Udayavni Special

ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಲು ಪಾಲಕರಿಗೆ ಸಲಹೆ

ಬಣಜಿಗ ಸಮಾಜದಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

Team Udayavani, Jun 30, 2019, 5:07 PM IST

30-June-43

ಬಸವನಬಾಗೇವಾಡಿ: ಬಣಜಿಗ ಸಮಾಜ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು.

ಬಸವನಬಾಗೇವಾಡಿ: ಯಾವುದೇ ಒಂದು ಸಂಪತ್ತು ವೃದ್ಧಿಯಾಗಬೇಕಾದರೆ ಮನೆಯಲ್ಲಿನ ಮಕ್ಕಳಿಗೆ ಉತ್ತಮವಾದ ಸಂಸ್ಕಾರ ನೀಡಬೇಕು. ಅಂದಾಗ ಮಾತ್ರ ಆ ಸಂಪತ್ತು ವೃದ್ಧಿಯಾಗಿ ಇರಲು ಸಾಧ್ಯವಾಗುತ್ತದೆ ಎಂದು ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಶ್ರೀಗಳು ಹೇಳಿದರು.

ಶನಿವಾರ ಪಟ್ಟಣದ ಮುದ್ದೇಬಿಹಾಳ ರಸ್ತೆಯ ಬಸ್‌ ಘಟಕ ಪಕ್ಕದಲ್ಲಿ ಇರುವ ಪಂಚಾಚಾರ್ಯ ಜನ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರ ತಾಲೂಕಾ ಘಟಕ ವತಿಯಿಂದ ಹಮ್ಮಿಕೊಂಡಿದ್ದ ಬಣಜಿಗ ಸಮಾಜದ ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಹಾಗೂ ತಾಲೂಕು ಸಮಾವೇಶ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಯಾವುದೇ ಒಂದು ಸಂಪತ್ತು ಶಾಶ್ವತವಾಗಿ ಉಳಿಯಬೇಕಾದರೆ ಮನೆಯಲ್ಲಿ ಇರುವ ಮಕ್ಕಳು ಉತ್ತಮ ಸಂಸ್ಕಾರ ಹೊಂದಿದಾಗ ಮಾತ್ರ ಆ ಸಂಪತ್ತು ವೃದ್ಧಿಯಾಗಿ ಹೆಮ್ಮರವಾಗಿ ಬೆಳೆಯುತ್ತದೆ. ಮಕ್ಕಳಲ್ಲಿ ಸಂಸ್ಕಾರದ ಕೊರತೆ ಇದ್ದಾಗ ನೀವು ಎಷ್ಟೆ ಸಂಪತ್ತನ್ನು ಗಳಿಸಿದರು ಕೂಡಾ ಅದು ಕೇಲವೆ ದಿನಗಳಲ್ಲಿ ಹಾಳಾಗುವುದು ನಿಚ್ಚಿತ ಎಂದು ಹೇಳಿದರು.

