cattle

 • ಆಳೆತ್ತರದ ಬೆಂಕಿಯ ಜ್ವಾಲೆಯಿಂದ ಹಾರಿಬಂದ ರಾಸುಗಳು

  ಮೈಸೂರು: ಮಕರ ಸಂಕ್ರಾಂತಿಯ ಅಂಗವಾಗಿ ಬುಧವಾರ ಸಂಜೆ ಸಿದ್ದಲಿಂಗಪುರದಲ್ಲಿ ನಡೆದ ರಾಸುಗಳಿಗೆ ಕಿಚ್ಚು ಹಾಯಿಸುವ ಸಂಪ್ರದಾಯ ವಿಶೇಷವಾಗಿತ್ತು. ಧಗಧಗನೆ ಉರಿಯೋ ಬೆಂಕಿಯ ಜ್ವಾಲೆಯನ್ನು ಲೆಕ್ಕಿಸದೇ ಹಾರಿ ಬರುವ ದನಗಳ ಮೈನವಿರೇಳಿಸೋ ದೃಶ್ಯಗಳನ್ನು ಸಾವಿರಕ್ಕೂ ಹೆಚ್ಚು ಮಂದಿ ಕಣ್ತುಂಬಿಕೊಂಡರು. ಸಂಪ್ರದಾಯದಂತೆ…

 • ಬರದ ಬಳಿಕ ಜಾನುವಾರುಗಳಿಗೆ ನೆರೆಯ ಬರೆ

  ಬೆಂಗಳೂರು: ಬರದಿಂದ ತತ್ತರಿಸಿ ಹೋಗಿದ್ದ ಜಾನುವಾರುಗಳಿಗೆ ಈಗ ನೆರೆ ಸಂಕಷ್ಟ ತಂದೊಡ್ಡಿದೆ. ಪ್ರವಾಹ ಪೀಡಿತ ಪ್ರದೇಶಗಳ ಜಾನುವಾರುಗಳಲ್ಲಿ ಮಾರಣಾಂತಿಕ ಕಾಯಿಲೆಗಳ ಭೀತಿ ಎದುರಾಗಿದೆ. ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಜಾನುವಾರುಗಳು ಮಾರಕ ಗಳಲೆ ರೋಗ ಅಥವಾ ಗಂಟಲು ಬೇನೆ, ಚಪ್ಪೆ…

 • ಬಿಡಾಡಿ ದನಗಳ ಹಾವಳಿ ನಿವಾರಿಸಿ

  ಮೂಡಿಗೆರೆ: ಪಟ್ಟಣದಲ್ಲಿ ಎಲ್ಲೆಂದರಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗುತ್ತಿರುವುದರಿಂದ ವಾಹನ ಗಳು ಹಾಗೂ ನಾಗರಿಕರ ಓಡಾಟಕ್ಕೆ ಇನ್ನಿಲ್ಲದ ತೊಂದರೆಯಾಗುತ್ತಿದೆ. ಆದರೆ, ಇದನ್ನು ತಡೆಗಟ್ಟುವಲ್ಲಿ ಪಟ್ಟಣ ಪಂಚಾಯಿತಿ ಆಡಳಿತ ಸಂಪೂರ್ಣ ವಿಫಲವಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಹಲವಾರು ವರ್ಷಗಳಿಂದ ಬಿಡಾಡಿ…

 • ಹೈನುಗಾರಿಕೆಯಿಂದ ಬದುಕು ಕಟ್ಟಿಕೊಂಡ ರವೀಂದ್ರನ್‌

  ಬದಿಯಡ್ಕ: ಗೋವು ಮತ್ತು ಮಾನವನಿಗೆ ಅವಿನಾಭಾವ ಸಂಬಂಧವಿದೆ. ಹಿಂದಿನ ಕಾಲದಿಂದಲೇ ಬಡವರ ಪಾಲಿನ ಕಾಮದೇನುವಾದ ಗೋವುಗಳು ಜನರ ಹಸಿವನ್ನು ನೀಗಿ ನೆಮ್ಮದಿಯ ಬದುಕನ್ನು ಕರುಣಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ. ಪಶುಸಂಗೋಪನೆ ಹಾಗೂ ಹೈನುಗಾರಿಕೆಯ ಮುಖಾಂತರ ಜೀವನದ ಹಾದಿಯಲ್ಲಿ ಸಾಧನೆ…

