ನಿರಂತರ ವಿದ್ಯುತ್‌ ಅನುಷ್ಠಾನ

Team Udayavani, Feb 7, 2017, 1:29 PM IST

Road-Honda-3.jpg

ಚಿಕ್ಕೋಡಿ: ಮುಂಬರುವ ದಿನಗಳಲ್ಲಿ ಚಿಕ್ಕೋಡಿ-ಸದಲಗಾ ಮತಕ್ಷೇತ್ರ ವ್ಯಾಪ್ತಿಯ ತೋಟಪಟ್ಟಿಯಲ್ಲಿ ವಾಸಿಸುವ ಸುಮಾರು 3562 ಕುಟುಂಬಗಳಿಗೆ 6.47 ಕೋಟಿ ವೆಚ್ಚದಲ್ಲಿ ನಿರಂತರ ವಿದ್ಯುತ್‌ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಸಂಸದ ಪ್ರಕಾಶ ಹುಕ್ಕೇರಿ ತಿಳಿಸಿದರು. 

ಸೋಮವಾರ ತಾಲೂಕು ಪಂಚಾಯತ್‌ ಸಭಾ ಭವನದಲ್ಲಿ ನಡೆದ ಹೆಸ್ಕಾಂ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರಕಾರದ ವಿವಿಧ ಯೋಜನೆಯಡಿ ಜನರಿಗೆ ಹಳ್ಳಿಯಲ್ಲಿ ವಿದ್ಯುತ್‌ ನೀಡಿದೆ.

ಆದರೆ ಹೆಚ್ಚಿನ ಜನರು ಹಳ್ಳಿಯನ್ನು ಬಿಟ್ಟು ತಮ್ಮ ತೋಟಪಟ್ಟಿಯಲ್ಲಿ ವಾಸವಾಗಿರುವುದರಿಂದ ವಿದ್ಯುತ್‌ ಸಮಸ್ಯೆ ಉಂಟಾಗಿದೆಯೆಂದು ತಮ್ಮ ಬಳಿ ಅಳಲು ತೋಡಿಕೊಂಡಾಗ ಹುಬ್ಬಳ್ಳಿಯ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರ ಜತೆ ಚರ್ಚಿಸಿ ಸುಮಾರು 6.47 ಕೋಟಿ ರೂ.ಗಳ ವೆಚ್ಚದಲ್ಲಿ ಕ್ರಿಯಾ ಯೋಜನೆ ಸಿದ್ಧಪಡಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಅಕ್ರಮ ಸಕ್ರಮ ಯೋಜನೆಯಡಿ ಅಕ್ರಮ ಸಂಪರ್ಕ ಹೊಂದಿರುವ ರೈತರು ಸಕ್ರಮಗೊಳಿಸಲು ಸರಕಾರಕ್ಕೆ ರೈತರ ಹಣವನ್ನು ಪಾವತಿ ಮಾಡಿದ್ದು, ಅದಕ್ಕೆ ಕೂಡ ಸರಕಾರ ಟೆಂಡರ್‌ಮಾಡಿದೆ. ಅದರಲ್ಲಿ ಟೆಂಡರ್‌ ಹಿಡಿದು ಕಾಮಗಾರಿ ಪ್ರಾರಂಭಿಸಿದ ಗುತ್ತಿಗೆದಾರ ನಿಗದಿತ ಅವಧಿಯಲ್ಲಿ ರೈತರಿಗೆ ವಿದ್ಯುತ್‌ ನೀಡುತ್ತಿಲ್ಲವೆಂದು ಅಧಿಧಿಕಾರಿಗಳ ಗಮನಕ್ಕೆ ತಂದಾಗ ಶೀಘ್ರವಾಗಿ ವಿದ್ಯುತ್‌ ನೀಡುವ ಭರವಸೆ ನೀಡಿದ್ದಾರೆ.

ಅಥಣಿ ತಾಲೂಕಿನಲ್ಲಿ ಸಾಮೂಹಿಕವಾಗಿ ನೀರಾವರಿ ಪಡೆಯುವ ರೈತರಿಗೆ ರಿಯಾಯಿತಿ ದರದಲ್ಲಿ ವಿದ್ಯುತ್‌ ನೀಡಲು ಬೇಡಿಕೆ ಇದ್ದು, ಹೆಸ್ಕಾಂ ಅಧಿಧಿಕಾರಿಗಳು ಪರಿಶೀಲನೆ ನಡೆಸಿ ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದರು. 

