ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡಲ್ಲ

Team Udayavani, Sep 7, 2019, 3:00 AM IST

ಹೊಸಕೋಟೆ: ತಾಲೂಕಿನಲ್ಲಿ ಇನ್ಮುಂದೆ ಅಕ್ರಮಗಳಿಗೆ ಅವಕಾಶವಿಲ್ಲ. ಸಾರ್ವಜನಿಕರು ಅಕ್ರಮ ನಡೆಯುತ್ತಿರುವ ಮಾಹಿತಿಯನ್ನು ಪೊಲೀಸರೊಂದಿಗೆ ಹಂಚಿಕೊಂಡು ಸಹಕರಿಸಬೇಕು. ಮೀರಿಯೂ ಅಕ್ರಮ ಚಟುವಟಿಕೆ ನಡೆಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್‌ ಖಡಕ್‌ ಎಚ್ಚರಿಕೆ ನೀಡಿದರು. ನಗರದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದರು.

ತಾಲೂಕಿನಲ್ಲಿ ಕಾನೂನು ಬಾಹಿರವಾಗಿ ನಡೆಯುವ ಎಲ್ಲಾ ರೀತಿಯ ಅನೈತಿಕ ಚಟುವಟಿಕೆ ತಡೆಗಟ್ಟಲು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಕ್ಯಾಟ್‌ಪಿಶ್‌ ಸಾಕಾಣಿಕೆ ಕೇಂದ್ರಗಳನ್ನು ಧ್ವಂಸಗೊಳಿಸಲಾಗಿದೆ. ಮುಂದುವರಿಸಿದರೆ ಕೃತ್ಯದಲ್ಲಿ ತೊಡಗಿದವರು ಹಾಗೂ ಕುಟುಂಬದ ಸದಸ್ಯರೆಲ್ಲರ ವಿರುದ್ಧ ಪ್ರಕರಣದಾಖಲಿಸಲಾಗುವುದು. ಅಕ್ರಮವಾಗಿ ಗಾಂಜಾ ಇನ್ನಿತರ ಮಾದಕ ವಸ್ತುಗಳ ಮಾರಾಟ, ಕಳ್ಳತನದಂತಹ ಕೃತ್ಯಗಳನ್ನು ತಡೆಗಟ್ಟಲು ಪೊಲೀಸರೊಂದಿಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಪೊಲೀಸ್‌ ಅಧಿಕಾರಿಗಳಿಗೆ ಪ್ರಾಮಾಣಿಕತೆ ಹಾಗೂ ದಕ್ಷತೆಯಿಂದ ಕಾರ್ಯನಿರ್ವಹಣೆ ಕುರಿತು ತರಬೇತಿ ನೀಡಲಾಗುವುದು. ತಾಲೂಕಿನ ಬೈಲನರಸಾಪುರ, ಕಟ್ಟಿಗೇನಹಳ್ಳಿ ಗ್ರಾಮಗಳಲ್ಲಿ ನಡೆಯುವ ಹೆಚ್ಚಿನ ಅಕ್ರಮಗಳಿಂದಾಗಿ ತಾಲೂಕಿಗೆ ಕೆಟ್ಟ ಹೆಸರು ಬಂದಿದೆ. ಹೊರ ರಾಜ್ಯಗಳಲ್ಲಿನ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಇವೆರಡೂ ಗ್ರಾಮಗಳಲ್ಲಿ ಸುಮಾರು 200 ಆರೋಪಿಗಳಿದ್ದಾರೆ. ಎಸ್‌ಸಿ, ಎಸ್‌ಟಿ ದೌರ್ಜನ್ಯಗಳ ಬಗ್ಗೆ ಸುಳ್ಳು ದೂರು ನೀಡಿದವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗುವುದು.

ತಮ್ಮ ನಡತೆಯಲ್ಲಿ ಬದಲಾವಣೆ ಮಾಡಿಕೊಂಡು ದುಷ್ಕೃತ್ಯಗಳಲ್ಲಿ ಭಾಗವಹಿಸದಂತಹ ವ್ಯಕ್ತಿಗಳಿಗೆ ರೌಡಿ ಶೀಟರ್‌ನಿಂದ ಮುಕ್ತಿ ನೀಡಲು ಉದ್ದೇಶಿಸಲಾಗಿದೆ. ಈ ಬಗ್ಗೆ ಪೊಲೀಸರು ಆಗಾಗ್ಗೆ ಪರಿಶೀಲನೆ ನಡೆಸುತ್ತಾರೆ. ಸುಧಾರಣೆಯಾಗದಿದ್ದರೆ ಅಂತಹವರ ವಿರುದ್ಧ ಗಡಿಪಾರಿನ ಕಠಿಣ ಕ್ರಮ ಅನಿವಾರ್ಯವಾಗಲಿದೆ ಎಂದು ಹೇಳಿದರು. ಟ್ರಾಫಿಕ್‌ ವಾರ್ಡನ್‌ಗಳನ್ನಾಗಿ ನೇಮಿಸಲು ಉದ್ದೇಶಿಸಲಾಗಿದೆ. ಸಾರ್ವಜನಿಕರು ಸಹಕರಿಸಿದಲ್ಲಿ ನಗರದಲ್ಲಿಯೂ ಇಂತಹುದೇ ವ್ಯವಸ್ಥೆ ಜಾರಿಗೊಳಿಸಲಾಗುವುದು. ಪೊಲೀಸರು ನೀಡುವ ದೂರುಗಳಿಗೆ ಸ್ಪಂದಿಸದಂತಹ ಸಂದರ್ಭದಲ್ಲಿ ತಮ್ಮನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