 • ಜಗಳೂರು ಪಟ್ಟಣದ ತುಂಬ ಬಿಡಾಡಿ ದನಗಳ ಹಾವಳಿ

  ಜಗಳೂರು : ಬಿಡಾಡಿದನಗಳ ಹಾವಳಿ ನಿಯಂತ್ರಿಸಲು ಪಟ್ಟಣ ಪಂಚಾಯಿತಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಸಾರ್ವಜನಿಕರ ಆರೋಪಿಸಿದ್ದಾರೆ. ಸಾಮಾನ್ಯವಾಗಿ ರಾಸುಗಳ‌ನ್ನು ತಮ್ಮ ತಮ್ಮ ಮನೆ, ಜಮೀನು, ಕಣದಲ್ಲಿ ಕಟ್ಟಿ ಸಾಕಣೆ ಮಾಡುತ್ತಾರೆ. ಆದರೆ ಪಟ್ಟಣದಲ್ಲಿ ಪರಿಸ್ಥಿತಿಯೇ ಬೇರೆಯಾಗಿದೆ. ಮಾಲೀಕರು ತಮ್ಮ…

 • ಬಿಡಾಡಿ ದನಗಳಿಗೂ ತಪ್ಪಿಲ್ಲ ನೀರಿನ ಗೋಳು

  ಗದಗ: ಗದಗ- ಬೆಟಗೇರಿ ಅವಳಿ ನಗರದ ವಿವಿಧೆಡೆ ರಸ್ತೆ ವಿಭಜಕಗಳ ಮಧ್ಯೆ ನೆಟ್ಟಿರುವ ಸಸಿಗಳನ್ನು ಉಳಿಸಿಕೊಳ್ಳಲು ನಗರಸಭೆ ತೋರುವಷ್ಟು ಕಾಳಜಿಯನ್ನು ಬೀಡಾಡಿ ದನಗಳ ದಾಹ ತೀರಿಸುವತ್ತ ಗಮನ ಹರಿಸುತ್ತಿಲ್ಲ. ಹೀಗಾಗಿ ಪ್ರಾಣಿಗಳು ಬಿಸಿಲಿನ ಬೇಗೆಯಿಂದ ದೇಹ ತಣಿಸಿಕೊಳ್ಳಲು ಪೋಲಾಗುವ…

 • ದನಗಳ ಜಾತೆ ಉಳಿಸಲು ರೈತರೇ ಜಾಗೃತರಾಗಿ

  ಮಾಗಡಿ: ಪಾರಂಪರಿಕ ದನಗಳ ಜಾತ್ರೆಗಳು ಜೀವಂತವಾಗಿ ಉಳಿಯಬೇಕಾದರೆ ರೈತರು ಜಾಗೃತರಾಗಬೇಕಿದೆ. ಇಂದಿನ ದಿನಗಳಲ್ಲಿ ದನಗಳ ಜಾತ್ರೆಗಳು ಕಣ್ಮರೆಯಾಗುತ್ತಿರುವುದು ವಿಪರ್ಯಾಸ ಎಂದು ಸಾಹಿತಿ ದೊಡ್ಡಬಾಣಗೆರೆ ಮಾರಣ್ಣ ಆತಂಕ ವ್ಯಕ್ತಪಡಿಸಿದರು. ಪಟ್ಟಣದ ಹೊಸಪೇಟೆ ಬಳಿ ತಿರುಮಲೆ ಶ್ರೀರಂಗನಾಥಸ್ವಾಮಿ ದನಗಳ ಜಾತ್ರೆಯಲ್ಲಿ ಚೇತಕ್‌…

 • ಜಾನುವಾರು – ಪಕ್ಷಿಗಳಿಗೆ ನೀರುಣಿಸಲು ಕರ್ಲ್ ಮರ್ಗಿ ವ್ಯವಸ್ಥೆ

  ಉಡುಪಿ: ಜಾನುವಾರು ಹಾಗೂ ಪಕ್ಷಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾದ ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ನಾಗರಿಕ ಸಮಿತಿಯು ರಥಬೀದಿ ರಾಘವೇಂದ್ರ ಮಠದ ಮುಂಭಾಗದ ಆಯಕಟ್ಟಿನ ಸ್ಥಳದಲ್ಲಿ ಕರ್ಲ್ ಮರ್ಗಿ ಇಡುವುದರ ಮೂಲಕ ಜೀವ ಸಂಕುಲಗಳಿಗೆ ದಾಹ ತಣಿಸಲು…

 • ಅಕ್ರಮ ಗೋ ಸಾಗಾಟ ಪತ್ತೆ: ಜಾನುವಾರು ರಕ್ಷಣೆ

   ಮಡಂತ್ಯಾರು : ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ಆರು ದನಗಳನ್ನು ಮಂಗಳೂರು ಡಿ.ಸಿ.ಐ.ಬಿ.ಪೋಲೀಸರು ಪುಂಜಾಲಕಟ್ಟೆ ಠಾಣೆ ವ್ಯಾಪ್ತಿಯಲ್ಲಿ ಗುರುವಾರ  ವಶಕ್ಕೆ ಪಡೆದುಕೊಂಡಿದ್ದಾರೆ. ಬೆಳ್ತಂಗಡಿ ತಾಲೂಕಿನ ಪಣಕಜೆ ಸಮೀಪದ ಸೋನಂದೂರು ಎಂಬಲ್ಲಿ ಅಕ್ರಮವಾಗಿ ದನಗಳನ್ನು ಸಾಗಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಮಂಗಳೂರು…

