ಉದ್ಯೋಗ ಸೃಷ್ಟಿಸುವಲ್ಲಿ ಬಿಜೆಪಿ ಸರ್ಕಾರ ವಿಫ‌ಲ


Team Udayavani, Aug 21, 2022, 2:30 PM IST

ಉದ್ಯೋಗ ಸೃಷ್ಟಿಸುವಲ್ಲಿ ಬಿಜೆಪಿ ಸರ್ಕಾರ ವಿಫ‌ಲ

ಹೊಸಕೋಟೆ: ವಿದೇಶಿ ಹೂಡಿಕೆದಾರರಿಗೆ ಭಾರತದ ಬೇರೆ ಕಡೆಗಳಿಗಿಂತ ಕರ್ನಾಟಕ, ಅದರಲ್ಲೂ ಬೆಂಗಳೂರಿನಲ್ಲಿ ಬಂಡವಾಳವನ್ನು ಹೂಡಲು ಹೆಚ್ಚು ಆಸಕ್ತಿ. ಏಕೆಂದರೆ ಇಲ್ಲಿರುವ ಮಾನವ ಸಂಪನ್ಮೂಲ ಬೇರೆ ಎಲ್ಲಿಯೂ ಇಲ್ಲ ಎಂದು ತಂತ್ರಜ್ಞಾನ ಖಾತೆ ಮಾಜಿ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದರು.

ನಗರದ ಶ್ರೀ ವಿವೇಕಾನಂದ ವಿದ್ಯಾ ಕೇಂದ್ರದಲ್ಲಿ ಶಾಸಕ ಶರತ್‌ ಬಚ್ಚೇಗೌಡರ ನೇತೃತ್ವದ ಸಮಸ್ತ ಫೌಂಡೇಷನ್‌ ವತಿಯಿಂದ ನಡೆದ ಬೃಹತ್‌ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತದ ಜನಸಂಖ್ಯೆಯಲ್ಲಿ ಶೇ.60ರಷ್ಟು ಯುವಕರಿದ್ದು, ಯುವಕರಿಗೆ ಬೇಕಾಗಿರುವುದು ವಿದ್ಯೆ, ಅದಕ್ಕೆ ತಕ್ಕ ಉದ್ಯೋಗವಾಗಿದೆ. ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಎರಡಕ್ಕೂ ಆದ್ಯತೆ ನೀಡುತ್ತಿತ್ತು. ಆದರೆ, ಈ ಸರ್ಕಾರ ಎರಡನ್ನು ಕಡೆಗಣಿಸಿದೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಇತ್ತೀಚಿನ ದಿನಗಳಲ್ಲಿ ರಾಜ್ಯ ಸರ್ಕಾರ ಯಾವುದೇ ಉದ್ಯೋಗ ಸೃಷ್ಟಿಸಿಲ್ಲ, ಬದಲಾಗಿ ಕೆಪಿಟಿಸಿಎಲ್‌, ಪಿಎಸ್‌ಐ ಹುದ್ದೆಗಳನ್ನು ಮಾರಿಕೊಳ್ಳುತ್ತಿದೆ. ಇದರಿಂದ ಭ್ರಷ್ಟಾಚಾರ ಹೆಚ್ಚಾಗುತ್ತಿದ್ದು, ಇದರ ವಿರುದ್ಧ ಯುವಜನತೆ ಪ್ರತಿಭಟನೆ ನಡೆಸಬೇಕು. ಉದ್ಯೋಗ ಸೃಷ್ಟಿಸುವಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ವಿಫ‌ಲವಾಗಿದ್ದು, ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿಸುವ ಬದಲು ಸರ್ಕಾರಿ ಸ್ವಾಮ್ಯದ ಕಂಪನಿಗಳನ್ನು ಖಾಸಗಿಯವರಿಗೆ ಮಾರಾಟ ಮಾಡುತ್ತಿದೆ ಎಂದು ಆರೋಪಿಸಿದರು.

