ಪುರಸಭೆಗೆ 109 ನಾಮಪತ್ರ


Team Udayavani, May 17, 2019, 12:02 PM IST

blore-g-1

ದೇವನಹಳ್ಳಿ: ಮೇ 29ರಂದು ನಡೆಯುವ ಪುರಸಭಾ ಚುನಾವಣೆಗೆ ನಾಮಪತ್ರ ಸಲ್ಲಿ ಸಲು ಕೊನೆ ದಿನವಾದ ಗುರುವಾರ ಒಟ್ಟು 109ನಾಮಪತ್ರಗಳು ಸಲ್ಲಿಕೆಯಾಗಿವೆ.

ವಾರ್ಡ್‌ ನಂ.1ರಿಂದ 12ರ ವರೆಗಿನ ಚುನಾವಣಾಧಿಕಾರಿಗಳಿಗೆ ಇದುವರೆಗೂ 59 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ವಾರ್ಡ್‌ ನಂ.13 ರಿಂದ 23ರ ವರೆಗಿನ ಚುನಾವಣಾಧಿ ಕಾರಿಗಳಿಗೆ ಇದರುವರೆಗೂ 50 ನಾಮಪತ್ರಗಳು ಸಲ್ಲಿಕೆಯಾಗಿವೆ.

ಟೋಕನ್‌ ಪ್ರಕಾರ ನಾಮಪತ್ರ ಸಲ್ಲಿಕೆ: ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿ ರುವುದರಿಂದ ವಿವಿಧ ಪಕ್ಷಗಳ ಅಭ್ಯರ್ಥಿಗಳು ನಾ ಮುಂದು ತಾ ಮುಂದು ಎನ್ನುತ್ತಿದ್ದ ದೃಶ್ಯವಾಗಿತ್ತು. ಅದಕ್ಕಾಗಿ ಚುನಾವಣಾಧಿ ಕಾರಿಗಳು ಪಕ್ಷಗಳ ಅಭ್ಯರ್ಥಿಗಳಿಗೆ ಟೋಕನ್‌ಗಳನ್ನು ನೀಡಿ ಟೋಕನ್‌ ನಂಬರ್‌ ಪ್ರಕಾರ ನಾಮಪತ್ರ ಸಲ್ಲಿಸಲು ಅನುವು ಮಾಡಿಕೊಟ್ಟರು.

ದೇಗುಲದಲ್ಲಿ ಪೂಜೆ: ಜೆಡಿಎಸ್‌ ಅಭ್ಯರ್ಥಿ ಗಳು ಶಾಸಕ ನಿಸರ್ಗ ಎಲ್.ಎನ್‌.ನಾರಾ ಯಣಸ್ವಾಮಿ ನೇತೃತ್ವದಲ್ಲಿ ಶ್ರೀ ವೇಣು ಗೋಪಾಲಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಾಮಪತ್ರ ಸಲ್ಲಿಸಲು ಆಗಮಿಸಿದ್ದರು. ಕಾಂಗ್ರೆಸ್‌ ಅಭ್ಯರ್ಥಿಗಳು ಪವಾಡ ಬಸವೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಾಮಪತ್ರ ಸಲ್ಲಿಸಿದರು. 14ನೇ ವಾರ್ಡಿನ ಜೆಡಿಎಸ್‌ ಅಭ್ಯರ್ಥಿ ವೈ.ಸಿ.ಸತೀಶ್‌ಕುಮಾರ್‌ ನಾಮ ಪತ್ರ ಸಲ್ಲಿಕೆಗೂ ಮುನ್ನಾ ಪವಾಡ ಬಸವೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.

