ಸರ್ಕಾರಿ ಸೌಲಭ್ಯ ಪಡೆಯಲು ಪ್ರೇರೇಪಿಸಿ

Team Udayavani, Sep 16, 2019, 11:20 AM IST

ಬೈಲಹೊಂಗಲ: ನೇಸರಗಿಯಲ್ಲಿ ರವಿವಾರ ಹಮ್ಮಿಕೊಂಡ ರೈತ ಸಂಪರ್ಕ ಕೇಂದ್ರದ ಕಟ್ಟಡ ಉದ್ಘಾಟನೆ ಹಾಗೂ ಕೃಷಿ ವಸ್ತು ಪ್ರದರ್ಶನ ಕಾರ್ಯಕ್ರಮಕ್ಕೆ ರೈತರನ್ನು ಆಹ್ವಾನಿಸಿಲ್ಲವೆಂದು ಆರೋಪಿಸಿ ಗ್ರಾಮಸ್ಥರು ಶಾಸಕರ ಸಮ್ಮುಖದಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಬೈಲಹೊಂಗಲ: ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೃಷಿ ವಸ್ತು ಪ್ರದರ್ಶನ ನಡೆಸಿರುವುದು ಸೂಕ್ತವಾಗಿದೆ. ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ರೈತರು ಬರುವಂತೆ ಪ್ರೇರೇಪಿಸಿ ಉತ್ತಮ ಕಾರ್ಯಕ್ರಮ ರೂಪಿಸಬೇಕೆಂದು ಶಾಸಕ ಮಹಾಂತೇಶ ದೊಡಗೌಡರ ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕಿನ ನೇಸರಗಿ ಚನ್ನವೃಷಬೇಂದ್ರ ದೇವರಕೊಂಡ ಅಜ್ಜನ ದೇವಸ್ಥಾನದಲ್ಲಿ ರವಿವಾರ ನಡೆದ ರೈತ ಸಂಪರ್ಕ ಕೇಂದ್ರ ನೂತನ ಕಟ್ಟಡ ಉದ್ಘಾಟನೆ, ಸಮಗ್ರ ಕೃಷಿ ಅಭಿಯಾನ ಸಮಾರೋಪ ಹಾಗೂ ಕೃಷಿ ವಸ್ತು ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನೇಸರಗಿ ಎಪಿಎಂಸಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಇಲ್ಲಿನ ಸರಕಾರಿ ಐಟಿಐ ಕೇಂದ್ರ ನಿರ್ಮಾಣಕ್ಕೆ ಕೆಲ ಅಡೆತಡೆಗಳು ಬಂದಿವೆ. ನೇಸರಗಿ ಗ್ರಾಮಸ್ಥರು ಇಲ್ಲಿಯೇ ಐಟಿಐ ಕಾಲೇಜು ಇರಲಿ ಎಂದು ಹೇಳಿದ್ದು, ಮುಂದಿನ ದಿನದಲ್ಲಿ ಸೂಕ್ತ ಜಾಗೆ ಪರಿಶೀಲಿಸಿ ಕಟ್ಟಡ ನಿರ್ಮಿಸಲಾಗುವುದು ಎಂದು ತಿಳಿಸಿದರು.

ಜಿಪಂ ಸದಸ್ಯರಾದ ನಿಂಗಪ್ಪ ಅರಕೇರಿ, ಜಿಪಂ ಮಾಜಿ ಅಧ್ಯಕ್ಷ ಎಸ್‌.ಎಫ್‌. ದೊಡಗೌಡರ ಮಾತನಾಡಿ, ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಅನುಕೂಲ ಮಾಡುವ ನಿಟ್ಟಿನಲ್ಲಿ ಕೃಷಿ ಅಧಿಕಾರಿಗಳು ಬದ್ಧರಾಗಬೇಕು. ರೈತರು ಶ್ರಮಜೀವಿಗಳಾಗಿದ್ದು, ಅವರ ಕಷ್ಟ ನೀಗಿಸುವ ನಿಟ್ಟಿನಲ್ಲಿ ಸರಕಾರದಿಂದ ಬಂದ ಯೋಜನೆಗಳನ್ನು ತಿಳಿಸಿ ಆರ್ಥಿಕವಾಗಿ ಮುಂದೆ ಬರಲು ರೈತರ ಕೊಂಡಿಯಾಗಿ ಕೆಲಸ ಮಾಡಬೇಕೆಂದರು.

