ಉಪವಿಭಾಗ ಬೈಲಹೊಂಗಲ ಜಿಲ್ಲಾ ಕೇಂದ್ರವಾಗಲಿ

ಇದನ್ನೆ ಜಿಲ್ಲಾ ಕೇಂದ್ರವನ್ನಾಗಿ ಮಾಡಿದರೆ ತುಂಬಾ ಅನುಕೂಲವಾಗುತ್ತದೆ.

Team Udayavani, Apr 13, 2022, 5:45 PM IST

ಉಪವಿಭಾಗ ಬೈಲಹೊಂಗಲ ಜಿಲ್ಲಾ ಕೇಂದ್ರವಾಗಲಿ

ಬೈಲಹೊಂಗಲ: ಬ್ರಿಟಿಷರ ಕಾಲದಿಂದಲೂ ಕಂದಾಯ ಉಪವಿಭಾಗವಾಗಿರುವ ಬೈಲಹೊಂಗಲವನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕೆಂದು ಒತ್ತಾಯಿಸಿ, ಬೈಲಹೊಂಗಲ ಜಿಲ್ಲಾ ಹೋರಾಟ ಸಮಿತಿ ನೇತೃತ್ವದಲ್ಲಿ ಮೆರವಣಿಗೆ ಮೂಲಕ ತೆರಳಿ ಉಪವಿಭಾಗಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.

ಶಾಸಕ ಮಹಾಂತೇಶ ಕೌಜಲಗಿ, ಬೈಲಹೊಂಗಲ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಶಿವರಂಜನ ಬೋಳನ್ನವರ ಮಾತನಾಡಿ, ಬೆಳಗಾವಿ ಜಿಲ್ಲೆಯನ್ನು ಆಡಳಿತತ್ಮಾಕ ದೃಷ್ಟಿಯಿಂದ ವಿಭಜಿಸುವುದಾದರೆ ಉಪವಿಭಾಗ ಕೇಂದ್ರವಾದ ಬೈಲಹೊಂಗಲನ್ನು ಜಿಲ್ಲಾ ಕೇಂದ್ರವ°ನಾಗಿ ಮಾಡಬೇಕು. ಜಿಲ್ಲಾ ಕೇಂದ್ರವಾಗಲು ಎಲ್ಲ ಅರ್ಹತೆ ಹಾಗೂ ಸಾಮಾಜಿಕ, ಐತಿಹಾಸಿಕ, ವಾಣಿಜ್ಯ, ಕೃಷಿ, ಕಾನೂನು ಇತ್ಯಾದಿಗಳಿಂದ ಕೇಂದ್ರಿಕೃತವಾಗಿದ್ದು, ದೇಶದ ಸ್ವಾತ್ರಂತ್ರ್ಯಕ್ಕೋಸ್ಕರ ಹೋರಾಡಿದ ಈ ಗಂಡುಮೆಟ್ಟಿನ ನಾಡಿನಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಇನ್ನೂ ಅನೇಕ ವೀರರು ಸ್ವಾತಂತ್ರ್ಯಕ್ಕಾಗಿ ಹೋರಾಡಿ ತಮ್ಮ ಪ್ರಾಣವನ್ನೇ ಬಲಿದಾನಗೈದಿದ್ದಾರೆ. ಏಷ್ಯಾದಲ್ಲಿಯೇ ಪ್ರಸಿದ್ಧವಾದ ಹತ್ತಿ ಮಾರುಕಟ್ಟೆಗಳಲ್ಲಿ ಬೆ„ಲಹೊಂಗಲ ಎಪಿಎಂಸಿ ರಾಜ್ಯದಲ್ಲಿಯೇ ಮೊದಲನೆಯದು. ಸರ್ಕಾರಿ, ಅರೆ ಸರ್ಕಾರಿ ಕಚೇರಿಗಳು ಎಲ್ಲ ಸವಲತ್ತು ಹೊಂದಿವೆ.

