧ್ಯವಿಲ್ಲ ಎಂದು ಹೇಳಿದರು.

ಹಿರಿಯ ಸಚಿವರಾದ ಆರ್‌.ವಿ.ದೇಶಪಾಂಡೆ, ಡಿ.ಕೆ.ಶಿವಕುಮಾರ್‌ ಅವರು  “ಸಿದ್ದರಾಮಯ್ಯ ಅವರು  ಈಗಲೇ ಮುಖ್ಯಮಂತ್ರಿಯಾಗುತ್ತೇನೆ,’ ಎಂದು ಹೇಳಿಲ್ಲ.  ಈ ಸರ್ಕಾರ ಬೀಳಿಸಿ  ಅವರು ಮುಖ್ಯಮಂತ್ರಿಯಾಗುವುದಿಲ್ಲ. ರಾಹುಲ್‌ಗಾಂಧಿ ಭರವಸೆ ನೀಡಿದ್ದು ಐದು ವರ್ಷ ಕುಮಾರಸ್ವಾಮಿಯೇ ಮುಖ್ಯಮಂತ್ರಿ ಎಂದು ಹೇಳಿದರು.

ಮಾಜಿ ಸಚಿವ ಎಚ್‌.ಎಂ.ರೇವಣ್ಣ ಅವರು, ಸಮ್ಮಿಶ್ರ ಸರ್ಕಾರಕ್ಕೆ ಆತಂಕ ಇಲ್ಲ. ಆದರೆ, ಸಿದ್ದರಾಮಯ್ಯ ಮಾಸ್‌ ಲೀಡರ್‌.ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದ್ದರೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿರುತ್ತಿದ್ದರು ಎಂದು ಪ್ರತಿಕ್ರಿಯಿಸುತ್ತಾರೆ. ಸಚಿವ ಜಮೀರ್‌ ಅಹಮದ್‌, ಕಾಂಗ್ರೆಸ್‌-ಜೆಡಿಎಸ್‌ ನಡುವೆ ರಿಜಿಸ್ಟರ್‌ ಮ್ಯಾರೇಜ್‌ ಆಗಿದೆ. ಸರ್ಕಾರಕ್ಕೆ ತೊಂದರೆಯಿಲ್ಲ ಎನ್ನುತ್ತಾರೆ. ಬಸವಕಲ್ಯಾಣ ಶಾಸಕ ಬಿ. ನಾರಾಯಣರಾವ್‌  ಅವರು, ಸೂರ್ಯ-ಚಂದ್ರ ಇರುವುದು ಎಷ್ಟು ಸತ್ಯವೋ ಸಿದ್ದರಾಮಯ್ಯ ಮತ್ತೂಮ್ಮೆ ಮುಖ್ಯಮಂತ್ರಿಯಾಗುವುದು ಅಷ್ಟೇ ಸತ್ಯ ಎಂದು ತಿಳಿಸಿದ್ದಾರೆ.

ಇತ್ತ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಸಭೆ ತಿಂಗಳಿಗೊಮ್ಮೆ ನಡೆಯುತ್ತಿಲ್ಲ. ಕೃಷಿ ಸಚಿವ ಶಿವಶಂಕರರೆಡ್ಡಿ, ಸಮನ್ವಯ ಸಮಿತಿಯಲ್ಲಿ ತೀರ್ಮಾನವಾದರೆ ಮುಖ್ಯಮಂತ್ರಿ ಬದಲಾಗುತ್ತಾರೆ ಎಂದು ಹೇಳಿದ್ದಾರೆ. ಅದಕ್ಕೆ ದಿನೇಶ್‌ ಗುಂಡೂರಾವ್‌, ಸಮನ್ವಯ ಸಮಿತಿ ಇರುವುದು ಮುಖ್ಯಮಂತ್ರಿ ಬದಲಾವಣೆಗೆ ಅಲ್ಲ, ಸರ್ಕಾರದ ಸಮನ್ವಯತೆ ಬಗ್ಗೆ ಚರ್ಚಿಸಲು ಎಂದು ತಿಳಿಸಿದ್ದಾರೆ. ಸಮನ್ವಯ ಸಮಿತಿಯಲ್ಲಿ ನನಗೂ ಸ್ಥಾನ ಬೇಕು ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌ ಪಟ್ಟು ಹಿಡಿದಿದ್ದಾರೆ.

