ಜಿಲ್ಲೆ ಗೆ ಕಾಲಿಟ್ಟಿದೆ ಚರ್ಮಗಂಟು ವ್ಯಾಧಿ

ಸೋಂಕಿತ 169 ರಾಸುಗಳು ಗುಣಮುಖ

Team Udayavani, Oct 9, 2020, 2:13 PM IST

ಜಿಲ್ಲೆಗೆ ಕಾಲಿಟ್ಟಿದೆ ಚರ್ಮಗಂಟು ವ್ಯಾಧಿ

ಸಾಂದರ್ಭಿಕ ಚಿತ್ರ

ದೇವನಹಳ್ಳಿ: ಪಶುಗಳನ್ನು ಕಾಡುವ ಸಾಂಕ್ರಾಮಿಕ ಚರ್ಮಗಂಟು ಕಾಯಿಲೆ ಜಿಲ್ಲೆಯಲ್ಲಿ ಕಾಣಿಸಿಕೊಂಡಿದ್ದು, ರೈತರಲ್ಲಿ ಆತಂಕ ಮನೆ ಮಾಡಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 1 ಲಕ್ಷ 90 ಸಾವಿರ ರಾಸುಗಳಿದ್ದು, ಅದರಲ್ಲಿ 169 ರಾಸುಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಎಲ್ಲಾ ಪಶುಗಳಿಗೂ ಚಿಕಿತ್ಸೆ ನೀಡಲಾಗಿದ್ದು,ಗುಣಮುಖವಾಗಿವೆ. ರೈತರು ಆತಂಕ ಪಡುವುದು ಬೇಡ ಎಂದು ಪಶುವೈದ್ಯಾಧಿಕಾರಿಗಳು ಹೇಳಿದ್ದಾರೆ.

3 ರಿಂದ 4 ದಿನ ಜ್ವರ: ಲುಂಪಿಕ್ವೀನ್‌ ವೈರಸ್‌ ನಿಂದಬರುವ ಸೋಂಕು,ಜಾನುವಾರುವನು ° ಕಚ್ಚಿದ ಸೊಳ್ಳೆ, ಕುರುಡು ನೊಣ, ತಿಗಣೆಗಳ ಮೂಲಕ ‌ ಒಂದರಿಂದ ‌ ಮತ್ತೂಂದು ಪಶುವಿಗೆ ಹರಡುವ ಕಾಯಿಲೆ ಇದಾಗಿದೆ. 3 ರಿಂದ 4 ದಿನ ‌ ಜ್ವರ ‌ ಕಾಣಿಸಿಕೊಳ್ಳುತ್ತದೆ. ಸಮಯಕ್ಕೆ ತಕ್ಕದಂತರ ಔಷದೋಪಚಾರ ಮಾಡಿದರೆ, ಈ ಕಾಯಿಲೆಯನ್ನು ನಿಯಂತ್ರಣಕ್ಕೆ ತರಬಹುದು.

2019ರಲ್ಲಿ ಮೊದಲಿಗೆ ಆಫ್ರಿಕಾದಲ್ಲಿ ಚರ್ಮಗಂಟು ರೋಗ ಪತ್ತೆಯಾಗಿತ್ತು. ರಾಜ್ಯದಲ್ಲಿ ಸೋಂಕು ಹರಡುವ ಪ್ರಮಾಣ ತೀರ ಕಡಿಮೆ ಇದೆ. ಪ್ರಸ್ತುತ ರಾಜ್ಯದ ಕಲಬುರ್ಗಿ, ರಾಯಚೂರು, ತುಮಕೂರು, ಕೋಲಾರಜಿಲ್ಲೆಗಳಲ್ಲಿ ಕಾಣಿಸಿಕೊಂಡಿದ್ದು, ಇತರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಕಡಿಮೆ ಇದೆ. ನೊಣ ಹಾಗೂ ಸೊಳ್ಳೆಗಳು ಬೆಳಗಿನ ಜಾವ ಹಾಗೂ ಸಾಯಂಕಾಲ ಸಮಯದಲ್ಲಿ ಜಾನುವಾರುಗಳಿಗೆ ಅತಿಯಾಗಿ ಕಚ್ಚುತ್ತವೆ. ಹೀಗಾಗಿ ದಪ್ಪನೆ ಸೊಳ್ಳೆ ಪರದೆಯ ಒಳಗೆಜಾನುವಾರುಗಳನ್ನು ಕಟ್ಟಬೇಕು. ನಂತರ ಬೇವಿನ ಎಲೆಯಿಂದ ಸೊಳ್ಳೆಗಳ ಕಡಿತ ನಿಯಂತ್ರಿಸಬೇಕು. ಜಾನುವಾರುಗಳನ್ನು ಕಟ್ಟುವ ಜಾಗ, ಹಗ್ಗ, ಸರಪಳಿ ಅಥವಾ ಇತರೆವಸ್ತುಗಳನ್ನು ಕ್ರಿಮಿನಾಶಕದಿಂದ ಸ್ವಚ್ಛಗೊಳಿಸಬೇಕು. ಮೈಮೇಲೆ ಆದ ಗಾಯಗಳನ್ನು ಸ್ವತ್ಛಗೊಳಿಸಬೇಕು. ಒಣ ನೆಲದಲ್ಲಿ ರಾಸುಗಳನ್ನು ಕಟ್ಟಿ ಗಾಯಕ್ಕೆ ಹುಳು ಬೀಳದಂತೆ ಓಡಿಕೊಳ್ಳಬೇಕು. ನೊಣ, ಸೊಳ್ಳೆ ಹಾಗೂ ಉಣ್ಣೆಗಳನ್ನು ನಿಯಂತ್ರಿಸಬೇಕು. ಗ್ರಾಮದಿಂದ ಮೊತ್ತು ಗ್ರಾಮಕ್ಕೆಜಾನುವಾರುಗಳನ್ನು ಕರೆದೊಯ್ಯಬಾರದು  ಈ ವಿಷಯಗಳನ್ನು ಅರಿತು ಜಾನುವಾರು ಸಾಕಾಣಿಕಾದಾರರು ಇದರ ಅರಿವನ್ನು ಪಾಲಿಸಿದಾಗ ರೋಗ ನಿಯಂತ್ರಣಕ್ಕೆಬರುತ್ತದೆ. ಹಾಗೂ ರೋಗ ಹರಡುವುದನ್ನು ಸಹ ತಡಯಬಹುದಾಗಿದೆ ಎಂದು ಪಶುಪಾಲನಾ ಇಲಾಖೆಯ ಜಿಲ್ಲಾ ಪಶು ಮುಖ್ಯ ವೈದ್ಯಾಧಿಕಾರಿ ಡಾ.ಅನಿಲ್‌ಕುಮಾರ್‌ ಹೇಳುತ್ತಾರೆ.