ಕೇಂದ್ರ ರಾಜ್ಯಸರಕಾರಗಳು ಕೇವಲ ಒಂದು ಧರ್ಮಕ್ಕೆ ಮತ್ತು ಒಂದು ಸಮಾಜಕ್ಕೆ ಮೀಸಲಾತಿ ಸಿಕ್ಕರೆ ಸಾಲದು ಯಾರ ಬಳಿ ಪ್ರತಿಭೆ ಇರುತ್ತದೆ ಹಂತವರಿಗೆ ಮೀಸಲಾತಿಗಳು ದೊರಕುವದರಿಂದ ಆ ಮೀಸಲಾತಿಗೆ ಒಂದು ಅರ್ಥಬರುತ್ತದೆ ಮತ್ತು ಸರಕಾರಕ್ಕೆ ಕೊಟ್ಟಿದ್ದಕ್ಕೂ ಸ್ವಾರ್ಥವಾಗುತ್ತದೆ. ಆ ನಿಟ್ಟಿನಲ್ಲಿ ಸರಕಾರಗಳು ಕೇವಲ ಒಂದು ಧರ್ಮ ಜಾತಿಗೆ ಮೀಸಲಾತಿ ನೀಡದೆ ಪ್ರತಿಭೆ ಇರುವಂತ ಯಾವುದೇ ಧರ್ಮವಾಗಲಿ ಜಾತಿಯಾಗಲಿ ಅದಕ್ಕೆ ಮೀಸಲಾತಿ ನೀಡುವುದು ಸೂಕ್ತ ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟನೆ ನೆರವೇರಿಸಿದ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ ಕೇಲವು ರಾಜಕಾರಣಿಗಳು ಸಮಾಜದ ಸಮಾವೇಶಗಳಿಗೆ ಹೋದರೆ ಬೇರೆ ಸಮಾಜದವರು ಬೇರೆ ಅರ್ಥ ಕಲ್ಪಿಸುತ್ತಾರೆ ಎಂದು ಕೇಲವು ರಾಜ್ಯಕಾರಣಿಗಳು ತಮ್ಮ ತಮ್ಮ ಸಮಾಜದ ಸಮಾವೇಶಕ್ಕೆ ಹೋಗದೆ ದೂರು ಉಳಿಯುತ್ತಾರೆ. ಆದರೆ ನಾನು ಮಾತ್ರ ಹಾಗೇ ಮಾಡುವುದಿಲ್ಲ್ಲ ಎಂದು ಹೇಳಿದರು.

ಜಿಲ್ಲೆಯಲ್ಲಿ ಕೇಲವು ರಾಜಕೀಯ ನಾಯಕರು ಸಮಾಜದ ಜನರಿಗೆ ಅಂಜಿಕೆ ಹಾಕುತ್ತಾರೆ. ಯಾರು ಕೂಡಾ ಹಂತ ಅಂಜಿಕೆ ಅಳುಕಿಗೆ ಭಯ ಪಡಬೇಡಿ ಯಾಕೆಂದರೆ ಎಲ್ಲರೂ ತಮ್ಮ ತಮ್ಮ ಸಮಾಜದ ಸಂಘಟನೆ ಮಾಡುವದಕ್ಕೆ ಯಾರ ಅಂಜಿಕೆ ಅಳುಕಿಗೆ ಭಯ ಪಡದೆ ನಿರಂತರವಾಗಿ ಸಮಾಜದ ಸಂಘಟನೆ ಮಾಡಿ ಇದು ಪ್ರಜಾಪ್ರಭುತ್ವ ಎಲ್ಲರಿಗೂ ಅವರ ಅವರ ಸಮಾಜದ ಸಂಘಟನೆ ಮಾಡುವ ಹಕ್ಕಿದೆ ಎಂದು ಹೇಳಿದರು.

ಉಪನ್ಯಾಸಕರಾಗಿ ಆಗಮಿಸಿದ ಅಕ್ಕನಾಗಮ್ಮ ಬಾಲಕಿಯರ ಸರಕಾರಿ ಪ್ರೌಢ ಶಾಲೆಯ ಶಿಕ್ಷಕ ಅಶೋಕ ಹಂಚಲಿ ಅವರು ಮಾತನಾಡಿ ದಾನ ಧರ್ಮ ದೇವಸ್ಥಾನಗಳ ನಿರ್ಮಾಣ ಹಾಗೂ ಶಿಕ್ಷಣ ಸಂಸ್ಥೆಗಳ ನಿರ್ಮಾಣಕ್ಕೆ ಬಣಜಿಗ ಸಮಾಜದ ಕೊಡುಗೆ ಅನನ್ಯವಾಗಿದೆ. ನಮ್ಮ ಹಿಂದಿನ ಪುರ್ವಜ್ಜರು ಸಮಾಜಕ್ಕೆ ಅನೇಕ ಕೊಡುಗೆಗಳನ್ನು ನೀಡುವ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮೀಸಿದ್ದಾರೆ ಎಂದು ಹೇಳಿದರು.

