ಭೀಕರ ಬರಗಾಲ: ನೀರು, ಮೇವಿಗೆ ಪರದಾಟ

Team Udayavani, May 16, 2019, 10:20 AM IST

blore-g1

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲಾ ನಾಲ್ಕೂ ತಾಲೂಕುಗಳ ನಗರ ಮತ್ತು ಗ್ರಾಮಗಳಲ್ಲಿ ಬರಗಾಲದ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಜನರು ನೀರಿಗಾಗಿ ಪರಿತಪಿಸುವಂತಾಗಿದೆ.

ದಿನನಿತ್ಯ ಬಿಸಿಲಿನ ಪ್ರಮಾಣ 37ಡಿಗ್ರಿ ಯಷ್ಟು ಹೆಚ್ಚಾಗಿದೆ. ದಿನೇ ದಿನೆ ಅಂತರ್ಜಲ ಮಟ್ಟ ಕುಸಿಯುತ್ತಿದೆ. 1,200ರಿಂದ 1,500 ಅಡಿಗಳ ವರೆಗೆ ಬೋರ್‌ವೆಲ್ ಕೊರೆಸಿದರೂ ನೀರು ಸಿಗದ ಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ 109 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಕಾಡುತ್ತಿದೆ. ಅದರಲ್ಲೂ ಟ್ಯಾಂಕರ್‌ ಮೂಲಕ ಹಾಗೂ ಖಾಸಗಿ ಬೋರ್‌ವೆಲ್ಗಳಿಂದ ನೀರನ್ನು ಒದಗಿಸುತ್ತಿದ್ದಾರೆ. ನೀರಿನ ಸಮಸ್ಯೆ ಇರುವ ಕಡೆಗಳಲ್ಲಿ ತಕ್ಷಣ ಟ್ಯಾಂಕರ್‌ ಮೂಲಕ ನೀರು ಹರಿಸುವ ಕೆಲಸವನ್ನು ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಸ್ಥಳೀಯ ಆಡಳಿತಗಳು ಮಾಡುತ್ತಿವೆ.

ಮೇವು, ನೀರಿನ ಸಮಸ್ಯೆ: ಜಾನುವಾರು ಗಳಿಗೆ ಕುಡಿಯುವ ನೀರಿನ ಸಮಸ್ಯೆಯ ಜೊತೆ ಮೇವಿನ ಸಮಸ್ಯೆಯೂ ಕಾಡುತ್ತಿದೆ. ದಿನನಿತ್ಯ ರೈತರು ಸಾಕಿರುವ ಪ್ರಾಣಿಗಳಿಗೆ ಮೇವು ಎಷ್ಟು ಮುಖ್ಯವೋ ಅಷ್ಟೇ ನೀರು ಸಹ ಮುಖ್ಯವಾಗಿರುತ್ತದೆ. ಮೇವು ತಿಂದ ನಂತರ ಕೂಡಲೇ ಜಾನುವಾರುಗಳಿಗೆ ನೀರು ಣಿಸಬೇಕು. ಎಲ್ಲಿಯೂ ನೀರು ಸಿಗದ ಕಾರಣ ದನಕರುಗಳನ್ನು ಬಯಲಿಗೆ ಕರೆದುಕೊಂಡು ಬರುತ್ತಿಲ್ಲ. ಬೇಸಿಗೆಯಲ್ಲಿ ಮೇವಿನ ಕೊರತೆ ಹೆಚ್ಚಾಗಿದೆ. ದಿನೇ ದಿನೆ ಬಿಸಿಲಿನ ತಾಪ ಹೆಚ್ಚಳದಿಂದ ಸಮಸ್ಯೆ ಉಲ್ಬಣಗೊಳ್ಳುತ್ತಿದೆ.

