ಸಿಬ್ಬಂದಿ ಕೊರತೆ: ರೈತರಿಗೆ ತಪ್ಪದ ಅಲೆದಾಟ


Team Udayavani, Mar 12, 2022, 12:53 PM IST

Untitled-1

ದೇವನಹಳ್ಳಿ: ಗ್ರಾಮೀಣ ಪ್ರದೇಶದ ರೈತರಿಗೆ ಹೆಚ್ಚಿನಸೌಲಭ್ಯ ಕೃಷಿ ಇಲಾಖೆ ಒದಗಿಸಬೇಕಾಗಿದ್ದು, ಅಧಿಕಾರಿಗಳ ಹುದ್ದೆ ಖಾಲಿ ಇರುವುದರಿಂದ ಜಿಲ್ಲೆಯರೈತರು ಕಚೇರಿಗೆ ಅಲೆದಾಡುವಂತಾಗಿ ಸೌಲಭ್ಯಪಡೆಯುವಲ್ಲಿ ಸಮಸ್ಯೆ ಅನುಭವಿಸಬೇಕಾಗಿದೆ.

ಜಿಲ್ಲೆಯ ಕೃಷಿ ಇಲಾಖೆ ಏಕಕಾಲಕ್ಕೆ ಎರಡೆರಡು ಜಿಲ್ಲೆಗಳ ಕಾರ್ಯವ್ಯಾಪ್ತಿ ಹೊಂದಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ವ್ಯಾಪ್ತಿಗೆ ಇದೇಅಧಿಕಾರಿ ವಲಯ ಕಾರ್ಯನಿರ್ವಹಿಸಬೇಕಾದಹಿನ್ನೆಲೆ, ಇದುವರೆಗೂ ತೀವ್ರ ಒತ್ತಡ ಅಧಿಕಾರಿಗಳು ಅನುಭವಿಸುತ್ತಿದ್ದಾರೆ.

ಬೆಂಗಳೂರು ಉತ್ತರ, ಪೂರ್ವ, ದಕ್ಷಿಣತಾಲೂಕುಗಳೊಂದಿಗೆ ಆನೇಕಲ್‌ ತಾಲೂಕಿನವ್ಯಾಪ್ತಿಯನ್ನು ಬೆಂಗಳೂರು ನಗರ ಜಿಲ್ಲೆಯಾಗಿ ಕೃಷಿಇಲಾಖೆಗೆ ನೀಡಲಾಗಿದೆ. ಜಿಲ್ಲೆಯ ನಾಲ್ಕುತಾಲೂಕುಗಳಾದ ದೇವನಹಳ್ಳಿ, ಹೊಸಕೋಟೆ,ದೊಡ್ಡಬಳ್ಳಾಪುರ, ನೆಲಮಂಗಲ ತಾಲೂಕುಗಳನ್ನುನೀಡಲಾಗಿದೆ. ಒಟ್ಟು 8 ತಾಲೂಕುಗಳ ವ್ಯಾಪ್ತಿಯಲ್ಲಿಕಾರ್ಯನಿರ್ವಹಿಸುತ್ತಿದ್ದು, ಜಿಲ್ಲಾ ಕೃಷಿ ಇಲಾಖೆಯಲ್ಲಿಹಾಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಕಾರ್ಯ ಒತ್ತಡ ಹೆಚ್ಚಾಗಿದೆ.

ಜಿಲ್ಲೆಯ 17 ಹೋಬಳಿ ವ್ಯಾಪ್ತಿಯಲ್ಲಿನ ರೈತ ಸಂಪರ್ಕ ಕೇಂದ್ರಗಳ ಕಾರ್ಯಭಾರ ಸೇರಿ ಕೃಷಿಇಲಾಖೆ ನಾನಾ ಯೋಜನೆಗಳನ್ನು ಜಾರಿಗೊಳಿಸಲುಕೃಷಿ ಅಧಿಕಾರಿ, ಸಹಾಯಕ ಕೃಷಿ ಅಧಿಕಾರಿ, ಸಹಾಯಕಕೃಷಿ ಅಧಿಕಾರಿಗಳ ಸ್ಥಾನಗಳಿಗೆ ನೇಮಕಾತಿ ಬಾಕಿಯಿದೆ.ಜಿಲ್ಲೆಯ 7 ಕೃಷಿ ಅಧಿಕಾರಿಗಳು, 30 ಸಹಾಯಕ ಕೃಷಿಅಧಿಕಾರಿಗಳ ನೇಮಕ ಬಾಕಿಯಿದ್ದು, ಇರುವವರಿಗೆಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಗಳ ಕಾರ್ಯಭಾರ ಸೃಷ್ಟಿಯಾಗಿದೆ. ಹೀಗಾಗಿ ಸರ್ಕಾರ ಶೀಘ್ರ ಈ ಸ್ಥಾನಗಳಿಗೆ ಸಿಬ್ಬಂದಿ ನೇಮಕ ಪ್ರಕ್ರಿಯೆ ಮಾಡಬೇಕಿದೆ.

