ಮಕ್ಕಳಿಗೆ ಜಲ ಮೂಲ ಸಂರಕ್ಷಣೆ ಪ್ರಜ್ಞೆ ಮೂಡಿಸಿ

Team Udayavani, May 16, 2019, 10:24 AM IST

ದೇವನಹಳ್ಳಿ: ಮಕ್ಕಳಲ್ಲಿ ದೈಹಿಕ ಮತ್ತು ಮಾನ ಸಿಕ ಬೆಳವಣಿಗೆಯ ಜೊತೆಗೆ ಜಲ ಮೂಲ ಉಳಿಸಿ ಪರಿಸರ ಸಂರಕ್ಷಣೆಯಂತಹ ಪ್ರಜ್ಞೆ ಮೂಡಿಸಬೇಕು ಎಂದು ಸಾವಯುವ ಕೃಷಿಕ ಶಿವನಾಪುರ ರಮೇಶ್‌ ತಿಳಿಸಿದರು.

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ, ಜೆಸಿಐ ಸಂಸ್ಥೆ, ಜಿಲ್ಲಾ ಭಾರತ ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌, ಜಿಲ್ಲಾ ಹ್ಯಾಂಡ್‌ ಬಾಲ್ ಅಸೋಸಿ ಯೇಷನ್‌, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯಿಂದ ನಡೆದ 16ನೇ ವರ್ಷದ ಬೇಸಿಗೆ ಶಿಬಿರ ಉದ್ಘಾಟನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಸಿ ನೆಟ್ಟು ಪರಿಸರ ಸಂರಕ್ಷಿಸಿ: ಪಕೃತಿಯ ಮೂಲವಾದ ಮರ, ಗಿಡಗಳನ್ನು ನಾಶ ಮಾಡದೆ ಉಳಿಸಿ ಬೆಳೆಸುವುದರಿಂದ ಮಳೆ ಸರಿ ಯಾದ ಸಮಯಕ್ಕೆ ಬೀಳುತ್ತದೆ. ಪ್ರಕೃತಿ ಋಣ ಹಾಗೂ ತಾಯಿ ಋಣ ಎಂದೆದಿಗೂ ತೀರಿಸ ಲಾಗದು. ನಿಸರ್ಗದ ಉಳಿವಿಗೆ ಆದಷ್ಟು ಶ್ರಮಿಸ ಬೇಕು. ಪ್ರತಿ ಮಗುವೂ ಸಸಿಗಳನ್ನು ನೆಟ್ಟು ಪರಿ ಸರ ಸಂರಕ್ಷಣೆ ಮಾಡಬೇಕು. ನೀರಿನ ಮೂಲ ಗಳ ವ್ಯವಸ್ಥೆಗಳನ್ನು ಉಳಿಸಿ ಅಂತರ್ಜಲ ಅಭಿ ವೃದ್ಧಿಪಡಿಸಬೇಕು. ಬೇಸಿಗೆ ಶಿಬಿರದಲ್ಲಿ ಕ್ರೀಡಾ ಚಟುವಟಿಕೆ ಇರುವುದರಿಂದ ಪ್ರತಿಯೊಂದು ಕ್ರೀಡೆ ಗಳಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಬೇಕು. ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಬೇಸಿಗೆ ಶಿಬಿರ ಸಹಕಾರಿಯಾಗಿದೆ. ಬೇಸಿಗೆ ಶಿಬಿರದಲ್ಲಿ ಮಕ್ಕಳು ಇತರೇ ಊರು ಗಳಿಗೆ ಹೋಗುವ ಬದಲಿಗೆ ಇಂತಹ ಶಿಬಿರಗಳಿಗೆ ಬರುವುದರಿಂದ ತಮ್ಮಲ್ಲಿರುವ ಆಗಾಧ ಪ್ರತಿಭೆ ಹೊರಸೂಸಲು ಅನುಕೂಲ ವಾಗುತ್ತದೆ ಎಂದು ಹೇಳಿದರು.