ಕೇವಲ ದಾನ ಧರ್ಮ ದೇವಸ್ಥಾನ ಶಿಕ್ಷಣ ಸಂಸ್ಥೆಗಳನ್ನು ನಿರ್ಮಾಣ ಮಾಡದೇ ಸ್ವಾತಂತ್ರಕ್ಕಾಗಿ ಶರಣ ಸಾಹಿತ್ಯ, ಬಸವ ಸಾಹಿತ್ಯ, ಕನ್ನಡ ಸಾಹಿತ್ಯ ಸೇರಿದಂತೆ ಅನೇಕ ಸಮಾಜದ ಒಳತಿಗಾಗಿ ಹಲವಾರು ದಶಕಗಳಿಂದ ಬಣಜಿಗ ಸಮಾಜದ ಬಾಂಧವರು ನಿರಂತರವಾಗಿ ಹಿಂತ ಚಟುವಟಿಕೆಗಳಿಗೆ ಪ್ರೋತ್ಸಾಹಿಸಿ ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸುವ ಮೂಲಕ ಸಮಾಜದಲ್ಲಿ ತಮ್ಮದೇಯಾದ ಕೊಡುಗೆಗಳನ್ನು ನೀಡಿರುವ ಸಮಾಜ ಯಾವುದಾದರು ಇದ್ದರೆ ಅದು ಬಣಜಿಗ ಸಮಾಜದ ಎಂದು ಹೆಮ್ಮೆಯಿಂದ ಹೇಳುವ ಸಮಾಜ ನಮ್ಮದಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಶಿರೋಳ ರಾಮಾರೂಢ ಮಠದ ಶಂಕರಾರೂಢ ಶ್ರೀಗಳು ವಹಿಸಿದ್ದರು. ಸಾನ್ನಿಧ್ಯವನ್ನು ಪಟ್ಟಣದ ವಿರಕ್ತಮಠದ ಸಿದ್ದಲಿಂಗ ಶ್ರೀಗಳು ವಹಿಸಿದ್ದರು. ಅಧ್ಯಕ್ಷತೆಯನ್ನು ತಾಲೂಕಾಧ್ಯಕ್ಷ ಮುತ್ತು ಕಿಣಗಿ ವಹಿಸಿದ್ದರು. ಹರೀಶಗೌಡ ಪಾಟೀಲ, ಸುರೇಶಗೌಡ ಪಾಟೀಲ, ಈರಣ್ಣ ಪಟ್ಟಣಶೆಟ್ಟಿ, ಎಸ್‌.ಜಿ. ನಾಗಠಾಣ, ಆರ್‌.ಎಂ. ಕೋರಿ, ಎಸ್‌.ಎಸ್‌. ಝಳಕಿ, ಸಿ.ಎಂ. ಹಂಡಗಿ, ಬಸವರಾಜ ಹನುಮಶೆಟ್ಟಿ, ಅಣ್ಣು ದುಂಬಾಳಿ, ಸಂಗಮೇಶ ಹಳ್ಳೂರ, ರಮೇಶ ಯಳಮೇಲಿ, ವೀರಣ್ಣ ಮರ್ತೂರ, ಗಂಗಾಧರ ಕುಂಟೋಜಿ, ಸಿದ್ದಣ್ಣ ಮೋದಿ, ಡಾ| ಎನ್‌.ಬಿ. ವಜಿರಕರ, ಸದಾನಂದ ಯಳಮೇಲಿ, ವಿಶೇಷ ಸನ್ಮಾನಿತರಾಗಿ ಮಹೇಂದ್ರ ವಾರದ, ಮುರುಗೇಶ ಹೆಬ್ಟಾಳ, ಸಂಗಮೇಶ ಕೊರಿ, ಡಾ| ನವೀನ ಶೀಲವಂತ, ಡಾ| ಸಂತೋಷ ಶೀಲವಂತ, ಅಶೋಕ ಬ್ಯಾಕೋಡ ಸೇರಿದಂತೆ ಅನೇಕರು ಇದ್ದರು.