ಅಧಿಕಾರಿಗಳ ಅಲೆದಾಟ: ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಕಚೇರಿ ಬೆಂಗಳೂರಿನಲ್ಲಿದೆ. ಉಪನಿರ್ದೇಶಕರ ಕಚೇರಿ ಗ್ರಾಮಾಂತರದಲ್ಲಿದೆ. ನಗರಮತ್ತು ಗ್ರಾಮಾಂತರ ಎರಡು ಜಿಲ್ಲೆಗಳಕಾರ್ಯಭಾರದ ಹಿನ್ನೆಲೆ ಸ್ವತಃ ಅಧಿಕಾರಿಗಳೇಅಲೆದಾಡುವಂತಾಗಿದೆ. ಎರಡೆರಡುಜಿಲ್ಲೆಗಳಡೀಸಿಗಳ ಸಭೆ, ಜಿಪಂ ಸಿಇಒ, ಸಚಿವರ ಭೇಟಿ ಹೀಗೆಎರಡೂ ಜಿಲ್ಲೆಗಲ ವ್ಯಾಪ್ತಿಗೆ ಅಧಿಕಾರಿಗಳು ಓಡಾಡಬೇಕಾಗುತ್ತಿದೆ. ಜತೆಗೆ ಕಚೇರಿ ಕೆಲಸಮಾಡಲು ಪ್ರಥಮ, ದ್ವಿತೀಯ ದರ್ಜೆ ಸಹಾಯಕರ ಒಟ್ಟು 12 ಪೈಕಿ 7 ಸ್ಥಾನ ಮಾತ್ರ ಭರ್ತಿಯಾಗಿದ್ದು, 5 ಸ್ಥಾನ ಖಾಲಿಯಾಗಿದೆ.

ಹೆಚ್ಚುವರಿ ಹೊಣೆಗಾರಿಕೆ: ಬೆಂಗಳೂರು ಗ್ರಾಮಾಂತರಜಿಲ್ಲೆಯ ಕೃಷಿ ಇಲಾಖೆಗೆ ಮಂಜೂರಾಗಿರುವ ನಾನಾ ಹಂತದ 102 ಹುದ್ದೆಗಳ ಪೈಕಿ ಕೇವಲ 46 ಸ್ಥಾನಗಳಿಗೆಮಾತ್ರ ಸಿಬ್ಬಂದಿಯಿದ್ದು, 56 ಹುದ್ದೆಗಳು ನೇಮಕಕ್ಕಾಗಿಕಾದು ಕುಳಿತಿವೆ. ಹೀಗಾಗಿ, ರೈತ ಸಂಪರ್ಕ ಕೇಂದ್ರ ಸೇರಿ ತಾಲೂಕುಮಟ್ಟದ ಕೃಷಿ ಇಲಾಖೆಯ ಕಚೇರಿಗಳಲ್ಲಿ ಸಮರ್ಪಕ ಅಧಿಕಾರಿಗಳಿಲ್ಲದೆ, ಹಾಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ತೀವ್ರ ಕಾರ್ಯದೊತ್ತಡ ಸೃಷ್ಟಿಯಾಗುತ್ತಿದೆ. ಜಿಲ್ಲೆಯ ಇಲಾಖೆಗೆ ಬೆಂಗಳೂರು ನಗರದ ವ್ಯಾಪ್ತಿ ನೀಡಿರುವ ಹಿನ್ನೆಲೆ ಕಡಿಮೆ ಅಧಿಕಾರಿ ವಲಯಕ್ಕೆ ಹೆಚ್ಚುವರಿ ಹೊಣೆಗಾರಿಕೆಯಿದ್ದು, ರೈತರು ಸಮಸ್ಯೆ ಅನುಭವಿಸಬೇಕಾಗಿದೆ.