ಇನ್ನೊಂದು ಕೌಂಟರ್‌ ತೆರೆಯಬೇಕಿತ್ತು: ನಾಮಪತ್ರ ಸಲ್ಲಿಸಲು ಅಭ್ಯರ್ಥಿಗಳು ಹಾಗೂ ಪಕ್ಷದ ಮುಖಂಡರು ಕಾಯುತ್ತಾ ಕುಳಿತು ಕೊಳ್ಳುವಂತಾಯಿತು. ಹೆಚ್ಚು ನಾಮಪತ್ರಗಳು ಬರುತ್ತವೆ ಎಂಬುವುದನ್ನು ತಿಳಿದು ಜಿಲ್ಲಾ ಡಳಿತ ಮತ್ತೂಂದು ಕೌಂಟರ್‌ ಮಾಡಿದ್ದರೆ ಅನುಕೂಲವಾಗುತ್ತಿತ್ತು ಎಂದು ಮುಖಂಡರು ಹೇಳುತ್ತಿದ್ದರು. ರಣ ಬಿಸಿಲಿನಲ್ಲೂ ಕಾದು ತಮ್ಮ ನಾಮಪತ್ರ ಸಲ್ಲಿಕೆಗೆ ಕಾಯುತ್ತಿರುವ ದೃಶ್ಯ ಕಂಡುಬಂತು. ಪ್ರತಿ ಚುನಾವಣಾಧಿ ಕಾರಿಗಳ ಕೊಠಡಿಗಳ ಮುಂದೆ ಸಾಲು ಸಾಲಾಗಿ ನಿಂತಿರುವುದು ಕಂಡುಬಂದಿತು.