ದೈಹಿಕ ಕ್ಷಮತೆ ಕಾಯ್ದುಕೊಳ್ಳಿ: ಜಿಲ್ಲಾ ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ ಮುಖ್ಯ ಆಯುಕ್ತ ಬಿ.ಕೆ.ಶಿವಪ್ಪ ಮಾತನಾಡಿ, ಬೇಸಿಗೆ ಶಿಬಿರದಿಂದ ಮಕ್ಕಳ ಜ್ಞಾನಾರ್ಜನೆ ಹೆಚ್ಚುತ್ತದೆ. ಉತ್ತಮ ಆರೋಗ್ಯ ಇರುವ ಕಡೆ ಉತ್ತಮ ಕಲಿಕೆ ಇರಲು ಸಾಧ್ಯ. ಮಾನಸಿಕವಾಗಿ ಬಲಗೊಳ್ಳಲು ಕ್ರೀಡೆಗಳು ಉತ್ತಮ ವಾತಾವರಣ ನಿರ್ಮಿಸಿಕೊಡುತ್ತವೆ. ಇಂದು ಕ್ರೀಡಾಚಟುವಟಿಕೆಗಳಲ್ಲೇ ಸಾಧಕರಾಗಿ ಹೊರಹೊಮ್ಮಿದವರನ್ನು ಕಾಣುತ್ತಿದ್ದೇವೆ. ನಿಮ್ಮ ಲ್ಲೂ ಇಂತಹ ಕ್ರೀಡಾಪಟುಗಳು ಇರಲು ಸಾಧ್ಯ. ಮಕ್ಕಳಲ್ಲಿ ಪರಸ್ಪರ ದ್ವೇಷ, ಅಸೂಯೆ ಹೋಗಲಾಡಿಸಿ ಸೌಹಾರ್ದತೆ ನಿರ್ಮಾಣವಾ ಗಲು ಕ್ರೀಡಾ ಸ್ಫೂರ್ತಿ ಅಗತ್ಯವಿದೆ. ಇಂದಿನ ಯಾಂತ್ರಿಕತೆಯಲ್ಲಿ ಎಲ್ಲರೂ ದೈಹಿಕ ಕ್ಷಮತೆ ಕಾಯ್ದುಕೊಳ್ಳುವುದು ತೀರಾ ಅಗತ್ಯವೆಂದರು.

16ವರ್ಷದಿಂದ ಬಿಸಿಗೆ ಶಿಬಿರ: ಅಡ್ವೆಂಚರ್‌ ಅಸೋಸಿಯೇಷನ್‌ ಅಧ್ಯಕ್ಷ ಶಶಿಧರ್‌ ಮಾತ ನಾಡಿ, ಕ್ರೀಡೆಗಳು ದೈಹಿಕ ಆರೋಗ್ಯ ಮತ್ತು ಮಾನಸಿಕ ಸ್ಥಿತಿಯನ್ನು ಸಮಚಿತ್ತದಲ್ಲಿಡಲು ಸಹ ಕಾರಿಯಾಗಿವೆ. ಕಳೆದ 16ವರ್ಷಗಳಿಂದ ಬಿಸಿಗೆ ಶಿಬಿರ ನಡೆಸಿಕೊಂಡು ಬರಲಾಗುತ್ತದೆ ಎಂದರು.

ಈ ವೇಳೆ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಎಸ್‌.ಸಿ.ನಾಗರಾಜು, ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ ತಾಲೂಕು ಅಧ್ಯಕ್ಷ ಡಿ.ಎಸ್‌.ಧನಂಜಯ, ಪ್ರಧಾನ ಕಾರ್ಯದರ್ಶಿ ಸೀತಾರಾಮು, ಉಪಾಧ್ಯಕ್ಷ ಗಣೇಶ್‌ಬಾಬು, ಸದಸ್ಯ ಅಜಯ್‌, ಜೆಸಿಐ ಅಧ್ಯಕ್ಷ ಹರ್ಷ, ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ‌ ಗೌರ ವಾಧ್ಯಕ್ಷ ಕೆ.ಎಸ್‌.ಪ್ರಭಾಕರ್‌, ಪ್ರಧಾನ ಕಾರ್ಯ ದರ್ಶಿ ಸಿ.ಎಂ.ವೆಂಕಟೇಶ್‌, ಸಂಘ ಟನಾ ಕಾರ್ಯ ದರ್ಶಿ ಪುಟ್ಟಸ್ವಾಮಿ, ಟಿ.ಆರ್‌.ಲೋಕೇಶ್‌ ಇದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