ಸಚಿವ ರಮೇಶ್‌ ಜಾರಕಿಹೊಳಿ ಬೆಳಗಾವಿಯಿಂದ ಮೈಸೂರಿಗೆ ಬಂದು ಸಿದ್ದರಾಮಯ್ಯ ಅವರನ್ನು ಗುಪ್ತವಾಗಿ ಮಾತನಾಡಿ ಹೋಗಿದ್ದಾರೆ. ಈ ಎಲ್ಲ ಹೇಳಿಕೆಗಳು, ವಿದ್ಯಮಾನಗಳು ಏನೋ ನಡೆಯುತ್ತಿವೆ ಎಂಬ ಅನುಮಾನಗಳಿಗೆ ಕಾರಣವಾಗಿರುವುದಂತೂ ನಿಜ.

ಸಮನ್ವಯ ಸಮಿತಿ ಅಂದರೆ ಏನು? ಅದರ ಕಾರ್ಯವ್ಯಾಪ್ತಿ ಹಾಗೂ ಜವಾಬ್ದಾರಿ ಏನು? ಎಂಬ ಬಗ್ಗೆ ಅದರ ಅಧ್ಯಕ್ಷರೇ ಹೇಳಲಿ. ಸಮನ್ವಯ ಸಮಿತಿಗೆ ಕೆಪಿಸಿಸಿ ಅಧ್ಯಕ್ಷರನ್ನು ಸೇರಿಸಿದರೆ ನಮ್ಮ ಪಕ್ಷದ ರಾಜ್ಯಾಧ್ಯಕ್ಷರನ್ನು ಸೇರ್ಪಡಿಸುವ ವಿಚಾರ ಚರ್ಚೆಗೆ ಬರಲಿದೆ.
– ಎಚ್‌.ಡಿ.ದೇವೇಗೌಡ, ಮಾಜಿ ಪ್ರಧಾನಿ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ತಮಿಳು ನಟನನ್ನು ಫಾಲೋ ಮಾಡಿದ ಜಸ್ಟಿನ್‌ ಬೈಬರ್‌

ತಮಿಳು ನಟನನ್ನು ಫಾಲೋ ಮಾಡಿದ ಜಸ್ಟಿನ್‌ ಬೈಬರ್‌

ಲಡಾಖ್‌ಗೆ ಹೊರಡಲು ಚೀನೀ ಸೈನಿಕರ ಅಳುಕು: ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್‌

ಲಡಾಖ್‌ಗೆ ಹೊರಡಲು ಚೀನೀ ಸೈನಿಕರ ಅಳುಕು: ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್‌

