ನಿರ್ದಿಷ್ಟ ಉದ್ದೇಶಕ್ಕೆ ಸಾಲದ ಹಣ ಬಳಸಿ

Team Udayavani, Jun 27, 2019, 3:05 AM IST

ಬೆಂಗಳೂರು: ರೈತರು ಬ್ಯಾಂಕ್‌ ಅಥವಾ ಸಹಕಾರಿ ಸಂಘಗಳಿಂದ ಪಡೆದ ಸಾಲವನ್ನು ನಿರ್ದಿಷ್ಟ ಉದ್ದೇಶಕ್ಕೆ ಬಳಸಿಕೊಂಡರೆ ಆರ್ಥಿಕವಾಗಿ ಸದೃಢರಾಗುತ್ತಾರೆ ಎಂದು ತೋಟಗಾರಿಕೆ ಸಚಿವ ಎಂ.ಸಿ.ಮನಗೋಳಿ ಅಭಿಪ್ರಾಯಪಟ್ಟರು.

ತೋಟಗಾರಿಕೆ ಇಲಾಖೆಯು ನಬಾರ್ಡ್‌ ಸಹಯೋಗದಲ್ಲಿ ನಗರದ ಐಐಎಸ್ಸಿಯ ಜೆ.ಎನ್‌.ಟಾಟಾ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರೈತ ಉತ್ಪಾದಕರ ಸಂಸ್ಥೆಯ (ಎಫ್ಪಿಒ) ಗ್ರಾಹಕರ ಮತ್ತು ಮಾರಾಟಗಾರರ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಸಾಲ ಮಾಡಿದ ಉದ್ದೇಶ ಮರೆತು ಬೇರೆ ಅವಶ್ಯಕತೆಗಳಿಗೆ ಖರ್ಚು ಮಾಡಿದರೆ ಸಮಸ್ಯೆ ಹೆಚ್ಚಾಗುತ್ತದೆ ಎಂದರು.

ರೈತರ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಒತ್ತು ನೀಡುವ ಜತೆಗೆ ಸರ್ಕಾರಿ ಸೌಲಭ್ಯಗಳನ್ನು ಅವರಿಗೆ ತಲುಪಿಸುವ ವ್ಯವಸ್ಥೆಯೂ ಆಗಬೇಕು. ಮಣ್ಣಿನ ಫ‌ಲವತ್ತತೆಗೆ ಅನುಗುಣವಾಗಿ ಬೆಳೆ ಬೆಳೆಯಲು ಬೇಕಾದ ಮಾಹಿತಿ ಮತ್ತು ಅರಿವನ್ನು ರೈತರಿಗೆ ನೀಡಬೇಕು. ದೇಶದಲ್ಲಿ ಶೇ.75ರಷ್ಟು ರೈತರಿದ್ದರೂ ಅಗತ್ಯ ಪ್ರಮಾಣದ ಆಹಾರ ಪೂರೈಕೆ ಸಾಧ್ಯವಾಗುತ್ತಿಲ್ಲ. ವಿದೇಶದಲ್ಲಿ ಶೇ.25ರಷ್ಟು ರೈತರಿದ್ದರೂ ಶೇ.75ರಷ್ಟು ಜನರಿಗೆ ಬೇಕಾದ ಆಹಾರ ಪದಾರ್ಥ ಪೂರೈಸಿ ಬೇರೆ ದೇಶಕ್ಕೂ ರಫ್ತು ಮಾಡುತ್ತಾರೆ ಎಂದರು.