12ನೇ ವಾರ್ಡ್‌ ವರೆಗೆ ನಾಮಪತ್ರ: 1ನೇ ವಾರ್ಡ್‌ ಹಿಂದುಳಿದ ವರ್ಗ ಎ ಮಹಿಳೆ ಸ್ಥಾನಕ್ಕೆ ಮುಬೀನ್‌ ತಾಜ್‌ (ಪಕ್ಷೇತರ), ಕೌಸರ (ಬಿಜೆಪಿ), ವಿ.ಕೋಮಲ(ಜೆಡಿಎಸ್‌), ಎಂ.ಆಶಾರಾಣಿ (ಪಕ್ಷೇತರ), ಮೊಹಮ್ಮದ್‌ ಜಬೀ(ಪಕ್ಷೇತರ), 2ನೇ ವಾರ್ಡ್‌ ಸಾಮಾನ್ಯ ಮಹಿಳಾ ಸ್ಥಾನಕ್ಕೆ ಗೀತಾ.ಕೆ (ಕಾಂಗ್ರೇಸ್‌), ಬಿ.ಲಲಿತಮ್ಮ (ಜೆಡಿಎಸ್‌), ಶ್ವೇತ (ಬಿಜೆಪಿ), ರುಕ್ಮೀಣಿ(ಪಕ್ಷೇತರ), 3ನೇ ವಾರ್ಡ್‌ ಎಸ್‌.ಸಿ. ಮಹಿಳೆ ಸ್ಥಾನಕ್ಕೆ ಎಸ್‌.ಹಂಸವೇಣಿ(ಪಕ್ಷೇತರ), ರತ್ನಮ್ಮ (ಕಾಂಗ್ರೆಸ್‌), ಲೀಲಾವತಿ(ಜೆಡಿಎಸ್‌), ಎಸ್‌.ಅಂಜಲಿ(ಬಿಜೆಪಿ), ವರಲಕ್ಷ್ಮೀ (ಬಿಎಸ್‌ಪಿ), ಕೀರ್ತಿ ಕುಮಾರಿ (ಬಿಜೆಪಿ), ವಾರ್ಡ್‌ ನಂ.4 ಸಾಮಾನ್ಯ ಸ್ಥಾನಕ್ಕೆ ಸೋಮಶೇಖರ್‌ ಬಾಬು (ಪಕ್ಷೇತರ), ಜಿ.ನಟರಾಜ್‌(ಬಿಜೆಪಿ), ಬಿ.ದೇವ ರಾಜ್‌ (ಜೆಡಿಎಸ್‌), ಆರ್‌.ರವಿಕುಮಾರ್‌(ಕಾಂಗ್ರೆಸ್‌), 5ನೇ ವಾರ್ಡ್‌ ಸಾಮಾನ್ಯ ಸ್ಥಾನ ಕ್ಕೆ ವೇಣುಗೋಪಾಲ್ (ಕಾಂಗ್ರೆಸ್‌), ವೇಣು ಗೋಪಾಲ್ (ಪಕ್ಷೇತರ), ಎಸ್‌. ಪ್ರಭಾಕರ್‌(ಬಿಜೆಪಿ), ಮಂಜುನಾಥ್‌(ಜೆಡಿಎಸ್‌), 6ನೇ ವಾರ್ಡ್‌ ಹಿಂದುಳಿದ ವರ್ಗ ಎ ಮಹಿಳಾ ಸ್ಥಾನಕ್ಕೆ ನೂರ್‌ ಆಯಿಷ(ಪಕ್ಷೇತರ), ಶ್ರುತಿ. ಡಿ(ಜೆಡಿಎಸ್‌), ಜಿ.ರೇಖಾ (ಕಾಂಗ್ರೆಸ್‌), ನೇತ್ರಾವತಿ.ಜಿ (ಪಕ್ಷೇತರ), ಪುನಿತ(ಬಿಜೆಪಿ), 7ನೇ ವಾರ್ಡ್‌ ಸಾಮಾನ್ಯ ಮಹಿಳಾ ಸ್ಥಾನಕ್ಕೆ ಪುಷ್ಪಲತ.ಕೆ.ಆರ್‌ (ಜೆಡಿಎಸ್‌), ಜಿ.ಸುಮತಿ (ಕಾಂಗ್ರೆಸ್‌), 8ನೇ ವಾರ್ಡ್‌ ಹಿಂದುಳಿದ ವರ್ಗ ಎ ಸ್ಥಾನಕ್ಕೆ ಆರ್‌.ನಾರಾಯಣಸ್ವಾಮಿ (ಜೆಡಿಎಸ್‌), ಗೋಪಾಲಕೃಷ್ಣ (ಬಿಜೆಪಿ), ಜಿ. ನಾರಾಯಣಸ್ವಾಮಿ (ಪಕ್ಷೇತರ), ನಾರಾಯಣ ಸ್ವಾಮಿ(ಪಕ್ಷೇತರ), ವಾರ್ಡ್‌ ನಂ.9 ಪರಿಶಿಷ್ಟ ಜಾತಿ ಸ್ಥಾನಕ್ಕೆ ಕೆ.ವೆಂಕಟೇಶ್‌(ಜೆಡಿಎಸ್‌), ಎಂ.ಭಾನುಪ್ರಕಾಶ್‌(ಕಾಂಗ್ರೆಸ್‌), ಎಂ.ಶ್ರೀನಿ ವಾಸ್‌(ಪಕ್ಷೇತರ), ಎನ್‌.ಮಂಜುನಾಥ್‌(ಪಕ್ಷೇತರ), ಎ.ಮಹೇಶ್‌ (ಬಿಜೆಪಿ), ಡಿ.ಆರ್‌. ಬಾಲರಾಜ್‌(ಬಿಎಸ್‌ಪಿ), ನಾಗರಾಜ್‌ (ಪಕ್ಷೇ ತರ), 10ನೇ ವಾರ್ಡ್‌ ಸಾಮಾನ್ಯ ಸ್ಥಾನಕ್ಕೆ ಮಂಜುನಾಥ್‌(ಜೆಡಿಎಸ್‌), ಎನ್‌.ಕೆ.ಮಂಜು ನಾಥ್‌(ಕಾಂಗ್ರೆಸ್‌), ಎನ್‌.ಎಲ್.ಅಂಬರೀಶ್‌(ಬಿಜೆಪಿ), ವಾರ್ಡ್‌ ನಂ.11 ಸಾಮಾನ್ಯ ಸ್ಥಾನಕ್ಕೆ ಎಸ್‌.ಸಿ.ಚಂದ್ರಪ್ಪ(ಕಾಂಗ್ರೆಸ್‌), ವಿ.ಗೋಪಾಲ್ (ಜೆಡಿಎಸ್‌), ಆರ್‌.ಗೀತಾ (ಬಿಜೆಪಿ), ಎನ್‌.ಅರುಣ (ಪಕ್ಷೇತರ) ವಾರ್ಡ್‌ ನಂ.12 ಪರಿಶಿಷ್ಟ ಜಾತಿ ಸ್ಥಾನಕ್ಕೆ ಲಕ್ಷ್ಮೀ(ಜೆಡಿಎಸ್‌), ಗುಂಡಮ್ಮ (ಬಿಜೆಪಿ), ಸುಮಿತ್ರ.ಎಸ್‌(ಕಾಂಗ್ರೆಸ್‌) ನಾಮಪತ್ರ ಸಲ್ಲಿಸಿ ದ್ದಾರೆ ಎಂದು ಚುನಾವಣಾಧಿಕಾರಿ ಪ್ರದೀಪ್‌ ತಿಳಿಸಿದರು.