ಶಾಸಕರ ಪ್ರಯತ್ನ ಅದ್ಭುತವಾದದ್ದು: ರಾಜ್ಯ ಸರ್ಕಾರ ಯುವಕರಿಗೆ ಕೆಲಸ ಕೊಡುವುದನ್ನು ಬಿಟ್ಟು ಕೇಸರಿ ಶಾಲು ಹಾಕಿ ರಸ್ತೆಗೆ ಇಳಿಸುತ್ತಿದೆ. ಈ ಕೆಲಸಕ್ಕೆ ಕೇವಲ ಬಡವರ ಮಕ್ಕಳನ್ನು ಉಪಯೋಗಿಸುತ್ತಿದ್ದು, ಯಾವುದೇ ಬಿಜೆಪಿ ಶಾಸಕ ಅಥವಾ ಮಂತ್ರಿಗಳ ಮಕ್ಕಳನ್ನು ಉಪಯೋಗಿಸುತ್ತಿಲ್ಲ. ಎಲ್ಲರಿಗೂ ಭಕ್ತಿಯಿರಬೇಕು. ಆದರೆ, ಭಕ್ತಿ ವ್ಯಕ್ತಿಯ ಮೇಲೆ ಬರಬಾರದು ಎಂದ ಅವರು, ಈ ರೀತಿಯ ಉದ್ಯೋಗ ಮೇಳಗಳನ್ನು ತಮ್ಮ ಸ್ವಂತ ಇಚ್ಛೆಯಿಂದ ಆಯೋಜಿಸಿ ತಾಲೂಕಿನ ಯುವಕರಿಗೆ ಉದ್ಯೋಗ ನೀಡುವ ಶಾಸಕ ಶರತ್‌ ಬಚ್ಚೇಗೌಡರ ಪ್ರಯತ್ನ ಅದ್ಭುತವಾದದ್ದು. ಇಂತಹ ಯುವ ಶಾಸಕರನ್ನು ಮತ್ತೆ ಆರಿಸಿ ಕಳುಹಿಸುವಂತೆ ಮನವಿ ಮಾಡಿದರು.

ಶಾಸಕ ಶರತ್‌ ಬಚ್ಚೇಗೌಡ ಮಾತನಾಡಿ, ಕೇಂದ್ರ ಸರ್ಕಾರ ವರ್ಷಕ್ಕೆ ಎರಡು ಲಕ್ಷ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿತ್ತು. ಆದರೆ, ಕಳೆದ ಎಂಟು ವರ್ಷಗಳಲ್ಲಿ ಒಂದೂ ಹೊಸ ಉದ್ಯೋಗ ನೀಡಿಲ್ಲ. ಮತ್ತು ಉದ್ಯೋಗ ಕಳೆದುಕೊಂಡವರ ನೆರವಿಗೂ ಬಂದಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.

16, 000 ಹುದ್ದೆಗಳು ಭರ್ತಿ: ತಾಲೂಕಿನ ಯುವಕರು ಪ್ರತಿಭಾವಂತರಾಗಿದ್ದು, ಅವರ ನೆರವಿಗಾಗಿ ಕಳೆದ ಎರಡು ವರ್ಷದ ಹಿಂದೆ ಉದ್ಯೋಗ ಮೇಳವನ್ನು ನಡೆಸಲಾಗಿತ್ತು. ಆದರೆ, ಎರಡು ವರ್ಷ ಕೊರೊನಾ ಕಾರಣದಿಂದ ನಡೆಸಲಾಗಲಿಲ್ಲ. ಈ ಬಾರಿಯ ಮೇಳದಲ್ಲಿ 105 ಕಂಪನಿಗಳು ಭಾಗವಹಿಸಿದ್ದು, 16, 000 ಹುದ್ದೆಗಳು ಭರ್ತಿಯಾಗಬಹುದಾಗಿದೆ ಎಂದರು. ‌

ಕೆಪಿಸಿಸಿ ಜಿಲ್ಲಾಧ್ಯಕ್ಷ ಮುನಿಶಾಮಣ್ಣ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಗೀರ್‌ ಅಹಮದ್‌, ಮುಖಂಡ ಸುಬ್ನರಾಜು, ವೈಎಸ್‌ಎಂ ಮಂಜುನಾಥ್‌, ಸಿ. ಮುನಿಯಪ್ಪ, ನಗರಸಭೆ ಸದಸ್ಯ ಕೇಶವಮೂರ್ತಿ, ಗೌತಮ್ ಎಸ್‌ಬಿಜಿ ಟೀಂ ಸಂಚಾಲಕಿ ಪ್ರತಿಭಾ ಶರತ್‌ಬಚ್ಚೇಗೌಡ ಹಾಗೂ ಇತರರು ಇದ್ದರು.