ಕಂಟ್ರೋಲ್ ರೂಂ ಸ್ಥಾಪನೆ: ಬೋರ್‌ವೆಲ್ಗಳಲ್ಲಿರುವ ನೀರು ಬತ್ತಿಹೋಗುತ್ತಿವೆ. ಈ ವರ್ಷದಂತಹ ಬರಗಾಲ ಎಂದೂ ಸಹ ಇಷ್ಟು ತರಹದ ನೀರಿನ ಸಮಸ್ಯೆ ಬಂದಿ ರಲಿಲ್ಲ. ಈಗ ಉದ್ಭವಿಸಿರುವ ಸಮಸ್ಯೆಗೆ ಜಿಲ್ಲಾಡಳಿತ ಕುಡಿಯುವ ನೀರಿನ ಸಮಸ್ಯೆಗೆ ಕಂಟ್ರೋಲ್ ರೂಂ ಸಹ ಸ್ಥಾಪನೆ ಮಾಡಿದೆ. ಗ್ರಾಮೀಣ ಪ್ರದೇಶಗಳಲ್ಲಿ ಅಕ್ಕಪಕ್ಕದ ತೋಟಗಳಿಂದ ಕುಡಿಯುವ ನೀರು ತರುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆ ಕೈಕೊಟ್ಟಿ ದ್ದರಿಂದ ಬಿಸಿಲು ಹೆಚ್ಚಾಗಿರುವುದರಿಂದ ನೀರಿನ ಸಮಸ್ಯೆ ಹೆಚ್ಚು ಉದ್ಭವಿಸಿದೆ. ಇಲ್ಲಿ ಯಾವುದೇ ನದಿ ಮೂಲಗಳು ಇಲ್ಲ. ಸತತ ಬರಗಾಲವನ್ನು ಎದುರಿಸುತ್ತಿದೆ.

ಮೂರು ತಾಲೂಕು ಬರಗಾಲಪೀಡಿತ: ಸರ್ಕಾರ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಮೂರು ತಾಲೂಕುಗಳನ್ನು ಬರಗಾಲ ತಾಲೂಕುಗಳೆಂದು ಘೋಷಿಸಿತ್ತು. ಟಾಸ್ಕ್ ಫೋರ್ಸ್‌ ಅನುದಾನದಲ್ಲಿ ಕೊಳವೆ ಬಾವಿ ಗಳನ್ನು ಕೊರೆಸಿ ಅನುದಾನ ಸಹ ಬಿಡುಗಡೆ ಮಾಡಿತ್ತು. ಶುದ್ಧ ಕುಡಿಯುವ ನೀರಿನ ಘಟಕಗಳು ಇದ್ದರೂ ಕೆಲವು ಕಡೆ ನೀರಿನ ಸಮಸ್ಯೆ ಇರುವ ಕಡೆ ಸರಿಯಾದ ರೀತಿ ಕಾರ್ಯ ನಿರ್ವಹಿಸಲು ಆಗುತ್ತಿಲ್ಲ. ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುವುದು ಎಂದು ಅಧಿಕಾರಿಗಳು ಹೇಳುತ್ತಾರೆ.

ಮಳೆ ಬರದಿದ್ದರೆ ಬೆಲೆಗಳು ಗಗನಕ್ಕೆ: ಬಿರು ಬೇಸಿಗೆ ಕಳೆದು ಮಳೆಗಾಲ ಬಂತು ಎಂದು ರೈತರ ಮೊಗದಲ್ಲಿ ಹರ್ಷ ಮೊಳಗಿತ್ತು. ಆದರೆ, ಮಳೆಗಾಲದಲ್ಲಿ ಮಳೆಯಲ್ಲದೇ ಬಿರು ಬೇಸಿಗೆಯ ರುದ್ರ ನರ್ತನ ತಾಂಡ ವವಾಡುತ್ತಿದೆ. ಹಾಗಾಗಿ, ರೈತರಲ್ಲಿ ಆತಂಕ ಮನೆ ಮಾಡಿದೆ. ಮುಂದೆ ಇದೇ ರೀತಿ ಮಳೆ ಬರದಿದ್ದರೆ ಬೆಲೆಗಳು ಇನ್ನೂ ಗಗನಕ್ಕೇರುತ್ತವೆ ಎಂಬ ಆತಂಕವೂ ರೈತರು ಹಾಗೂ ನಾಗರಿಕರನ್ನು ಕಾಡುತ್ತಿದೆ.

