ಮಳೆಗೆ 350 ಹೆಕ್ಟೇರ್ ಒಣ ದ್ರಾಕ್ಷಿ ಹಾನಿ
Team Udayavani, Apr 11, 2021, 6:09 PM IST
ಕೋಹಳ್ಳಿ: ಅಥಣಿ ತಾಲೂಕಿನಲ್ಲಿ ಶುಕ್ರವಾರ ಸಂಜೆ ಸುರಿದ ಅಕಾಲಿಕ ಮಳೆಯಿಂದ ಶೇಡ್‌ಗಳಲ್ಲಿ ಹಾಕಿದಒಣದ್ರಾಕ್ಷಿ (ಮನೂಕ) ಹಾಳಾಗಿದ್ದು. ಶನಿವಾರ ಸ್ಥಳಕ್ಕೆತೋಟಗಾರಿಕೆ ಇಲಾಖೆ ಅಧಿ ಕಾರಿ ಅಕ್ಷಯಕುಮಾರ ಉಪಾಧ್ಯಾಯ ಭೇಟಿ ನೀಡಿ ಹಾನಿ ಬಗ್ಗೆ ಮಾಹಿತಿ ಪಡೆದರು.
ನಂತರ ಮಾತನಾಡಿದ ಅವರು, ಅಥಣಿ ತಾಲೂಕಿನಲ್ಲಿ ಸುಮಾರು 3000 ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿಬೆಳೆಯಲಾಗುತ್ತಿದೆ. ಅದರಲ್ಲಿ ತಾಲೂಕಿನ ಪೂರ್ವಭಾಗದ ಕೋಹಳ್ಳಿ, ಕಕಮರಿ, ರಾಮತೀರ್ಥ, ಅರಟಾಳ, ಕೊಟ್ಟಲಗಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಶುಕ್ರವಾರಸಂಜೆ ಸುರಿದ ಭಾರಿ ಬಿರುಗಾಳಿ ಸಹಿತ ಮಳೆಗೆ ಈ ಎಲ್ಲಗ್ರಾಮಗಳ ಒಟ್ಟು 350 ಹೆಕ್ಟೇರ್ ಪ್ರದೇಶದ ಒಣದ್ರಾಕ್ಷಿ(ಮನೂಕ) ತೊಯ್ದು ನಾಶವಾಗಿ ಲಕ್ಷಾಂತರ ರೂ. ಹಾನಿಯಾಗಿದೆ ಎಂದರು.
ಮಾರುಕಟ್ಟೆಯಲ್ಲಿ ಒಣದ್ರಾಕ್ಷಿ ಕೆಜಿಗೆ 150 ರಿಂದ 200ರವರೆಗೆ ಮಾರಾಟವಾಗುತ್ತಿದೆ. ಆದರೆ ಶುಕ್ರವಾರ ಸಂಜೆ ಸುರಿದ ಬಾರಿ ಅಕಾಲಿಕ ಮಳೆಯಿಂದ ಒಣದ್ರಾಕ್ಷಿಯಗುಣಮಟ್ಟ ಹಾಳಾಗಿದೆ. ಇದರಿಂದ ಇದರ ಬೆಲೆಮಾರುಕಟ್ಟೆಯಲ್ಲಿ 80 ರೂ, ದಿಂದ 100 ರೂ, ವರೆಗೂ ಮಾತ್ರ ಮಾರಾಟವಾಗುತ್ತದೆ ಎನ್ನುತ್ತಾರೆ ರೈತರು.
ಪರಿಹಾರ ನೀಡಿ : ಈ ಭಾಗದ ಅನೇಕ ರೈತರು ದ್ರಾಕ್ಷಿ ಬೆಳೆಗೆ 2018-19 ಸಾಲಿನ ಹಿಂಗಾರು ಹಂಗಾಮಿನಲ್ಲಿ ಹವಾಮಾನ ಆಧಾರಿತ ಬೆಳೆ ವಿಮೆ ಮಾಡಿಸಿದ್ದರು.ಆದರೆ ರೈತರಿಗೆ ವಿಮಾ ಕಂಪನಿಯವರು ಈವರೆಗೆಹಾನಿ ಪರಿಹಾರ ನೀಡಿಲ್ಲ. ಈಗ ಅಧಿಕಾರಿಗಳು ಹಾನಿಸರ್ವೇ ಮಾಡಿ 2019-20ರ ಸಾಲಿನ ವಿಮೆ ಪರಿಹಾರಬೇಗನೆ ಒದಗಿಸಬೇಕೆಂಬುದು ಈ ಭಾಗದ ರೈತರ ಆಗ್ರಹವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮಂಗಳೂರು : ಹುಟ್ಟುವಾಗಲೇ ನವಜಾತ ಶಿಶುವಿನಲ್ಲಿ ಹಲ್ಲು! ವೈದ್ಯರು ಹೇಳಿದ್ದೇನು ಗೊತ್ತೆ ?
10 ಲಕ್ಷ ಮಕ್ಕಳಿಗಿಲ್ಲ ಶಿಕ್ಷಣ: ಕೋವಿಡ್ ತಂದಿಟ್ಟ ಆಘಾತ ಸಮೀಕ್ಷೆ ವಿವರ ಹೈಕೋರ್ಟ್ಗೆ
ಅಡುಗೆ ಎಣ್ಣೆ ಬೆಲೆ ಪ್ರತಿ ಲೀಟರ್ಗೆ 10 ರೂ.ಗಳಿಂದ 15 ರೂ. ವರೆಗೆ ಇಳಿಕೆ
ಡಿಕೆಶಿ ಶಕ್ತಿ ಪ್ರದರ್ಶನ? ನಾನು ಹೈಕಮಾಂಡ್ ಆದೇಶದಂತೆ ನಡೆದುಕೊಳ್ಳುತ್ತೇನೆ ಎಂದ ಡಿಕೆಶಿ
ನಾನು ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ: ಬೋರಿಸ್ ಜಾನ್ಸನ್