ವಿವೇಕಾನಂದ ಕಲ್ಯಾಣಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಆರ್‌.ಜಿ. ಅಳ್ಳಗಿ ಸ್ವಾಗತಿಸಿದರು. ಬಸವರಾಜ ಹಂಚಲಿ ನಿರೂಪಿಸಿದರು. ಸಂತೋಷ ತಾಳಿಕೋಟಿ ವಂದಿಸಿದರು.

ಈ ವೇಳೆ ಬಣಜಿಗ ಸಮಾಜದ ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಸನ್ಮಾನಿಸಲಾಯಿತು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕೋಟ ಹೋಬಳಿಯ ಬಾರಿಕೆರೆ, ವಂಡಾರು ಮಾರ್ವಿಯಲ್ಲಿ ಇಬ್ಬರಿಗೆ ಕೋವಿಡ್ ಸೋಂಕು ಪತ್ತೆ; ಸೀಲ್ ಡೌನ್

ಕೋಟ ಹೋಬಳಿಯ ಬಾರಿಕೆರೆ, ವಂಡಾರು ಮಾರ್ವಿಯಲ್ಲಿ ಇಬ್ಬರಿಗೆ ಕೋವಿಡ್ ಸೋಂಕು ಪತ್ತೆ; ಸೀಲ್ ಡೌನ್

ತೆಕ್ಕಟ್ಟೆ: ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಏರಿ ನಿಂತ ಲಾರಿ

ತೆಕ್ಕಟ್ಟೆ: ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಏರಿ ನಿಂತ ಲಾರಿ

ರಾಜ್ಯದಲ್ಲಿ ಭಾನುವಾರ ಸಂಪೂರ್ಣ ಲಾಕ್ ಡೌನ್ ಇಲ್ಲ; ಮುಖ್ಯಮಂತ್ರಿ ಬಿಎಸ್ ವೈ ಸ್ಪಷ್ಟನೆ

ರಾಜ್ಯದಲ್ಲಿ ಭಾನುವಾರ ಸಂಪೂರ್ಣ ಲಾಕ್ ಡೌನ್ ಇಲ್ಲ; ಮುಖ್ಯಮಂತ್ರಿ ಬಿಎಸ್ ವೈ ಸ್ಪಷ್ಟನೆ

ಜೆಪಿ ಡ್ಯುಮಿನಿಯ ಸಾರ್ವಕಾಲಿಕ ಐಪಿಎಲ್ ತಂಡದಲ್ಲಿ ಧೋನಿಗೆ ಜಾಗವಿಲ್ಲ!

ಜೆಪಿ ಡ್ಯುಮಿನಿಯ ಸಾರ್ವಕಾಲಿಕ ಐಪಿಎಲ್ ತಂಡದಲ್ಲಿ ಧೋನಿಗೆ ಜಾಗವಿಲ್ಲ!

ಕೋವಿಡ್ ವಿರುದ್ಧ ಹೋರಾಟಕ್ಕಿಳಿದ ವಾಯುಪಡೆಯ ಚಿನೂಕ್‌ ಹೆಲಿಕಾಪ್ಟರ್‌ಗಳು

ಕೋವಿಡ್ ವಿರುದ್ಧ ಹೋರಾಟಕ್ಕಿಳಿದ ವಾಯುಪಡೆಯ ಚಿನೂಕ್‌ ಹೆಲಿಕಾಪ್ಟರ್‌ಗಳು

ವಿಶ್ವ ಆರೋಗ್ಯ ಸಂಸ್ಥೆ ಜೊತೆಗೆ ಸಂಬಂಧ ಕಡಿದುಕೊಂಡ ಅಮೇರಿಕ

ವಿಶ್ವ ಆರೋಗ್ಯ ಸಂಸ್ಥೆ ಜೊತೆಗೆ ಸಂಬಂಧ ಕಡಿದುಕೊಂಡ ಅಮೇರಿಕ

ಹಳಿ ಏರುವುದೆಂದು ಆರ್ಥಿಕತೆ?