ರೈತರ ಆಗ್ರಹ: ಕೃಷಿ ಸಚಿವರು ಸಿಬ್ಬಂದಿ ಕೊರತೆಯಿರುವ ಜಿಲ್ಲೆಗಳಲ್ಲಿ ಕೂಡಲೇ ರೈತರಿಗೆಅನುಕೂಲವಾಗಲು ಸಿಬ್ಬಂದಿ ನೇಮಿಸಬೇಕು.ಇಲ್ಲದಿದ್ದರೆ ರೈತರು ಸಾಕಷ್ಟು ಸಮಸ್ಯೆ ಎದುರಿಸ ಬೇಕಾಗುತ್ತದೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂಶಾಸಕರ ಈ ಕೂಡಲೇ ಕೃಷಿ ಸಚಿವರ ಗಮನಕ್ಕೆ ತಂದುಕೃಷಿ ಇಲಾಖೆಗೆ ಅಗತ್ಯ ಸಿಬ್ಬಂದಿ ನೇಮಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಎಲ್ಲೆಲ್ಲಿ ಖಾಲಿ ಹುದ್ದೆಗಳು? :

ಹುದ್ದೆ /ಮಂಜೂರಾತಿ/ ಖಾಲಿ

ಕೃಷಿ ಅಧಿಕಾರಿ/ 25 /7

ಸಹಾಯಕ ಕೃಷಿ ಆಧಿಕಾರಿ 40 /30

ಡಿ-ಗ್ರೂಪ್‌ 10/ 8

ವಾಹನ ಚಾಲಕರು 3/ 3

ಅಧೀಕ್ಷಕರು 4/ 1

ಪ್ರ.ದ.ಸ 4 /3

ದ್ವಿ.ದ.ಸ 8/ 2

ಬೆರಳಚ್ಚುಗಾರರು 4/ 2

ಒಟ್ಟು 102/ 56

ಕೃಷಿ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದ ಸಾಕಷ್ಟು ಕೆಲಸ ನಿಧಾನಗತಿಯಲ್ಲಿ ಸಾಗುತ್ತಿದೆ. ರೈತರು ಕಚೇರಿಗೆ ಅಲೆದಾಡುವಂತ ಸ್ಥಿತಿ ನಿರ್ಮಾಣ ವಾಗಿದೆ. ಸರ್ಕಾರ ಇನ್ನಾದರೂ ಎಚ್ಚೆತ್ತು ಕೊಂಡು ಕೃಷಿ ಇಲಾಖೆಗೆ ಸಿಬ್ಬಂದಿ ನೇಮಿಸಬೇಕು.– ಬಿದಲೂರು ರಮೇಶ್‌, ರೈತ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ

ಜಿಲ್ಲೆಯಲ್ಲಿ ಕೃಷಿ ಇಲಾಖೆಯಲ್ಲಿ 56 ಸಿಬ್ಬಂದಿ ಕೊರತೆಇರುವುದು ನಮ್ಮ ಗಮನಕ್ಕೆ ಬಂದಿದೆ. ಇದರಸಂಬಂಧಪಟ್ಟಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್‌ ಹಾಗೂ ಕೃಷಿ ಸಚಿವ ಬಿ.ಸಿ.ಪಾಟೀಲ್‌ ಗಮನಕ್ಕೆತರಲಾಗುವುದು. ಖಾಲಿಯಿರುವ ಹುದ್ದೆಗೆ ಭರ್ತಿ ಮಾಡಲು ಕೃಷಿ ಸಚಿವರಲ್ಲಿ ಮನವಿ ಮಾಡಲಾಗುವುದು. -ಎಚ್‌. ಎಂ. ರವಿಕುಮಾರ್‌, ಬಿಜೆಪಿ ರೈತ ಮೋರ್ಚಾಜಿಲ್ಲಾಧ್ಯಕ್ಷ

ಜಿಲ್ಲೆಯಲ್ಲಿ ಕೃಷಿ ಇಲಾಖೆಯಲ್ಲಿ 102 ಮಂಜೂರಾತಿ ಹುದ್ದೆಯಲ್ಲಿ 46ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.ಇನ್ನೂ 56 ಹುದ್ದೆ ಖಾಲಿಯಿದೆ. ಇರುವಸಿಬ್ಬಂದಿಗಳೇ ಸಕಾಲದಲ್ಲಿ ರೈತರಿಗೆ ಕೆಲಸ ಕಾರ್ಯ ಮಾಡಿ ಕೊಡುತ್ತಿದ್ದಾರೆ. ಜಿಲ್ಲೆಯಲ್ಲಿ30 ಸಹಾಯಕ ಕೃಷಿ ಅಧಿಕಾರಿಅನಿವಾರ್ಯವಿದೆ. ಈಗಾಗಲೇ ಸಭೆಗಳಲ್ಲಿ ಸಚಿವರ ಗಮನಕ್ಕೆ ತರಲಾಗಿದೆ. – ಜಯಸ್ವಾಮಿ, ಜಿಲ್ಲಾ ಕೃಷಿ ಜಂಟಿ ನಿರ್ದೇಶಕ.

– ಎಸ್‌.ಮಹೇಶ್

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Devanahalli: ಬೇಸಿಗೆ ಬಿಸಿ; ಹುರುಳಿಕಾಯಿ ದರ ದುಬಾರಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.