ಮೇವಿಗಾಗಿ ಹರಸಾಹಸ: ಈ ಬಾರಿ ಭೀಕರ ಬಲಗಾಲದಿಂದ ತಮ್ಮ ಜಾನುವಾರುಗಳಿಗೆ ಮೇವು ಇಲ್ಲದ ಕಾರಣ ರೈತರು ಕಂಗಾಲಾ ಗಿದ್ದಾರೆ. ಗ್ರಾಮೀಣ ಭಾಗದಲ್ಲಿ ನೀರು ಇದ್ದ ರೈತರ ತೋಟಗಳಲ್ಲಿ ಹಸಿ ಮೇವು ಬೆಳೆದುಕೊಳ್ಳುತ್ತಾರೆ. ಇಲ್ಲದಿದ್ದರೆ ರೈತರು ಒಣ ಮೇವಿನ ಮೊರೆ ಹೋಗುತ್ತಾರೆ. ಬರಗಾಲದಲ್ಲೂ ಒಣ ರಾಗಿ ಹುಲ್ಲು ಒಂದು ಕಟ್ಟಿಗೆ ಸರಾಸರಿ 110 ರಿಂದ 150 ರೂ. ವರೆಗೆ ನಿಗದಿಯಾಗಿದೆ. ಒಂದು ಕಟ್ಟು ಒಣ ಹುಲ್ಲು ಒಂದು ದಿನಕ್ಕೆ ಸಕಾಗುವುದಿಲ್ಲ. ರೈತರು ಪ್ರತಿನಿತ್ಯ ಸುಮಾರು 5-6 ಕಿ.ಮೀ. ದೂರದ ಬೇರೆ ಬೇರೆ ಗ್ರಾಮಗಳಲ್ಲಿ ಬೆಳೆದಿ ರುವ ಜೋಳದ ಕಡ್ಡಿ, ಒಣ ರಾಗಿ ಹುಲ್ಲು ಮತ್ತಿತರ ಮೇವು ತರಲು ಹರಸಾಹಸ ಪಡುತ್ತಿದ್ದಾರೆ.

ಟ್ಯಾಂಕರ್‌ ನೀರಿಗೆ 350ರೂ.: ಮಳೆ ಇಲ್ಲದ್ದ ರಿಂದ ಕೆರೆ, ಕುಂಟೆಗಳು ಬತ್ತಿ ಬೋರ್‌ವೆಲ್ನಲ್ಲಿ ಅಂತರ್ಜಲ ಕುಸಿದು ನೀರು ಇಲ್ಲ ದಂತಾಗಿದೆ. ರೈತರು ಕೊಳವೆಬಾವಿ ಕೊರೆ ಸಲು ಸಾಲ ಸೋಲ ಮಾಡಿ ಮುಂದಾ ಗಿದ್ದರೂ ನೀರು ಸಿಗದೆ ಆತ್ಮಹತ್ಯೆಗೆ ಮುಖ ಮಾಡುವಂತಾಗಿದೆ. ಜಾನುವಾರುಗಳಿಗೆ ಹಸಿ ಮೇವು ಬೆಳೆಯುವುದು ಬಹಳ ಕಷ್ಟವಾಗಿದೆ. 350ರೂ. ನೀಡಿ ಟ್ಯಾಂಕರ್‌ ನೀರು ತರಿಸಲು ಆಗುವುದಿಲ್ಲ. ಕನಿಷ್ಠ 500ರೂ. ಕೊಟ್ಟರೂ ಟ್ಯಾಂಕರ್‌ ನೀರು ಸಿಗುವುದಿಲ್ಲ ಎಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.