13ರಿಂದ 23ನೇ ವಾರ್ಡ್‌ವರೆಗೆ: 13ನೇ ವಾರ್ಡ್‌ನಿಂದ ಹಿಂದುಳಿದ ವರ್ಗ-ಎ ಮಹಿಳೆ ಸ್ಥಾನಕ್ಕೆ ಡಿ.ಗೋಪಮ್ಮ (ಜೆಡಿಎಸ್‌), ಜೆ.ಲಕ್ಷ್ಮೀ(ಬಿಜೆಪಿ), 14ನೇ ವಾರ್ಡ್‌ ಸಾಮಾನ್ಯ ಆರ್‌.ಲೋಹಿತ್‌ (ಬಿಜೆಪಿ), ಪಿ.ರಮಾದೇವಿ (ಪಕ್ಷೇತರ), ಚಂದ್ರಶೇಖರ್‌ (ಪಕ್ಷೇತರ), ವೈ.ಸಿ.ಸತೀಶ್‌ ಕುಮಾರ್‌ (ಜೆಡಿಎಸ್‌), ಎಸ್‌.ಸತೀಶ್‌ಕುಮಾರ್‌ (ಪಕ್ಷೇತರ), ನಂದಕುಮಾರ್‌ (ಪಕ್ಷೇತರ), 15ನೇ ವಾರ್ಡ್‌ ಹಿಂದುಳಿದವರ್ಗ ಎ ಸ್ಥಾನಕ್ಕೆ ಎಂ.ಆನಂದ್‌ (ಪಕ್ಷೇತರ), ಆನಂದ್‌ (ಬಿಜೆಪಿ), ಎನ್‌.ರಘು (ಕಾಂಗ್ರೆಸ್‌), 16ನೇ ವಾರ್ಡ್‌ ಎಸ್‌.ಸಿ.ಮಹಿಳೆ ಸ್ಥಾನಕ್ಕೆ ಶೋಭಾ.ಎನ್‌ (ಜೆಡಿಎಸ್‌), ಕಲಾವತಿ (ಬಿಜೆಪಿ), ಮಂಜುಳ ಮೂರ್ತಿ (ಕಾಂಗ್ರೆಸ್‌), ಲಕ್ಷ್ಮೀ ಅಪರ್ಣ (ಪಕ್ಷೇತರ), 17 ನೇ ವಾರ್ಡ್‌ ಪರಿಶಿಷ್ಟ ಜಾತಿ ಸ್ಥಾನಕ್ಕೆ ಜಿ.ಸುರೇಶ್‌(ಪಕ್ಷೇ ತರ), ಸೊಸೈಟಿ ರಾಜಣ್ಣ(ಕಾಂಗ್ರೆಸ್‌), ಎನ್‌.ಶ್ರೀನಿವಾಸ್‌ಮೂರ್ತಿ (ಬಿಜೆಪಿ), ರಾಜಣ್ಣ (ಜೆಡಿಎಸ್‌), ಜಿ.ರಮೇಶ್‌ಬಾಬು (ಪಕ್ಷೇ ತರ), ವಾರ್ಡ್‌ ನಂ.18 ಸಾಮಾನ್ಯ ಸ್ಥಾನಕ್ಕೆ ಎನ್‌.ಹರೀಶ್‌ (ಪಕ್ಷೇತರ), ಜಿ.ಎ. ರವೀಂದ್ರ (ಜೆಡಿಎಸ್‌), ಆರ್‌.ಮುನಿರಾಜು (ಬಿಜೆಪಿ), ವಿಜಯ್‌ಕುಮಾರ್‌ (ಕಾಂಗ್ರೇಸ್‌), 19ನೇ ವಾರ್ಡ್‌ ಸಾಮಾನ್ಯ ಮಹಿಳೆ ಸ್ಥಾನಕ್ಕೆ ಆರ್‌. ಪುಷ್ಪಾ(ಪಕ್ಷೇತರ), ವಿ.ಪದ್ಮಾವತಮ್ಮ (ಜೆಡಿಎಸ್‌), ಜ್ಯೋತಿ (ಪಕ್ಷೇತರ), ಜ್ಯೋತಿ ಲಕ್ಷ್ಮೀ (ಕಾಂಗ್ರೇಸ್‌), ಚೈತ್ರ.ವಿ(ಬಿಜೆಪಿ), ವಾರ್ಡ್‌ ನಂ.20 ಪರಿಶಿಷ್ಟ ಪಂಗಡ ಸ್ಥಾನಕ್ಕೆ ನಾಗೇಶ್‌ ಬಾಬು (ಜೆಡಿಎಸ್‌), ಮಹೇಶ್‌.ಜೆ (ಬಿಜೆಪಿ), ಮುನಿಕೃಷ್ಣ.ಡಿ.ಎಂ.(ಕಾಂಗ್ರೆಸ್‌),ಎಂ.ಮುನಿ ರಾಜು(ಪಕ್ಷೇತರ), ವಾರ್ಡ್‌ ನಂ.21 ಸಾಮಾನ್ಯ ಮಹಿಳೆ ಸ್ಥಾನಕ್ಕೆ ಗೀತಾ ಜಗದೇವ(ಜೆಡಿಎಸ್‌), ಲಕ್ಷ್ಮೀ (ಬಿಜೆಪಿ), ಕಸ್ತೂರಿ (ಕಾಂಗ್ರೆಸ್‌), 22ನೇ ವಾರ್ಡ್‌ ಸಾಮಾನ್ಯ ಮಹಿಳೆ ಸ್ಥಾನಕ್ಕೆ ಎಸ್‌.ವಿನೋದ (ಜೆಡಿಎಸ್‌), ರತ್ನಮ್ಮ(ಕಾಂಗ್ರೆಸ್‌), ಎಂ.ಲಕ್ಷ್ಮೀ (ಬಿಜೆಪಿ), ಸರಸ್ಪತಿ (ಪಕ್ಷೇತರ), 23ನೇ ವಾರ್ಡ್‌ ಹಿಂದುಳಿದವರ್ಗ ಬಿ ಸ್ಥಾನಕ್ಕೆ ಎಸ್‌.ನಾಗೇಶ್‌ (ಜೆಡಿಎಸ್‌), ಸಂದೀಪ್‌ (ಪಕ್ಷೇತರ), ಎಚ್.ಕೆ.ಪ್ರಮೋದ್‌ (ಕಾಂಗ್ರೆಸ್‌), ಉಮೇಶ್‌ (ಪಕ್ಷೇತರ) ನಾಮಪತ್ರ ಸಲ್ಲಿಸಿದ್ದಾರೆ ಎಂದು ಚುನಾವಣಾಧಿಕಾರಿ ಚನ್ನಬಸಪ್ಪ ತಿಳಿಸಿದ್ದಾರೆ.