ಹಳಿ ಏರುವುದೆಂದು ಆರ್ಥಿಕತೆ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

30-May-02

ಸಾಮಗ್ರಿ ವಿತರಣೆ: ಸಾಮಾಜಿಕ ಅಂತರ ಮಾಯ

30-May-01

ಕ್ವಾರಂಟೈನ್‌ದಿಂದ ಮನೆಗೆ ಹೋದವರಿಗೆ ಸೋಂಕು

ಕೋಟ ಹೋಬಳಿಯ ಬಾರಿಕೆರೆ, ವಂಡಾರು ಮಾರ್ವಿಯಲ್ಲಿ ಇಬ್ಬರಿಗೆ ಕೋವಿಡ್ ಸೋಂಕು ಪತ್ತೆ; ಸೀಲ್ ಡೌನ್

ಕೋಟ ಹೋಬಳಿಯ ಬಾರಿಕೆರೆ, ವಂಡಾರು ಮಾರ್ವಿಯಲ್ಲಿ ಇಬ್ಬರಿಗೆ ಕೋವಿಡ್ ಸೋಂಕು ಪತ್ತೆ; ಸೀಲ್ ಡೌನ್

ಶುದ್ಧ ಕುಡಿಯುವ ನೀರಿಗಾಗಿ ಪರದಾಟ

ಶುದ್ಧ ಕುಡಿಯುವ ನೀರಿಗಾಗಿ ಪರದಾಟ

ತೆಕ್ಕಟ್ಟೆ: ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಏರಿ ನಿಂತ ಲಾರಿ

ತೆಕ್ಕಟ್ಟೆ: ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಏರಿ ನಿಂತ ಲಾರಿ

MUST WATCH

udayavani youtube

COVID-19 : ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ Homeopathy Medicine | Udayavani

udayavani youtube

Preserving the heritage -World Famous Udupi Mattugulla Documentary by Udayavani

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

ಹೊಸ ಸೇರ್ಪಡೆ

30-May-02

ಸಾಮಗ್ರಿ ವಿತರಣೆ: ಸಾಮಾಜಿಕ ಅಂತರ ಮಾಯ

30-May-01

ಕ್ವಾರಂಟೈನ್‌ದಿಂದ ಮನೆಗೆ ಹೋದವರಿಗೆ ಸೋಂಕು

ಕೋಟ ಹೋಬಳಿಯ ಬಾರಿಕೆರೆ, ವಂಡಾರು ಮಾರ್ವಿಯಲ್ಲಿ ಇಬ್ಬರಿಗೆ ಕೋವಿಡ್ ಸೋಂಕು ಪತ್ತೆ; ಸೀಲ್ ಡೌನ್

ಕೋಟ ಹೋಬಳಿಯ ಬಾರಿಕೆರೆ, ವಂಡಾರು ಮಾರ್ವಿಯಲ್ಲಿ ಇಬ್ಬರಿಗೆ ಕೋವಿಡ್ ಸೋಂಕು ಪತ್ತೆ; ಸೀಲ್ ಡೌನ್

ಶುದ್ಧ ಕುಡಿಯುವ ನೀರಿಗಾಗಿ ಪರದಾಟ

ಶುದ್ಧ ಕುಡಿಯುವ ನೀರಿಗಾಗಿ ಪರದಾಟ

ತೆಕ್ಕಟ್ಟೆ: ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಏರಿ ನಿಂತ ಲಾರಿ

ತೆಕ್ಕಟ್ಟೆ: ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಏರಿ ನಿಂತ ಲಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.