ಬೆಳಗಾವಿ: ಗಮನಸೆಳೆದ ಮಹಿಳೆಯರ ಸಾರಿ ವಾಕ್‌ಥಾನ್‌‌

ಸೀರೆ ಭಾರತೀಯ ಮಹಿಳೆಯರ ಸಂಸ್ಕೃತಿಯ ಪ್ರತೀಕ

Team Udayavani, Mar 11, 2024, 10:46 AM IST

ಬೆಳಗಾವಿ: ಗಮನಸೆಳೆದ ಮಹಿಳೆಯರ ಸಾರಿ ವಾಕ್‌ಥಾನ್‌‌

ಉದಯವಾಣಿ ಸಮಾಚಾರ
ಬೆಳಗಾವಿ: ಸೀರೆಯುಟ್ಟ ಯುವತಿಯರು, ಮಹಿಳೆಯರು, ವೃದ್ಧೆಯರು ಸೇರಿದಂತೆ ಎಲ್ಲ ವಯೋಮಾನದ ಸುಮಾರು 500ಕ್ಕೂ ಹೆಚ್ಚು ಜನ ಸುಮಾರು 3 ಕಿ.ಮೀ. ಸಾರಿ ವಾಕ್‌ಥಾನ್‌ನಲ್ಲಿ ಪಾಲ್ಗೊಂಡು ಗಮನಸೆಳೆದರು. ರೋಟರಿ ಕ್ಲಬ್‌ ಆಫ್‌ ಬೆಳಗಾವಿ ಎಲೈಟ್‌, ಮಾರವಾಡಿ ಯುವ ಮಂಚ್‌ ಮಹಿಳಾ ವಿಭಾಗ ಪಂಖ್‌ ವತಿಯಿಂದ ರವಿವಾರ ಹಮ್ಮಿಕೊಂಡಿದ್ದ ಸಾರಿ ವಾಕಥಾನ್‌ ನಗರದ ಹಿಂದವಾಡಿಯ ಗೋಮಟೇಶ ವಿದ್ಯಾಪೀಠದಿಂದ 3 ಕಿ.ಮೀ. ನಡೆಯಿತು.

ಸೀರೆಯುಟ್ಟ ನಾರಿಯರು ವಾಕ್‌ಥಾನ್‌ನಲ್ಲಿ ಪಾಲ್ಗೊಂಡಿದ್ದರು. ಸೀರೆಯುಟ್ಟು ಬೂಟ್‌ ಹಾಕಿದ ಮಹಿಳೆಯರು, ಮಡಿಲಲ್ಲಿ ಮಗುವನ್ನು ಕಟ್ಟಿಕೊಂಡಿದ್ದ ಮಹಿಳೆ, ದೇಶದ ವಿವಿಧ ಭಾಗಗಳ ವಿಶಿಷ್ಟ ಸಾಂಪ್ರದಾಯಿಕ ಶೈಲಿಯಲ್ಲಿ ಸೀರೆಯುಟ್ಟಿದ್ದ ನಾರಿಯರು ಗಮನಸೆಳೆದರು. ಟೋಪಿ ಧರಿಸಿ ನಾವು ಯಾರಿಗೂ ಕಮ್ಮಿಯಿಲ್ಲ ಎಂಬಂತೆ ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದರು.

ಗೋಮಟೇಶ ವಿದ್ಯಾಪೀಠದಿಂದ ಆರಂಭವಾದ ಸಾರಿ ವಾಕ್‌ಥಾನ್‌ ನವಹಿಂದ್‌ ಸೊಸೆ„ಟಿ ಮುಖ್ಯ ಕಚೇರಿ, ಆರ್‌ಪಿಡಿ ಕ್ರಾಸ್‌ ಮಾರ್ಗದಿಂದ ಗೋಮಟೇಶ ವಿದ್ಯಾಪೀಠದವರೆಗೆ ಸಾಗಿತು. ಸುಮಾರು 500ಕ್ಕೂ ಹೆಚ್ಚು ಮಹಿಳೆಯರು ಬಾಗವಹಿಸಿದ್ದರು. 70ಕ್ಕೂ ಅಧಿಕ ವಯಸ್ಸಿನ ಅಜ್ಜಿಯರೂ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಮಾರವಾಡಿ ಯುವ ಮಂಚ್‌ ಮಹಿಳಾ ವಿಭಾಗ ಪಂಖ ಅಧ್ಯಕ್ಷೆ ಮನೀಷಾ ಉಪಾಧ್ಯಾಯ ಮಾತನಾಡಿ, ಪಾಶ್ಚಿಮಾತ್ಯ ಸಂಸ್ಕೃತಿಯಿಂದ ಸೀರೆ ಮರೆಯಾಗುತ್ತಿರುವ ಇಂದಿನ ದಿನಮಾನದಲ್ಲಿ ಸಾರಿ ವಾಕ್‌ಥಾನ್‌ ಮೂಲಕ ಮಹಿಳೆಯರಲ್ಲಿ ಅರಿವು ಮೂಡಿಸುವ ಉದ್ದೇಶ ಹೊಂದಲಾಗಿದೆ,