ಈ ಸಂದರ್ಭದಲ್ಲಿ ಹುಬ್ಬಳ್ಳಿ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಎಸ್‌.ಬಿ.ಸಕ್ರಿ ಮಾತನಾಡಿ, ಬೆಳಗಾವಿ, ವಿಜಯಪುರ ಜಿಲ್ಲೆಯ ತೋಟಪಟ್ಟಿಯಲ್ಲಿ ವಾಸಿಸುವ ಜನರಿಗೆ ಸಿಂಗಲ್‌ ಫೇಸ್‌ ವಿದ್ಯುತ್‌ ನೀಡುವ ಪ್ರಸ್ತಾವನೆ ಇದ್ದು, ಮೊದಲು ಚಿಕ್ಕೋಡಿ-ಸದಲಗಾ ಕ್ಷೇತ್ರವನ್ನು ಪ್ರಾಯೋಗಿಕವಾಗಿ ತೆಗೆದುಕೊಂಡು ಎಲ್ಲ ಜನರಿಗೆ ಸಿಂಗಲ್‌ ಫೇಸ್‌ ವಿದ್ಯುತ್‌ ನೀಡಲಾಗುತ್ತಿದೆ.

ಈ ಯೋಜನೆ ಯಶಸ್ವಿಯಾದರೆ ಎಲ್ಲ ಕಡೆಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು. ಸಭೆಯಲ್ಲಿ ಬೆಳಗಾವಿ ಜಿಲ್ಲೆ ಹೆಸ್ಕಾಂ ಮುಖ್ಯ ಅಭಿಯಂತ ರಾಜಪ್ಪ, ಚಿಕ್ಕೋಡಿಯ ಅಭಿಯಂತ ಬಸಪ್ಪ, ಚಿಕ್ಕೋಡಿ ಕಾರ್ಯನಿರ್ವಾಹಕ ಅಭಿಯಂತ ಶ್ರೀಕಾಂತ ಸಸಾಲಟ್ಟಿ, ತಾಪಂ ಅಧ್ಯಕ್ಷ ಉರ್ಮಿಳಾ ಪಾಟೀಲ, ಜಿಪಂ ಸದಸ್ಯರಾದ ಸುದರ್ಶನ ಖೋತ, ರಾಜು ಮಿರ್ಜೆ, ಸುರೇಶ ಕೋರೆ, ರಾಜು ಪಾಟೀಲ, ಕೆ.ಎಸ್‌. ಪಾಟೀಲ ಇತರರು ಇದ್ದರು.  

ಟಾಪ್ ನ್ಯೂಸ್

IPL: ಪ್ಲೇ ಆಫ್‌ ರೇಸ್‌ ನಡುವೆಯೇ ಚೆನ್ನೈ ತಂಡಕ್ಕೆ ಆಘಾತ; ತವರಿಗೆ ಮರಳಿದ ಸ್ಟಾರ್‌ ಬೌಲರ್

IPL: ಪ್ಲೇ ಆಫ್‌ ರೇಸ್‌ ನಡುವೆಯೇ ಚೆನ್ನೈ ತಂಡಕ್ಕೆ ಆಘಾತ; ತವರಿಗೆ ಮರಳಿದ ಸ್ಟಾರ್‌ ಬೌಲರ್

Covid vaccine ಅಡ್ಡ ಪರಿಣಾಮದಿಂದಲೇ ಹೃದಯಾಘಾತ?: ನಟ ಶ್ರೇಯಸ್ ಹೇಳಿದ್ದೇನು?

Covid vaccine ಅಡ್ಡ ಪರಿಣಾಮದಿಂದಲೇ ಹೃದಯಾಘಾತ?: ನಟ ಶ್ರೇಯಸ್ ಹೇಳಿದ್ದೇನು?

1-aaa

Pen drive case; ಇಂದೇ ಪ್ರಜ್ವಲ್‌ ರೇವಣ್ಣ ಎಸ್‌ಐಟಿ ಮುಂದೆ ಶರಣು?

1-wqeqewqe

BJP vs Congress ; ಧಾರವಾಡದಲ್ಲಿ ಯಾರೇ ಗೆದ್ದರೂ ದಾಖಲೆ!