ಚರ್ಮ ಗಂಟು ಸೋಂಕು ಸಾಂಕ್ರಾಮಿಕ ರೋಗವಾಗಿದ್ದು,ಮುಂಜಾಗ್ರತೆ ವಹಿಸಬೇಕು. ಮುಖ್ಯವಾಗಿ ಸೊಳ್ಳೆ ಮತ್ತು ಹುಣ್ಣುಗಳನ್ನು ನಿಯಂತ್ರಿಸಬೇಕು. ಸೋಂಕು ಕಾಣಿಸಿಕೊಂಡ ತಕ್ಷಣ ರಾಸು ಗಳನ್ನು ತಪಾಸಣೆಗೆ ಒಳಪಡಿಸಿ ಸೂಕ್ತ ಚಿಕಿತ್ಸೆಕೊಡಿಸಬೇಕು.ಸೋಂಕು ಪತ್ತೆಯಾದ ಎಲ್ಲಾ ರಾಸುಗಳಿಗೆ ಚಿಕಿತ್ಸೆ ನೀಡಿದ್ದು, ಎಲ್ಲಾ ರಾಸುಗಳು ಗುಣಮುಖ ವಾಗಿವೆ. ರೈತರು ಆತಂಕ ಪಡುವ ಅಗತ್ಯವಿಲ್ಲ ಬಾಲಚಂದ್ರ, ಜಿಲ್ಲಾ ಪಶುಪಾಲನಾ ಇಲಾಖೆ ಉಪ ನಿರ್ದೇಶಕ

ಟಾಪ್ ನ್ಯೂಸ್

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?

rahul-Gandhi-Car

Defamation case; ಪ್ರಚಾರಕ್ಕಾಗಿ ನನ್ನ ವಿರುದ್ಧ ಮಾನಹಾನಿ ಕೇಸ್‌: ರಾಹುಲ್‌ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Crime: ಕಾಂಗ್ರೆಸ್‌ ಪುರಸಭೆ ಸದಸ್ಯನ ಭೀಕರ ಹತ್ಯೆ; ಆನೇಕಲ್‌ನಲ್ಲಿ ಉದ್ವಿಗ್ನ ಸ್ಥಿತಿ

Crime: ಕಾಂಗ್ರೆಸ್‌ ಪುರಸಭೆ ಸದಸ್ಯನ ಭೀಕರ ಹತ್ಯೆ; ಆನೇಕಲ್‌ನಲ್ಲಿ ಉದ್ವಿಗ್ನ ಸ್ಥಿತಿ

Ganja peddler: ಪೊಲೀಸರ ಮೇಲೆಯೇ  ಹಲ್ಲೆಗೆ ಯತ್ನಿಸಿದ ಗಾಂಜಾ ಪೆಡ್ಲರ್‌ಗೆ ಗುಂಡೇಟು; ಸೆರೆ

Ganja peddler: ಪೊಲೀಸರ ಮೇಲೆಯೇ  ಹಲ್ಲೆಗೆ ಯತ್ನಿಸಿದ ಗಾಂಜಾ ಪೆಡ್ಲರ್‌ಗೆ ಗುಂಡೇಟು; ಸೆರೆ

R.Ashok

Assembly Electionನಲ್ಲಿ ಮೈತ್ರಿಗೆ ದೇವೇಗೌಡರು ಒಪ್ಪಲಿಲ್ಲ: ಅಶೋಕ್‌

BRural

Devanahalli: ಗ್ರಾಮ ಪಂಚಾಯಿತಿಗಳಲ್ಲಿ ಇ- ಜನ್ಮ ದಾಖಲೆ

Wheeling: ಬೆಂಗಳೂರು ಹುಡುಗರಿಗೆ ವ್ಹೀಲಿಂಗ್‌ ಅಡ್ಡೆಯಾದ ಹೆದ್ದಾರಿ!

Wheeling: ಬೆಂಗಳೂರು ಹುಡುಗರಿಗೆ ವ್ಹೀಲಿಂಗ್‌ ಅಡ್ಡೆಯಾದ ಹೆದ್ದಾರಿ!

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

Kohli IPL 2024

Champions Trophy; ಕೊಹ್ಲಿ ಪಾಕ್‌ನಲ್ಲಿ ಆಡಲಿ: ಯೂನಿಸ್‌ ಖಾನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.