ದೆಹಲಿಯಲ್ಲಿ ಇಂದು ಸಂಜೆ ನಾಲ್ಕು ಗಂಟೆಗೆ ಸುರೇಶ್ ಅಂಗಡಿ ಅಂತ್ಯಕ್ರಿಯೆ

ದೆಹಲಿಯಲ್ಲಿ ಇಂದು ಸಂಜೆ ನಾಲ್ಕು ಗಂಟೆಗೆ ಸುರೇಶ್ ಅಂಗಡಿ ಅಂತ್ಯಕ್ರಿಯೆ

ಪಿನಾಕಿನಿ ಪ್ರವಾಹಕ್ಕೆ ಮಟ್ಟುಗುಳ್ಳ ಬೆಳೆ ಹಾನಿ: ಪ್ರದೇಶಕ್ಕೆ ಜಿಲ್ಲಾಧಿಕಾರಿ ಭೇಟಿ

ಪಿನಾಕಿನಿ ಪ್ರವಾಹಕ್ಕೆ ಮಟ್ಟುಗುಳ್ಳ ಬೆಳೆ ಹಾನಿ: ಪ್ರದೇಶಕ್ಕೆ ಜಿಲ್ಲಾಧಿಕಾರಿ ಭೇಟಿ

ಐಪಿಎಲ್ ನಲ್ಲಿ ರೋಹಿತ್ ಶರ್ಮಾ ದ್ವಿಶತಕ: ಏನಿದು ಹೊಸ ದಾಖಲೆ

ಐಪಿಎಲ್ ನಲ್ಲಿ ರೋಹಿತ್ ಶರ್ಮಾ ದ್ವಿಶತಕ: ಏನಿದು ಹೊಸ ದಾಖಲೆ

ಬೆಂಗಳೂರಿನಲ್ಲಿ ಯುವರತ್ನ ಚಿತ್ರದ ಚಿತ್ರಿಕರಣ ಆರಂಭ

ಬೆಂಗಳೂರಿನಲ್ಲಿ ಯುವರತ್ನ ಚಿತ್ರದ ಚಿತ್ರಿಕರಣ ಆರಂಭ

ನುಡಿನಮನ: ಅಜಾತಶತ್ರು ಅಂಗಡಿ ; ಸಾಧನೆಗಳ ಹೆಜ್ಜೆ ಗುರುತು ಬಿಟ್ಟು ಹೋದ ಜನನಾಯಕ

ನುಡಿನಮನ: ಅಜಾತಶತ್ರು ಅಂಗಡಿ ; ಸಾಧನೆಗಳ ಹೆಜ್ಜೆ ಗುರುತು ಬಿಟ್ಟು ಹೋದ ಜನನಾಯಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದೆಹಲಿಯಲ್ಲಿ ಇಂದು ಸಂಜೆ ನಾಲ್ಕು ಗಂಟೆಗೆ ಸುರೇಶ್ ಅಂಗಡಿ ಅಂತ್ಯಕ್ರಿಯೆ