ಮಲ್ಲಾಪುರ ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಎಪಿಎಂಸಿ ತಾಪಂ ಅಧ್ಯಕ್ಷೆ ನೀಲವ್ವ ಫಕ್ಕೀರನ್ನವರ, ಉಪಾಧ್ಯಕ್ಷ ಮಲ್ಲನಾಯ್ಕ ಬಾಂವಿ, ಜಿಪಂ ಸದಸ್ಯೆಯರಾದ ರೋಹಿಣಿ ಪಾಟೀಲ, ಲಾವಣ್ಯ ಶಿಲ್ಲೇದಾರ, ದೇಶನೂರ ಗ್ರಾಪಂ ಅಧ್ಯಕ್ಷ ದೀಪಕಗೌಡ ಪಾಟೀಲ, ತಾಪಂ ಸದಸ್ಯೆ ಲಕ್ಷ್ತ್ರೀ ತಳವಾರ, ಅಶ್ವಿ‌ನಿ ಕುಂಕೂರ, ಪ್ರವೀಣ ಯಡಳ್ಳಿ, ಹೊಳೆವ್ವ ನಡುವಿನಮನಿ, ಕೆಂಚಪ್ಪ ಕಳ್ಳಿಬಡ್ಡಿ, ಬಾಳಪ್ಪ ಮಾಳಗಿ, ರಮೇಶ ರಾಯಪ್ಪಗೋಳ, ದೇಮಣ್ಣ ಗುಜನಟ್ಟಿ, ಮಲ್ಲೇಶ ಮಾಳನ್ನವರ, ಫಕ್ಕೀರಪ್ಪ ಸೊಮನ್ನವರ, ಸೋಮನಗೌಡ ಪಾಟೀಲ, ವಿನಾಯಕ ಮಾಸ್ತಮರಡಿ, ಪುಂಡಲೀಕ ಚಿಕ್ಕನಗೌಡರ, ಅಡಿವೆಪ್ಪ ಚಿಗರಿ, ಪ್ರಕಾಶ ತೊಟಗಿ, ಮಹಾಂತೇಶ ಕೂಲಿನವರ, ಸೋಮಶೇಖರ ಮಾಳನ್ನವರ, ದೇವೇಂದ್ರ ಮಾಳಗಿ, ಗಂಗಾಧರ ಗುಜನಟ್ಟಿ, ಮನೋಜ ಕೆಳಗೇರಿ, ವಿನೋದ ಯರಡಾಲ, ಮಂಜುನಾಥ ಹುಲಮನಿ, ಮಹಾಂತೇಶ ಸತ್ತಿಗೇರಿ ಇದ್ದರು.