ರೈತರ ಅಭಿವೃದ್ಧಿಗೆ ಭೂಮಿ, ಕೃಷಿ ಕಾರ್ಮಿಕರು, ಬಂಡವಾಳ ಹಾಗೂ ಸಂಘಟನೆ ಅತಿ ಮುಖ್ಯ. ಭೂಮಿ ಇಲ್ಲದೆ ಬೆಳೆ ಬೆಳಯಲು ಸಾಧ್ಯವಿಲ್ಲ. ಬೆಳೆಯ ಕಟಾವು ಇತ್ಯಾದಿಗೆ ಕೃಷಿ ಕಾರ್ಮಿಕರು ಅತಿ ಅಗತ್ಯ ಹಾಗೆಯೇ ಬಂಡವಾಳ ಮತ್ತು ಸಂಘಟನೆಯೂ ಇರಬೇಕಾಗುತ್ತದೆ. ಈ ನಿಟ್ಟಿನಲ್ಲಿ 300 ಎಫ್ಪಿಒಗಳು ಸೇವೆ ಸಲ್ಲಿಸುತ್ತಿವೆ. ರೈತರಿಗೆ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಬೆಳೆ ಬೆಳಯಬಹುದಾದ ಹೊಸ ಕಲ್ಪನೆಯನ್ನು ಎಫ್ಪಿಒಗಳು ನೀಡಬೇಕು ಎಂದು ಹೇಳಿದರು.

ರೈತರು ವಾಣಿಜ್ಯ ಬೆಳೆಯ ಜತೆಗೆ ವಾಣಿಜ್ಯೇತರ ಬೆಳೆಯನ್ನು ಬೆಳೆಯಬೇಕು. ಆರ್ಥಿಕ ಸುಸ್ಥಿರತೆಯ ಜತೆಗೆ ಆಹಾರ ಪದಾರ್ಥವೂ ಅಷ್ಟೇ ಮುಖ್ಯವಾಗಿರುತ್ತದೆ. ರೈತರ ಉತ್ಪಾದನಾ ಸಾಮರ್ಥ್ಯ ಹೆಚ್ಚಾದಂತೆ ದೇಶದ ಅಭಿವೃದ್ಧಿಯೂ ಆಗುತ್ತದೆ. ಬೆಳೆಗೆ ಉತ್ತಮ ಬೆಲೆ ಸಿಕ್ಕಾಗ ರೈತರು ಆರ್ಥಿಕವಾಗಿ ಸದೃಢರಾಗುತ್ತಾರೆ ಎಂದರು.

ತೋಟಗಾರಿಕೆ ಇಲಾಖೆ ನಿರ್ದೇಶಕ ಡಾ.ಎಂ.ವಿ.ವೆಂಕಟೇಶ್‌ ಮಾತನಾಡಿ, ರೈತರ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ಆಧುನಿಕ ಉಪಕರಣಗಳ ಬಳಕೆಗೆ ಆದ್ಯತೆ ನೀಡುತ್ತಿದ್ದೇವೆ. ಇದಕ್ಕಾಗಿ ಎಫ್ಪಿಒಗಳನ್ನು ಆರಂಭಿಸಿದ್ದೇವೆ. 99 ಎಫ್ಪಿಒಗಳು ಸೇವೆ ಸಲ್ಲಿಸುತ್ತಿದ್ದು, 22 ಲಕ್ಷ ರೂ.ಗಳಂತೆ 19 ಕೋಟಿ ರೂ.ಗಳನ್ನು ಎಫ್ಪಿಒಗಳ ಅಭಿವೃದ್ಧಿಗೆ ನೀಡಿದ್ದೇವೆ. ಮಾರ್ಕೆಟ್‌ ಲಿಂಕಿಂಗ್‌ ವ್ಯವಸ್ಥೆಗೂ ಚಿಂತನೆ ನಡೆಸುತ್ತಿದ್ದೇವೆ ಎಂದು ಹೇಳಿದರು.

ನಬಾರ್ಡ್‌ ಡಿಜಿಎಂ ಸಿ.ವಿ.ರೆಡ್ಡಿ ಮಾತನಾಡಿ, ನಬಾರ್ಡ್‌ ಸಹಾಯಧನದಡಿ 230 ಎಫ್ಪಿಒಗಳು ಸೇವೆ ಸಲ್ಲಿಸುತ್ತಿದ್ದೇವೆ. ಎಫ್ಪಿಒಗಳ ಅವಧಿಯನ್ನು ಮೂರು ವರ್ಷದಿಂದ ಐದು ವರ್ಷಕ್ಕೆ ಏರಿಸಲು ಬೇಕಾದ ಚಿಂತನೆಯೂ ನಡೆಯುತ್ತಿದೆ ಎಂದರು.