ಭಾರತೀಯ ಮಹಿಳೆಯರು ಸೀರೆಯಲ್ಲಿ ಅಂದ-ಚಂದವಾಗಿ ಕಾಣುತ್ತಾರೆ. ಸೀರೆ ಭಾರತೀಯ ಮಹಿಳೆಯರ ಸಂಸ್ಕೃತಿಯ ಪ್ರತೀಕ. ಇದನ್ನು ಸಂರಕ್ಷಿಸಲು ಈ ವಾಕ್‌ಥಾನ್‌ ಹಮ್ಮಿಕೊಳ್ಳಲಾಗಿದೆ. ಸೀರೆ ಉಡುವ ಸಂಪ್ರದಾಯವನ್ನು ಉತ್ತೇಜಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಪೊಲೀಸ್‌ ಕಮಿಷನರೆಟ್‌ದಿಂದ ಮ್ಯಾರಥಾನ್‌
ಬೆಳಗಾವಿ ಮಹಾನಗರ ಪೊಲೀಸ್‌ ಕಮಿಷನರೇಟ್‌ ವತಿಯಿಂದ ಸುವರ್ಣ ಕರ್ನಾಟಕ ಸಂಭ್ರಮ ಹಿನ್ನೆಲೆಯಲ್ಲಿ ಮಾದಕ ವ್ಯಸನ ವಿರುದ್ಧ ಜಾಗೃತಿಯ ಮ್ಯಾರಥಾನ್‌ ನಡೆಯಿತು. ನಗರ ಪೊಲೀಸ್‌ ಕಮಿಷನರ್‌ ಕಚೇರಿಯಿಂದ ಆರಂಭವಾದ ಮ್ಯಾರಥಾನ್‌ ನಲ್ಲಿ ಪೊಲೀಸ್‌ ಅ ಧಿಕಾರಿಗಳು, ಪೊಲೀಸ್‌ ಸಿಬ್ಬಂದಿ, ಸಾರ್ವಜನಿಕರು ಸೇರಿ 500ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

2-

ಗ್ರಾಮದ ಸಮಸ್ಯೆ ಪರಿಹಾರಕ್ಕೆ 100% ಮತ

ಬಸ್‌ ಟಿಕೆಟ್‌ ದರ ಏರಿಕೆ? ನಾಲ್ಕೂ ನಿಗಮಗಳಿಂದ ಶೇ. 25 ಹೆಚ್ಚಳಕ್ಕೆ ಪ್ರಸ್ತಾವನೆ

ಬಸ್‌ ಟಿಕೆಟ್‌ ದರ ಏರಿಕೆ? ನಾಲ್ಕೂ ನಿಗಮಗಳಿಂದ ಶೇ. 25 ಹೆಚ್ಚಳಕ್ಕೆ ಪ್ರಸ್ತಾವನೆ

Udupi ಇನ್ನು ಮುತ್ತು ರತ್ನ ನಗರಿ! ಕೇಂದ್ರ ಸರಕಾರದ ಒಂದು ಜಿಲ್ಲೆ ಒಂದು ಉತ್ಪನ್ನ ಪರಿಕಲ್ಪನೆ

Udupi ಇನ್ನು ಮುತ್ತು ರತ್ನ ನಗರಿ! ಕೇಂದ್ರ ಸರಕಾರದ ಒಂದು ಜಿಲ್ಲೆ ಒಂದು ಉತ್ಪನ್ನ ಪರಿಕಲ್ಪನೆ

1-24-tuesday

Daily Horoscope: ಉದ್ಯೋಗದಲ್ಲಿ ನಿರೀಕ್ಷೆ ಮೀರಿ ಪ್ರಗತಿ, ಮನೋಬಲದಿಂದ ಕಾರ್ಯಸಿದ್ದಿ

ಕನ್ನಡ ಶಾಲೆಗಳಿಗೆ ಮರಾಠಿ ಶಿಕ್ಷಕರ ನೇಮಕ!

Kannada ಶಾಲೆಗಳಿಗೆ ಮರಾಠಿ ಶಿಕ್ಷಕರ ನೇಮಕ! ಕಾಸರಗೋಡಿನಂತೆ ಗಡಿಭಾಗದಲ್ಲಿ ಮಹಾ ಉದ್ಧಟತನ

ಮೂರೂವರೆ ತಾಸು ಬಿಎಸ್‌ವೈ ವಿಚಾರಣೆ ; ಅಪ್ರಾಪ್ತ ವಯಸ್ಕಳಿಗೆ ನಾನು ತೊಂದರೆ ನೀಡಿಲ್ಲ

ಮೂರೂವರೆ ತಾಸು ಬಿಎಸ್‌ವೈ ವಿಚಾರಣೆ ; ಅಪ್ರಾಪ್ತ ವಯಸ್ಕಳಿಗೆ ನಾನು ತೊಂದರೆ ನೀಡಿಲ್ಲ

1-sads-das

Kanchanjunga Express ‘ಕವಚ’ ಇದ್ದಿದ್ದರೆ ರೈಲು ಅಪಘಾತ ತಪ್ಪುತ್ತಿತ್ತು!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕನ್ನಡ ಶಾಲೆಗಳಿಗೆ ಮರಾಠಿ ಶಿಕ್ಷಕರ ನೇಮಕ!