ಈಗಾಗಲೇ ಬೈಲಹೊಂಗಲ, ಸವದತ್ತಿ, ರಾಮದುರ್ಗ, ಖಾನಾಪುರ, ಕಿತ್ತೂರ ತಾಲುಕುಗಳಿಂದ ಕೂಡಿದ ಕಂದಾಯ ಉಪವಿಭಾಗ ಕೇಂದ್ರವಾಗಿದ್ದು,ಇದನ್ನೆ ಜಿಲ್ಲಾ ಕೇಂದ್ರವನ್ನಾಗಿ ಮಾಡಿದರೆ ತುಂಬಾ ಅನುಕೂಲವಾಗುತ್ತದೆ. ಸರ್ಕಾರ ಕೂಡಲೇ ನಮ್ಮ ಮನವಿಗೆ ಸ್ಪಂದಿಸಿ ಬೈಲಹೊಂಗಲ ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಮಾನಗಳಲ್ಲಿ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಹೊಸೂರ ಗಂಗಾಧರ ಸ್ವಾಮೀಜಿ, ಮುನವಳ್ಳಿ ಮುರುಘರಾಜೇಂದ್ರ ಸ್ವಾಮೀಜಿ, ನಯಾನಗರ ಅಭಿನವ ಸಿದ್ದಲಿಂಗ ಸ್ವಾಮೀಜಿ, ಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ, ಬುಡ್ರಕಟ್ಟಿ ಮೃತ್ಯುಂಜಯ ಸ್ವಾಮೀಜಿ, ಆರಾದ್ರಿಮಠದ ಮಹಾಂತೇಶ ಶಾಸ್ತ್ರೀ ಸಾನ್ನಿಧ್ಯ ವಹಿಸಿ ಮಾತನಾಡಿ, ಸರ್ಕಾರ ಆಡಳಿತ್ಮಾಕ ದೃಷ್ಟಿಯಿಂದ ಅಖಂಡ ಬೆಳಗಾವಿ ಜಿಲ್ಲೆಯನ್ನು ವಿಭಜನೆ ಮಾಡುವದಾದರೆ ಉಪವಿಭಾಗ ಕೇಂದ್ರವಾದ ಬೆ„ಲಹೊಂಗಲವನ್ನೇ ಜಿಲ್ಲಾ ಕೇಂದ್ರವನ್ನಾಗಿ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಡಾ.ಸಿ.ಎಸ್‌.ಸಾಧುನವರ, ಮಹಾಂತೇಶ ತುರಮರಿ, ಬಾಬಾಸಾಹೇಬ ಪಾಟೀಲ, ರೋಹಿಣಿ ಪಾಟೀಲ, ರುದ್ರಪ್ಪ ಹೊಸಮನಿ, ಬಾಬುಸಾಬ ಸಂಗೊಳ್ಳಿ, ಈಶ್ವರ ಉಳ್ಳೆಗಡ್ಡಿ, ಬಿ.ಎಂ. ಚಿಕ್ಕನಗೌಡ್ರ, ಜಗದೀಶ ಬೂದಿಹಾಳ, ನಾರಾಯಣ ನಲವಡೆ, ಆರ್‌.ಎ.ಪಾಟೀಲ, ಸಂತೋಷ ಭಾಂವಿ, ಅಶೋಕ ಬಾಳೇಕುಂದರಗಿ ಮಾತನಾಡಿದರು.