ತಾಲೂಕಿನ ಕೆರೆಗಳಲ್ಲಿ ಫಿಲ್ಟರ್‌ ಮರಳು ನಿರಂತರವಾಗಿ ನಡೆಯುತ್ತಿದ್ದ, ತಡೆಗಟ್ಟಲು ಪೊಲೀಸರ ನಿರ್ಲಕ್ಷ್ಯತನ ಕಾಣುತ್ತಿದೆ. ಠಾಣೆಗಳಲ್ಲಿ ಮೊದಲು ಪಕ್ಷ, ಜಾತಿಯ ಬಗ್ಗೆ ಮಾಹಿತಿ ಪಡೆದು ನಂತರ ಕ್ರಮಕೈಗೊಳ್ಳುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಗ್ರಾಮಗಳಲ್ಲಿ ಫ್ಲೆಕ್ಸ್‌ಗಳ ಹಾವಳಿ ಹೆಚ್ಚಾಗಿದೆ ಎಂದು ಸಾರ್ವಜನಿಕರು ದೂರಿದರು. ತಾಲೂಕಿನ ಪೊಲೀಸ್‌ ಠಾಣೆಗಳ ಎಸ್‌ಐಗಳು ದಾಖಲಿಸಿರುವ ಪ್ರಮುಖ ಪ್ರಕರಣ, ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಿದರು. ಪೊಲೀಸ್‌ ಉಪಅಧೀಕ್ಷಕ ಎನ್‌.ಬಿ. ಸಕ್ರಿ, ಸರ್ಕಲ್‌ ಇನ್‌ಸ್ಪೆಕ್ಟರ್‌ ಶಿವರಾಜ್‌ ಉಪಸ್ಥಿತರಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಆನೇಕಲ್‌: ಕೋವಿಡ್ 19 ಮಹಾಮಾರಿ ವೇಗವಾಗಿ ಹಬ್ಬುತ್ತಿರುವ ಹಿನ್ನಲೆಯಲ್ಲಿ ಘೋಷಿಸಿರುವ ಕರ್ಫ್ಯೂಗೆ ತಾಲೂಕು ಸಂಪೂರ್ಣ ಬಂದ್‌ ಆಗಿತ್ತು. ಯುಗಾದಿ ಹಿನ್ನಲೆಯಲ್ಲಿ...

  • ದೇವನಹಳ್ಳಿ: ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ದೇವಸ್ಥಾನಗಳಲ್ಲಿ ಜನಸಾಮಾನ್ಯರ ಅನುಕೂಲಕ್ಕಾಗಿ ಸಪ್ತಪದಿ ಸಾಮೂಹಿಕ ಸರಳ ವಿವಾಹವೆಂಬ...

  • ನೆಲಮಂಗಲ: ಕೋವಿಡ್ 19 ವೈರಸ್‌ ಮನುಕುಲವನ್ನು ಆತಂಕಕ್ಕೆ ತಳ್ಳಿದೆ. ಹೀಗಾಗಿ ಎಲ್ಲರೂ ಜಾಗೃತಿ ವಹಿಸಿ, ಸುತ್ತ ಮುತ್ತಲ ಪ್ರದೇಶವನ್ನು ಸ್ವಚ್ಛವಾಗಿರಿಸಿ ಕೊಳ್ಳಬೇಕು...

  • ದೊಡ್ಡಬಳ್ಳಾಪುರ: ಬೇಸಿಗೆ ಆರಂಭವಾಗಿದ್ದು, ಜತೆಗೆ ನೀರಿನ ಸಮಸ್ಯೆಯೂ ಹೆಚ್ಚುತ್ತಿದೆ. ಸರಬರಾಜಾಗುತ್ತಿರುವ ನೀರಿನ ಸ್ಥಿತಿಗತಿ ಅರಿಯಬೇಕಿದ್ದು, ನೀರಿನ ಮಿತ...

  • ದೇವನಹಳ್ಳಿ: ವಿದೇಶಗಳಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ 183 ವಿದೇಶಿ ಪ್ರಯಾಣಿಕರನ್ನು ಕೋವಿಡ್ 19 ಶಂಕೆ ಹಿನ್ನೆಲೆ ತಪಾಸಣೆ ನಡೆಸಲಾಗಿದೆ...

ಹೊಸ ಸೇರ್ಪಡೆ