 • ವಿಟ್ಲದಲ್ಲಿ ಅಕ್ರಮ ದನ ಸಾಗಾಟ ಪತ್ತೆ: ಇಬ್ಬರ ಸೆರೆ

  ವಿಟ್ಲ: ಅಕ್ರಮವಾಗಿ ಕೇರಳಕ್ಕೆ ದನ ಸಾಗಾಟ ಮಾಡುತಿದ್ದ ಇಬ್ಬರನ್ನು ವಿಟ್ಲ ಪೊಲೀಸರು ಬಂಧಿಸಿದ ಘಟನೆ ಭಾನುವಾರ ಮದ್ಯಾಹ್ನ ವಿಟ್ಲ ಸಮೀಪದ ಪುಣಚ ಗ್ರಾಮದ ಚಂದಳಿಕೆ- ಮಾಡತ್ತಡ್ಕ ರಸ್ತೆಯ ಕಂಬಳಮೂಲೆಯಲ್ಲಿ ನಡೆದಿದೆ.  ಬಂಧಿತರನ್ನು ಉಪ್ಪಳ ನಿವಾಸಿ ಅಬೂಬಕ್ಕರ್ ಮತ್ತು ರಾಜ್ ಕುಮಾರ್…

 • ದೇಸಿ ತಳಿ ಜಾನುವಾರು ಸಂರಕ್ಷಣೆಗೆ ಒತ್ತು

  ವಿಧಾನ ಪರಿಷತ್ತು: ರಾಜ್ಯದ ದೇಸಿ ಜಾನುವಾರು ತಳಿಗಳ ಸಂರಕ್ಷಣೆಗೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿದೆ ಎಂದು ಪಶುಸಂಗೋಪನಾ ಸಚಿವ ವೆಂಕಟರಾವ್‌ ನಾಡಗೌಡ ಹೇಳಿದರು. ಜೆಡಿಎಸ್‌ನ ಧರ್ಮೇ ಗೌಡ ಅವರು ಬಜೆಟ್‌ ಮೇಲಿನ ಚರ್ಚೆಯಲ್ಲಿ ಮಂಗಳವಾರ ಪ್ರಸ್ತಾಪಿಸಿದ ವಿಚಾರ…

 • ಸುರತ್ಕಲ್‌: ಅವಳಿ ಕರುವಿಗೆ ಜನ್ಮ ನೀಡಿದ ದನ

  ಸುರತ್ಕಲ್‌:  ತಡಂಬೈಲ್‌ ಕುಲಾಲ ಭವನದ ಎದುರು ಗಣಪತಿಮಯ್ಯ ಅವರ ಮನೆಯಲ್ಲಿ ದನವೊಂದು ಅವಳಿ ಕರುಗಳಿಗೆ ಜನ್ಮ ನೀಡಿದೆ. ಸಾಮಾನ್ಯವಾಗಿ ದನ ಏಕಕಾಲಕ್ಕೆ ಎರಡು ಕರುಗಳಿಗೆ ಜನ್ಮ ಕೊಡುವುದಿಲ್ಲ. ಆದರೆ ಜುಲೈ 9ರಂದು ಬೆಳಗ್ಗೆ 6 ಗಂಟೆಗೆ ಗಣಪತಿ ಅವರು…

 • ಹೈನುಗಾರಿಕೆಯಲ್ಲಿ ಸಾಧನೆ ಮಾಡಿದ ಗ್ರಾಮೀಣ ಮಹಿಳೆ

  ತೆಕ್ಕಟ್ಟೆ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗ್ರಾಮೀಣ ಭಾಗದ ಜನತೆಗೆ ನೌಕರಿ ಎನ್ನುವುದೇ ದೂರದ ಮಾತು. ಅದೇ ನೌಕರಿ ಹಿಡಿದು ಪಟ್ಟಣ ಪ್ರದೇಶದಲ್ಲಿ ಅಲೆದಾಡಿದರೂ ಕೈಗೆ ಕೆಲಸ ಸಿಗದೆ ನಿರುದ್ಯೋಗಕ್ಕೆ ಒಳಗಾಗುವ ಯುವ ಸಮುದಾಯಗಳಿಗೆ ಮಾದರಿಯಾಗಿ ಹೀಗೊಬ್ಬರು ಕುಂದಾಪುರ ತಾಲೂಕಿನ…

ಹೊಸ ಸೇರ್ಪಡೆ