ದೆಹಲಿಯಲ್ಲಿ ಇಂದು ಸಂಜೆ ನಾಲ್ಕು ಗಂಟೆಗೆ ಸುರೇಶ್ ಅಂಗಡಿ ಅಂತ್ಯಕ್ರಿಯೆ

ದೆಹಲಿಯಲ್ಲಿ ಕರ್ನಾಟಕದ ಗಟ್ಟಿ ಧ್ವನಿ ; ಗಡಿನಾಡಿನ ಸಜ್ಜನ ರಾಜಕಾರಣಿ ಸುರೇಶ್ ಅಂಗಡಿ

ಪಿಂಚಣಿ ಇಲ್ಲದ ಬದುಕು ಕಷ್ಟ: ದಯಾಮರಣ ಕೋರಿ ರಾಷ್ಟ್ರಪತಿಗೆ ಮನವಿ ಸಲ್ಲಿಸಿದ ನಿವೃತ್ತ ಶಿಕ್ಷಕಿ

ಪಿಂಚಣಿ ಇಲ್ಲದ ಬದುಕು ಕಷ್ಟ: ದಯಾಮರಣ ಕೋರಿ ರಾಷ್ಟ್ರಪತಿಗೆ ಮನವಿ ಸಲ್ಲಿಸಿದ ನಿವೃತ್ತ ಶಿಕ್ಷಕಿ

ಟಿಪ್ಪರ್ ಡಿಕ್ಕಿ ಹೊಡೆದು ಮಹಿಳೆ ಸ್ಥಳದಲ್ಲೇ ಸಾವು, ಪತಿ ಪ್ರಾಣಾಪಾಯದಿಂದ ಪಾರು

ಮಂಡ್ಯ : ಟಿಪ್ಪರ್ ಡಿಕ್ಕಿ ಹೊಡೆದು ಮಹಿಳೆ ಸ್ಥಳದಲ್ಲೇ ಸಾವು, ಪ್ರಾಣಾಪಾಯದಿಂದ ಪಾರಾದ ಪತಿ

ಸೆ.28ರಂದು ಬಂದ್; ರೈತರ ವಿರೋಧದ ನಡುವೆ ಎಪಿಎಂಸಿ ವಿಧೇಯಕ ಮಂಡನೆ

ಸೆ.28ರಂದು ಬಂದ್; ರೈತರ ವಿರೋಧದ ನಡುವೆ ಎಪಿಎಂಸಿ ವಿಧೇಯಕ ಮಂಡನೆ

MUST WATCH

udayavani youtube

ಕೋವಿಡ್ ‌ಕಾಲದಲ್ಲಿ ರಸ್ತೆ ರಾಜಕಾರಣ: ಪ್ರತಿಕ್ರಿಯಿಸಿದ ಸಂತ ಅಲೋಶಿಯಸ್ ಸಂಸ್ಥೆ

udayavani youtube

ಮಂಗಳೂರು ನಗರದ ಲೈಟ್ ಹೌಸ್ ರೋಡ್ ಗೆ ‘ಮುಲ್ಕಿ ಸುಂದರರಾಮ ಶೆಟ್ಟಿ ರಸ್ತೆ’ ಎಂದು ಮರುನಾಮಕರಣ

udayavani youtube

District Excise Department seized Millions worth of Marijuana | Udayavani

udayavani youtube

Hospet : Tungabhadra Dam Gates Are Opened | TB Dam | Udayavani

udayavani youtube

ಸುರತ್ಕಲ್ ಕಳ್ಳತನ ಪ್ರಕರಣ: ಕೇರಳದ ಇಬ್ಬರು ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರುಹೊಸ ಸೇರ್ಪಡೆ

ತಮಿಳು ನಟನನ್ನು ಫಾಲೋ ಮಾಡಿದ ಜಸ್ಟಿನ್‌ ಬೈಬರ್‌

ತಮಿಳು ನಟನನ್ನು ಫಾಲೋ ಮಾಡಿದ ಜಸ್ಟಿನ್‌ ಬೈಬರ್‌

ಲಡಾಖ್‌ಗೆ ಹೊರಡಲು ಚೀನೀ ಸೈನಿಕರ ಅಳುಕು: ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್‌

ಲಡಾಖ್‌ಗೆ ಹೊರಡಲು ಚೀನೀ ಸೈನಿಕರ ಅಳುಕು: ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್‌

ದೆಹಲಿಯಲ್ಲಿ ಇಂದು ಸಂಜೆ ನಾಲ್ಕು ಗಂಟೆಗೆ ಸುರೇಶ್ ಅಂಗಡಿ ಅಂತ್ಯಕ್ರಿಯೆ

ದೆಹಲಿಯಲ್ಲಿ ಇಂದು ಸಂಜೆ ನಾಲ್ಕು ಗಂಟೆಗೆ ಸುರೇಶ್ ಅಂಗಡಿ ಅಂತ್ಯಕ್ರಿಯೆ

ಪಿನಾಕಿನಿ ಪ್ರವಾಹಕ್ಕೆ ಮಟ್ಟುಗುಳ್ಳ ಬೆಳೆ ಹಾನಿ: ಪ್ರದೇಶಕ್ಕೆ ಜಿಲ್ಲಾಧಿಕಾರಿ ಭೇಟಿ

ಪಿನಾಕಿನಿ ಪ್ರವಾಹಕ್ಕೆ ಮಟ್ಟುಗುಳ್ಳ ಬೆಳೆ ಹಾನಿ: ಪ್ರದೇಶಕ್ಕೆ ಜಿಲ್ಲಾಧಿಕಾರಿ ಭೇಟಿ

ಐಪಿಎಲ್ ನಲ್ಲಿ ರೋಹಿತ್ ಶರ್ಮಾ ದ್ವಿಶತಕ: ಏನಿದು ಹೊಸ ದಾಖಲೆ

ಐಪಿಎಲ್ ನಲ್ಲಿ ರೋಹಿತ್ ಶರ್ಮಾ ದ್ವಿಶತಕ: ಏನಿದು ಹೊಸ ದಾಖಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.