ಚಿಕ್ಕೋಡಿ: ಜೈನರಿಗೆ ಪ್ರತ್ಯೇಕ ಆಯೋಗ ರಚನೆಯಾಗಲಿ-ಗುಣಧರನಂದಿಜಿ ಮಹಾರಾಜರು


Team Udayavani, Feb 10, 2024, 3:35 PM IST

ಚಿಕ್ಕೋಡಿ: ಜೈನರಿಗೆ ಪ್ರತ್ಯೇಕ ಆಯೋಗ ರಚನೆಯಾಗಲಿ-ಗುಣಧರನಂದಿಜಿ ಮಹಾರಾಜರು

ಉದಯವಾಣಿ ಸಮಾಚಾರ
ಚಿಕ್ಕೋಡಿ: ಶಾಂತಿ ,ಅಂಹಿಸೆ ಸಾರುವ ಜೈನ ಧರ್ಮ ಎಲ್ಲರಿಗೂ ಒಳ್ಳೆಯದನ್ನು ಬಯಸಿದೆ. ಸರಳ ಸಜ್ಜನಿಕೆಯ ಜೈನ ಸಮಾಜಕ್ಕಾಗಿ ಸರಕಾರವು ಪ್ರತ್ಯೇಕ ಜೈನ ನಿಗಮ ಸ್ಥಾಪಿಸಬೇಕು, ಮಹಾನಗರಗಳಲ್ಲಿ ಜೈನ ಹಾಸ್ಟೆಲ್‌ಗ‌ಳ ಸ್ಥಾಪನೆಯಾಗಬೇಕು, ಪ್ರತಿ ಜಿಲ್ಲೆಗಳಲ್ಲಿ ಬಡಜನರ ಉಚಿತ ಚಿಕಿತ್ಸೆಗಾಗಿ ಆಸ್ಪತ್ರೆಗಳ ಸ್ಥಾಪನೆಯಾಗಬೇಕು ಎಂದು ರಾಷ್ಟ್ರಸಂತ 108 ಆಚಾರ್ಯ ಶ್ರೀ ಗುಣಧರನಂದಿಜಿ ಮಹಾರಾಜರು ಒತ್ತಾಯಿಸಿದರು.

ಚಿಕ್ಕೋಡಿ ತಾಲೂಕಿನ ಶಮನೇವಾಡಿಯಲ್ಲಿ 33 ನೇ ದೀಕ್ಷಾ ಜಯಂತಿ ಅಂಗವಾಗಿ ಆಯೋಜಿಸಿದ್ದ ಬೃಹತ್‌ ಜೈನ ಸಮ್ಮೇಳನದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು. ಜೈನ ಮುನಿಗಳ ಸುರಕ್ಷತೆ ಆಗಬೇಕು.

ಜೈನ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣದ ವ್ಯವಸ್ಥೆಯಾಗಬೇಕು. ಪ್ರತಿ ಹಳ್ಳಿ ಹಳ್ಳಿಗಳಿಗೆ ಮುನಿ ನಿವಾಸಗಳು, ಮಂಗಲ
ಕಾರ್ಯಾಲಯಗಳು ನಿರ್ಮಾಣವಾಗಬೇಕು ಹಾಗೂ ಕರ್ನಾಟಕ ಜೈನ ಸಂಸ್ಕೃತಿಯ ಸಂರಕ್ಷಣೆ ಆಗಬೇಕು ಹಾಗೂ ಜೈನ ಸಮಾಜಕ್ಕೆ ಒಳ್ಳೆಯ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿದರು.

ನಾಂದಣಿಯ ಶ್ರೀ ಜಿನಸೇನ ಪಟ್ಟಾಚಾರ್ಯ ಸ್ವಾಮೀಜಿ ಮಾತನಾಡಿ, ನಮ್ಮ ದೇಶದಲ್ಲಿ ಜಿನಶಾಸನ ಉಳಿದು ಬೆಳೆಯಬೇಕು. ಜೈನ ಸಮಾಜ ಬಾಂಧವರು ಧರ್ಮ ಕ್ಷೇತ್ರಗಳನ್ನು ರಕ್ಷಿಸಲು ಒಗ್ಗೂಡಿ ಸರಕಾರದ ಮುಂದೆ ಬೇಡಿಕೆ ಇಡಬೇಕು, ವಿಹಾರದ ಸಮಯದಲ್ಲಿ ಜೈನ ಮುನಿಗಳಿಗೆ ಸರಕಾರ ರಕ್ಷಣೆ ನೀಡಬೇಕೆಂದರು.