ಟಾಪ್ ನ್ಯೂಸ್

Crime: ಚಿತ್ರದುರ್ಗ ಮೃತಪಟ್ಟಿದ್ದ ಐವರ ಸಾವಿಗೆ ನಿದ್ರೆ ಮಾತ್ರೆ ಕಾರಣ!

Crime: ಚಿತ್ರದುರ್ಗ ಮೃತಪಟ್ಟಿದ್ದ ಐವರ ಸಾವಿಗೆ ನಿದ್ರೆ ಮಾತ್ರೆ ಕಾರಣ!

covid

Covishield ಲಸಿಕೆಯಿಂದ ಮತ್ತೊಂದು ಸೈಡ್‌ಎಫೆಕ್ಟ್!

Modi 2

3rd Term; ನೂರಲ್ಲ, 125 ದಿನಗಳ ಯೋಜನೆ ಸಿದ್ಧ: ಪ್ರಧಾನಿ ಮೋದಿ

BJP 2

BJP 296-300 ಸ್ಥಾನ: ಫ‌ಲೋಡಿ ಜೂಜು ಅಡ್ಡೆ ಭವಿಷ್ಯ!

Hasan: ಪೆನ್‌ಡ್ರೈವ್‌ ಹಂಚಿದವರ ಪತ್ತೆಗೆ ಸಿಸಿ ಕೆಮರಾ ಪರಿಶೀಲನೆ

Hasan: ಪೆನ್‌ಡ್ರೈವ್‌ ಹಂಚಿದವರ ಪತ್ತೆಗೆ ಸಿಸಿ ಕೆಮರಾ ಪರಿಶೀಲನೆ

HDK SPark

Pen drive ಕೊಡುವೆ, ತನಿಖೆ ನಡೆಸುತ್ತೀರಾ?: ಸಿಎಂಗೆ ಎಚ್‌ಡಿಕೆ ಸವಾಲು

MOdi (3)

Uttar Pradesh ಬಗ್ಗೆ ವಿಪಕ್ಷ ಕೂಟ ತುಚ್ಛ ಮಾತು: ಪ್ರಧಾನಿ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Devanahalli: ಬೇಸಿಗೆ ಬಿಸಿ; ಹುರುಳಿಕಾಯಿ ದರ ದುಬಾರಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

IPL 2024: ಅಂತಿಮ ಪಂದ್ಯದಲ್ಲಿ ಮುಂಬೈಗೆ ಲಕ್ನೋ ಎದುರಾಳಿ

IPL 2024: ಅಂತಿಮ ಪಂದ್ಯದಲ್ಲಿ ಮುಂಬೈಗೆ ಲಕ್ನೋ ಎದುರಾಳಿ

32

Match fixing: ಭಾರತದ ಕ್ರಿಕೆಟಿಗರಿಬ್ಬರ ಪಾಸ್‌ಪೋರ್ಟ್‌ ವಶಕ್ಕೆ ಆದೇಶ

Crime: ಚಿತ್ರದುರ್ಗ ಮೃತಪಟ್ಟಿದ್ದ ಐವರ ಸಾವಿಗೆ ನಿದ್ರೆ ಮಾತ್ರೆ ಕಾರಣ!

Crime: ಚಿತ್ರದುರ್ಗ ಮೃತಪಟ್ಟಿದ್ದ ಐವರ ಸಾವಿಗೆ ನಿದ್ರೆ ಮಾತ್ರೆ ಕಾರಣ!

30

ICC T20 Rankings : ಭಾರತ, ಸೂರ್ಯಕುಮಾರ್‌ ನಂ.1

Kolar: ಶಸ್ತ್ರಕ್ರಿಯೆ ನಡೆಸಿ ಬಾಣಂತಿ ದೇಹದಲ್ಲೇ ಬಟ್ಟೆ ಬಿಟ್ಟ ಕೋಲಾರ ಆಸ್ಪತ್ರೆ ವೈದ್ಯೆ?

Kolar: ಶಸ್ತ್ರಕ್ರಿಯೆ ನಡೆಸಿ ಬಾಣಂತಿ ದೇಹದಲ್ಲೇ ಬಟ್ಟೆ ಬಿಟ್ಟ ಕೋಲಾರ ಆಸ್ಪತ್ರೆ ವೈದ್ಯೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.