ಐಟಿಐ ಕಾಲೇಜು ಸ್ಥಳಾಂತರ ವಿರೋಧಿಸಿ ಶಾಸಕರಿಗೆ ಮನವಿ

 ನೇಸರಗಿ ಗ್ರಾಮದಲ್ಲಿರುವ ಸರಕಾರಿ ಐಟಿಐ ಕಾಲೇಜನ್ನು ಸ್ಥಳಾಂತರ ಮಾಡದೇ ಇಲ್ಲಿಯೇ ಕಾಲೇಜಿಗೆ ಕಟ್ಟಡ ನಿರ್ಮಿಸಬೇಕು. ಎಪಿಎಂಸಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ನೇಸರಗಿ ಗ್ರಾಮಸ್ಥರು ಶಾಸಕ ಮಹಾಂತೇಶ ದೊಡಗೌಡರ ಅವರಿಗೆ ರವಿವಾರ ಮನವಿ ಸಲ್ಲಿಸಿದರು. ಸರಕಾರಿ ಪಿಯುಸಿ ಕಾಲೇಜಿನಲ್ಲಿ ಐಟಿಐ ತರಗತಿಗಳು ನಡೆಯುತ್ತಿವೆ. ಇದರಿಂದ ಈ ಭಾಗದ ನಿರುದ್ಯೋಗಿ ಯುವಕರಿಗೆ ಕೈಗಾರಿಕೆ ವಲಯದಲ್ಲಿ ಉದ್ಯೋಗ ಕಂಡುಕೊಳ್ಳಲು ಅನುಕೂಲವಾಗಿದೆ. ಐಟಿಐ ಕಾಲೇಜನ್ನು ನೇಸರಗಿ ಬಿಟ್ಟು ಸ್ಥಳಾಂತರಿಸಲು ಶಾಸಕರು ಪ್ರಯತ್ನಿಸಿರುವುದು ಖಂಡನೀಯವೆಂದು ಗ್ರಾಮಸ್ಥರು ಮನವಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಮುಖಂಡರಾದ ಕೆಂಚಪ್ಪ ಕಳ್ಳಿಬಡ್ಡಿ, ಬಾಳಪ್ಪ ಮಾಳಗಿ, ಸೋಮನಗೌಡ ಪಾಟೀಲ, ರಮೇಶ ರಾಯಪ್ಪಗೋಳ, ಮಹಾಂತೇಶ ಕೂಲಿನವರ, ಮಲ್ಲೇಶ ಮಾಳನ್ನವರ, ಫಕ್ಕೀರಪ್ಪ ಸೊಮನ್ನವರ, ವಿನಾಯಕ ಮಾಸ್ತಮರಡಿ, ಪುಂಡಲೀಕ ಚಿಕ್ಕನಗೌಡರ, ಪ್ರಕಾಶ ತೊಟಗಿ, ದೇಮಣ್ಣ ಗುಜನಟ್ಟಿ, ಸೋಮಶೇಖರ ಮಾಳನ್ನವರ ಇತರರು ಇದ್ದರು.
ರೈತರ ಆಕ್ರೋಶ ನೇಸರಗಿಯಲ್ಲಿ ರವಿವಾರ ನಡೆದ ರೈತ ಸಂಪರ್ಕ ಕೇಂದ್ರ ನೂತನ ಕಟ್ಟಡ ಉದ್ಘಾಟನೆ, ಸಮಗ್ರ ಕೃಷಿ ಅಭಿಯಾನ ಸಮಾರೋಪ ಹಾಗೂ ಕೃಷಿ ವಸ್ತು ಪ್ರದರ್ಶನ ಕಾರ್ಯಕ್ರಮ ಗೊಂದಲದ ಗೂಡಾಗಿ ಪರಿಣಮಿಸಿತು. ಕಾರ್ಯಕ್ರಮಕ್ಕೆ ರೈತರನ್ನು ಆಮಂತ್ರಿಸಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ಕೃಷಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ಸ್ಥಳದಲ್ಲಿದ್ದ ಶಾಸಕ ಮಹಾಂತೇಶ ದೊಡಗೌಡರ ರೈತರನ್ನು ಸಮಾಧಾನಪಡಿಸಿ, ಕಾರ್ಯಕ್ರಮಕ್ಕೆ ರೈತರನ್ನು ಆಹ್ವಾನಿಸದೆ ಇರುವುದು ಸರಿಯಲ್ಲ. ಮುಂದಿನ ದಿನಗಳಲ್ಲಿ ಹೀಗಾದರೆ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಆಗ ಬೈಲಹೊಂಗಲ ತಾಲೂಕು ಕೃಷಿ ಸಹಾಯಕ ನಿರ್ದೇಶಕಿ ಪ್ರತಿಭಾ ಹೂಗಾರ ಮತ್ತು ಕೃಷಿ ಅಧಿಕಾರಿ ಆರ್‌.ಐ. ಕುಂಬಾರ ಪ್ರತಿಕ್ರಿಯಿಸಿ, ತಮ್ಮಿಂದ ತಪ್ಪಾಗಿದೆ. ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇವೆ ಎಂದು ತಿಳಿಸಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ರಾಮದುರ್ಗ: ತೇರ ಬಜಾರದ ಸುತ್ತಮುತ್ತಲಿನ ವಾರ್ಡ್‌ಗಳಲ್ಲಿ ಯುಜಿ ಕೇಬಲ್‌ ಅಳವಡಿಕೆ ಕಾಮಗಾರಿಯಿಂದ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗುತ್ತಿದೆ ಎಂದು ಶಾಸಕ ಮಹಾದೇವಪ್ಪ...

  • ಬೆಳಗಾವಿ: ಇಲ್ಲಿಯ ಭೂತರಾಮನಟ್ಟಿ ಗ್ರಾಮದಲ್ಲಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಸ್ಥಳಾಂತರಕ್ಕೆ ವಿರೋಧಿ ಸಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಹೋರಾಟ ಸಮಿತಿ...

  • ರಾಮದುರ್ಗ: ವಿವಿಧ ಬೇಡಿಕೆ ಏಡೇರಿಕೆಗೆ ಆಗ್ರಹಿಸಿ ತಾಲೂಕಿನ ಗ್ರಾಮ ಲೆಕ್ಕಾಧಿಕಾರಿಗಳು ತಹಶೀಲ್ದಾರ್‌ ಮುಖಾಂತರ ಸರ್ಕಾರಕ್ಕೆ ಶುಕ್ರವಾರ ಮನವಿ ಸಲ್ಲಿಸಿದರು. ಇತ್ತೀಚೆಗೆ...

  • ಗೋಕಾಕ: ನೆರೆ ಬಂದು ಎರಡು ತಿಂಗಳು ಕಳೆದರೂ ನೆರೆ ಪೀಡಿತರ ಸಂಕಷ್ಟಗಳು ಪರಿಹಾರವಾಗುವ ಯಾವ ಲಕ್ಷಣಗಳು ಕಂಡು ಬರುತ್ತಿಲ್ಲ. ನೆರೆ ಪೀಡಿತ ಪ್ರದೇಶದ ಜನರಿಗಾಗಿ ಇಲ್ಲಿಯ...

  • ರಾಮದುರ್ಗ: ಮಲಪ್ರಭಾ ನದಿಯಲ್ಲಿ ಈಜಲು ಹೋಗಿ ನೀರು ಪಾಲಾದ ಯುವಕನನ್ನು ಪತ್ತೆ ಹಚ್ಚುವಲ್ಲಿ ತಾಲೂಕಾಡಳಿತ ಹಾಗೂ ಅಧಿಕಾರಿಗಳು ನಿರ್ಲಕ್ಷ್ಯ ತೋರಿಸುತ್ತಿದ್ದಾರೆ...

ಹೊಸ ಸೇರ್ಪಡೆ