ಕೊಲ್ಹಾಪುರದ ಶ್ರೀ ಲಕ್ಷ್ಮಿಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಮಾತನಾಡಿ, ಜೈನ ಸಮಾಜಕ್ಕೆ ಅಲ್ಪಸಂಖ್ಯಾತ ಆಯೋಗದಿಂದ ಏನು ಲಾಭವಾಗುತ್ತಿಲ್ಲ. ಅದಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜೈನರಿಗೆ ಸ್ವತಂತ್ರ ಆಯೋಗ ಸ್ಥಾಪನೆ ಮಾಡಿ ಜೈನ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು. ಆ ನಿಟ್ಟಿನಲ್ಲಿ ರಾಷ್ಟ್ರಸಂತ 108 ಆಚಾರ್ಯ ಶ್ರೀ ಗುಣಧರನಂದಿಜಿ ಮಹಾರಾಜರು ಒಳ್ಳೆಯ ಉದ್ದೇಶದಿಂದ ಈ ಸಮ್ಮೇಳನವನ್ನು ಆಯೋಜನೆ ಮಾಡಿದ್ದು ಜೈನ ಸಮಾಜಕ್ಕೆ ದಾರಿದೀಪವಾಗಿದೆ ಎಂದರು.

ಅಮ್ಮಿನಭಾವಿಯ ಶ್ರೀ ಧರ್ಮಸೇನ ಭಟ್ಟಾರಕ ಸ್ವಾಮೀಜಿ, ಶ್ರೀ ಆಯಿಕಾರತ್ನ 105 ಪ್ರಜ್ಞೆಮತಿ ಮಾತಾಜಿ, ಜೈನ ಸಮಾಜದ ಮುಖಂಡರಾದ ಮಾಜಿ ಸಚಿವ ವೀರಕುಮಾರ ಪಾಟೀಲ, ಉತ್ತಮ ಪಾಟೀಲ, ಸುದರ್ಶನ ಪಾಟೀಲ, ಸಂಜಯ ನಾಡಗೌಡ, ಅರುಣ ಯಲಗುದ್ರಿ, ಧುಳಗೌಡ ಪಾಟೀಲ, ಡಾ| ಎನ್‌.ಎ.ಮಗದುಮ್ಮ, ದಾದಾಸಾಹೇಬ ಪಾಟೀಲ, ಬಾಳಾಸಾಹೇಬ ಪಾಟೀಲ, ಅಣ್ಣಾಸಾಹೇಬ ಹಾವಲೆ, ಅಣ್ಣಾಸಾಹೇಬ ಖೊತ ಮುಂತಾದವರು ಮಾತನಾಡಿದರು.

ವೇದಿಕೆ ಮೇಲೆ ಹಾಲಸಿದ್ಧನಾಥ ಕಾರ್ಖಾನೆ ಸಂಚಾಲಕ ಜಯಕುಮಾರ ಖೋತ, ದಕ್ಷಿಣ ಭಾರತ ಜೈನ ಸಭೆಯ ಅಧ್ಯಕ್ಷ ರಾವಸಾಹೇಬ ಪಾಟೀಲ, ಮುಂಬೈನ ಸಂಜಯ ಮುಂಡಾ, ಬಾಳಾಸಾಹೇಬ ಪಾಟೀಲ, ಡಾ ಪದ್ಮರಾಜ ಪಾಟೀಲ, ಪ್ರಕಾಶ ಪಾಟೀಲ, ಭರತೇಶ ಬನವಣೆ, ಚೇತನ ಪಾಟೀಲ, ಡಾ ಸಿ ಬಿ ಪಾಟೀಲ, ಜಿನ್ನಪ್ಪಾ ಅಸ್ಕಿ, ದೀಪಕ ಖೊತ, ಅಣ್ಣಾಸಾಹೇಬ
ಖೊತ, ಕುಮಾರ ಕುರುಚೆ, ಕುಮಾರ ಮಗದುಮ್ಮ, ಸೋಮನಖೊತ, ಆರ್‌.ಬಿ.ಖೋತ, ಆಣ್ಣಾಸಾಹೇಬ ಭೆಂಡವಾಡೆ, ಸಚೀನ ಖೊತ, ಜಿತೇಂದ್ರ ಖೊತ, ವಿಕಿ ಖೊತ, ಅಮ್ಮನ್ನವರ, ಹನಿಮನಾಳೆ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು,

ಸಮ್ಮೇಳನದಂಗವಾಗಿ ತೀರ್ಥಂಕರರಿಗೆ ಮಹಾಮಸ್ತಕಾಭಿಷೇಕ, ಕನ್ನಡ ಸಂಗೀತಗಾರ ರಾಜೇಶ ಕೃಷ್ಣನ್‌ ಇವರಿಂದ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಲಕ್ಷಾಂತರ ಜೈನ ಸಮಾಜ ಬಾಂಧವರು, ಶ್ರಾವಕ ಶ್ರಾವಕಿಯರು ಪಾಲ್ಗೊಂಡಿದ್ದರು,

ಟಾಪ್ ನ್ಯೂಸ್

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.