ಟಾಪ್ ನ್ಯೂಸ್

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Crime: ಕಾಂಗ್ರೆಸ್‌ ಪುರಸಭೆ ಸದಸ್ಯನ ಭೀಕರ ಹತ್ಯೆ; ಆನೇಕಲ್‌ನಲ್ಲಿ ಉದ್ವಿಗ್ನ ಸ್ಥಿತಿ

Crime: ಕಾಂಗ್ರೆಸ್‌ ಪುರಸಭೆ ಸದಸ್ಯನ ಭೀಕರ ಹತ್ಯೆ; ಆನೇಕಲ್‌ನಲ್ಲಿ ಉದ್ವಿಗ್ನ ಸ್ಥಿತಿ

Ganja peddler: ಪೊಲೀಸರ ಮೇಲೆಯೇ  ಹಲ್ಲೆಗೆ ಯತ್ನಿಸಿದ ಗಾಂಜಾ ಪೆಡ್ಲರ್‌ಗೆ ಗುಂಡೇಟು; ಸೆರೆ

Ganja peddler: ಪೊಲೀಸರ ಮೇಲೆಯೇ  ಹಲ್ಲೆಗೆ ಯತ್ನಿಸಿದ ಗಾಂಜಾ ಪೆಡ್ಲರ್‌ಗೆ ಗುಂಡೇಟು; ಸೆರೆ

R.Ashok

Assembly Electionನಲ್ಲಿ ಮೈತ್ರಿಗೆ ದೇವೇಗೌಡರು ಒಪ್ಪಲಿಲ್ಲ: ಅಶೋಕ್‌

BRural

Devanahalli: ಗ್ರಾಮ ಪಂಚಾಯಿತಿಗಳಲ್ಲಿ ಇ- ಜನ್ಮ ದಾಖಲೆ

Wheeling: ಬೆಂಗಳೂರು ಹುಡುಗರಿಗೆ ವ್ಹೀಲಿಂಗ್‌ ಅಡ್ಡೆಯಾದ ಹೆದ್ದಾರಿ!

Wheeling: ಬೆಂಗಳೂರು ಹುಡುಗರಿಗೆ ವ್ಹೀಲಿಂಗ್‌ ಅಡ್ಡೆಯಾದ ಹೆದ್ದಾರಿ!

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.