ICC ಚಾಂಪಿಯನ್ಸ್‌ ಟ್ರೋಫಿ ಆಡದಿದ್ದರೆ ಭಾರತ ತಂಡದ ಮೇಲೆ ಪರಿಣಾಮ: ಪಾಕ್‌ನ ರಶೀದ್‌ ಲತೀಫ್

ICC ಚಾಂಪಿಯನ್ಸ್‌ ಟ್ರೋಫಿ ಆಡದಿದ್ದರೆ ಭಾರತ ತಂಡದ ಮೇಲೆ ಪರಿಣಾಮ: ಪಾಕ್‌ನ ರಶೀದ್‌ ಲತೀಫ್

Sunidhi Chauhan: ಹಾಡುತ್ತಿರುವಾಗಲೇ ಖ್ಯಾತ ಗಾಯಕಿ ಮೇಲೆ ಬಾಟಲಿ ಎಸೆದ ಅಭಿಮಾನಿ

Sunidhi Chauhan: ಹಾಡುತ್ತಿರುವಾಗಲೇ ಖ್ಯಾತ ಗಾಯಕಿ ಮೇಲೆ ಬಾಟಲಿ ಎಸೆದ ಅಭಿಮಾನಿ

canada

Nijjar ಕೇಸ್ ತನಿಖೆ ಮೂವರ ಬಂಧನಕ್ಕೆ ಮುಕ್ತಾಯವಾಗಿಲ್ಲ: ಕೆನಡಾ ಪ್ರಧಾನಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ರಧಾನಿ ನರೇಂದ್ರ ಮೋದಿ ಬಜರಂಗದಳ ಕಾರ್ಯಕರ್ತರಂತೆ ಮಾತಾಡ್ತಾರೆ: ಸಿದ್ದರಾಮಯ್ಯ

Belagavi; ಪ್ರಧಾನಿ ನರೇಂದ್ರ ಮೋದಿ ಬಜರಂಗದಳ ಕಾರ್ಯಕರ್ತರಂತೆ ಮಾತಾಡ್ತಾರೆ: ಸಿದ್ದರಾಮಯ್ಯ

1-wewqe

Congress ಕಾರ್ಯಕರ್ತರು ಹಣ ಹಂಚುತ್ತಿದ್ದಾರೆ ಎಂದು ಠಾಣೆ ಎದುರು BJP ಶಾಸಕರ ಪ್ರತಿಭಟನೆ

1-wewqewq

Belagavi; ಶೆಟ್ಟರ್ ಅವರಿಗೆ ಆಶೀರ್ವಾದ ಮಾಡಿದ ವಿವಿಧ ಮಠಾಧೀಶರು

Belagavi; ಭಿಕ್ಷೆ ರೀತಿಯಲ್ಲಿ ಸಿಎಂ ಬರ ಪರಿಹಾರ ನೀಡಿದ್ದಾರೆ: ವಿಜಯೇಂದ್ರ ಆಕ್ರೋಶ

Belagavi; ಭಿಕ್ಷೆ ರೀತಿಯಲ್ಲಿ ಸಿಎಂ ಬರ ಪರಿಹಾರ ನೀಡಿದ್ದಾರೆ: ವಿಜಯೇಂದ್ರ ಆಕ್ರೋಶ

ಹುನಗುಂದ: ಸಾಮೂಹಿಕ ವಿವಾಹದಿಂದ ದುಂದುವೆಚ್ಚಕ್ಕೆ ಕಡಿವಾಣ

ಹುನಗುಂದ: ಸಾಮೂಹಿಕ ವಿವಾಹದಿಂದ ದುಂದುವೆಚ್ಚಕ್ಕೆ ಕಡಿವಾಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

IPL: ಪ್ಲೇ ಆಫ್‌ ರೇಸ್‌ ನಡುವೆಯೇ ಚೆನ್ನೈ ತಂಡಕ್ಕೆ ಆಘಾತ; ತವರಿಗೆ ಮರಳಿದ ಸ್ಟಾರ್‌ ಬೌಲರ್

IPL: ಪ್ಲೇ ಆಫ್‌ ರೇಸ್‌ ನಡುವೆಯೇ ಚೆನ್ನೈ ತಂಡಕ್ಕೆ ಆಘಾತ; ತವರಿಗೆ ಮರಳಿದ ಸ್ಟಾರ್‌ ಬೌಲರ್

Choosing the Best Gambling Enterprise Online Payment Method

Best Online Slots For Best Casino Game

Covid vaccine ಅಡ್ಡ ಪರಿಣಾಮದಿಂದಲೇ ಹೃದಯಾಘಾತ?: ನಟ ಶ್ರೇಯಸ್ ಹೇಳಿದ್ದೇನು?

Covid vaccine ಅಡ್ಡ ಪರಿಣಾಮದಿಂದಲೇ ಹೃದಯಾಘಾತ?: ನಟ ಶ್ರೇಯಸ್ ಹೇಳಿದ್ದೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.