ಪುರಸಭೆ ಅಧ್ಯಕ್ಷ ಬಸವರಾಜ ಜನ್ಮಟ್ಟಿ, ಅಮಿತ ಪಾಟೀಲ, ಶಂಕರ ಮಾಡಲಗಿ, ಪ್ರಮೋದಕುಮಾರ ವಕ್ಕುಂದಮಠ, ಬಿ.ಬಿ.ಗಣಾಚಾರಿ, ಡಾ.ಚಿದಂಬರ ಕುಲಕರ್ಣಿ, ಡಾ. ಶರಣಕುಮಾರ ಅಂಗಡಿ, ಡಾ.ಮಂಜುನಾಥ ಮುದುಕನಗೌಡರ, ಡಾ.ಅಶೋಕ ದೊಡವಾಡ, ಕಿರಣ ಸಾಧುನವರ, ಬೊಮ್ಮನಾಯ್ಕ ಪಾಟೀಲ, ಕಾರ್ತಿಕ ಪಾಟೀಲ, ಮಂಜುನಾಥ ಸೋಮನ್ನವರ, ಬುಡ್ಡೇಸಾಬ ಶಿರಸಂಗಿ ದಾವಲಬಾಯಿ ಕೊಂಡಗೊಳಿ, ಕುಮಾರ ದೇಶನೂರ, ಮಹಾಂತೇಶ ಮತ್ತಿಕೊಪ್ಪ, ಮಡಿವಾಳಪ್ಪ ಹೋಟಿ, ಮಹೇಶ ಹರಕುಣಿ, ಶ್ರೀಶೈಲ ತೊಟಗಿ, ಬಸವರಾಜ ಉಪ್ಪಾರ, ವಿರುಪಾಕ್ಷ ವಾಲಿ, ಸುಭಾಸ ತುರಮರಿ, ಸೋಮನಾಥ ಸೊಪ್ಪಿಮಠ, ಶಿವಾನಂದ ಬಡ್ಡಿಮನಿ, ಅಬ್ದುಲರೆಹಮಾನ ಹುಬ್ಬಳ್ಳಿ, ಬಾಬುಸಾಬ ಸುತಗಟ್ಟಿ, ಸಂಗಮೇಶ ಸವದತ್ತಿಮಠ, ಉಮಾ ಬುಲಾಕೆ, ಪಿ.ಬಿ.ಬಡಿಗೇರ, ಎಮ.ಆರ್‌. ಮೆಳವಂಕಿ, ಜ್ಞಾನೇಶ್ವರ ಬೊಂಗಾಳೆ, ಎಂ.ಎಂ. ಸೋಪಿನ, ಶಿವಾನಂದ ಇಂಚಲ, ಸಂತೋಷ ಕೊಳವಿ, ಮಹೇಶ ಕೋಟಗಿ, ಸುನೀಲ ಮರಕುಂಬಿ, ಮನೋಜ ಕೆಳಗೇರಿ ಸಾವಿರಾರು ಜನರು ಇದ್ದರು.

ಕಲಾಪದಿಂದ ದೂರ: ಬೈಲಹೊಂಗಲ ಜಿಲ್ಲಾ ಕೇಂದ್ರವನ್ನಾಗಿ ಮಾಡುವಂತೆ ಒತ್ತಾಯಿಸಿ ಕರೆ ನೀಡಿದ್ದ ಪ್ರತಿಭಟನೆಗೆ ವಕೀಲರ ಸಂಘ ತಮ್ಮ ಕಲಾಪಗಳಿಂದ ದೂರವುಳಿದು ಪ್ರತಿಭಟನೆಯಲ್ಲಿ ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದರು. ಡಿವೈಎಸ್‌ಪಿ ಶಿವಾನಂದ ಕಟಗಿ ಹಾಗೂ ಸಿಬ್ಬಂದಿ ಬೀಗಿ ಪೊಲೀಸ್‌ ಬಂದೋಬಸ್ತ್ ಮಾಡಿದ್ದರು.

ಟಾಪ್ ನ್ಯೂಸ್

ಮೇಜರ್‌ ಕ್ರೈಂ ಮಾನಿಟರಿಂಗ್‌ ಸೆಲ್‌ ಸ್ಥಾಪನೆ: ಕಮಿಷನರ್‌

ಮೇಜರ್‌ ಕ್ರೈಂ ಮಾನಿಟರಿಂಗ್‌ ಸೆಲ್‌ ಸ್ಥಾಪನೆ: ಕಮಿಷನರ್‌

ಸ್ವಂತ ಮನೆಯಲ್ಲೇ ಯುವತಿಯಿಂದ ಕಳವು

ಸ್ವಂತ ಮನೆಯಲ್ಲೇ ಯುವತಿಯಿಂದ ಕಳವು

ಮತ್ತೆ ಆರೆಂಜ್‌ ಅಲರ್ಟ್‌; ಎರ್ನಾಕುಳಂ, ಇಡುಕ್ಕಿ ಸೇರಿ 8 ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ

ಮತ್ತೆ ಆರೆಂಜ್‌ ಅಲರ್ಟ್‌; ಎರ್ನಾಕುಳಂ, ಇಡುಕ್ಕಿ ಸೇರಿ 8 ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ

6 ತಿಂಗಳಲ್ಲಿ ಗ್ರೀನ್‌ ಕಾರ್ಡ್‌ ಪ್ರಕ್ರಿಯೆ ನಡೆಸಲು ಜೋ ಬೈಡೆನ್‌ ಅವರಿಗೆ ಶಿಫಾರಸು

6 ತಿಂಗಳಲ್ಲಿ ಗ್ರೀನ್‌ ಕಾರ್ಡ್‌ ಪ್ರಕ್ರಿಯೆ ನಡೆಸಲು ಜೋ ಬೈಡೆನ್‌ ಅವರಿಗೆ ಶಿಫಾರಸು

ಅಂತ್ಯಸಂಸ್ಕಾರಕ್ಕೆ ತೆರಳಿ ಹಿಂದಿರುಗುತ್ತಿದ್ದ ವ್ಯಕ್ತಿ ಅಪಘಾತದಲ್ಲಿ ಸಾವು

ಅಂತ್ಯಸಂಸ್ಕಾರಕ್ಕೆ ತೆರಳಿ ಹಿಂದಿರುಗುತ್ತಿದ್ದ ವ್ಯಕ್ತಿ ಅಪಘಾತದಲ್ಲಿ ಸಾವು

ಕ್ಷೀರಭಾಗ್ಯ ಹಾಲಿನ ಪುಡಿ ಪ್ಯಾಕೆಟ್‌ ತ್ಯಾಜ್ಯವಾಗಿ ಪತ್ತೆ

ಕ್ಷೀರಭಾಗ್ಯ ಹಾಲಿನ ಪುಡಿ ಪ್ಯಾಕೆಟ್‌ ತ್ಯಾಜ್ಯವಾಗಿ ಪತ್ತೆ

ಮನೆಯಲ್ಲಿ ಮಲಗಿದ್ದಾಗ ಬೆಂಕಿ ತಗಲಿ ವ್ಯಕ್ತಿ ಸಾವು

ಮನೆಯಲ್ಲಿ ಮಲಗಿದ್ದಾಗ ಬೆಂಕಿ ತಗಲಿ ವ್ಯಕ್ತಿ ಸಾವುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12

ವಿವಿಧತೆಯಲ್ಲಿ ಏಕತೆ ಸಾರುವ ದೇಶ ನಮ್ಮದು

11

ಶಿಕ್ಷಕರ ಸಹಕಾರಿ ರಾಜ್ಯಕ್ಕೆ ಮಾದರಿ: ಷಡಕ್ಷರಿ

10

ಲಿಂಗಾಯತರು ಸಂಘಟಿತರಾಗದಿದ್ದರೆ ಭವಿಷ್ಯವಿಲ್ಲ

9

ಮೊದಲ ದಿನವೇ ಮಕ್ಕಳಿಗೆ ಟೆಂಟ್‌ ಶಾಲೆ ಭಾಗ್ಯ

ಚಿಕ್ಕೋಡಿ : ಕಡು ಬಡತನದಲ್ಲಿ ಹುಟ್ಟಿ ಅರೋಗ್ಯ ಸೇವೆಗೆ ಮುಂದಾದ ಗಡಿ ಭಾಗದ ಯುವಕ

ಚಿಕ್ಕೋಡಿ : ಕಡು ಬಡತನದಲ್ಲಿ ಹುಟ್ಟಿ ಅರೋಗ್ಯ ಸೇವೆಗೆ ಮುಂದಾದ ಗಡಿ ಭಾಗದ ಯುವಕ

MUST WATCH

udayavani youtube

SSLC ನಂತ್ರ ನಿಮಗಿದೆ ಭರಪೂರ ಅವಕಾಶ !!