ರಸಾಯನಿಕ ಗೊಬ್ಬರ ಬಳಸುವ ಜತೆಗೆ ಮಣ್ಣಿನ ಫ‌ಲವತ್ತತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಪ್ರತಿ ಮೂರು ವರ್ಷಗಳಿಗೊಮ್ಮೆ ಕೊಟ್ಟಿಗೆ ಗೊಬ್ಬರವನ್ನು ಭೂಮಿಗೆ ಹಾಕಬೇಕು. ಇದಕ್ಕಾಗಿ ಹಸು, ಮೇಕೆ ಸಾಕಬೇಕು. ಭೂಮಿ ಫ‌ಲವತ್ತಾಗಿದ್ದಾರೆ ಮಾತ್ರ ಉತ್ತಮ ಬೆಳೆ ಸಾಧ್ಯ.
-ಎಂ.ಸಿ.ಮನಗೋಳಿ, ತೋಟಗಾರಿಕೆ ಸಚಿವ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಸಮಸ್ಯೆ ಯಾವುದೇ ಇರಲಿ, ಇಷ್ಟಾರ್ಥ ಕಾರ್ಯವಿರಲಿ, ಕೇವಲ 5 ದಿನಗಳಲ್ಲಿ ಪರಿಹಾರಕ್ಕಾಗಿ ಇಂದೇ ಭೇಟಿ ನೀಡಿ
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಜಾರಿ ನಗರದಲ್ಲಿ ಭಯೋತ್ಪಾದಕರ ಬಂಧನದ ಬೆನ್ನಲ್ಲೇ ನಗರದಲ್ಲಿ ಅಕ್ರಮ ಬಾಂಗ್ಲಾದೇಶಿಯರ ಪತ್ತೆ ಕಾರ್ಯ ಚುರುಕುಗೊಂಡಿದೆ....

  • ಬೆಂಗಳೂರು: ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ (ಎನಿಮಲ್‌ ಬರ್ಥ್ ಕಂಟ್ರೋಲ್‌- ಎಬಿಸಿ) ಪ್ರಕ್ರಿಯೆಗೆ ಒಳಪಡಿಸುವಾಗ ನಾಯಿಗಳು ತಪ್ಪಿಸಿ ಕೊಂಡು ಓಡುವುದು ಸಾಮಾನ್ಯ....

  • ಬೆಂಗಳೂರು: ಕಿಡ್ನಿ ಸಂಬಂಧಿತ ಕಾಯಿಲೆಗೆ ಚಿಕಿತ್ಸೆ ಪಡೆಯಲು ಬಂದಿದ್ದ ವಿದೇಶಿ ಯುವತಿಯನ್ನು ಕ್ಯಾಬ್‌ಗೆ ಹತ್ತಿಸಿಕೊಂಡಿದ್ದ ಮೂವರು ದುಷ್ಕರ್ಮಿಗಳು ಲೈಂಗಿಕ...

  • ಬೆಂಗಳೂರು: 2016ರಲ್ಲಿ "ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆ' ಎಂದು ಘೋಷಿಸಿಕೊಂಡಿರುವ ಬೆಂಗಳೂರು ನಗರ ಜಿಪಂ ಇದೀಗ ಬಯಲು ಬಹಿರ್ದೆಸೆ ಮುಕ್ತ ಸುಸ್ಥಿರತೆ ಕಾಪಾಡಿಕೊಳ್ಳುವ...

  • ಬೆಂಗಳೂರು: ನಟ ದುನಿಯಾ ವಿಜಯ್‌ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ನಡುರಸ್ತೆಯಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಹುಟ್ಟುಹಬ್ಬ ಆಚರಣೆ ಹಾಗೂ...

ಹೊಸ ಸೇರ್ಪಡೆ