18 ವಾರ ಮೇವಿನ ಕೊರತೆ ಇಲ್ಲ: ಪಶು ಪಾಲನೆ ಇಲಾಖೆ ಅಧಿಕಾರಿಗಳ ಪ್ರಕಾರ ಜಿಲ್ಲೆಯಲ್ಲಿ 1.283ಲಕ್ಷ ಜಾನುವಾರುಗಳಿದ್ದು, ಜಿಲ್ಲೆಯಲ್ಲಿ 55,868 ಮಿನಿ ಮೇವಿನ ಬೀಜ ಗಳ ಕಿಟ್‌ಗಳನ್ನು ಹಾಲು ಉತ್ಪಾದಕರ ಸಹ ಕಾರ ಸಂಘ ಹಾಗೂ ಜನಪ್ರತಿನಿಧಿಗಳ ಮೂಲಕ ನೀಡಲಾಗಿದೆ. ಮೇವಿನ ಕೊರತೆ ನೀಗಿಸಲು ಆಯಾ ತಹಶೀಲ್ದಾರ್‌ರ ಹಂತದಲ್ಲಿ ಟೆಂಡರ್‌ ಪ್ರಕ್ರಿಯೆ ಮುಗಿದಿದೆ. ಮೇವಿನ ಕೊರತೆ ಕಂಡುಬಂದರೆ ಮೇವಿನ ಬ್ಯಾಂಕ್‌ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ. ನೀರು ಇರುವ ರೈತರಿಗೆ ಮೇವಿನ ಬೀಜದ ಕಿಟ್ ನೀಡಿ, ಅದರಿಂದ ಹಸಿ ಮೇವು ಬೆಳೆಯಲು ಅನುಕೂಲ ಮಾಡಲಾಗಿದೆ. 1.11ಲಕ್ಷ ಮೆಟ್ರಿಕ್‌ ಟನ್‌ ಮೇವು ಲಭ್ಯವಿದೆ. ಇನ್ನೂ 18 ವಾರಗಳಿಗೆ ಮೇವಿನ ಕೊರತೆ ಇರುವುದಿಲ್ಲ ಎಂದು ಪಶುಪಾಲನಾಧಿಕಾರಿಗಳು ಹೇಳುತ್ತಾರೆ.

ಟಾಪ್ ನ್ಯೂಸ್

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Crime: ಕಾಂಗ್ರೆಸ್‌ ಪುರಸಭೆ ಸದಸ್ಯನ ಭೀಕರ ಹತ್ಯೆ; ಆನೇಕಲ್‌ನಲ್ಲಿ ಉದ್ವಿಗ್ನ ಸ್ಥಿತಿ

Crime: ಕಾಂಗ್ರೆಸ್‌ ಪುರಸಭೆ ಸದಸ್ಯನ ಭೀಕರ ಹತ್ಯೆ; ಆನೇಕಲ್‌ನಲ್ಲಿ ಉದ್ವಿಗ್ನ ಸ್ಥಿತಿ

Ganja peddler: ಪೊಲೀಸರ ಮೇಲೆಯೇ  ಹಲ್ಲೆಗೆ ಯತ್ನಿಸಿದ ಗಾಂಜಾ ಪೆಡ್ಲರ್‌ಗೆ ಗುಂಡೇಟು; ಸೆರೆ

Ganja peddler: ಪೊಲೀಸರ ಮೇಲೆಯೇ  ಹಲ್ಲೆಗೆ ಯತ್ನಿಸಿದ ಗಾಂಜಾ ಪೆಡ್ಲರ್‌ಗೆ ಗುಂಡೇಟು; ಸೆರೆ

R.Ashok

Assembly Electionನಲ್ಲಿ ಮೈತ್ರಿಗೆ ದೇವೇಗೌಡರು ಒಪ್ಪಲಿಲ್ಲ: ಅಶೋಕ್‌

BRural

Devanahalli: ಗ್ರಾಮ ಪಂಚಾಯಿತಿಗಳಲ್ಲಿ ಇ- ಜನ್ಮ ದಾಖಲೆ

Wheeling: ಬೆಂಗಳೂರು ಹುಡುಗರಿಗೆ ವ್ಹೀಲಿಂಗ್‌ ಅಡ್ಡೆಯಾದ ಹೆದ್ದಾರಿ!

Wheeling: ಬೆಂಗಳೂರು ಹುಡುಗರಿಗೆ ವ್ಹೀಲಿಂಗ್‌ ಅಡ್ಡೆಯಾದ ಹೆದ್ದಾರಿ!

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.