Kannada ಶಾಲೆಗಳಿಗೆ ಮರಾಠಿ ಶಿಕ್ಷಕರ ನೇಮಕ! ಕಾಸರಗೋಡಿನಂತೆ ಗಡಿಭಾಗದಲ್ಲಿ ಮಹಾ ಉದ್ಧಟತನ

ಗೋಕಾಕ ತಾಲೂಕಿನ ಸರಕಾರಿ ಶಾಲೆಗಳು ಹೈಟೆಕ್‌

ಗೋಕಾಕ ತಾಲೂಕಿನ ಸರಕಾರಿ ಶಾಲೆಗಳು ಹೈಟೆಕ್‌

Chikkodi;ಸಮಸ್ಯೆ ಬಗೆಹರಿಸಲು, ಬೇಡಿಕೆ ಈಡೇರಿಸಲು ಪ್ರಯತ್ನ: ಸಂಸದೆ ಪ್ರಿಯಾಂಕಾ ಜಾರಕಿಹೊಳಿ

Chikkodi;ಸಮಸ್ಯೆ ಬಗೆಹರಿಸಲು, ಬೇಡಿಕೆ ಈಡೇರಿಸಲು ಪ್ರಯತ್ನ: ಸಂಸದೆ ಪ್ರಿಯಾಂಕಾ ಜಾರಕಿಹೊಳಿ

11-chikkodi

Chikkodi: ವ್ಯಕ್ತಿಯ ಭೀಕರ ಕೊಲೆ; ಬೆಚ್ಚಿ ಬಿದ್ದ ಜನತೆ

1-ewewe

ಸಂಭವನೀಯ ಪ್ರವಾಹ ನಿರ್ವಹಣೆಗೆ ಸಿದ್ಧವಾಗಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ

MUST WATCH

udayavani youtube

ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಆಚರಣೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಆರ್ ಬಿ ತಿಮ್ಮಾಪುರ

udayavani youtube

ಮಾನಸಿಕ ಸಮಸ್ಯೆಯ ಲಕ್ಷಣಗಳೇನು?

udayavani youtube

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

udayavani youtube

ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಆಡಳಿತ ಮಾಡಲು ಅಸಮರ್ಥರು

udayavani youtube

ಬಿಜೆಪಿ ಹಿರಿಯ ಮುಖಂಡ ಎಂ.ಬಿ‌.ಭಾನುಪ್ರಕಾಶ್ ಹೃದಯಾಘಾತದಿಂದ ನಿಧನ

ಹೊಸ ಸೇರ್ಪಡೆ

2-

ಗ್ರಾಮದ ಸಮಸ್ಯೆ ಪರಿಹಾರಕ್ಕೆ 100% ಮತ

ಬಸ್‌ ಟಿಕೆಟ್‌ ದರ ಏರಿಕೆ? ನಾಲ್ಕೂ ನಿಗಮಗಳಿಂದ ಶೇ. 25 ಹೆಚ್ಚಳಕ್ಕೆ ಪ್ರಸ್ತಾವನೆ

ಬಸ್‌ ಟಿಕೆಟ್‌ ದರ ಏರಿಕೆ? ನಾಲ್ಕೂ ನಿಗಮಗಳಿಂದ ಶೇ. 25 ಹೆಚ್ಚಳಕ್ಕೆ ಪ್ರಸ್ತಾವನೆ

Udupi ಇನ್ನು ಮುತ್ತು ರತ್ನ ನಗರಿ! ಕೇಂದ್ರ ಸರಕಾರದ ಒಂದು ಜಿಲ್ಲೆ ಒಂದು ಉತ್ಪನ್ನ ಪರಿಕಲ್ಪನೆ

Udupi ಇನ್ನು ಮುತ್ತು ರತ್ನ ನಗರಿ! ಕೇಂದ್ರ ಸರಕಾರದ ಒಂದು ಜಿಲ್ಲೆ ಒಂದು ಉತ್ಪನ್ನ ಪರಿಕಲ್ಪನೆ

1-24-tuesday

Daily Horoscope: ಉದ್ಯೋಗದಲ್ಲಿ ನಿರೀಕ್ಷೆ ಮೀರಿ ಪ್ರಗತಿ, ಮನೋಬಲದಿಂದ ಕಾರ್ಯಸಿದ್ದಿ

ಕನ್ನಡ ಶಾಲೆಗಳಿಗೆ ಮರಾಠಿ ಶಿಕ್ಷಕರ ನೇಮಕ!

Kannada ಶಾಲೆಗಳಿಗೆ ಮರಾಠಿ ಶಿಕ್ಷಕರ ನೇಮಕ! ಕಾಸರಗೋಡಿನಂತೆ ಗಡಿಭಾಗದಲ್ಲಿ ಮಹಾ ಉದ್ಧಟತನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.