udayavani youtube

ಕಾರಿಂಜೇಶ್ವರ ದೇವಸ್ಥಾನದ ಬಳಿ ಬೃಹತ್ ಬಂಡೆಕಲ್ಲು ಕುಸಿತ

udayavani youtube

ವಿಧಾನಪರಿಷತ್ ಹಂಗಾಮಿ ಸಭಾಪತಿಯಾಗಿ ರಘುನಾಥ್ ಮಲ್ಕಾಪುರೆ ನೇಮಕ

udayavani youtube

ಉದ್ಘಾಟನೆಗೆ ಶಾಸಕರೇ ಬರಬೇಕಂತೆ; ಕಾಫಿನಾಡಲ್ಲಿ ರಸ್ತೆಗೆ ಬೀಗ ಹಾಕಿದ ಬಿಜೆಪಿ ಸದಸ್ಯರು!

udayavani youtube

ಜ್ಞಾನವಾಪಿ ಮಸೀದಿ ಸರ್ವೇ ಸಂಪೂರ್ಣ; ಬಾವಿಯಲ್ಲಿ ‘ಶಿವಲಿಂಗ’ಪತ್ತೆ

ಹೊಸ ಸೇರ್ಪಡೆ

ಮೇಜರ್‌ ಕ್ರೈಂ ಮಾನಿಟರಿಂಗ್‌ ಸೆಲ್‌ ಸ್ಥಾಪನೆ: ಕಮಿಷನರ್‌

ಮೇಜರ್‌ ಕ್ರೈಂ ಮಾನಿಟರಿಂಗ್‌ ಸೆಲ್‌ ಸ್ಥಾಪನೆ: ಕಮಿಷನರ್‌

ಸ್ವಂತ ಮನೆಯಲ್ಲೇ ಯುವತಿಯಿಂದ ಕಳವು

ಸ್ವಂತ ಮನೆಯಲ್ಲೇ ಯುವತಿಯಿಂದ ಕಳವು

ಮತ್ತೆ ಆರೆಂಜ್‌ ಅಲರ್ಟ್‌; ಎರ್ನಾಕುಳಂ, ಇಡುಕ್ಕಿ ಸೇರಿ 8 ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ

ಮತ್ತೆ ಆರೆಂಜ್‌ ಅಲರ್ಟ್‌; ಎರ್ನಾಕುಳಂ, ಇಡುಕ್ಕಿ ಸೇರಿ 8 ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ

6 ತಿಂಗಳಲ್ಲಿ ಗ್ರೀನ್‌ ಕಾರ್ಡ್‌ ಪ್ರಕ್ರಿಯೆ ನಡೆಸಲು ಜೋ ಬೈಡೆನ್‌ ಅವರಿಗೆ ಶಿಫಾರಸು

6 ತಿಂಗಳಲ್ಲಿ ಗ್ರೀನ್‌ ಕಾರ್ಡ್‌ ಪ್ರಕ್ರಿಯೆ ನಡೆಸಲು ಜೋ ಬೈಡೆನ್‌ ಅವರಿಗೆ ಶಿಫಾರಸು

ಅಂತ್ಯಸಂಸ್ಕಾರಕ್ಕೆ ತೆರಳಿ ಹಿಂದಿರುಗುತ್ತಿದ್ದ ವ್ಯಕ್ತಿ ಅಪಘಾತದಲ್ಲಿ ಸಾವು

ಅಂತ್ಯಸಂಸ್ಕಾರಕ್ಕೆ ತೆರಳಿ ಹಿಂದಿರುಗುತ್ತಿದ್ದ ವ್ಯಕ್ತಿ ಅಪಘಾತದಲ್ಲಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.